Coronavirus 4th wave: ಹೆಚ್ಚಳವಾಯ್ತು ಕೊರೊನಾ ಆತಂಕ, ಪ್ರಕಟವಾಯ್ತು ರಾಜ್ಯ ಸರ್ಕಾರದಿಂದ ಹೊಸ ಕೊವಿಡ್‌ ಗೈಡ್‌ಲೈನ್ಸ್‌

Coronavirus 4th wave: ಹೆಚ್ಚಳವಾಯ್ತು ಕೊರೊನಾ ಆತಂಕ, ಪ್ರಕಟವಾಯ್ತು ರಾಜ್ಯ ಸರ್ಕಾರದಿಂದ ಹೊಸ ಕೊವಿಡ್‌ ಗೈಡ್‌ಲೈನ್ಸ್‌
ಕೊರೊನಾ ಹೆಚ್ಚಳ ಆತಂಕ, ರಾಜ್ಯ ಸರ್ಕಾರದಿಂದ ಹೊಸ ಕೊವಿಡ್‌ ಗೈಡ್‌ಲೈನ್ಸ್‌ ಪ್ರಕಟವಾಯ್ತು

Coronavirus guidelines: ದೇಶದಲ್ಲಿ ಕೊರೊನಾ ಸೋಂಕು​ ಹೆಚ್ಚಳವಾಗುತ್ತರುವುದರಿಂದ ಏಪ್ರಿಲ್ 27ರಂದು ಬುಧವಾರ ಪ್ರಧಾನಿ ನರೇದ್ರ ಮೋದಿ ಅವರು ಎಲ್ಲಾ ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್ಸ್​ ನಡೆಸುವ ಹಿನ್ನೆಲೆಯಲ್ಲಿ ಪ್ರಧಾನಿ ಸಭೆಗೂ ಮುನ್ನ ಸಿಎಂ ಬೊಮ್ಮಾಯಿ ಇಂದು ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ಕೊವಿಡ್​ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಸಿಎಂ ಬೊಮ್ಮಾಯಿ ಸದ್ಯಕ್ಕೆ ಈ ಕೆಳಗಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.

TV9kannada Web Team

| Edited By: sadhu srinath

Apr 25, 2022 | 8:43 PM


ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ 4ನೇ ಅಲೆ ಭೀತಿ ಹಿನ್ನೆಲೆ (Coronavirus 4th wave) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ (Basavaraj Bommai) ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಧ್ಯಾಹ್ನ ಉನ್ನತಮಟ್ಟದ ಸಭೆ ನಡೆಯಿತು. ಕರ್ನಾಟಕ ಸೇರಿದಂತೆ ದೇಶದಲ್ಲಿ ಕೊರೊನಾ ಸೋಂಕು​ ಹೆಚ್ಚಳವಾಗುತ್ತಿರುವುದರಿಂದ ಏಪ್ರಿಲ್ 27ರಂದು (ಬುಧವಾರ) ಪ್ರಧಾನಿ ನರೇದ್ರ ಮೋದಿ ಅವರು ಎಲ್ಲಾ ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್ಸ್​ ನಡೆಸುವ ಹಿನ್ನೆಲೆಯಲ್ಲಿ ಪ್ರಧಾನಿ ಸಭೆಗೂ ಮುನ್ನ ಸಿಎಂ ಬೊಮ್ಮಾಯಿ ಇಂದು ಸಭೆ ನಡೆಸಿದರು. ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರು  ಮಾರ್ಗಸೂಚಿ ಪ್ರಕಟಿಸಿದ್ದಾರೆ (Coronavirus guidelines).

ಮಾಸ್ಕ್​ ಕಡ್ಡಾಯಗೊಳಿಸಿ ಆದೇಶ, ಮಾಸ್ಕ್​ ಧರಿಸದೇ ಹೊರ ಬಂದ್ರೆ ಬೀಳುತ್ತೇ ಫೈನ್:
1. ಸಾರ್ವಜನಿಕ ಸ್ಥಳಗಳಲ್ಲಿ, ಕರ್ತವ್ಯದ ಸ್ಥಳಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಿ ಆದೇಶ, ಮಾಸ್ಕ್​ ಧರಿಸದೇ ಹೊರ ಬಂದ್ರೆ ಬೀಳುತ್ತೇ ಫೈನ್​​.
2. ಪ್ರಯಾಣದ ವೇಳೆಯೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
3. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೂ ದಂಡ ವಿಧಿಸಲಾಗುತ್ತೆ
4. ಸಾರ್ವಜನಿಕ ಸ್ಥಳಗಳಲ್ಲಿ ದೈಹಿಕ ಅಂತರ ಪಾಲನೆ ಕಡ್ಡಾಯ
5. ಸಾರ್ವಜನಿಕ ಸ್ಥಳಗಳಲ್ಲಿ 2 ಅಡಿ ಸಾಮಾಜಿಕ ಅಂತರ ಕಡ್ಡಾಯ

ಕೋವಿಡ್ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಡಾ. ಎಂ.ಕೆ. ಸುದರ್ಶನ್, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್, ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಆರೋಗ್ಯ ಇಲಾಖೆ ವಿಶೇಷ ಆಯುಕ್ತ ತ್ರಿಲೋಕಚಂದ್ರ ಮೊದಲಾದವರು ಉಪಸ್ಥಿತರಿದ್ದರು.

