ಹಿಂದೂ ಸಂಘಟನೆಗಳಿಂದ ಅಂತರಾಷ್ಟ್ರೀಯ ಯೋಗ ದಿನ ಆಚರಣೆ ಹಿನ್ನಲೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಟೈಟ್ ಸೆಕ್ಯೂರಿಟಿ
ಹಿಂದೂ ಸಂಘಟನೆಗಳು ಬಲವಂತವಾಗಿ ಯೋಗ ಮಾಡುಬಹುದು ಎಂದು ಮೈದಾನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಇಡೀ ಮೈದಾನದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೈದಾನದ ಸುತ್ತ 50ಕ್ಕಿಂತ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ(Chamrajpet Eidgah Ground) ಅಂತರಾಷ್ಟ್ರೀಯ ಯೋಗ ದಿನವನ್ನು(International Yoga Day 2022) ಆಚರಿಸಲು ಮುಂದಾಗಿದ್ದ ಹಿಂದೂ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡುವಂತೆ ಬಿಬಿಎಂಪಿಗೆ(BBMP) ಅನುಮತಿ ಹೇಳಿದ್ದವು ಆದ್ರೆ ಬಿಬಿಎಂಪಿ ಅನುಮತಿ ನಿರಾಕರಿಸಿದೆ. ಹೀಗಾಗಿ ಹಿಂದೂ ಸಂಘಟನೆಗಳು ಬಲವಂತವಾಗಿ ಯೋಗ ಮಾಡುಬಹುದು ಎಂದು ಮೈದಾನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಇಡೀ ಮೈದಾನದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೈದಾನದ ಸುತ್ತ 50ಕ್ಕಿಂತ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ವಂದ ಮಾತರಂ ಸೇವಾ ಸಮಾಜಂ, ವಿಶ್ವ ಸನಾತನ ಪರಿಷತ್, ಶ್ರೀರಾಮ ಸೇನೆ ಮತ್ತಿತರರು ಯೋಗ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಗಣೇಶ ಉತ್ಸವದಂದು ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಬಿಬಿಎಂಪಿ ಜಂಟಿ ಆಯುಕ್ತ ಎಸ್.ಎಂ.ಶ್ರೀನಿವಾಸ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಬಿಬಿಎಂಪಿ ನಿರಾಕರಿಸಿದೆ. ಇದನ್ನೂ ಓದಿ: ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ; ಮತ್ತೊಂದು ಮಾಹಿತಿ ಬಹಿರಂಗ
14 ವರ್ಷದ ಹಿಂದೆಯೇ ಅಂದರೆ 2006ರಲ್ಲಿ ನಡೆದಿತ್ತು ಮಹತ್ವದ ಸಂಧಾನ ಸಭೆ ಜಮೀರ್ ಅಹ್ಮದ್ ಖಾನ್ ಮೊದಲ ಬಾರಿಗೆ ಶಾಸಕರಾಗಿದ್ದಾಗ, ಚಾಮರಾಜಪೇಟೆ ಮೈದಾನದ ಟವರ್ ಪರಿಶೀಲನೆ ಮಾಡಿದ್ದಾರೆ. ಆ ಟವರ್ನಲ್ಲಿ ಮಳೆಯಿಂದ ಕ್ರಾಕ್ಸ್ ಆಗಿರುವುದು ಪತ್ತೆಯಾಗಿತ್ತು. ಆ ಟವರ್ನನ್ನು ಮತ್ತೆ ರಿನೋವೇಶನ್ ಮಾಡಲು ಜಮೀರ್ ಅಹ್ಮದ್ ಖಾನ್ ಚಿಂತನೆ ಮಾಡುತ್ತಾರೆ. ಇದಕ್ಕೆ ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ವಿರೋಧ ವ್ಯಕ್ತಪಡಿಸಿದ್ದರು.
