ಬಿಬಿಎಂಪಿ ಬೆಂಕಿ ದುರಂತ ರಹಸ್ಯ ಬಯಲು ಆಯುಕ್ತ ತುಷಾರ್​ ಗಿರಿನಾಥ್​​ , ಕೇಂದ್ರ ವಿಭಾಗದ ಡಿಸಿಪಿ ಹೇಳಿದ್ದಿಷ್ಟು

ಬಿಬಿಎಂಪಿ ಬೆಂಕಿ ದುರಂತ. ಗಾಯಾಳುಗಳ ಸ್ಥಿತಿ ಗಂಭೀರ. ಅಧಿಕಾರಿಗಳ ಎಡವಟ್ಟೇನು? ದುರ್ಘಟನೆಗೆ ಕಾರಣವೇನು? ಲಾಯಕ್ಕಿಲ್ಲದ ಜಾಗದಲ್ಲಿ ಲ್ಯಾಬ್‌ ಮಾಡಿದ್ರಾ ಆಫೀಸರ್ಸ್‌? ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದೇನು? ಟಿವಿ9ನಲ್ಲಿ ಪ್ರಾಥಮಿಕ ತನಿಖೆಯ ಇನ್‌ಸೈಡ್‌ ಡಿಟೇಲ್ಸ್‌ ಇಲ್ಲಿದೆ

ಬಿಬಿಎಂಪಿ ಬೆಂಕಿ ದುರಂತ ರಹಸ್ಯ ಬಯಲು ಆಯುಕ್ತ ತುಷಾರ್​ ಗಿರಿನಾಥ್​​ , ಕೇಂದ್ರ ವಿಭಾಗದ ಡಿಸಿಪಿ ಹೇಳಿದ್ದಿಷ್ಟು
ಬಿಬಿಎಂಪಿ ಕೇಂದ್ರ ಕಚೇರಿ
Follow us
| Updated By: ವಿವೇಕ ಬಿರಾದಾರ

Updated on:Aug 13, 2023 | 1:24 PM

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿರುವ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ (Lab) ಗುರುವಾರ ಭಾರೀ ಅಗ್ನಿ (Fire) ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಒಂಬತ್ತು ಜನ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಂತರ ಈ ವಿಚಾರ ರಾಜಕೀಯ ಕೆಸೆರೆಚಾಟಕ್ಕೂ ಕಾರಣವಾಯ್ತು. ಆಡಳಿತಾರೂಢ ಕಾಂಗ್ರೆಸ್​ ಸರ್ಕಾರ ಬಿಜೆಪಿಯವರೇ ಬೆಂಕಿ ಹಾಕಿದ್ದಾರೆ ಎಂದು ಆರೋಪ ಮಾಡಿತ್ತು. ಇದಕ್ಕೆ ರಾಜ್ಯ ಬಿಜೆಪಿ ನಾಯಕರು ತೀರ್ವ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಕರಣವನ್ನು ಮೂರು ಆಯಾಮಗಳಲ್ಲಿ ತನಿಖೆ ನಡೆಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಸೂಚಿದ್ದಾರೆ. ಅಷ್ಟಕ್ಕೂ ಅವಘಡಕ್ಕೆ ಕಾರಣವೇನು? ಇಲ್ಲಿದೆ ಇನ್​ಸೈಡ್​​ ಡೀಟೈಲ್ಸ್​

ಮೊದಲನೆಯದಾಗಿ ಬಿಬಿಎಂಪಿ ಈ ಲ್ಯಾಬ್​ ನಿರ್ಮಾಣಕ್ಕೆ ಅನುಮತಿ ಪಡೆದಿತ್ತಾ? ಹೀಗೆ ನಿರ್ಮಾಣ ಮಾಡಿದ್ದರು ಯೋಗ್ಯವಲ್ಲದ ಜಾಗದಲ್ಲಿ ಲ್ಯಾಬ್ ನಿರ್ಮಾಣ ಮಾಡಿದ್ದರೂ ಏಕೆ? ಅಗ್ನಿ ಅವಘಡ ಸಂಭವಿಸಿದರೇ ಯಾವ ಮುಂಜಾಗ್ರತಾ ತೆಗೆದುಕೊಳ್ಳಲಾಗಿತ್ತು ಎಂಬ ಪ್ರಶ್ನೆಗಳು ಉದ್ಭವವಾಗಿವೆ.

