ಬೆಂಗಳೂರು: ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷವು ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಪ್ರತಿಭಟನಾ ಧರಣಿ ನಡೆಸಿತು. ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು 100 ಅಡಿಯಷ್ಟು ದೊಡ್ಡದಾಗಿದ್ದ ಸಿಲಿಂಡರ್ ಬ್ಯಾನರ್ ತಲೆಯ ಮೇಲೆ ಹೊತ್ತು ನಡೆದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಜನಸಾಮಾನ್ಯರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ. ನಿತ್ಯವೂ ಇಂಧನ, ದಿನಬಳಕೆ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಶೀಘ್ರ ಬೆಲೆ ಇಳಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ಸಂಸದರು, ಶಾಸಕರ ಮನೆ ಬಳಿ ಪ್ರತಿಭಟನೆ ನಡೆಸಿ ಘೇರಾವ್ ಮಾಡಲಾಗುವುದು ಎಂದರು. ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಕ್ಷ ರಾಮಯ್ಯ ಉಪಸ್ಥಿತರಿದ್ದರು.
ಜನಾಂದೋಲನ ಸಮಿತಿಗೆ ಕಾಂಗ್ರೆಸ್ ನಿರ್ಧಾರ
ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ದೇಶಾದ್ಯಂತ ಜನಾಂದೋಲನ ನಡೆಸಲು ಕಾಂಗ್ರೆಸ್ ಪಕ್ಷವು ನಿರ್ಧರಿಸಿದೆ. ಈ ಸಂಬಂಧ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಎಐಸಿಸಿ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ ಸಮಿತಿ ರಚಿಸಿದ್ದಾರೆ. ಸಮಿತಿಯಲ್ಲಿ ಪ್ರಿಯಾಂಕಾ ಗಾಂಧಿ, ಉತ್ತಮ್ ಕುಮಾರ್ ರೆಡ್ಡಿ, ಉದಿತ್ ರಾಜ್, ಬಿ.ಕೆ.ಹರಿಪ್ರಸಾದ್, ಮನೀಶ್ ಚತ್ರತ್ ಸೇರಿದಂತೆ ಒಂಬತ್ತು ಹಿರಿಯ ನಾಯಕರು ಇದ್ದಾರೆ. ಕೊವಿಡ್ ನಿರ್ವಹಣೆಯ ಸಮಸ್ಯೆಗಳು, ಬೆಲೆ ಏರಿಕೆ, ನಿರುದ್ಯೋಗ ವಿರುದ್ಧದ ಹೋರಾಟಕ್ಕೆ ಎಐಸಿಸಿ ಸಮಿತಿ ರೂಪುರೇಷೆ ರೂಪಿಸಲಿದೆ.
ಎಲ್.ಪಿ.ಜಿ ದರವನ್ನು 15 ದಿನಗಳಲ್ಲಿ ₹50 ಏರಿಕೆ ಮಾಡಿರುವುದರ ವಿರುದ್ಧ ಹಾಗೂ ಕೇಂದ್ರ ಸರಕಾರದ ಜನವಿರೋಧಿ ನೀತಿ, ದುರಾಡಳಿತವನ್ನು ಖಂಡಿಸಿ ಬೆಂಗಳೂರು ನಗರ ಪ್ರಚಾರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. @SManoharCONG,
ಜಿ.ಜನಾರ್ಧನ್, ಎಂ.ಎ ಸಲೀಮ್, ಎ.ಆನಂದ್, ಎಲ್. ಜಯಸಿಂಹ, ಪುಟ್ಟರಾಜು,ಮಹೇಶ್ ಸೇರಿ ಹಲವರು ಭಾಗವಹಿಸಿದ್ದರು. pic.twitter.com/swBbLHftpH— Karnataka Congress (@INCKarnataka) September 2, 2021
(Congress Party Workers Protest Against LPG Price Hike)
ಇದನ್ನೂ ಓದಿ: ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು: ಸಿದ್ದರಾಮಯ್ಯ ಆಗ್ರಹ
ಇದನ್ನೂ ಓದಿ: ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಘೋಷಣೆ ಮಾಡಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ: ಡಿಕೆ ಶಿವಕುಮಾರ್
Published On - 7:05 pm, Thu, 2 September 21