ಇದು ಮೊದಲು ಯಾರಿಗೆ ಸೇರಿದ ಮೈದಾನ ಎಂದು ನಿರ್ಧಾರ ಆಗಲಿ ಅಂತಾ ನೇಸರ್ಗಿ ಪಟ್ಟು ಹಿಡಿದಿದ್ದರು. ಎಸಿಪಿ ಕಚೇರಿಯಲ್ಲಿ, ಆಗೀನ ಡಿಸಿಪಿ ಆಗಿದ್ದ ಅಲೋಕ್ ಕುಮಾರ್ ನೇತೃತ್ವದಲ್ಲಿ ಒಂದು ಸಂಧಾನ ಸಭೆ ನಡೆದಿತ್ತು. ಈ ಸಭೆಯಲ್ಲಿ ಪ್ರಮೀಳಾ ನೇಸರ್ಗಿ, ಜಮೀರ್, ಆರ್.ವಿ ದೇವರಾಜ್, ಇಬ್ಬರು ಮಾಜಿ ಕಾರ್ಪೋರೇಟರ್ ಹಾಗೂ ಹಲವರು ಸದಸ್ಯರು ಭಾಗಿಯಾಗಿದ್ದರು. ಇವರೆಲ್ಲರೂ ಸೇರಿ ಒಂದು ಸಂಧಾನ ಮಾಡಿಕೊಳ್ಳುತ್ತಾರೆ. ಈದ್ಗಾ ಟವರ್ನಲ್ಲಿ ಕ್ರಾಕ್ ಬಿಟ್ಟಿರುವುದನ್ನು ಸರಿ ಮಾಡಿಕೊಳ್ಳಿ. ಆದರೆ ನಮಗೆ ದಸರಾ, ದೀಪಾವಳಿ, ಗಣೇಶೋತ್ಸವ ಮಾಡಲು ಅವಕಾಶ ಕೊಡಬೇಕು ಅಂತಾ ಅಗ್ರಿಮೆಂಟ್ ಆಗಿದೆ. 2006 ರಲ್ಲಿ ಆಗಿರುವ ಅಗ್ರಿಮೆಂಟ್ ಇದು. ಈ ರೀತಿ ಅಗ್ರಿಮೆಂಟ್ ಮಾಡಿಕೊಂಡ ನಂತರ ಜಮೀರ್ ಅಹ್ಮದ್ ಖಾನ್ ಉಲ್ಟಾ ಹೊಡೆದಿದ್ದಾರೆ ಅಂತಾ ವಿಶ್ವ ಸನಾತನ ಪರಿಷತ್ತು ಆರೋಪ ಮಾಡಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದೇನು?: ಈದ್ಗಾ ಮೈದಾನ ವಿವಾದದ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 1974ರ ಸಿಟಿ ಸರ್ವೆ ಪ್ರಕಾರ ಇದು ಆಟದ ಮೈದಾನ. ಸರ್ವೆ ಪ್ರಕಾರ ಈ ಮೈದಾನ ಪಾಲಿಕೆಗೆ ಸೇರಿದೆ. ಅಲ್ಲಿ ಪ್ರಾರ್ಥನೆ ಮಾಡುವ ಸ್ಟಕ್ಚರ್ ಇದೆ ಅಂತ ನಮೂದು. ಈ ಸಂಬಂಧ ಸುಪ್ರೀಂಕೋರ್ಟ್ ಆದೇಶದ ಪ್ರತಿ ಸಿಕ್ಕಿದೆ. ಆದರೆ ಆದೇಶದ ಪ್ರತಿಯಲ್ಲಿ ಒಂದು ಪೇಜ್ ಮಿಸ್ ಆಗಿದೆ. ಈ ಬಗ್ಗೆ ಸೂಕ್ತ ದಾಖಲೆ ಇದ್ದರೆ ತಂದು ಕೊಡಬಹುದು. ಅಲ್ಲಿ ವರ್ಷಕ್ಕೆ 2 ಬಾರಿ ಪ್ರಾರ್ಥನೆ ಮಾಡಲು ಅವಕಾಶ ಇದೆ. ಪ್ರಾರ್ಥನೆ ಮಾಡಲು ನಾವು ಅಡ್ಡಿಪಡಿಸಲ್ಲ. ಮೈದಾನದಲ್ಲಿ ಮಕ್ಕಳು ಆಟವಾಡಲು ಯಾವುದೇ ತೊಂದರೆ ಇಲ್ಲ ಎಂದು ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:17 pm, Tue, 21 June 22