ಜಿಲ್ಲೆಯಿಂದ ಜಿಲ್ಲೆಗೆ ಅಲೆದಾಡಿದ್ರು ಚಿಕಿತ್ಸೆ ಸಿಗುತ್ತಿಲ್ಲ, ಬ್ರೈನ್ ಡ್ಯಾಮೆಜ್ ಆಗಿ ರಕ್ತಸ್ರಾವದಿಂದ ಒದ್ದಾಡುತ್ತಿರುವ ರೋಗಿಯ ನೋಡುವವರಿಲ್ಲ
ಸಾವು ಬದುಕಿನ ನಡುವೆ ಹೋರಾಡುತ್ತಿರುವ ರೋಗಿಯೊಬ್ಬರು ರಾಜ್ಯದ ನಾಲ್ಕು ಆಸ್ಪತ್ರೆಗಳಿಗೆ ಸುತ್ತಿದ್ರು ಅವರಿಗೆ ಚಿಕಿತ್ಸೆ ಸಿಗ್ತಿಲ್ಲ. ಹೀಗಾಗಿ ಆಸ್ಪತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು: ಸತತ ಹನ್ನೆರಡು ಗಂಟೆಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ರೋಗಿಯೊಬ್ಬರು ರಾಜ್ಯದ ನಾಲ್ಕು ಆಸ್ಪತ್ರೆಗಳಿಗೆ ಸುತ್ತಿದ್ರು ಅವರಿಗೆ ಚಿಕಿತ್ಸೆ ಸಿಗ್ತಿಲ್ಲ. ಹೀಗಾಗಿ ಆಸ್ಪತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ್ದು ರೋಗಿಯ ಸ್ಥಿತಿ ಕಂಡವರು ಆಸ್ಪತ್ರೆಯ ವೈದ್ಯರು ಮಾನವೀಯತೆ ಮರೆತ್ರ ಎಂದು ಪ್ರಶ್ನಿಸುತ್ತಿದ್ದಾರೆ.
27 ವರ್ಷದ ಕುಮಾರ್ ಎಂಬುವವರು ಹಲವು ಗಂಟೆಗಳಿಂದ ರಕ್ತಸ್ರಾವದಲ್ಲಿ ಒದ್ದಾಡುತ್ತಿದ್ದಾರೆ. ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಕೊಡಗಿನ ಕೆಂಪೇಬೆಲ್ಲೂರಿನ ಬಳಿ ರಸ್ತೆ ಅಪಘಾತವಾಗಿತ್ತು. ಘಟನೆಯಲ್ಲಿ ಕುಮಾರ್ ಬ್ರೈನ್ ಡ್ಯಾಮೆಜ್ ಆಗಿದೆ. ಅಲ್ಲಿಂದ ರೋಗಿಯನ್ನು ಕೊಡಗಿನ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದ್ರೆ ರಾತ್ರಿ ಒಂದು ಗಂಟೆಯವರೆಗೆ ಕಾಯಿಸಿ ಮೈಸೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದ್ದಾರೆ. ನಂತರ ಮೈಸೂರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದ್ರೆ ಇಲ್ಲಿ ಕೂಡ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಮೈಸೂರು ಜಿಲ್ಲಾಸ್ಪತ್ರೆ ಸಿಬ್ಬಂದಿ ಬೆಂಗಳೂರಿನ ನಿಮಾನ್ಸ್ ಗೆ ಶಿಫ್ಟ್ ಮಾಡಲು ಹೇಳಿದ್ದಾರೆ. ಹೀಗಾಗಿ ರೋಗಿ ಕುಮಾರ್ನನ್ನು ನಿಮಾನ್ಸ್ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಇಲ್ಲಿ ಆಗೋದಿಲ್ಲ ಬ್ರೈನ್ ಡ್ಯಾಮೆಜ್ ಕೇಸ್ ಇದು ಹಾಗಾಗಿ ವಿಕ್ಟೋರಿಯಾ ಟ್ರಾಮಾ ಕೇರ್ ಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಇದನ್ನೂ ಓದಿ: ಪಿಎಫ್ಐ, ಎಸ್ಡಿಪಿಐ ಮೇಲೆ ಎನ್ಐಎ ದಾಳಿಯ ಬೆನ್ನಿಗೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಸಭೆ, ಅಜಿತ್ ಡೊಭಾಲ್ ಭಾಗಿ
ಬೆಳಿಗ್ಗೆ 7.30 ರಿಂದ ವಿಕ್ಟೋರಿಯಾ ಟ್ರಾಮಾ ಕೇರ್ ಮುಂದೆ ಆ್ಯಂಬುಲೆನ್ಸ್ ನಲ್ಲಿ ಕುಮಾರ್ ಒದ್ದಾಡುತ್ತಿದ್ದು ಇಲ್ಲಿಯವರೆಗೂ ವೈದ್ಯರು ರೋಗಿಯನ್ನು ಅಡ್ಮಿಟ್ ಮಾಡಿಕೊಂಡಿಲ್ಲ. ಇದರಿಂದ ಕುಟುಂಬಸ್ಥರು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ವೈದ್ಯರ ನಡೆಗೆ ಕಣ್ಣೀರಿಟ್ಟಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:13 pm, Thu, 22 September 22