ಮೇಲ್ಮನೆಯಲ್ಲಿ ಗುರು ರಾಘವೇಂದ್ರ, ವಸಿಷ್ಠ ಬ್ಯಾಂಕ್ ಅವ್ಯವಹಾರ ಪ್ರಸ್ತಾಪ: ಸಹಕಾರ ಸಚಿವ ಸೋಮಶೇಖರ್ ಏನಂದರು?

ಸಹಕಾರ ಇಲಾಖೆಗೆ ಕೆಲವು ಲಿಮಿಟ್ಸ್ ಇದೆ. ಇದು ಹೈಕೋರ್ಟ್ ಡೈರೆಕ್ಷನ್ ಮೇಲೆ, ರಿಸರ್ವ್ ಬ್ಯಾಂಕ್ ಡೈರೆಕ್ಷನ್ ಮೇಲೆ ತನಿಖೆ ನಡೆಯುತ್ತಿದೆ. 24 ಜನರಲ್ಲಿ 8 ಜನ ಅತಿಹೆಚ್ಚು ಲೋನ್ ತೆಗೆದುಕೊಂಡವರು. ಜಸ್ವಂತ್ ರೆಡ್ಡಿ ಹಾಗೂ ರಂಜಿತ್ ರೆಡ್ಡಿ ಅತಿಹೆಚ್ಚಿನ ಲೋನ್ ತೆಗೆದಿದ್ದಾರೆ. ಈಗ ಫಾರೀನ್ ನಲ್ಲಿದ್ದಾರೆ ಎಂದರು ಸಹಕಾರ ಸಚಿವ ಸೋಮಶೇಖರ್

ಮೇಲ್ಮನೆಯಲ್ಲಿ ಗುರು ರಾಘವೇಂದ್ರ, ವಸಿಷ್ಠ ಬ್ಯಾಂಕ್ ಅವ್ಯವಹಾರ ಪ್ರಸ್ತಾಪ: ಸಹಕಾರ ಸಚಿವ ಸೋಮಶೇಖರ್ ಏನಂದರು?
ಮೇಲ್ಮನೆಯಲ್ಲಿ ಗುರು ರಾಘವೇಂದ್ರ, ವಸಿಷ್ಠ ಬ್ಯಾಂಕ್ ಅವ್ಯವಹಾರ ಪ್ರಸ್ತಾಪ: ಸಹಕಾರ ಸಚಿವ ಸೋಮಶೇಖರ್ ಏನಂದರು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 13, 2022 | 5:26 PM

ಬೆಂಗಳೂರು: ನಿನ್ನೆಯಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಇಂದು ವಿಧಾನ ಪರಿಷತ್ ನಲ್ಲಿ (Karnataka Legislative Council) ಕಾಂಗ್ರೆಸ್​ ಸದಸ್ಯ ಯು ಬಿ ವೆಂಕಟೇಶ್ (UB Venkatesh) ಅವರು ಗಮನ ಸೆಳೆಯುವ ಸೂಚನೆ ಚರ್ಚೆಯಡಿ ವಂಚನೆ ಎಸಗಿರುವ ಬೆಂಗಳೂರು ದಕ್ಷಿಣದಲ್ಲಿರುವ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ (Guru Raghavendra Coop bank) ಹಾಗೂ ವಸಿಷ್ಠ ಸಹಕಾರ ಬ್ಯಾಂಕ್ ಅವ್ಯವಹಾರದಲ್ಲಿ (Vasishta Bank fraud case) ಭಾಗಿಯಾದವರ ಮೇಲೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ವಿಚಾರ ಪ್ರಸ್ತಾಪಿಸಿದರು.

