ರಾಜ್ಯಕ್ಕೆ ಮತ್ತೆ ವಕ್ಕರಿಸಿದ ಕೊರೊನಾ; ಪ್ರತಿ ದಿನ ನೂರಕ್ಕೂ ಹೆಚ್ಚು ಕೇಸ್ ಪತ್ತೆ, ವಾರಕ್ಕೆ ನಾಲ್ಕು ಸಾವು

|

Updated on: Mar 24, 2023 | 8:23 AM

ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 4 ಸಾವುಗಳು ಸಂಭವಿಸಿವೆ. ಸಾವಿನ ನಂತರ 3 ಪ್ರಕರಣಗಳಲ್ಲಿ ಕೊವಿಡ್ ಇದ್ದಿದ್ದು ಪತ್ತೆಯಾಗಿದೆ.

ರಾಜ್ಯಕ್ಕೆ ಮತ್ತೆ ವಕ್ಕರಿಸಿದ ಕೊರೊನಾ; ಪ್ರತಿ ದಿನ ನೂರಕ್ಕೂ ಹೆಚ್ಚು ಕೇಸ್ ಪತ್ತೆ, ವಾರಕ್ಕೆ ನಾಲ್ಕು ಸಾವು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ(Coronavirus) ಮತ್ತೆ ಸದ್ದು ಮಾಡುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದ್ದು ರಾಜ್ಯದಲ್ಲಿ ಪ್ರತಿ ನಿತ್ಯ ಕೊರೊನಾ ಕೇಸ್​ಗಳ ಸಂಖ್ಯೆ ನೂರು ದಾಟುತ್ತಿದೆ. ಕಳೆದ 10 ದಿನಗಳಿಂದ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ಮತ್ತೆ ರಾಜ್ಯಕ್ಕೆ ಕೊರೊನಾ ವಕ್ಕರಿಸುವ ಆತಂಕ ಉಂಟಾಗಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಇದೇ ವಿಚಾರವಾಗಿ ಎಲ್ಲಾ ಜಿಲ್ಲೆಗಳ ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಿ ಸೂಚನೆ ನೀಡಿದ್ದಾರೆ.

ಕಳೆದ ಬಾರಿ ಕೊವಿಡ್ ಏರಿಕೆಯಾದಾಗ BA2 ಕಾರಣವಾಗಿತ್ತು. ಇದರಿಂದ ಓಮಿಕ್ರಾನ್ ಪ್ರಕರಣಗಳಲ್ಲಿ ಏರಿಕೆಯಾಗಿತ್ತು. ಆದ್ರೆ ಈ ಬಾರಿ ಆತಂಕ ಸೃಷ್ಟಿ ಮಾಡ್ತಿರೋದು XBB.1.16 ತಳಿ. ಅತ್ಯಂತ ವೇಗವಾಗಿ ಕೊವಿಡ್ ಹರಡುತ್ತಿರೋದಕ್ಕೆ XBB.1.16 ಕಾರಣ. ಜಿನೋಮ್ ಸೀಕ್ವೆನ್ಸಿಂಗ್‌ ವೇಳೆ ಇದರಿಂದಲೇ ಹರಡುತ್ತಿರೋದು ಪತ್ತೆಯಾಗಿದೆ. ಅದೂ ಅಲ್ಲದೇ ವಾತಾವರಣ ಬದಲಾವಣೆಯಿಂದಲೂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬೇಸಿಗೆಯಲ್ಲಿ ಕೊವಿಡ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಚುನಾವಣೆ ಸಂದರ್ಭದಲ್ಲಿ ಜನರು ಸೇರ್ತಾರೆ, ರ್ಯಾಲಿಗಳು ನಡೆಯುತ್ತವೆ. ಬೇಸಿಗೆಯ ಜೊತೆ ಎಲ್ಲ ಕಾಂಬಿನೇಶನ್‌ಗಳೂ ಇರೋದ್ರಿಂದ ಜಾಗೃತಿವಹಿಸಿ. ಇಲ್ಲದಿದ್ರೆ ಮತ್ತೊಮ್ಮೆ ಕೊವಿಡ್‌ಗೆ ತುತ್ತಾಗಬೇಕಾಗುತ್ತೆ. ಮೊದಲಿದ್ದ ಕೊವಿಡ್‌ನಷ್ಟು ತೀವ್ರತೆ ಇಲ್ಲದಿದ್ರೂ ನಿರ್ಲಕ್ಷ ಬೇಡ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊರೊನಾಗೆ ವಾರಕ್ಕೆ 4 ಸಾವು

ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 4 ಸಾವುಗಳು ಸಂಭವಿಸಿವೆ. ಸಾವಿನ ನಂತರ 3 ಪ್ರಕರಣಗಳಲ್ಲಿ ಕೊವಿಡ್ ಇದ್ದಿದ್ದು ಪತ್ತೆಯಾಗಿದೆ. ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆ ಆರೋಗ್ಯ ಇಲಾಖೆ ಅಲರ್ಟ್ ಆಗುತ್ತಿದೆ. ಟೆಸ್ಟಿಂಗ್ ಪ್ರಮಾಣ ಹಾಗು ಜಿನೋಮ್ ಸೀಕ್ವೆನ್ಸಿಂಗ್‌ ಹೆಚ್ಚು ಮಾಡಲು ನಿರ್ಧರಿಸಲಾಗಿದೆ. ಹಾಗೂ ಕ್ಲಸ್ಟರ್ ಪ್ರಕರಣಗಳು ಕಂಡು ಬಂದ ಕಡೆ ಹೆಚ್ಚಿನ ನಿಗಾ ವಹಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ರಾಜ್ಯದಲ್ಲೀಗ 3.5-4 ಸಾವಿರ ಟೆಸ್ಟಿಂಗ್ ಮಾಡಲಾಗುತ್ತಿದೆ. ಮುಂದೆ 15ರಿಂದ 16 ಸಾವಿರ ಟೆಸ್ಟಿಂಗ್ ಮಾಡಲು ಗುರಿ ಇಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲೇ 6 ಸಾವಿರ ಟೆಸ್ಟಿಂಗ್ ಗುರಿ ಇದೆ.

ಇದನ್ನೂ ಓದಿ: India Covid Updates: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,300 ಹೊಸ ಕೊರೊನಾ ಪ್ರಕರಣಗಳು ಪತ್ತೆ, 3 ಸಾವು

ಬೆಂಗಳೂರು, ಶಿವಮೊಗ್ಗ, ಕಲಬುರ್ಗಿ ಹಾಗು ಮೈಸೂರಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಎಲ್ಲ ILI & SARI ಕೇಸ್‌ಗಳ ಕಡ್ಡಾಯವಾಗಿ ಕೋವಿಡ್ ಟೆಸ್ಟಿಂಗ್ ಮಾಡಿಸಬೇಕು. 50 ವಯೋಮಾನ ಮೀರಿದವರಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದೆ. ಹೀಗೆ ಕೊವಿಡ್ ಕೇಸ್ ಏರಿಕೆ ಹಿನ್ನೆಲೆ ಆರೋಗ್ಯ ‌ಇಲಾಖೆ ಟೆಸ್ಟಿಂಗ್ ಟಾರ್ಗೆಟ್ ಫಿಕ್ಸ್ ಮಾಡಿದೆ. 30 ಜಿಲ್ಲೆಗಳಿಗೂ ಟೆಸ್ಟಿಂಗ್ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ರೇಟ್ 3.26% ಗೆ ಏರಿಕೆ ಆಗಿದೆ.

ಯಾವ್ಯಾವ ಜಿಲ್ಲೆಗಳಿಗೆ ಎಷ್ಟೆಷ್ಟು ಟೆಸ್ಟಿಂಗ್ ಟಾರ್ಗೆಟ್?

ಬೆಂಗಳೂರು -6000 ಟಾರ್ಗೆಟ್, ಮೈಸೂರು -700, ಬಾಗಲಕೋಟೆ -200, ರಾಯಚೂರು -200, ತುಮಕೂರು ‌-450, ದಾವಣಗೆರೆ -200, ಬೀದರ್ -200, ಚಾಮರಾಜನಗರ -200, ರಾಮನಗರ -650, ಬೆಂಗಳೂರು ‌ಗ್ರಾಮಾಂತರ -450, ಚಿತ್ರದುರ್ಗ -200, ಉತ್ತರ ಕನ್ನಡ -450, ಉಡುಪಿ -450, ಬೆಳಗಾವಿ -600, ಕೋಲಾರ -350, ಚಿಕ್ಕಮಗಳೂರು -200, ಕಲಬುರಗಿ -400, ಮಂಡ್ಯ -350, ಬಳ್ಳಾರಿ -450, ಕೊಪ್ಪಳ -250, ಕೊಡಗು -550, ಶಿವರಾಮ -350, ದಕ್ಷಿಣ ‌ಕನ್ನಡ -650, ಗದಗ -200, ಹಾಸನ -200, ಚಿಕ್ಕಬಳ್ಳಾಪುರ -350, ಹಾವೇರಿ -200, ಧಾರವಾಡ -350, ವಿಜಯಪುರ ‌-200

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:23 am, Fri, 24 March 23