ದೆಹಲಿ: ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಸಂಜೆ 7 ಗಂಟೆಗೆ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ. ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ನ ಎಲ್ಲಾ MLCಗಳು ದೆಹಲಿಯತ್ತ ದೌಡಾಯಿಸಲಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನವದೆಹಲಿಗೆ ತೆರಳಿದ್ದಾರೆ. ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯರಿಗೆ ಇಂದು ಸಂಜೆಯೊಳಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಎದ್ನೋ ಬಿದ್ನೋ ಅಂತ ದೆಹಲಿಯತ್ತ ಮುಖ ಮಾಡಿದ್ದಾರೆ. ನಾಳೆ ದೆಹಲಿಯಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು ರಾಜ್ಯ ಕಾಂಗ್ರೆಸ್ನ ಎಲ್ಲಾ ಶಾಸಕರು ಖುದ್ದು ಹಾಜರಾಗಲು ಹೈಕಮಾಂಡ್ ಸೂಚಿಸಿದ್ದಾರೆ. ದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಕಾಂಗ್ರೆಸ್ ಸಜ್ಜಾಗಿದೆ. ದೇಶದ ಎಲ್ಲಾ ಭಾಗಗಳ ‘ಕೈ’ ಶಾಸಕರಿಗೆ ಎಐಸಿಸಿ ಬುಲಾವ್ ನೀಡಿದೆ ಎಂಬ ಮಾಹಿತಿ ಸಿಕ್ಕಿದೆ.
ಇನ್ನು ಮತ್ತೊಂದು ಕಡೆ ರಾಹುಲ್ ಗಾಂಧಿ ನಿರಂತರ ಇಡಿ ವಿಚಾರಣೆ ಖಂಡಿಸಿ ನಾಳೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ದೇಶದ ಎಲ್ಲ ಪಿಸಿಸಿ ಅಧ್ಯಕ್ಷರನ್ನು ದೆಹಲಿಗೆ ಕರೆದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಪ್ಲ್ಯಾನ್ ಮಾಡಲಾಗಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಕೊಡೆಯುವ ತಂತ್ರ ರೂಪಿಸಿದೆ. ಇದನ್ನೂ ಓದಿ: ಮೋದಿ ಕರ್ನಾಟಕ ಭೇಟಿ ಬೆನ್ನಲ್ಲೇ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ಮಾಜಿ ಸಿಎಂ ಯಡಿಯೂರಪ್ಪ
ಇದೊಂದು ರಾಜಕೀಯ ಪ್ರೇಯಿತ ವಿಚಾರಣೆ ಕೈ ಬಿಡಬೇಕು
ನವದೆಹಲಿಯಲ್ಲಿ ಸಂಸದ ಡಿಕೆ ಸುರೇಶ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇವತ್ತು ಇಡಿ ಕಚೇರಿಯಲ್ಲಿ ನಡೆಯುತ್ತಿರುವ ವಿಚಾರಣೆ ಇದೊಂದು ರಾಜಕೀಯ ಪ್ರೇಯಿತ ವಿಚಾರಣೆ ಕೈ ಬಿಡಬೇಕು. ನಮ್ಮ ಪಕ್ಷದ ನಾಯಕರನ್ನ ತೆಜೋವದೆ ಮಾಡುವುದಕ್ಕೆ, ನಮ್ಮ ಪಕ್ಷಕ್ಕೆ ಕಪ್ಪು ಚುಕ್ಕೆ ತರುವುದಕ್ಕೆ ಬಿಜೆಪಿ ಈ ಕೆಲಸ ಮಾಡುತ್ತಿದೆ ಬಿಜೆಪಿ ಪಕ್ಷದವರು ರಾಜಕೀಯ ಹಿಂಸೆಯನ್ನು ನೀಡುತ್ತಿದ್ದಾರೆ. ನಿರಂತರ ಹೋರಾಟವನ್ನು ಮಾಡುತ್ತೆವೆ. ಬಿಜೆಪಿಯ ಭ್ರಷ್ಟ್ರಾಚಾರವನ್ನು ಮರೆಮಾಚಲು ಈ ಕೆಲಸ ಮಾಡುತ್ತಿದ್ದಾರೆ. ನಾಳೆ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ MLcಗಳು ದೆಹಲಿಗೆ ಬರಳಿದ್ದಾರೆ. ನಾಳೆ ದೆಹಲಿಯಲ್ಲಿ ನಡೆಯುವ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗಿ ಆಗುತ್ತಾರೆ. ಕಾಂಗ್ರೆಸ್ ಪಕ್ಷ ಈ ಹೋರಾಟದಿಂದ ದೂರ ಸರೆಯುವುದಿಲ್ಲ. ತ್ಯಾಗ ಬಲಿಧಾನ ಅಂದ್ರೆ ಕಾಂಗ್ರೆಸ್ ಪಕ್ಷ ಯಾವುದಕ್ಕೂ ಹೆದರುವುದಿಲ್ಲ. ತ್ಯಾಗ ಬಲಿಧಾನ ಅಂದ್ರೆ ಕಾಂಗ್ರೆಸ್ ಪಕ್ಷ. ನಾವು ಎಲ್ಲಾರೀತಿಯ ಹೋರಾಟಕ್ಕೆ ಸಿದ್ದವಿದ್ದೇವೆ ಎಂದರು.
