ಬೆಂಗಳೂರು: ಇಂದು ವಿಧಾನಪರಿಷತ್ನಲ್ಲಿ ಪೇ ಸಿಎಂ ಪೋಸ್ಟರ್ ವಿಚಾರ ಪ್ರತಿಧ್ವನಿಸಿದ್ದು ಗದ್ದಲ, ಕೋಲಾಹಲ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರ ಬಂಧನ ಖಂಡಿಸಿ ಕಾಂಗ್ರೆಸ್ ಸದಸ್ಯರು ಪೇ ಸಿಎಂ’ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಪರಿಷತ್ನಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದಿದ್ದು ಗದ್ದಲದ ನಡುವೆಯೇ ಬಿಜೆಪಿ ಸದಸ್ಯರು ಕೂಡ ಉಭಯ ಪಕ್ಷಗಳ ಸದಸ್ಯರ ಹಾಗೂ ಸಿದ್ದರಾಮಯ್ಯ ಅವಧಿಯ ಭ್ರಷ್ಟಾಚಾರ ಹಗರಣಗಳ ಪೋಸ್ಟರ್ ಪ್ರದರ್ಶನ ಮಾಡಿದ್ರು.
ನಿನ್ನೆ ಸದನದಲ್ಲಿ 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಕಾಂಗ್ರೆಸ್ – ಬಿಜೆಪಿ ಮಧ್ಯೆ ಕದನ ನಡೆದಿತ್ತು. ಇದಾದ ಬಳಿಕ ರಾತ್ರಿ ಮಲಗಿ ಬೆಳಗೇಳುವಷ್ಟರಲ್ಲಿ ನಗರದ ರಸ್ತೆ, ಫ್ಲೈಓವರ್, ಗೋಡೆಗಳ ಮೇಲೆ ಸಿಎಂ ಬೊಮ್ಮಾಯಿ ಭಾವಚಿತ್ರವಿರೋ ಪೇ ಸಿಎಂ ಅನ್ನೋ ಪೋಸ್ಟರ್ಗಳನ್ನ ಅಂಟಿಸಲಾಗಿತ್ತು. ಪೇಸಿಎಂ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ 40 ಪರ್ಸೆಂಟ್ ಸರ್ಕಾರ ಅನ್ನೋ ವೆಬ್ಸೈಟ್ ಓಪನ್ ಆಗುತ್ತೆ. ಕೊರೊನಾ ಸ್ಕ್ಯಾಮ್, ರೋಡ್ ಸ್ಕ್ಯಾಮ್, ಬಿಟ್ಕಾಯಿನ್ ಸ್ಕ್ಯಾಮ್ ಹೀಗೆ ಹಗರಣಗಳ ಆರೋಪದ ಪಟ್ಟಿ ಬಿಚ್ಚಿಕೊಳ್ಳುತ್ತೆ. ಸದ್ಯ ಈ ಘಟನೆ ಸಂಬಂಧ ಇಂದು ವಿಧಾನಪರಿಷತ್ನಲ್ಲಿ ಮತ್ತೆ ಕಾಂಗ್ರೆಸ್ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದೆ. ಮಧ್ಯರಾತ್ರಿ ಕಾರ್ಯಕರ್ತರನ್ನ ಬಂಧಿಸಿದ್ದಾರೆ ಕಾರ್ಯಕರ್ತರು ಟೆರೆರಿಸ್ಟ್ ಗಳಾ? 40%, 100% ಎಲ್ಲಾ ವಿಚಾರಗಳು ಚರ್ಚೆಯಾಗಲಿ ಎಂದು ಹರಿಪ್ರಸಾದ್ ಆಗ್ರಹಿಸಿದರು. ಇದನ್ನೂ ಓದಿ: ಆಸ್ಕರ್ಗೆ ಪ್ರವೇಶ ಪಡೆದ ಚೆಲ್ಲೋ ಶೋ, ಗುಜರಾತಿ ಚಿತ್ರದ ಮುಂದೆ ಆರ್ಆರ್ಆರ್ ಸೋತಿದ್ದೇಕೆ ಎಂಬುದಕ್ಕೆ ರಾಜಕೀಯ ಕಾರಣ ನೀಡಿದ ತೆಲಂಗಾಣ ಸಚಿವ
ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ಆಗಿದೆ. ಬಿಜೆಪಿ ಸದಸ್ಯರು ಕೂಡ ಉಭಯ ಪಕ್ಷಗಳ ಸದಸ್ಯರ ಹಾಗೂ ಸಿದ್ದರಾಮಯ್ಯ ಅವಧಿಯ ಭ್ರಷ್ಟಾಚಾರ ಹಗರಣಗಳ ಪೋಸ್ಟರ್ ಹಿಡಿದು ಪ್ರದರ್ಶಿಸಿದ್ದಾರೆ. ಭ್ರಷ್ಟ ಕಾಂಗ್ರೆಸ್ಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ. ಇನ್ನು ಈ ಗದ್ದಲದ ನಡುವೆಯೇ ವಿಧೇಯಕ ಮಂಡಿಸಲಾಗಿದ್ದು ಇದಕ್ಕೆ ತೀವ್ರ ಆಕ್ರೋಶ ಹೊರ ಹಾಕಲಾಗಿದೆ. ಇನ್ನು ಹೌಸ್ ಆರ್ಡರ್ನಲ್ಲಿ ಇಲ್ಲ ಎಂದು ಜೆಡಿಎಸ್ ಸದಸ್ಯರು ಘೋಷಣೆ ಕೂಗಿದ್ದಾರೆ. ಗದ್ದಲದ ನಡುವೆಯೇ ಸಭಾಪತಿ ಪ್ರಶ್ನೋತ್ತರ ಮುಂದುವರಿಸಿದ್ರು. ಪ್ರಶ್ನೋತ್ತರ ಮುಗಿಸಿ ಕಾಗದ ಪತ್ರಗಳನ್ನು ಮುಂದಿಟ್ರು. ಈ ವೇಳೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಸದಸ್ಯರು ಭ್ರಷ್ಟ ಕಾಂಗ್ರೆಸ್ಗೆ ಧಿಕ್ಕಾರ ಎಂದು ಘೋಷಣೆ ಕೂಗುದ್ರು. ಆಗ ಗದ್ದಲ ಮತ್ತಷ್ಟು ಹೆಚ್ಚಾಗಿದ್ದು ಈ ವೇಳೆ ಸಭಾಪತಿ ಪೀಠದ ರಕ್ಷಣೆಗೆ ಮಾರ್ಷಲ್ಗಳು ಧಾವಿಸಿದ್ದು ತೀವ್ರ ಗದ್ದಲ ಹಿನ್ನೆಲೆ ಮಧ್ಯಾಹ್ನ 3ಕ್ಕೆ ಕಲಾಪ ಮುಂದೂಡಲಾಗಿದೆ.
ಆದ್ರೆ ಪರಿಷತ್ ಕಲಾಪ ಮುಂದೂಡಿದರೂ ಸದಸ್ಯರಿಂದ ಗದ್ದಲ ಮಾತ್ರ ನಿಂತಿಲ್ಲ. ಸಭಾಪತಿ ಪೀಠಕ್ಕೆ ಪೋಸ್ಟರ್ ಹಿಡಿದು ಕಾಂಗ್ರೆಸ್ ಸದಸ್ಯರು ಮುತ್ತಿಗೆ ಹಾಕಿದ್ದಾರೆ. ಕಾಂಗ್ರೆಸ್ನ ಪ್ರಕಾಶ್ ರಾಥೋಡ್ ಕುರ್ಚಿ ಮೇಲೆ ಹತ್ತಿ ನಿಂತಿದ್ದಾರೆ. ಬಿ.ಕೆ.ಹರಿಪ್ರಸಾದ್ ಸಭಾಪತಿ ವಿರುದ್ಧ ಘೋಷಣೆ ಕೂಗಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:02 pm, Thu, 22 September 22