ಅಸಲಿಗೆ ಈ ಗುಣನಿಯಂತ್ರಣ ಪ್ರಯೋಗಾಲಯದ ರೀತಿ ಇರಲಿಲ್ಲ. ಒಂದು ರೀತಿ ಗೋಡೌನ್​ ಹಾಗೆ ಇತ್ತು. ಪ್ರಯೋಗಾಲಯ ನಿರ್ಮಾಣವಾಗಬೇಕಾದರೇ ಕನಿಷ್ಠ ಒಳ್ಳೆಯ ಗಾಳಿ, ಬೆಳಕು ಇರಬೇಕು. ಆದರೆ ಇಲ್ಲಿ ಅಂತಹ ವಾತಾವರಣ ಇರಲೇ ಇಲ್ಲ. ಜೊತೆಗೆ ಲ್ಯಾಬ್​ನಲ್ಲಿ ಪ್ರಯೋಗ ನಡೆಯುತ್ತಿರುವಾಗಲೇ ಅಧಿಕಾರಿಗಳು ಸಭೆ ನಡೆಸುತ್ತಿದ್ದರು. ಇಲ್ಲಿ ಸಭೆ ನಡೆಸಲು ಅನುಮತಿ ಕೊಟ್ಟವರಾರು ಎಂಬ ಪ್ರಶ್ನೆ ಸಹ ಹುಟ್ಟಿಕೊಂಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹಲಸೂರ್ ಗೇಟ್ ಪೊಲೀಸರು ಬಿಬಿಎಂಪಿ ಆಯುಕ್ತ ಸೇರಿದಂತೆ ಹಲವರಿಗೆ ನೋಟೀಸ್ ನೀಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್​​ನಲ್ಲಿ ಬೆಂಕಿ ಪ್ರಕರಣ: ಬೆಂಜೀನ್​​​ನಿಂದ ದುರಂತ ಸಂಭವಿಸಿರಬಹುದು: ಮುಖ್ಯ ಇಂಜಿನಿಯರ್​ ಬಿಎಸ್ ಪ್ರಹ್ಲಾದ್ ​

ಡಿ ಗ್ರೂಪ್ ನೌಕರನಿಂದ ಲ್ಯಾಬ್ ಟೆಕ್ನಿಶಿಯನ್ ಕೆಲಸ

ಡಿ ಗ್ರೂಪ್ ನೌಕರ ಸುರೇಶ್ ಎಂಬುವರು ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಗೆ ರಾಸಾಯನಿಕ ವಸ್ತುಗಳ ಬಗ್ಗೆ ಮಾಹಿತಿ ಇರಲಿಲ್ಲ.  ಆದರೂ ಸಹ ಸುರೇಶ್ ನಿತ್ಯ ಕ್ವಾಲಿಟಿ ಚೆಕ್ ಮಾಡುತಿದ್ದರು. ಅದರಂತೆ ಘಟನೆ ನಡೆದ ದಿನ ಕ್ವಾಲಿಟಿ ಪರೀಕ್ಷೆ ಮಾಡುವಾಗ ಮೊದಲಿಗೆ ಟೆಸ್ಟ್ ಮಾಡುತಿದ್ದ ಜಾಗದಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಅದನ್ನು ನಂದಿಸುವ ಯತ್ನ ಸುರೇಶ್​ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ರಾಸಾಯನಿಕದಿಂದ ಹತ್ತಿಕೊಂಡ ಬೆಂಕಿಯನ್ನು ಹೇಗೆ ನಂದಿಸಬೇಕೆಂಬ ಮಾಹಿತಿ  ಇಲ್ಲದ ಸುರೇಶ್ ನೀರು ಸುರಿದಿದ್ದಾರೆ. ಇದರಿಂದ ಬೆಂಕಿಯ ತೀವ್ರತೆ ಹೆಚ್ಚಾಗಿದೆ.