ಯು ಬಿ ವೆಂಕಟೇಶ್ ಹೇಳಿಕೆ ಹೀಗಿದೆ: ಚಂದಮಾಮ ಕತೆಯಲ್ಲಿ ಬರುವ ಬೇತಾಳನಂತೆ ನನ್ನ ಕತೆ ಆಗಿದೆ. ಪಾಪಾತ್ಮರು ದುಡ್ಡು ಇಟ್ಟು ಮೋಸ ಹೋಗಿದಾರೆ. ಈ ವರೆಗೆ 90 ಜನ ತೀರಿಹೋಗಿದ್ದಾರೆ. ಸರ್ಕಾರದ ನೆರವು ಕೇಳಿದ್ದಾರೆ. ಸಾವಿರ ಕೋಟಿ ಆಸ್ತಿ ಜಪ್ತಿ ಮಾಡಿದೇವೆ ಅಂತ ಸಿಐಡಿ ಅವರು ಹೇಳ್ತಾರೆ. 3-6 ತಿಂಗಳಿಗೊಮ್ಮೆ ಠೇವಣಿದಾರರಿಗೆ ಮೆಸೇಜ್ ಕೊಡಿ ಎಂದು ತಿಳಿಸಲಾಗಿತ್ತು. ಆದ್ರೆ ಅಧಿಕಾರಿಗಳು ಮಾಹಿತಿ ಕೊಡುತ್ತಿಲ್ಲ. ಬರೀ ಸಭೆ ಮಾಡೋದು, ಸಿಐಡಿ ಹೇಳೋದು ಇದಷ್ಟೇ ಹೇಳಲಾಗ್ತಿದೆ. ಈ ಜನರಿಗೆ ಹೇಗೆ ಮುಖ ತೋರಿಸಬೇಕು? ಎಲ್ಲಾ ಬಡಬ್ರಾಹ್ಮಣರು ದುಡ್ಡು ಇಟ್ಟವರು ಎಂದು ವಂಚಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುಬಿ ವೆಂಕಟೇಶ್ ಆಗ್ರಹಿಸಿದರು.

ಇದಕ್ಕೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ (ST Somashekar) ಉತ್ತರ ನೀಡಿದ್ದಾರೆ. ಸಹಕಾರ ಇಲಾಖೆಗೆ ಕೆಲವು ಲಿಮಿಟ್ಸ್ ಇದೆ. 1,115 ಕೋಟಿ ಆಸ್ತಿಯನ್ನು ಫ್ರೀಝ್ ಮಾಡಲಾಗಿದೆ. ಸಹಕಾರ ಇಲಾಖೆಯಿಂದ ಯಾವುದೇ ಸಮಸ್ಯೆ ಇಲ್ಲ. ರಿಸರ್ವ್ ಬ್ಯಾಂಕ್ ಹೇಳಿದಂತೆ ಕೇಳುತ್ತಿದ್ದೇವೆ. ಮುಂಬೈ ಆದೇಶಕ್ಕೆ ಕಾಯುತ್ತಿದ್ದೇವೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಉತ್ತರ ಹೀಗಿತ್ತು: 3-4 ನೇ ಬಾರಿಗೆ ಈ ಪ್ರಶ್ನೆ ಕೇಳ್ತಿದಾರೆ. ಏನೇನು ಆದೇಶಗಳನ್ನು ಕೊಡ್ಬೇಕು ಅವೆಲ್ಲವನ್ನು ಕೊಡಲಾಗಿದೆ. ಜಸ್ವಂತ್ ರೆಡ್ಡಿ ಹಾಗೂ ರಂಜಿತ್ ರೆಡ್ಡಿ ಅತಿಹೆಚ್ಚಿನ ಲೋನ್ ತೆಗೆದಿದ್ದಾರೆ. ಈಗ ಫಾರೀನ್ ನಲ್ಲಿದ್ದಾರೆ, ಸಿಬಿಐ ಮೂಲಕ ವಶಕ್ಕೆ ಪಡೆಯಲಾಗ್ತಿದೆ. ಯಾರೆಲ್ಲ ಸಾಲ ತಗೊಂಡಿದಾರೋ ಅವರೆಲ್ಲರಿಗೂ ಬಡ್ಡಿಸಹಿತ ನೋಟಿಸ್ ಕೊಡಲಾಗಿದೆ. ಪ್ರಸ್ತುತ ಪರಿಷತ್ ಸದನ ಮುಗಿಯುವ ಒಳಗೆ ಮತ್ತೆ ಸಭೆ ಮಾಡಲಾಗುವುದು.

