ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಘೋಷಣೆ ಮಾಡಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ: ಡಿಕೆ ಶಿವಕುಮಾರ್

DK Shivakumar: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರ ಡಿಕೆ ಶಿವಕುಮಾರ್ ಸಭೆ ನಡೆಸಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಭಯ್ ಪಾಟೀಲ್, ಸಿ.ಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಘೋಷಣೆ ಮಾಡಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ: ಡಿಕೆ ಶಿವಕುಮಾರ್
ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Aug 29, 2021 | 5:47 PM

ಬೆಳಗಾವಿ: ಸುವರ್ಣಸೌಧ ನಿರ್ಮಿಸಿ ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಘೋಷಣೆ ಮಾಡಿ ಬಳಿಕ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಸುವರ್ಣಸೌಧದಲ್ಲಿ ಒಂದು ವಾರ ಅಧಿವೇಶನ ನಡೆಸಬೇಕು. 1 ವಾರ ಕಲಾಪ ನಡೆಸಿದ್ರೆ ಬೆಳಗಾವಿಗೆ ಆರ್ಥಿಕ ಬಲ ಬರುತ್ತೆ. ಆದರೆ ಬೆಳಗಾವಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿಯೇ ಇಲ್ಲ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

20 ವರ್ಷದಿಂದ ಬೆಳಗಾವಿ ಪಾಲಿಕೆಯಲ್ಲಿ ಸಿಡಿಪಿ ಇರಲಿಲ್ಲ. ಸತೀಶ್ ಜಾರಕಿಹೊಳಿ‌ ಸಚಿವರಾಗಿದ್ದಾಗ ಸಿಡಿಪಿ ಬಂದಿದೆ. ಕಾಂಗ್ರೆಸ್​ಗೆ ಅಧಿಕಾರ ಕೊಟ್ರೆ ಹೊಸ ಸಿಡಿಪಿಗೆ ಶಿಫಾರಸು ಮಾಡುತ್ತೇವೆ. ಮತ್ತೊಂದು ಸಿಡಿಪಿ ಕೊಡ್ತೀವೆ ಜೊತೆಗೆ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ. ಜನ ಉದ್ಯೋಗಕ್ಕೆ ಬೆಂಗಳೂರಿಗೆ ಹೋಗೋದು ತಪ್ಪಬೇಕು. ಬಿಲ್ಡಿಂಗ್‌ಗಳು ಕೇವಲ ಬೆಂಗಳೂರಿಗೆ ಸೀಮಿತ ಆಗಬಾರದು ಎಂದು ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಸೆಪ್ಟಂಬರ್ 3 ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಸಂತೋಷ, ವಿಶ್ವಾಸದಿಂದ ನಾನು ಬೆಳಗಾವಿಗೆ ಆಗಮಿಸಿದ್ದೇನೆ. ಲೋಕಸಭೆ ಬೈಎಲೆಕ್ಷನ್​ನಲ್ಲಿ ಅತಿಹೆಚ್ಚು ವಿಶ್ವಾಸ ಕೊಟ್ಟಿದ್ದಾರೆ. ಬೆಳಗಾವಿ ಜನತೆ ನಮಗೆ ಅತಿಹೆಚ್ಚು ವಿಶ್ವಾಸವನ್ನ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಸೋತರೂ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಬಲ ಬಂದಿದೆ. ಮೊದಲ ಬಾರಿಗೆ ಬಿಜೆಪಿಯವರು ಪ್ರಣಾಳಿಕೆಯನ್ನ ಬಿಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಸುರೇಶ್ ಅಂಗಡಿ ಅಂತ್ಯಸಂಸ್ಕಾರ ಕುರಿತು ಪ್ರಸ್ತಾಪಿಸಿದ ಶಿವಕುಮಾರ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಸುರೇಶ್ ಅಂಗಡಿ ಅಂತ್ಯಸಂಸ್ಕಾರವನ್ನು ಸರ್ಕಾರ ಅಮಾನವೀಯಾಗಿ ಮಾಡಿತು. ಕೊವಿಡ್​​ನಿಂದಾಗಿ ಜನ ಸತ್ತು ಹೋದ್ರು. ನನ್ನ ಮಿತ್ರ ಕೇಂದ್ರ ಸಚಿವ ಸುರೇಶ್ ಅಂಗಡಿಯೂ ತೀರಿಕೊಂಡ್ರು. ಓರ್ವ ಕೇಂದ್ರ ಸಚಿವರ ಶವ ತರಲು ಆಗಲಿಲ್ಲ ಇವರ ಕೈಯಲ್ಲಿ. ಕ್ಷೇತ್ರದ ಜನರಿಗೆ ಸುರೇಶ್ ಅಂಗಡಿ ದರ್ಶನ ಕೊಡಿಸಲಾಗಲಿಲ್ಲ. ನಾನು ಬೇಕಂತಲೇ ಲೋಕಸಭೆ ಬೈಎಲೆಕ್ಷನ್​ನಲ್ಲಿ ಮಾತಾಡಿಲ್ಲ. ಏಕೆಂದರೆ ಸುರೇಶ್​ ಅವರ ಧರ್ಮಪತ್ನಿ ಚುನಾವಣೆಗೆ ನಿಂತಿದ್ರು. ಅಮಾನವೀಯವಾಗಿ ಕೇಂದ್ರ ಸರ್ಕಾರ ಶವಸಂಸ್ಕಾರ ಮಾಡಿತು. ಇದಕ್ಕೆ ಬಿಜೆಪಿಗೆ ವೋಟ್ ಹಾಕಬೇಕಾ ಎಂದು ಡಿ.ಕೆ. ಶಿವಕುಮಾರ್​​ ಟೀಕಿಸಿದ್ದಾರೆ.

