AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕಕ್ಕೆ ಕಾಲಿಟ್ಟ ಒಮಿಕ್ರಾನ್! ಭಾರತದಲ್ಲಿ ಇದೇ ಮೊದಲ ಬಾರಿಗೆ ಎರಡು ಕೇಸ್ ಪತ್ತೆ

ಭಾರತದಲ್ಲಿ ಮೊದಲ ಬಾರಿಗೆ ಒಮಿಕ್ರಾನ್​ ತಳಿಯ ಕೊರೊನಾ​​​ ಪತ್ತೆಯಾಗಿದ್ದು, ಅದು ಕರ್ನಾಟಕದಲ್ಲೇ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್​ ಸೋಂಕು ಇರುವುದು ದೃಢಪಟ್ಟಿದೆ.

ಕರ್ನಾಟಕಕ್ಕೆ ಕಾಲಿಟ್ಟ ಒಮಿಕ್ರಾನ್! ಭಾರತದಲ್ಲಿ ಇದೇ ಮೊದಲ ಬಾರಿಗೆ ಎರಡು ಕೇಸ್ ಪತ್ತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: sandhya thejappa

Updated on:Dec 02, 2021 | 5:11 PM

ಬೆಂಗಳೂರು: ಭಾರತದಲ್ಲಿ ಮೊದಲ ಬಾರಿಗೆ ಒಮಿಕ್ರಾನ್ (omicron )​ ತಳಿಯ ಕೊರೊನಾ​​​ ಪತ್ತೆಯಾಗಿದ್ದು, ಅದು ಕರ್ನಾಟಕದಲ್ಲೇ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್​ ಸೋಂಕು ಇರುವುದು ದೃಢಪಟ್ಟಿದೆ. 66 ವರ್ಷದ ವೃದ್ಧ, 46 ವರ್ಷದ ವ್ಯಕ್ತಿಗೆ ಒಮಿಕ್ರಾನ್​ ಸೋಂಕು ತಗುಲಿದೆ ಅಂತ  ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕರ್ನಾಟಕದ ಮೂಲಕವೇ ಭಾರತಕ್ಕೆ ಒಮಿಕ್ರಾನ್ ಎಂಟ್ರಿ ಕೊಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕದ ಇಬ್ಬರಿಗೆ ಒಮಿಕ್ರಾನ್ ವೈರಸ್ ದೃಢವಾಗಿದ್ದು, ಈ ಪೈಕಿ ಬೆಂಗಳೂರಿನ ಕೋಣನಕುಂಟೆ ನಿವಾಸಿ ಒಬ್ಬರಿಗೆ ​ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಓರ್ವ ಸೋಂಕಿತ ವಾಪಸ್ ವಿದೇಶಕ್ಕೆ ಹೋಗಿರುವ ಮಾಹಿತಿ ಇದೆ. ಕೇಸ್​ ಪತ್ತೆಯಾಗಿರುವ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ವಹಿಸಿ. ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಿಂದ ದೂರವಿರಿ ಅಂತ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಒಮಿಕ್ರಾನ್​ ವೈರಸ್​ನ ತೀವ್ರತೆ ಐದು ಪಟ್ಟು ಹೆಚ್ಚಾಗಿರಲಿದೆ. ಡೆಲ್ಟಾ ವೈರಸ್​ಗಿಂತ ಒಮಿಕ್ರಾನ್​ ತೀವ್ರತೆ 5 ಪಟ್ಟು ಹೆಚ್ಚಾಗಿರುತ್ತದೆ ಅಂತ ದೆಹಲಿಯಲ್ಲಿ ಕೇಂದ್ರದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್​​​ ಹೇಳಿಕೆ ನೀಡಿದ್ದಾರೆ.

ಟ್ರಾವೆಲ್ ಹಿಸ್ಟರಿ ಲಭ್ಯ ಒಮಿಕ್ರಾನ್ ದೃಢಪಟ್ಟ ವ್ಯಕ್ತಿಯೊಬ್ಬರ ಟ್ರಾವೆಲ್ ಹಿಸ್ಟರಿ ಟಿವಿ9ಗೆ ಲಭ್ಯವಾಗಿದೆ. ವ್ಯಕ್ತಿಯೊಬ್ಬರು ದಕ್ಷಿಣ ಆಫ್ರಿಕಾದಿಂದ ಬಂದಿದ್ದರು. 20ನೇ ತಾರೀಖಿನಂದು ಬೆಂಗಳೂರಿನ ಏರ್​ಪೋರ್ಟ್​ಗೆ ಬಂದಿದ್ದರು. 23ನೇ ತಾರೀಖಿನಂದು ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಏರ್​ಪೋರ್ಟ್​ನಲ್ಲಿ ಟೆಸ್ಟ್ ಮಾಡಿದಾಗ ಪಾಸಿಟಿವ್ ಕಂಡುಬಂದಿತ್ತು. ದಕ್ಷಿಣ ಆಫ್ರಿಕಾ ನಿವಾಸಿಯಾಗಿದ್ದ ಪ್ರಯಾಣಿಕನಿಗೆ ಕೊವಿಡ್ ಪಾಸಿಟಿವ್ ಆಗಿತ್ತು. ಪಾಸಿಟಿವ್ ಹಿನ್ನೆಲೆ ಹೋಟೆಲ್​ನಲ್ಲಿ ಕ್ವಾರೆಂಟೈನ್ ಒಳಗಾಗಿದ್ದರು. ಮೂರನೇ ದಿನದ ವರದಿ ನೆಗೆಟಿವ್ ಎಂದು ಬಂದಿತ್ತು. ನೆಗೆಟಿವ್ ಬಂದ ಕಾರಣ ಬಳಿಕ ನೇರವಾಗಿ ಬೊಮ್ಮಸಂದ್ರಕ್ಕೆ ಬಂದಿದ್ದಾರೆ. ಹೋಂ ಕ್ವಾರಂಟೈನ್ ಆಗದೇ ವ್ಯಕ್ತಿ ಸೀದಾ ಮೀಟಿಂಗ್ ಅಟೆಂಡ್ ಆಗಿದ್ದಾರೆ.