ಸಹಕಾರ ಇಲಾಖೆಗೆ ಕೆಲವು ಲಿಮಿಟ್ಸ್ ಇದೆ. ಇದು ಹೈಕೋರ್ಟ್ ಡೈರೆಕ್ಷನ್ ಮೇಲೆ, ರಿಸರ್ವ್ ಬ್ಯಾಂಕ್ ಡೈರೆಕ್ಷನ್ ಮೇಲೆ ತನಿಖೆ ನಡೆಯುತ್ತಿದೆ. 24 ಜನರಲ್ಲಿ 8 ಜನ ಅತಿಹೆಚ್ಚು ಲೋನ್ ತೆಗೆದುಕೊಂಡವರು. 8100 ಜನ ಡೆಪಾಸಿಟ್ ಇಟ್ಟುಕೊಂಡವರಿಗೆ ಮಾಹಿತಿ ಕೊಡುವ ಕೆಲಸ ಮಾಡ್ತಿದೇವೆ. ವಸೂಲಿ ಮಾಡಿದ್ದನ್ನು ಡೆಪಾಸಿಟ್ ಮಾಡಿದವರಿಗೆ ಕೊಡುವ ಕೆಲಸ ಮಾಡ್ತೇವೆ. ಸಾಲ ಕಟ್ಟಿದ ಮೇಲೆ ಡಾಕ್ಯುಮೆಂಟ್ ಕೊಡುವ ಆದೇಶ ಮಾಡಿದ್ದೇವೆ.

1,115 ಕೋಟಿ ಆಸ್ತಿಯನ್ನು ಫ್ರೀಝ್ ಮಾಡಲಾಗಿದೆ. ಸಹಕಾರ ಇಲಾಖೆಯಿಂದ ಯಾವುದೇ ಸಮಸ್ಯೆ ಇಲ್ಲ. ರಿಸರ್ವ್ ಬ್ಯಾಂಕ್ ಹೇಳಿದಂತೆ ಕೇಳುತ್ತಿದ್ದೇವೆ. ಬಾಂಬೆಯಿಂದ ಕೆಲವರು ಬ್ಯಾಂಕ್ ವಹಿಸಿಕೊಳ್ತೇವೆ ಎಂದು ಆಸಕ್ತಿ ವಹಿಸಿದ್ದಾರೆ. ಇದಕ್ಕೆ ರಿಸರ್ವ್ ಬ್ಯಾಂಕ್ ಅನುಮತಿ ಕೊಡಬೇಕು. ದೆಹಲಿ ರಿಸರ್ವ್ ಬ್ಯಾಂಕ್ ಜೊತೆಗೆ ಎಂಪಿ ತೇಜಸ್ವಿ ಸೂರ್ಯ ಕೋಆರ್ಡಿನೇಟ್ ಮಾಡ್ತಿದಾರೆ. ವಸಿಷ್ಠ ಸೌಹಾರ್ದ ಸಹಕಾರ ಬ್ಯಾಂಕ್ ಕಡೆಯಿಂದ 85 ಕೋಟಿ ಅವ್ಯವಹಾರ ಆಗಿದೆ. ಹೈಕೋರ್ಟ್ ಸ್ಟೇ ಈಗಷ್ಟೇ ವೆಕೇಟ್ ಆಗಿದೆ. ಆದರೆ ಸೌಹಾರ್ದಕ್ಕೆ ಸಹಕಾರ ಇಲಾಖೆಯ ಕಂಟ್ರೋಲ್ ಇಲ್ಲ ಎಂದು ಸಚಿವ ಸೋಮಶೇಖರ್ ತಿಳಿಸಿದರು.

350 ಕೋಟಿ ರೂ ಕಲೆಕ್ಷನ್ ಮಾಡಿದ್ದರು. 250 ಕೋಟಿ ರೂ ಸಾಲ ಕೊಟ್ಟಿದ್ದಾರೆ. 260 ಕೋಟಿ ಸುಸ್ತಿ ಅನ್ತಾರೆ. ಸರಿಯಾಗಿ ವಿಚಾರಣೆಯೇ ನಡೆಯುತ್ತಿಲ್ಲ. ಜನರ ಹಣವನ್ನು ಕಲೆಕ್ಟ್ ಮಾಡದ ಹಾಗೆ ಸರ್ಕಾರ ತಡೆಹಿಡಿಯಲಿ. ಲೈಸೆನ್ಸ್ ಕೊಡುವ ನೀವು ಕಂಟ್ರೋಲ್ ಕೂಡಾ ಮಾಡಬೇಕು. ಕೂಡಲೇ ಸಭೆ ಕರೆಯಿರಿ ಎಂದು ಯುಬಿ ವೆಂಕಟೇಶ್ ಸರ್ಕಾರವನ್ನು ಒತ್ತಾಯಿಸಿದರು.

Published On - 5:26 pm, Tue, 13 September 22