ಶಾಸಕರಿಗೆ ಫ್ಲೈಟ್ ಟಿಕೆಟ್ ಬುಕ್ ಮಾಡಿದ ಕಾಂಗ್ರೆಸ್
ರಾಜ್ಯ ಕಾಂಗ್ರೆಸ್ ಶಾಸಕರಿಗೆ ಹೈಕಮಾಂಡ್ ಕರೆ ಹಿನ್ನೆಲೆ ಬೆಂಗಳೂರಿನಿಂದ ಕಾಂಗ್ರೆಸ್ ಶಾಸಕರು ದೆಹಲಿಗೆ ತೆರಳುತ್ತಿದ್ದಾರೆ. ಶಾಸಕರಿಗೆ ಕಾಂಗ್ರೆಸ್ ಫ್ಲೈಟ್ ಟಿಕೆಟ್ ಬುಕ್ ಮಾಡಿದೆ. ಸಂಜೆ 4 ಗಂಟೆ ಬಳಿಕ ದೆಹಲಿಗೆ ‘ಕೈ’ ಶಾಸಕರು ತೆರಳಲಿದ್ದಾರೆ. ಸಂಜೆ ದೆಹಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕರಾದ ಭೈರತಿ ಸುರೇಶ್, ಆರ್.ವಿ.ದೇಶಪಾಂಡೆ, ಹ್ಯಾರಿಸ್, ಕೃಷ್ಣಭೈರೇಗೌಡ, ರಿಜ್ವಾನ್ ಸೇರಿ ಹಲವರು ತೆರಳಲಿದ್ದಾರೆ. ಸಂಜೆ 4ರಿಂದ ರಾತ್ರಿ 8ರ ನಡುವಿನ ಫ್ಲೈಟ್ ಟಿಕೆಟ್ ಬುಕ್ ಮಾಡಲಾಗಿದೆ.
ಅಗ್ನಿಪಥ್ ವಿರೋಧಿಸಿ ಪ್ರತಿಭಟನೆ: ದೇಶದ ವಿವಿಧೆಡೆ 1000 ಮಂದಿ ಬಂಧನ
ಮಿಲಿಟರಿ ನೇಮಕಾತಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಅಗ್ನಿಪಥ್ ಯೋಜನೆ (Agnipath Scheme) ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ವಿವಿಧ ರಾಜ್ಯಗಳ ಪೊಲೀಸರು ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡ ಸುಮಾರು 1,000 ಮಂದಿಯನ್ನು ಬಂಧಿಸಿದ್ದಾರೆ. ಬಿಹಾರದಲ್ಲಿಯೇ (Bihar) ಹೆಚ್ಚಿನ ಸಂಖ್ಯೆಯ ಜನರನ್ನು ಬಂಧಿಸಲಾಗಿದೆ. ಪ್ರತಿಭಟನೆಯ ವಿಡಿಯೊ ಫೂಟೇಜ್ಗಳನ್ನು ಗಮನಿಸಿ, ಹಿಂಸಾಚಾರ ಎಸಗಿದವರನ್ನು ಪೊಲೀಸರು ಗುರುತಿಸುತ್ತಿದ್ದಾರೆ. ಅಗ್ನಿಪಥ್ ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆಗಳ ತೀವ್ರತೆ ಬಿಹಾರದಲ್ಲಿ ಹೆಚ್ಚಾಗಿದೆ. ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಲಾಗಿದೆ. ರೈಲುಗಳಿಗೂ ಬೆಂಕಿ ಹಚ್ಚಲಾಗಿದೆ. ಬಿಹಾರದ 805 ಮಂದಿಯ ವಿರುದ್ಧ 148 ಎಫ್ಐಆರ್ ದಾಖಲಾಗಿದೆ.ಇದನ್ನೂ ಓದಿ: Video Viral: ಬಾಣಲೆಯ ಹೊಡೆತಕ್ಕೆ ಹಿಮ್ಮೆಟ್ಟಿದ ಮೊಸಳೆ
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:39 pm, Tue, 21 June 22