ಕೊರೊನಾ ಸಂಬಂಧಿತ ಉಸಿರಾಟದ ಸಮಸ್ಯೆಯಿಂದ ಅಸುನೀಗಿದ ಬೆಂಗಳೂರಿನ ಕೊರೊನಾ ವಾರಿಯರ್
ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರೂ ಬಿಬಿಎಂಪಿಯಿಂದ ಸರಿಯಾದ ಗ್ಲೌಸ್,ಮಾಸ್ಕ್ ಕೊಡುತ್ತಿಲ್ಲ. ಮೃತ ಸೋಂಕಿತ ಮಹಿಳೆಗೆ 8 ವರ್ಷದ ಮಗು ಇದ್ದಾಳೆ. ಮಗಳಿಗೆ ಯಾರು ದಿಕ್ಕು ಎಂದು ಸಂಬಂಧಿಕರ ಕಣ್ಣೀರು ಹಾಕುತ್ತಿದ್ದಾರೆ.
ಬೆಂಗಳೂರು: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ನಿರತವಾಗಿದ್ದ ಮಹಿಳಾ ವಾರಿಯರ್ ಓರ್ವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ಪತ್ತೆಹಚ್ಚುವ ಪರೀಕ್ಷೆಯಲ್ಲಿ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸುತ್ತಿದ್ದ ಮಹಿಳಾ ಸಿಬ್ಬಂದಿ ನಿನ್ನೆ ಉಸಿರಾಟದ ತೊಂದರೆಯಿಂದ ಅಸುನೀಗಿದ್ದಾರೆ. ಕೊರೊನಾ ಪಾಸಿಟಿವ್ ಬಂದ ಕಾರಣ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಸಾವಿನಿಂದ ಸಂಬಂಧಿಕರು ಕಂಗಾಲಾಗಿದ್ದಾರೆ.
ಕೊರೊನಾ ಪಾಸಿಟಿವ್ ಬಂದ ನಂತರ ಐಸಿಯು ಬೆಡ್ ಸಹ ನೀಡಿರಲಿಲ್ಲ. ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರೂ ಬಿಬಿಎಂಪಿಯಿಂದ ಸರಿಯಾದ ಗ್ಲೌಸ್,ಮಾಸ್ಕ್ ಕೊಡುತ್ತಿಲ್ಲ. ಮೃತ ಸೋಂಕಿತ ಮಹಿಳೆಗೆ 8 ವರ್ಷದ ಮಗು ಇದ್ದಾಳೆ. ಮಗಳಿಗೆ ಯಾರು ದಿಕ್ಕು ಎಂದು ಸಂಬಂಧಿಕರ ಕಣ್ಣೀರು ಹಾಕುತ್ತಿದ್ದಾರೆ.
ಮೊದಲ ಅಲೆಯಲ್ಲಿ ಇಷ್ಟೊಂದು ತೀವ್ರತೆ ಇರಲಿಲ್ಲ; ಆರೋಗ್ಯ ಸಚಿವ ಡಾ.ಸುಧಾಕರ್ ಕೊರೊನಾ ಸೋಂಕು ನಮ್ಮ ಜೊತೆಯಲ್ಲಿ ಚೆಸ್ ರೀತಿಯಲ್ಲಿ ಆಡುತ್ತಿದೆ ಅಂತಾ ಏಮ್ಸ್ ನಿರ್ದೇಶಕರು ಹೇಳಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಮೊದಲ ಅಲೆಯಲ್ಲಿ ಇಷ್ಟೊಂದು ತೀವ್ರತೆ ಇರಲಿಲ್ಲ. ಈಗ ಇದ್ದಷ್ಟು ಆಕ್ಸಿಜನ್ ಬೇಡಿಕೆ ಆಗ ಇರಲಿಲ್ಲ. ಈಗಾಗಲೇ ನಾವು 500 ಟನ್ ಆಕ್ಸಿಜನ್ ಬಳಸಿದ್ದೇವೆ. ಮೇ ತಿಂಗಳಲ್ಲಿ 1,414 ಟನ್ ಆಕ್ಸಿಜನ್ ಬೇಕಾಗುತ್ತದೆ. 1,414 ಟನ್ ಆಕ್ಸಿಜನ್ ಪೂರೈಕೆಗೆ ಮನವಿ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ವೇಳೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ ಎಂದು ತಿಳಿಸಿದ ಸಚಿವ ಸುಧಾಕರ್ ಬೆಂಗಳೂರಿನಲ್ಲಿ ಎರಡು ಸಾವಿರ ಐಸಿಯು, ವೆಂಟಿಲೇಟರ್ ಬೇಕು. ಹೆಚ್ಚುವರಿಯಾಗಿ 2 ಸಾವಿರ ಐಸಿಯು, ವೆಂಟಿಲೇಟರ್ಗಳು ಬೇಕು ಎಂದಿದ್ದಾರೆ.
ನಂತರ ಮಾತನಾಡಿದ ಅವರು ರೂಪಾಂತರಿ ಕೊರೊನಾ ವೈರಸ್ ವೈದ್ಯಕೀಯ ವಿಭಾಗಕ್ಕೆ ದಾರಿ ತಪ್ಪಿಸುತ್ತಿದೆ. ಬೇರೆ ದೇಶದ ರೂಪಾಂತರಿ ವೈರಸ್ ಇಲ್ಲಿ ಪತ್ತೆಯಾಗಿಲ್ಲ. ಇದರ ಗುಣಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಎರಡನೇ ಅಲೆ ಸೋಂಕಿತರ ಪ್ರಮಾಣ ಹೆಚ್ಚಿದ್ದರೂ, ಸಾವಿನ ಪ್ರಮಾಣ ಕಡಿಮೆ ಇದೆ. ಸರ್ಕಾರ ಬಿಗಿಯಾದ ಮಾರ್ಗಸೂಚಿ ಮಾಡಿದೆ. ಅನಗತ್ಯ ಮನೆಯಿಂದ ಹೊರಗಡೆ ಬರುವುದು, ಗುಂಪು ಸೇರುವುದನ್ನು ತಪ್ಪಿಸಬೇಕು. ಲಸಿಕೆಗಳನ್ನು ಮೊದಲು ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ
(Corona warrior dead due to corona virus lack of ICU and bed)