ಬೆಂಗಳೂರಿನಲ್ಲಿ ಗಗನಕ್ಕೇರಿದ ಕೊಬ್ಬರಿ ಎಣ್ಣೆ ದರ: ಕೊಬ್ಬರಿಗೆ ಬೇಡಿಕೆ ಗಣನೀಯ ಹೆಚ್ಚಳ

Coconut Oil Price Hike: ಕೇರಳದ ಆಹಾರಪದಾರ್ಥಗಳಿಂದ ಹಿಡಿದು ರಾಜ್ಯದ ಜನರ ತಲೆಯ ಆರೋಗ್ಯದ ತನಕ ಕೊಬ್ಬರಿ ಎಣ್ಣೆ ಬೇಕೆ ಬೇಕು ಎಂಬ ಸ್ಥಿತಿ ಇದೆ. ಇದೀಗ ಕೊಬ್ಬರಿ ಎಣ್ಣೆ ದರ ಲೀಟರ್​ಗೆ 400 ರೂ. ದಾಟಿ ಮುನ್ನುಗ್ಗುತ್ತಿದೆ. ಬೇಸಿಗೆ ವೇಳೆ ಎಳನೀರಿನ ಆಸೆಗೆ ತೆಂಗಿನ ಮರಗಳನ್ನು ಬರಿದು ಮಾಡಿದ್ದರ ಪರಿಣಾಮ ಇದೀಗ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆಯ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಕೊಬ್ಬರಿ ಬೆಲೆ ದುಪ್ಪಟ್ಟಾಗಿದೆ.

ಬೆಂಗಳೂರಿನಲ್ಲಿ ಗಗನಕ್ಕೇರಿದ ಕೊಬ್ಬರಿ ಎಣ್ಣೆ ದರ: ಕೊಬ್ಬರಿಗೆ ಬೇಡಿಕೆ ಗಣನೀಯ ಹೆಚ್ಚಳ
ಬೆಂಗಳೂರಿನಲ್ಲಿ 200 ರೂ. ದಾಟಿದ ಕೊಬ್ಬರಿ ಎಣ್ಣೆ ದರ
Edited By:

Updated on: Jun 26, 2025 | 9:39 AM

ಬೆಂಗಳೂರು, ಜೂನ್ 26: ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಬೇಕೆ ಬೇಕು ಎಂಬಂತೆ ಬೇಡಿಕೆ ಸೃಷ್ಟಿಸಿದ್ದ ಕೊಬ್ಬರಿ ಎಣ್ಣೆಗೆ (Coconut Oil) ಇದೀಗ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಅದೇ ರೀತಿ ದರವೂ ಏರಿಕೆಯಾಗುತ್ತಿದ್ದು, ಲೀಟರ್​​ಗೆ 390 ರೂ.ಗಳಿಂದ 420 ರೂ. ವರೆಗೆ ಮಾರಾಟವಾಗುತ್ತಿದೆ. ಪರಿಣಾಮವಾಗಿ ಕೊಬ್ಬರಿ ಬೆಲೆ ಕೂಡ 200 ರೂ. ಗಡಿದಾಟಿ ಮುನ್ನುಗ್ಗುತ್ತಿದೆ. ಬೇಸಿಗೆಯಲ್ಲಿ ಎಳನೀರಿಗೆ ಭಾರೀ ಬೇಡಿಕೆ ಇದ್ದ ಹಿನ್ನೆಲೆ ಎಳನೀರು ಮಾರಾಟ ಹೆಚ್ಚಾಗಿದ್ದು, ಇದೀಗ ಕೊಬ್ಬರಿ ಎಣ್ಣೆ ಹಾಗೂ ಕೊಬ್ಬರಿ ಕಾಯಿ ಅಭಾವಕ್ಕೆ ಕಾರಣವಾಗಿದೆ. ಪ್ರತಿ ಕೆಜಿಗೆ 150 ರಿಂದ 200 ರೂ. ಇದ್ದ ಕೊಬ್ಬರಿ ದರ ಇದೀಗ ಕೆಜಿಗೆ 250 ರಿಂದ 280 ರೂಪಾಯಿಗೆ ಜಿಗಿತ ಕಂಡಿದೆ.