ಅಲ್ಲೇ ನಾಲ್ಕು ಪ್ಲಾಸ್ಟಿಕ್ ಬಕೆಟ್​​ನಲ್ಲಿ ಕೆಮಿಕಲ್ ಇರಿಸಲಾಗಿತ್ತು. ಬೆಂಕಿಯ ಶಾಕಕ್ಕೆ ಬಕೆಟ್​ಗಳು ಕರಗಿವೆ. ನಂತರ ಬಗೆಟ್​ನಲ್ಲಿದ್ದ ಬೆನ್ಸಿನ್​​ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೆಚ್ಚಾದಾಗ ಸುರೇಶ್ ಅಲ್ಲಿಂದ ಓಡಿ ಹೋಗಿದ್ದಾರೆ. ನಂತರ ಬೆಂಕಿ ಎಲ್ಲಡೆ ವ್ಯಾಪಿಸಿದೆ. ಇದರಿಂದ ಒಂಬತ್ತು ಜನ ಸಿಬ್ಬಂದಿ ಗಾಯಗೊಂಡಿದ್ದಾರೆ.

ಬಿಬಿಎಂಪಿ ಮುಖ್ಯ ಇಂಜಿನಿಯರ್​​​ ಪ್ರಹ್ಲಾದ್ ನೇತೃತ್ವದಲ್ಲಿ ತನಿಖೆ

ಪ್ರಕರಣ ಸಂಬಂಧ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಪ್ರಕರಣ ಸಂಬಂಧ ಬಿಬಿಎಂಪಿಯಿಂದ ಆಂತರಿಕ ತನಿಖೆ ನಡೆಯುತ್ತಿದೆ. ಬಿಬಿಎಂಪಿ ಮುಖ್ಯ ಇಂಜಿನಿಯರ್​​​ ಪ್ರಹ್ಲಾದ್ ನೇತೃತ್ವದಲ್ಲಿ ತನಿಖೆ ನಡೆಯಲಾಗುತ್ತಿದೆ. ತನಿಖಾ ವರದಿಯನ್ನು ಸಿಎಂ, ಡಿಸಿಎಂಗೆ ಸಲ್ಲಿಸಲಾಗುತ್ತೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ತನಿಖೆಗೆ ನಮ್ಮ ಅಧಿಕಾರಿಗಳು ಸೂಕ್ತ ಸಹಕಾರ ನೀಡುತ್ತಿದ್ದಾರೆ. ಲ್ಯಾಬ್​​ನಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ತನಿಖೆಗೆ ನಮ್ಮ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ಲ್ಯಾಬ್​​ನಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಬಗ್ಗೆ ವಿಚಾರಣೆ ಮಾಡಲಾಗುವುದು. ಡಿ ಗ್ರೂಪ್ ನೌಕರ ಲ್ಯಾಬ್ ನಲ್ಲಿ ಸಹಾಯ ಮಾಡಬಹುದು. ಆದರೆ ಎಲ್ಲ ಕೆಲಸ ಅವರೇ ಮಾಡುವಂತಿಲ್ಲ. ಅಗ್ನಿ ಅವಘಡದಲ್ಲಿ ಒಂಬತ್ತು ಜನರಲ್ಲಿ 6 ಜನರಿಗೆ ಯಾವುದೇ ಅಪಾಯವಾಗಿಲ್ಲ. ಇನ್ನುಳಿದ ಮೂವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಬಿಬಿಎಂಪಿ ವತಿಯಿಂದಲೇ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಮುಖ ಸುಟ್ಟವರಿಗೆ ಸರ್ಜರಿ ಮಾಡಿಸಲಾಗುವುದು ಎಂದರು.

ಮೂವರು ಆರೋಪಿಗಳಿಗೆ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ

ಇನ್ನು ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಆನಂದ್, ಸ್ವಾಮಿ, ಸುರೇಶ್​ ಸ್ಟೇಷನ್​ ಬೇಲ್ ಮೂಲಕ ಬಿಡುಗಡೆಯಾಗಿದ್ದು, ವಿಚಾರಣೆಗೆ ಕರೆದಾಗ ಮತ್ತೆ ಹಾಜರಾಗುವಂತೆ ಪೊಲೀಸರು  ಸೂಚಿಸಿದ್ದಾರೆ.