ಸೋಂಕಿತರಿಗೆ ಯಾವ ತಳಿ ಅಟ್ಯಾಕ್ ಆಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ:
ಇದಕ್ಕೂ ಮುನ್ನ, ಸಿಎಂ ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ಇನ್ಮುಂದೆ ರಾಜ್ಯದಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಈ ಬಗ್ಗೆ ಕೆಲ ಹೊತ್ತಿನಲ್ಲೇ ಮಾರ್ಗಸೂಚಿ ಹೊರಡಿಸುತ್ತೇವೆ. ಮಾಸ್ಕ್‌ ಧರಿಸದಿದ್ದರೆ ಸದ್ಯಕ್ಕೆ ದಂಡ ಹಾಕುವುದಿಲ್ಲ. ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಬಗ್ಗೆ ನಿಗಾ ವಹಿಸಲು ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಲಸಿಕೆ ತೆಗೆದುಕೊಳ್ಳದವರಿಗೆ ಹೆಚ್ಚಿನ ಸಮಸ್ಯೆ ಆಗುತ್ತಿದೆ, ಜಾಗ್ರತೆ ವಹಿಸಿ ಎಂದು ಎಚ್ಚರಿಸಿದ್ದಾರೆ.

ಸೋಂಕಿತರಿಗೆ ಯಾವ ತಳಿ ಅಟ್ಯಾಕ್ ಆಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಜೀನೋಮಿಕ್ ಸ್ವೀಕ್ವೆನ್ಸ್ ಗೆ ಲ್ಯಾಬ್ ಗೆ ಕಳುಹಿಸಲಾಗಿದೆ. ರಿಪೋರ್ಟ್ ಬಂದ ಕೂಡಲೇ ರೂಪಾಂತರಿಯೇ ಅಥವಾ ಹಳೆಯ ಪ್ರಬೇಧವಾ ಅನ್ನೋದು ಗೊತ್ತಾಗಲಿದೆ. ಪ್ರತಿನಿತ್ಯ 10 ಸಾವಿರ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತದೆ. ನಮ್ಮ ಆರೋಗ್ಯ ಇಲಾಖೆ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಇದೇ 27 ರಂದು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಅವರು ಏನು ತೀರ್ಮಾನ ಕೊಡ್ತಾರೆ ಅನ್ನೋದನ್ನ ಎದುರು ನೋಡುತ್ತಿದ್ದೇವೆ. ತಕ್ಷಣಕ್ಕೆ ಯಾವುದೆ ನಿರ್ಬಂಧಗಳನ್ನ ಮಾಡಲ್ ಆಗಿ ಜಾರಿ ಮಾಡುವುದಿಲ್ಲ. ಕೊರೊನಾದ ನಾಲ್ಕನೆಯ ಅಲೆ ಸಿವಿಯಾರಿಟಿ ಕಡಿಮೆ ಅಂತಾ ಹೇಳಲಾಗ್ತಿದೆ ಎಂದು ಸಚಿವ ಸುಧಾಕರ್ ಹೇಳಿದರು.

ಯಾರು ಲಸಿಕೆಯನ್ನ ತೆಗೆದುಕೊಂಡಿಲ್ಲ ಅವರಿಗೆ ಹೆಚ್ಚು ತೊಂದರೆಯಾಗ್ತಿದೆ. ಇಡೀ ವಿಶ್ವದಲ್ಲಿ ಇದು ಸಾಬೀತಾಗಿದೆ. ಮೂರನೆ ಡೋಸ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರು ಈ ಡೋಸ್ ತೆಗೆದುಕೊಳ್ಳಬೇಕು. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣ ಬಳಸಿಕೊಂಡು ಹೆಚ್ಚು ಅರಿವು ಮೂಡಿಸಲಾಗುವುದು. ದಕ್ಷಿಣ ಕೋರಿಯಾ, ಥೈಲ್ಯಾಂಡ್, ಜಪಾನ್ ನಲ್ಲಿ ಕೊರೊನಾ 4ನೆಯ ಅಲೆ ಜಾಸ್ತಿಯಾಗ್ತಿದೆ. ಇಂಥಹ ದೇಶಗಳಿಂದ ಬರುವವರ ಮೇಲೆ ಏರ್ ಪೋರ್ಟ್ ನಲ್ಲಿ ನಾವೂ ತೀವ್ರ ನಿಗಾಯಿಡುತ್ತೇವೆ. ಅವರು ಮನೆಗೆ ಹೋದ ಮೇಲೆ ಟೆಲಿಮಾನಿಟಿರಿಂಗ್ ಮಾಡಲಾಗುತ್ತೆ ಎಂದು ಸಚಿವ ಸುಧಾಕರ್ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ಮಾಹಿತಿ ನೀಡಿದರು.

ಕೊರೊನಾ ನಾಲ್ಕನೇ ಅಲೆ ಭೀತಿ ಹಿನ್ನೆಲೆ ನ್ಯೂ ಗೈಡ್​ಲೈನ್ಸ್

Follow us on

Related Stories

Most Read Stories

Click on your DTH Provider to Add TV9 Kannada