ಗುತ್ತಿಗೆದಾರ ಆತ್ಮಹತ್ಯೆ ಕೇಸ್: ಮಣಿಕಂಠ ರಾಠೋಡ್ ಆಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ
ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಆರೋಪಿಸಿದಂತೆ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಸಂತೋಷ್ ಪಾಟೀಲ್ ಅವರ ಸಾವಿಗೆ ಸಂಬಂಧಿಸಿದ ಡೆತ್ ನೋಟ್ ಮತ್ತು ಸಚಿನ್ ಪ್ರಕರಣದ ನಡುವಿನ ವ್ಯತ್ಯಾಸವನ್ನು ಅವರು ಎತ್ತಿ ತೋರಿಸಿದ್ದಾರೆ. ಬಿಜೆಪಿಯ ಆರೋಪಗಳನ್ನು ತಿರಸ್ಕರಿಸಿ, ಅವರು ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು, ಜನವರಿ 02: ಬೀದರ್ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜಕೀಯ ಜಟಾಪಟಿ ದಿನದಿಂದ ದಿನಕ್ಕೆ ಮತ್ತಷ್ಟು ಜೋರಾಗುತ್ತಿದೆ. ಸಚಿನ್ ಪಾಂಚಾಳ್ ಸಾವಿಗೂ ನನಗೂ ಯಾವುದೇ ಸಂಬಂಧ ಇಲ್ಲವೆಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದೀಗ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರದ್ದು ಎನ್ನಲಾದ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಕಲಬುರಗಿ ರಿಪಬ್ಲಿಕ್ ಮಾಡಿದವರು ಯಾರು?
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಿನ್ನೆ ನನ್ನ ಹಳೆಯ ಸ್ಪೀಚ್ ಅಪ್ಲೋಡ್ ಮಾಡಿದ್ದಾರೆ. ಕಲಬುರಗಿ ರಿಪಬ್ಲಿಕ್ ಮಾಡಿದವರು ಯಾರು? ನಿಮ್ಮ ಅಭ್ಯರ್ಥಿ ನಮ್ಮ ಕುಟುಂಬದ ವಿರುದ್ಧ ಸಂಚು ಮಾಡುತ್ತಾನೆ. ನಮ್ಮ ತಂದೆ, ತಾಯಿ, ಕುಟುಂಬ ಕೊಲ್ತೀನಿ ಅಂತಾ ಆತ ಹೇಳುತ್ತಾನೆ. ಅದರ ಬಗ್ಗೆ ನಾವು ದೂರು ಕೊಟ್ಟಾಗ ನಿಮ್ಮದೇ ಸರ್ಕಾರ ಇತ್ತು. ಅಂಥವನಿಗೆ ನೀವು ಅಧಿಕೃತ ಅಭ್ಯರ್ಥಿ ಮಾಡಿ ಟಿಕೆಟ್ ಕೊಟ್ಟಿದ್ದೀರಿ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ, ರಾಜೀನಾಮೆ ಯಾಕೆ ಕೊಡಬೇಕು: ಸಿಎಂ ಪ್ರಶ್ನೆ
ನನ್ನ ರಾಜೀನಾಮೆ ಕೊಡಿಸಲು ಖರ್ಗೆಗೆ ಕಪ್ಪು ಚುಕ್ಕೆ ತರಲು ಯತ್ನಿಸುತ್ತಿದ್ದಾರೆ. ಬಿಜೆಪಿಗರು ಬಹಳ ಬಾಲಿಶವಾಗಿ ಮಕ್ಕಳ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕಳೆದ 4-5 ದಿನಗಳಿಂದ ಬಿಜೆಪಿ ಬಹಳಷ್ಟು ಪ್ರಯತ್ನ ಮಾಡಿದ್ದಾರೆ. ವಿಜಯೇಂದ್ರ, ನಾರಾಯಣಸ್ವಾಮಿ ಯಾಕೋ ಹೋಂ ವರ್ಕ್ ಸರಿಯಾಗಿ ಮಾಡುತ್ತಿಲ್ಲ. ನಾರಾಯಣಸ್ವಾಮಿಗೆ ವೈಯಕ್ತಿಕ ಟೀಕೆ ಮಾಡಲು ಸ್ಥಾನ ಕೊಟ್ಟಂತಿದೆ. ಕಲಬುರಗಿ ರಿಪಬ್ಲಿಕ್ ಅಂತಾ ನಾರಾಯಣಸ್ವಾಮಿ ಆರೋಪ ಮಾಡಿದ್ದಾರೆ ಎಂದರು.
ಪ್ರಿಯಾಂಕ್ ಖರ್ಗೆ ಟ್ವೀಟ್
. @BJP4Karnataka’s fake news factory is working overtime, they are desperately trying to emulate Joseph Goebbels.
Please play the video entirely and people will know the context.
Also, BJP IT & social media coolies, this speech was done when your Government was in power.
Why… https://t.co/jwT08UkHCU pic.twitter.com/1h8h3AuL15
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 1, 2025
ಸಂತೋಷ್ ಬರೆದ ಡೆತ್ನೋಟ್ನಲ್ಲಿ ಈಶ್ವರಪ್ಪ ಹೆಸರು ಸ್ಪಷ್ಟವಾಗಿತ್ತು. ನನ್ನ ಸಾವಿಗೆ ನೇರ ಕಾರಣ ಈಶ್ವರಪ್ಪ ಅಂತಾ ಡೆತ್ನೋಟ್ ಬರೆದಿದ್ದರು. ಆದರೆ ಸಚಿನ್ ಪ್ರಕರಣದಲ್ಲಿ ನನ್ನ ಹೆಸರೇ ಬರೆದಿಲ್ಲ. ಸಂತೋಷ್ ಮನೆಗೆ ಒಮ್ಮೆಯಾದರೂ ವಿಜಯೇಂದ್ರ ಹೋಗಿದ್ದಾರಾ? ಸಚಿನ್ ಮನೆಗೆ ವಿಜಯೇಂದ್ರ 5 ಲಕ್ಷ ರೂ. ತೆಗೆದುಕೊಂಡು ಹೋಗಿದ್ದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಮನೆಗೆ ಯಾಕೆ ಹೋಗಲಿಲ್ಲ? ಯಾರೋ ಬರೆದಿದ್ದನ್ನು ತಿರುಚಿ ಮಗುಚಿ ಹಾಕಿದ್ರಲ್ಲ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿದ್ದಾರೆ. ರಾಜೀವ್ ವಿರುದ್ಧ ಮಾನನಷ್ಟ ಕೇಸ್ ಹಾಕಿದ್ದೆ, ಈವರೆಗೂ ಉತ್ತರ ಬಂದಿಲ್ಲ. ಬಿಜೆಪಿಯವರು ಸುಳ್ಳಿನ ಮಹಾಶೂರರು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.