 ಅಧಿಕಾರಿಗಳ ನಿರ್ಲಕ್ಷ್ಯಯಿಂದ ಘಟನೆ ನಡೆದಿದೆ

ಅಗ್ನಿ ಅವಘಢಕ್ಕೆ ಸಂಬಂಧಿದಂತೆ ಮೂವರನ್ನ ವಿಚಾರಣೆ ನಡೆಸಲಾಗಿದೆ. ತನಿಖೆ ವೇಳೆ ಅಧಿಕಾರಿಗಳ ನಿರ್ಲಕ್ಷ್ಯಯಿಂದ ಘಟನೆ ನಡೆದಿರೋದು ಗೊತ್ತಾಗಿದೆ. ಮೂವರನ್ನ ವಿಚಾರಣೆ ನಡೆಸಿ ಕಾನೂನು ಪ್ರಕ್ರಿಯೆ ನಡೆಸಿ ನೊಟೀಸ್ ಕೊಟ್ಟು ಕಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಪ್ರಶ್ನೆಗಳನ್ನು ಕೇಳಿ ಬಿಬಿಎಂಬಿಗೆ ಪತ್ರ ಬರೆಯಲಾಗತ್ತೆ. ನಂತರ ಮುಂದಿನ ತನಿಖೆ ನಡೆಸಲಾಗುತ್ತೆ.

9ರಲ್ಲಿ 3 ಜನರ ಸ್ಥಿತಿ ಗಂಭೀರ

ಅವಘಡದಲ್ಲಿ ಗಾಯಾಗೊಂಡ ಒಂಬತ್ತು ಜನರಿಗೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂಬತ್ತು ಜನರಲ್ಲಿ ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಚೀಫ್ ಇಂಜಿನಿಯರ್ ಶಿವಕುಮಾರ್, ಆಪರೇಟರ್ ಜ್ಯೋತಿ, ಇಇ ಕಿರಣ್ ಸ್ಥಿತಿ ಗಂಭೀರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ನಿರ್ದೇಶಕ ರಮೇಶ್ ಕೃಷ್ಣ ಹೇಳಿದಗ್ದಾರೆ.

ಚೀಫ್ ಇಂಜಿನಿಯರ್ ಶಿವಕುಮಾರ್ ಅವರಿಗೆ ಶೇ 25 ರಷ್ಟು ಸುಟ್ಟಗಾಯವಾಗಿದೆ. ಇವರಿಗೆ ಗಂಟಲಿನ‌ ಸಮಸ್ಯೆಯಾಗಿದ್ದು, ಮಾತನಾಡಲು ಕಷ್ಟವಾಗುತ್ತಿದೆ. ಇಇ ಕಿರಣ್ ಸ್ಥಿತಿ ಕ್ರಿಟಿಕಲ್ ಇದ್ದು, ಡಯಾಲಿಸಿಸ್ ಮಾಡಲಾಗಿದೆ. ಅಪಾರೇಟರ್ ಜ್ಯೋತಿ ಕೂಡ ಗಂಭಿರವಾಗಿದ್ದಾರೆ. ಅವರ ಮುಖಕ್ಕೆ ಹಾನಿಯಾಗಿದ್ದು, ಉಸಿರಾಟದ ಸಮಸ್ಯೆಯಾಗಿದೆ. ಈ ಮೂವರು ಇನ್ನೂ 4-5 ದಿನ ಐಸಿಯುನಲ್ಲಿಯೇ ಇರಿಸಲಾಗುತ್ತದೆ. ಉಳಿದ ಆರು ಜನರು ನಾರ್ಮಲ್​ ಆಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:53 pm, Sun, 13 August 23

ತಾಜಾ ಸುದ್ದಿ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ
ಡಿಸಿಎಂಗಳ ಬಗ್ಗೆ ಕೇಳಿದಾಗ ರಾಜಣ್ಣ ವರಿಷ್ಠರು ತೆಪ್ಪಗಿರಲು ಹೇಳಿದ್ದಾರೆಂದರು
ಡಿಸಿಎಂಗಳ ಬಗ್ಗೆ ಕೇಳಿದಾಗ ರಾಜಣ್ಣ ವರಿಷ್ಠರು ತೆಪ್ಪಗಿರಲು ಹೇಳಿದ್ದಾರೆಂದರು