ಕಳೆದ ವರ್ಷ ಲೀಟರ್‌ಗೆ 200 ರೂಪಾಯಿಯಷ್ಟಿದ್ದ ಕೊಬ್ಬರಿ ಎಣ್ಣೆ ದರ ಈಗ 390 ರೂ.ಗಳಿಂದ 420 ರೂ. ವರೆಗೆ ಏರಿಕೆ ಕಂಡಿದೆ. ಕೆಲವೆಡೆ ಉತ್ತಮ ಗುಣಮಟ್ಟದ ಕೊಬ್ಬರಿ ಎಣ್ಣೆ ಪ್ರತಿ ಲೀಟರ್​ಗೆ 500 ರೂಪಾಯಿ ತನಕ ಮಾರಾಟವಾಗುತ್ತಿದೆ. ಈ ವರ್ಷದ ಹೊಸ ತೆಂಗಿನಕಾಯಿ ಇಳುವರಿ ಅಕ್ಟೋಬರ್–ನವೆಂಬರ್ ವೇಳೆಗೆ ಬರುವ ನಿರೀಕ್ಷೆಯಿದ್ದು, ಅಲ್ಲಿ ತನಕ ಮಾರುಕಟ್ಟೆಗೆ ಒಣಕೊಬ್ಬರಿ ಬರುವುದು ಅನುಮಾನ ಎನ್ನಲಾಗುತ್ತಿದೆ. ಸದ್ಯ ಕೇರಳ, ತಮಿಳುನಾಡಿನಿಂದಲೂ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆ ಬರುತ್ತಿಲ್ಲ. ಇದು ವ್ಯಾಪಾರಿಗಳಿಗೂ ಸಂಕಷ್ಟ ತಂದಿಟ್ಟಿದೆ.

ಇದನ್ನೂ ಓದಿ: ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ ಬೆಸ್ಕಾಂ: ವಿದ್ಯುತ್ ಬಿಲ್ ನೋಡಿ ಜನ ಬೇಸ್ತು

ಇದನ್ನೂ ಓದಿ
ಗ್ರಾಹಕರಿಗೆ ಮತ್ತೊಂದು ಶಾಕ್: ಬೆಸ್ಕಾಂ ವಿದ್ಯುತ್ ಬಿಲ್ ನೋಡಿ ಜನ ಬೇಸ್ತು
ಇನ್ಮುಂದೆ ಐದು ಖಾಸಗಿ ಆ್ಯಪ್​ಗಳ ಮೂಲಕವೂ ಖರೀದಿಸಬಹುದು ಮೆಟ್ರೋ ಟಿಕೆಟ್!
ವಿದ್ಯುತ್ ಕನಿಷ್ಠ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ತೀರ್ಪು
ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ

ಬಹುತೇಕ ರೈತರು ಎಳನೀರನ್ನು ಮಾರಾಟ ಮಾಡುವ ಜೊತೆಗೆ ಬೇರೆಡೆಗೆ ರಫ್ತು ಮಾಡಿರುವುದು ಕೂಡ ಇದೀಗ ಕೊಬ್ಬರಿಯ ಅಭಾವ ಎದುರಾಗಲು ಕಾರಣವಾಗಿದೆ. ಇತ್ತ ಕೊಬ್ಬರಿ ಎಣ್ಣೆಯ ಮಾರಾಟದ ಮೇಲೂ ಪರಿಣಾಮ ತಟ್ಟುತ್ತಿದ್ದು, ಖರೀದಿ ಕೂಡ ಕುಸಿತವಾಗುತ್ತಿದೆ.

ಸದ್ಯ ಕರ್ನಾಟಕದಲ್ಲಷ್ಟೇ ಅಲ್ಲದೇ ಹೊರರಾಜ್ಯಗಳಲ್ಲೂ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆಯ ಲಭ್ಯತೆ ಕಡಿಮೆಯಾಗತ್ತಿದೆ. ಸದ್ಯ ಗಗನಕ್ಕೇರಿರುವ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆಯ ದರ ಯಾವಾಗ ಕಡಿಮೆಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:53 am, Thu, 26 June 25