ಹೊಸಪೇಟೆಗೆ ಬಂದಿದ್ದ ಇಬ್ಬರ ವರದಿ ನೆಗೆಟಿವ್ ಆಫ್ರಿಕಾದಿಂದ ವಿಜಯನಗರ ಜಿಲ್ಲೆ ಹೊಸಪೇಟೆಗೆ ಬಂದಿದ್ದ ಇಬ್ಬರ ವರದಿ ನೆಗೆಟಿವ್ ಇದೆ. ಅವರಲ್ಲಿ ಒಮಿಕ್ರಾನ್ ಪತ್ತೆಯಾಗಿಲ್ಲ ಅಂತ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟಿವಿ9ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜನಾರ್ದನ್, ಹೊಸಪೇಟೆಗೆ ಬಂದಗರು ಒಬ್ಬರು 35 ವರ್ಷ. ಇನ್ನೊಬ್ಬರಿಗೆ 39 ವರ್ಷ. ಖುದ್ದಾಗಿ ಅವರನ್ನು ತಾಲೂಕ ಅಧಿಕಾರಿಗಳು ಭೇಟಿ ಮಾಡಿದ್ದಾರೆ. ನಿನ್ನೆ ಅವರ ಆರ್​ಟಿಪಿಸಿಆರ್​ ವರದಿ ನೆಗೆಟಿವ್ ಬಂದಿದೆ ಅಂತ ಹೇಳಿದ್ದಾರೆ. 

ಸುಧಾಕರ್ ಸುದ್ದಿಗೋಷ್ಠಿ ಕರ್ನಾಟಕದ ಇಬ್ಬರಿಗೆ ಒಮಿಕ್ರಾನ್​​ ದೃಢಪಟ್ಟ ಹಿನ್ನೆಲೆ ಕೆಲ ಹೊತ್ತಿನಲ್ಲೇ ಆರೋಗ್ಯ ಸಚಿವ ಸುಧಾಕರ್ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಟಫ್ ರೂಲ್ಸ್​ ಜಾರಿ ಸಾಧ್ಯತೆ ನಾಳೆಯೊಳಗೆ ರಾಜ್ಯದಲ್ಲಿ ಮತ್ತೆ ಟಫ್ ರೂಲ್ಸ್​ ಜಾರಿ ಸಾಧ್ಯತೆಯಿದೆ. ಒಮಿಕ್ರಾನ್​ ಕೇಸ್ ಪತ್ತೆ ಬೆನ್ನಲ್ಲೇ ಆರೋಗ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ. ತಜ್ಞರ ಸಲಹೆ ಪಡೆದು ಟಫ್ ರೂಲ್ಸ್​ ಜಾರಿಗೊಳಿಸುವ ಸಾಧ್ಯತೆಯಿದೆ. ಒಮಿಕ್ರಾನ್​ ಪತ್ತೆಯಾದರೆ ಮತ್ತೆ ಟಫ್​ ರೂಲ್ಸ್​ ಜಾರಿಗೆ  ಕಳೆದ ಸಭೆಯಲ್ಲಿ ತಜ್ಞರು ಸಲಹೆ ನೀಡಿದ್ದರು.

ಇದನ್ನೂ ಓದಿ

ಹಿರಿಯ ನಟ ಶಿವರಾಂ​ ಅವರಿಗೆ ಆಗಿದ್ದೇನು? ಇಂಚಿಂಚೂ ವಿವರ ನೀಡಿದ ವೈದ್ಯರು

ಯುಪಿಎ ಎಂಬುದು ಈಗ ಉಳಿದಿಲ್ಲ ಎಂದ ಮಮತಾ ಬ್ಯಾನರ್ಜಿ ಹೇಳಿಕೆಗೆ ಕಾಂಗ್ರೆಸ್ ನಾಯಕರ ಟೀಕಾ ಪ್ರಹಾರ

Published On - 4:33 pm, Thu, 2 December 21

ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು
ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