ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಪ್ರಕರಣ ದಿಢೀರ್ ಹೆಚ್ಚಳ; ನಿನ್ನೆ ಒಂದೇ ದಿನ 132 ಜನರಿಗೆ ಸೋಂಕು

| Updated By: ಆಯೇಷಾ ಬಾನು

Updated on: Apr 24, 2022 | 9:16 AM

ನಗರದಲ್ಲಿ ಕೊರೊನಾ ಪ್ರಕರಣ ದಿಢೀರ್ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 132 ಜನರಲ್ಲಿ ಸೋಂಕು ಪತ್ತೆಯಾಗಿದೆ. ಪ್ರತಿ ದಿನ 30ರ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ ಏಕಾಏಕಿ ಏರಿಕೆ ಕಾಣುತ್ತಿದೆ.

ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಪ್ರಕರಣ ದಿಢೀರ್ ಹೆಚ್ಚಳ; ನಿನ್ನೆ ಒಂದೇ ದಿನ 132 ಜನರಿಗೆ ಸೋಂಕು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಕೊರೊನಾ(Coronavirus) ಈಗ ಮತ್ತೆ ತನ್ನ ರೂಪ ಬದಲಿಸಿ ಪ್ರತಾಪ ದರ್ಶನಕ್ಕೆ ಮುಂದಾಗಿದೆ. ನಗರದಲ್ಲಿ ಕೊರೊನಾ ಪ್ರಕರಣ ದಿಢೀರ್ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 132 ಜನರಲ್ಲಿ ಸೋಂಕು ಪತ್ತೆಯಾಗಿದೆ. ಪ್ರತಿ ದಿನ 30ರ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ ಏಕಾಏಕಿ ಏರಿಕೆ ಕಾಣುತ್ತಿದೆ.

ಬೆಂಗಳೂರಿನಲ್ಲಿ ಬಿಎ.2ಗೆ ಸಂಬಂಧಿಸಿದ ಎರಡು ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. BA.2.10 ಹಾಗೂ BA.2. 12 ಗಳು ಕಾಣಿಸಿಕೊಂಡಿದ್ದಾಗಿ ಜಯದೇವ ಆಸ್ಪತ್ರೆ ನಿರ್ದೇಶಕ ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ. ಬಿಎ.2 ರೂಪಾಂತರಗಳು ದೆಹಲಿ ಮತ್ತು ಮುಂಬೈನಲ್ಲಿ ಕಾಣಿಸಿಕೊಂಡಿದ್ದವು. ಅದೀಗ ಬೆಂಗಳೂರಲ್ಲಿ ಪತ್ತೆಯಾಗಿದೆ. ದೇಶದಲ್ಲಿ ಕೊರೊನಾದ ನಾಲ್ಕನೇ ಅಲೆ ಈಗಾಗಲೇ ