ಆಸ್ಕರ್‌ಗೆ ಪ್ರವೇಶ ಪಡೆದ ಚೆಲ್ಲೋ ಶೋ, ಗುಜರಾತಿ ಚಿತ್ರದ ಮುಂದೆ ಆರ್‌ಆರ್‌ಆರ್ ಸೋತಿದ್ದೇಕೆ ಎಂಬುದಕ್ಕೆ ರಾಜಕೀಯ ಕಾರಣ ನೀಡಿದ ತೆಲಂಗಾಣ ಸಚಿವ
ಬಿಜೆಪಿ ನಾಯಕರು ತಮ್ಮ ಗುಜರಾತಿ ಬಾಸ್ಗಳ ಚಪ್ಪಲಿಗಳನ್ನು ಒಯ್ಯಲು ಎಂದಿಗೂ ಸಿದ್ಧ. ಆದರೆ ತೆಲಂಗಾಣದ ಹಕ್ಕುಗಳನ್ನು ಕೇಳುವ ಧೈರ್ಯವನ್ನು ಅವರಿಗಿಲ್ಲ ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಆಗಸ್ಟ್‌ನಲ್ಲಿ ಶಾ ತೆಲಂಗಾಣಕ್ಕೆ...
ಆಸ್ಕರ್‌ಗೆ ತೆಲುಗು ಚಲನಚಿತ್ರ ಆರ್‌ಆರ್‌ಆರ್ (RRR) ಆಯ್ಕೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಗುಜರಾತಿ ಚಿತ್ರ ಚೆಲ್ಲೋ ಶೋಗೆ (Chhello Show) ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ ಪಡೆದಿದೆ. ಸಿನಿಮಾವನ್ನು ರಾಜಕೀಯ ವಿಷಯವಾಗಿ ತೆಗೆದುಕೊಂಡು ಪ್ರತಿಕ್ರಿಯಿಸಿದ ತೆಲಂಗಾಣ ಸಚಿವ ಕೆಟಿಆರ್ ತೆಲಂಗಾಣದ ಹಕ್ಕುಗಳನ್ನು ಕೇಳುವ ಧೈರ್ಯ ತೆಲಂಗಾಣ ಬಿಜೆಪಿ (BJP) ನಾಯಕರಿಗೆ ಇಲ್ಲ ಎಂದು ಹೇಳಿದ್ದಾರೆ. ಗುಜರಾತ್ ಅನ್ನು ಮೋದಿವರ್ಸ್‌ನ ಕೇಂದ್ರಬಿಂದು ಎಂದು ಕರೆದಿರುವ ಕೆಟಿಆರ್, ತೆಲಂಗಾಣದ ಬಿಜೆಪಿ ನಾಯಕರಿಗೆ ತೆಲಂಗಾಣದ ಹಕ್ಕುಗಳನ್ನು ಕೇಳುವಷ್ಟು ಧೈರ್ಯವಿಲ್ಲ ಎಂದು ಹೇಳಿದರು. ಬಿಜೆಪಿ ನಾಯಕರು ತಮ್ಮ ಗುಜರಾತಿ ಬಾಸ್ಗಳ ಚಪ್ಪಲಿಗಳನ್ನು ಒಯ್ಯಲು ಎಂದಿಗೂ ಸಿದ್ಧ. ಆದರೆ ತೆಲಂಗಾಣದ ಹಕ್ಕುಗಳನ್ನು ಕೇಳುವ ಧೈರ್ಯವನ್ನು ಅವರಿಗಿಲ್ಲ ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಆಗಸ್ಟ್‌ನಲ್ಲಿ ಶಾ ತೆಲಂಗಾಣಕ್ಕೆ ಭೇಟಿ ನೀಡಿದಾಗ ಅವರ ಪಾದರಕ್ಷೆಗಳನ್ನು ಹೊತ್ತೊಯ್ದ ಘಟನೆ ಉಲ್ಲೇಖಿಸಿ ಕೆಟಿಆರ್ ಟೀಕಿಸಿದ್ದಾರೆ.
ತೆಲಂಗಾಣ ಗುಜರಾತ್ ಮುಂದೆ ಸೋತಿದೆ ಅಥವಾ ಗುಜರಾತ್ ಮುಂದೆ ಸೋಲುವಂತೆ ಮಾಡಿದೆ ಎಂಬುದರ ಬಗ್ಗೆ ಮಾಜಿ ಎಂಎಲ್‌ಸಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದ ಅಧ್ಯಾಪಕ ಪ್ರೊ ಕೆ ನಾಗೇಶ್ವರ್ ಟ್ವೀಟ್ ಮಾಡಿದ್ದಾರೆ. ನಮ್ಮ RRR ಆಸ್ಕರ್ ರೇಸ್‌ನಲ್ಲಿ ಗುಜರಾತಿ ಚಲನಚಿತ್ರ ಚೆಲ್ಲೋ ಶೋ ಮುಂದೆ ಸೋತಿತು. ನಮ್ಮ ಕಾಜಿಪೇಟೆಗೆ ಕೋಚ್ ಫ್ಯಾಕ್ಟರಿ ನಿರಾಕರಿಸಲಾಗಿದೆ. ಗುಜರಾತ್ ಇಂಜಿನ್ ಕಾರ್ಖಾನೆಯನ್ನು ಪಡೆಯುತ್ತದೆ. ಹೈದರಾಬಾದ್ ನಲ್ಲಿ ಆಗಬೇಕಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಗುಜರಾತ್‌ನ ಜಾಮ್‌ನಗರಕ್ಕೆ ಹೋಯಿತು. ನಮ್ಮ ಹೈದರಾಬಾದ್ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಟ್ರಿಬ್ಯೂನಲ್ ಗುಜರಾತ್‌ನ GIFT ಸಿಟಿಯಲ್ಲಿ ಪ್ರತಿಸ್ಪರ್ಧಿಯನ್ನು ಪಡೆಯುತ್ತದೆ ಎಂದು ನಾಗೇಶ್ವರ್ ಟ್ವೀಟ್ ಮಾಡಿದ್ದಾರೆ.
