ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ 60ರಿಂದ 80 ಪ್ರಕರಣಗಳು ವರದಿಯಾಗುತ್ತಿವೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದರು. ಪ್ರಕರಣಗಳು ಪತ್ತೆಯಾಗುತ್ತಿರುವ ಪ್ರದೇಶಗಳನ್ನು ಗುರುತಿಸಿ, ಆಸ್ಪತ್ರೆಗೆ ದಾಖಲಾಗುವವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರಸ್ತುತ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಬಹಳ ಕಡಿಮೆಯಿದೆ. ಮುಂದಿನ ದಿನಗಳಲ್ಲಿ ದಾಖಲಾತಿ ಪ್ರಮಾಣ ಗಮನಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಮಾಸ್ಕ್ ಧರಿಸದವರಿಗೆ ದಂಡ ಹಾಕುವ ಬಗ್ಗೆ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳುತ್ತದೆ. ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಯಲ್ಲಿಯೇ ಇದೆ ಎಂದು ವಿವರಿಸಿದರು.
ವಿದೇಶಗಳಿಂದ ಗಳೂರಿಗೆ ಬರುವವರು ಟೆಸ್ಟ್ ಮಾಡಿಸಿಕೊಳ್ಳಲೇಬೇಕು. ನಗರದ ಬಹುತೇಕರು ಈಗಾಗಲೇ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಆಸ್ಪತ್ರೆಗೆ ದಾಖಲುವವರ ಸಂಖ್ಯೆ ಕಡಿಮೆಯಿದೆ. ಸ್ವಯಂಪ್ರೇರಣೆಯಿಂದ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು. ಹಲವಾರು ಜನರು ಬೂಸ್ಟರ್ಡೋಸ್ ಅಗತ್ಯವಿಲ್ಲ ಎಂದುಕೊಂಡಿದ್ದಾರೆ. ಇದು ತಪ್ಪು. ಈಗಲೂ ಬೂಸ್ಟರ್ ಡೋಸ್ ಅಗತ್ಯವಾಗಿ ಪಡೆಯಬೇಕು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏ 27) ಕೊರೊನಾ ನಿರ್ವಹಣೆ ಕುರಿತು ಮಹತ್ವದ ಸಭೆ ಕರೆದಿದ್ದಾರೆ. ಸಭೆಯ ನಂತರ ಕಾರ್ಯಯೋಜನೆ ರೂಪಿಸುವ ಸಾಧ್ಯತೆಯಿದೆ. ಬಿಬಿಎಂಪಿ ಈಗಾಗಲೇ 2 ಸಾವಿರ ಬೆಡ್ಗಳ ವ್ಯವಸ್ಥೆ ಮಾಡಿಕೊಂಡಿದೆ. ನಾಲ್ಕು ಸರ್ಕಾರಿ ಆಸ್ಪತ್ರೆ, ಒಂದು ಕೋವಿಡ್ ಕೇರ್ ಸೆಂಟರ್ ಸಜ್ಜುಗೊಂಡಿದೆ. ಐಸಿಯು ಬೆಡ್ಗಳನ್ನೂ ಸಜ್ಜುಗೊಳಿಸಲಾಗಿದೆ. ಪ್ರಸ್ತುತ ಪ್ರತಿದಿನ ಮೂರರಿಂದ ನಾಲ್ಕು ಸಾವಿರ ಮಂದಿಯ ಕೊವಿಡ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಹೇಳಿದರು.
4ನೇ ಅಲೆಯ ಭೀತಿ
ಕರ್ನಾಟಕದಲ್ಲೂ ಕೊರೊನಾ ಸೋಂಕಿನ 4ನೇ ಅಲೆಯ ಭೀತಿ ಕಾಣಿಸಿಕೊಂಡಿದೆ. ಲಸಿಕೆ ಪಡೆಯದವರು, ಸೋಂಕು ಬಾರದವರೇ 4ನೇ ಅಲೆಯಲ್ಲಿ ಮೊದಲ ಟಾರ್ಗೆಟ್ ಆಗುವ ಸಾಧ್ಯತೆಯಿದೆ. 3ನೇ ಅಲೆಯಂತೆ ಈ ಬಾರಿ ದಿನಕ್ಕೆ 20 ಸಾವಿರ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಕಡಿಮೆ. ಆದರೆ ಸುಮಾರು 5,000 ಸೋಂಕಿತರು ಪತ್ತೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ರಾಜ್ಯದಲ್ಲಿ ಜುಲೈ ತಿಂಗಳ ಮಧ್ಯದವರೆಗೆ 4ನೇ ಅಲೆ ಇರುವ ಸಾಧ್ಯತೆಯಿದೆ. ಈವರೆಗೆ ಲಸಿಕೆ ಪಡೆಯದವರಿಗೆ ಲಸಿಕೆ ನೀಡುವ ಕಾರ್ಯ ಚುರುಕುಗೊಳಿಸಲಾಗಿದೆ.
ಇದನ್ನೂ ಓದಿ: Health Tips: ಕೊರೊನಾ ವೈರಸ್ Vs ಅಲರ್ಜಿ; ಎರಡನ್ನೂ ಗುರುತಿಸುವುದು ಹೇಗೆ? ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?
ಇದನ್ನೂ ಓದಿ: Coronavirus 4th wave: ಹೆಚ್ಚಳವಾಯ್ತು ಕೊರೊನಾ ಆತಂಕ, ಪ್ರಕಟವಾಯ್ತು ರಾಜ್ಯ ಸರ್ಕಾರದಿಂದ ಹೊಸ ಕೊವಿಡ್ ಗೈಡ್‌ಲೈನ್ಸ್
Published On - 12:37 pm, Tue, 26 April 22