ಶಾಸಕ ಅಭಯ್ ಪಾಟೀಲ್, ಸಿ.ಟಿ ರವಿ ಹೇಳಿಕೆಗೆ ತಿರುಗೇಟು ಎಂಇಎಸ್ ಕಾಂಗ್ರೆಸ್ ಬಿ ಟೀಮ್ ಎಂಬ ಆರೋಪ ಹಾಗೂ ನಾಡದ್ರೋಹಿ ಎಂಇಎಸ್ ಬಗ್ಗೆ ಡಿಕೆಶಿ ಸಾಫ್ಟ್ ಕಾರ್ನರ್ ಎಂಬ ಶಾಸಕ ಅಭಯ್ ಪಾಟೀಲ್ ಆರೋಪಕ್ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಸ್ವಂತಕ್ಕೆ ಏನು ಬೇಕಾದರೂ ಅಂದುಕೊಳ್ಳಲಿ. ನಾವು ಯಾರನ್ನು ಅಗೌರವದಿಂದ ಕಾಣಲ್ಲ. ಬಿಜೆಪಿಯವರನ್ನೂ ಗೌರವದಿಂದ ಕಾಣುತ್ತೇವೆ. ಎಂಇಎಸ್‌ನವರನ್ನೂ ಗೌರವದಿಂದ ಕಾಣುತ್ತೇವೆ. ಅವರವರ ಪಕ್ಷದ ನಾಯಕರು ಏನಾದ್ರೂ ಹೇಳಿಕೊಳ್ಳಲಿ. ಬೆಳಗಾವಿ ಜನರ ವಿಚಾರದ ಬಗ್ಗೆ ಕಾಂಗ್ರೆಸ್​​ ಚಿಂತನೆ ನಡೆಸುತ್ತದೆ ಎಂದು ತಿಳಿಸಿದ್ದಾರೆ.

‘ಕಾಂಗ್ರೆಸ್‌ನಲ್ಲಿ ಪ್ರಮೋಷನ್ ಬೇಕಾದ್ರೆ ಜೈಲಿಗೆ ಹೋಗಬೇಕು’ ಎಂಬ ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದ್ದಾರೆ. ಸಿ.ಟಿ.ರವಿ ಈ ರೀತಿಯಾಗಿ ಹೇಳಿರುವುದು ಬಹಳ ಸಂತೋಷ. ಬಿಜೆಪಿ ನಾಯಕ ಸಿ.ಟಿ. ರವಿ ಸರ್ಟಿಫಿಕೇಟ್ ಅವಶ್ಯಕತೆ ಇದೆ. ಪಾಪ ಯಡಿಯೂರಪ್ಪನವರಿಗೂ ಒಂದು ಸರ್ಟಿಫಿಕೇಟ್ ಇತ್ತು. ಅಮಿತ್ ಶಾ ಸರ್‌ಗೂ ಒಂದು ಸರ್ಟಿಫಿಕೇಟ್ ಇತ್ತು. ಉಮಾಭಾರತಿಯವರಿಗೂ ಒಂದು ಸರ್ಟಿಫಿಕೇಟ್ ಇತ್ತು. ಇನ್ನೂ ಬೇಕಾದಷ್ಟು ಹೆಸರುಗಳಿವೆ ಎಂದು ಜೈಲಿಗೆ ಹೋಗಿರುವ ಬಿಜೆಪಿ ನಾಯಕರ ಹೆಸರು ಪ್ರಸ್ತಾಪಿಸಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಡಿಕೆಶಿ ಕೊತ್ವಾಲ್ ರಾಮಚಂದ್ರ ಶಿಷ್ಯ ಎಂಬ ಹೇಳಿಕೆಗೂ ಸಿ.ಟಿ. ರವಿ ಅವರೇ ಶಿಷ್ಯರಾಗಿರಬೇಕು ಎಂದು ಡಿ.ಕೆ. ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಪಾಲಿಕೆ ಚುನಾವಣೆ: ಎಂಇಎಸ್ ಬಂಡಾಯ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆ; ಪ್ರಣಾಳಿಕೆ ಬಿಡುಗಡೆ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಬೆನ್ನಲ್ಲೇ ಆಂತರಿಕ ಅಸಮಾಧಾನ ಸ್ಫೋಟ

Published On - 5:45 pm, Sun, 29 August 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