ಮಂಗಳವಾರ, ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ರಾಜಮೌಳಿ ಅವರ RRR ನ್ನು ಹಿಂದಿಕ್ಕಿ ಮುಂಬರುವ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದ ಅಧಿಕೃತ ಪ್ರವೇಶವಾಗಿ ಚೆಲ್ಲೋ ಶೋ ಅನ್ನು ಆಯ್ಕೆ ಮಾಡಿದೆ. ಚೆಲ್ಲೋ ಶೋ ಪಾನ್ ನಳಿನ್ ನಿರ್ದೇಶಿಸಿದ ಗುಜರಾತಿ ಚಲನಚಿತ್ರ. ಇದು ಸಿನಿಮಾ ಜಗತ್ತಿಗೆ ಮನಸೋತ ಒಂಬತ್ತು ವರ್ಷದ ಬಾಲಕನ ಕುರಿತ ಕತೆ ಹೊಂದಿದೆ. ಆರ್‌ಆರ್‌ಆರ್, ಬ್ರಹ್ಮಾಸ್ತ್ರಂ, ಬದಾಯಿ ದೋ ಮತ್ತು ದಿ ನಾಮಿ ಎಫೆಕ್ಟ್‌ಗಿಂತ ಚೆಲ್ಲೋ ಶೋ ಆಯ್ಕೆ ಮಾಡುವ ನಿರ್ಧಾರವು ಸರ್ವಾನುಮತದಿಂದ ಬಂದಿದೆ ಎಂದು ಫಿಲ್ಮ್ ಫೆಡರೇಶನ್ ಅಧ್ಯಕ್ಷ ಟಿಪಿ ಅಗರ್ವಾಲ್ ಹೇಳಿದ್ದಾರೆ. ಅಧಿಕೃತ ಆಯ್ಕೆಗಾಗಿ 13 ಚಿತ್ರಗಳು ಸ್ಪರ್ಧಿಸಿದ್ದವು.
ಕೆಸಿಆರ್ ಲೈಗರ್ ಇದ್ದಂತೆ: ಅಮಿತ್ ಮಾಳವೀಯ
ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರ ‘ಫಾರ್ಮ್‌ಹೌಸ್ ಗಣರಾಜ್ಯ’ ಲೈಗರ್‌ನಂತೆ ಇದೆ. ಅದು ಪುಷ್ಪ ಅಥವಾ ಬಾಹುಬಲಿಯಂತೆ ಅಲ್ಲ ಎಂದು ಬಿಜೆಪಿಯ ಅಮಿತ್ ಮಾಳವೀಯ ಹೇಳಿದ್ದಾರೆ. ತೆಲಂಗಾಣ ಸಚಿವರು ಹಿಂದೂ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪುಷ್ಪ, ಆರ್‌ಆರ್‌ಆರ್ ಮತ್ತು ಬಾಹುಬಲಿ ಪ್ಯಾನ್-ಇಂಡಿಯಾಕ್ಕೆ ಹೋಗಬಹುದಾದಾಗ, ಕೆಸಿಆರ್ ಏಕೆ ರಾಷ್ಟ್ರಕ್ಕೆ ಹೋಗಬಾರದು ಎಂಬ ಕೆಟಿಆರ್ ಅವರ ಪ್ರಶ್ನೆಗೆ ಮಾಳವೀಯ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಮಾಳವೀಯ, “ಬಾಹುಬಲಿ ನರೇಂದ್ರ ಮೋದಿ ನೇತೃತ್ವದ ಕಮಲ ಮಾತ್ರ ಭಾರತದ ಆಕರ್ಷಣೆಯನ್ನು ಹೊಂದಿದೆ, ಅವರ ನಾಯಕತ್ವದಲ್ಲಿ ಭಾರತವು ಶೀಘ್ರವಾಗಿ ಸುಧಾರಿತ ರಾಷ್ಟ್ರವಾಗಿದೆ (RRR). ಆದರೆ ಕೆಟಿಆರ್, ಔರಂಗಜೇಬ್ ಅವರಂತೆ ಕೆಸಿಆರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಏಕೆ ಪ್ರಯತ್ನಿಸುತ್ತಿದ್ದಾರೆ? ಎಂದು ಮಾಳವೀಯ ಪ್ರಶ್ನಿಸಿದ್ದಾರೆ.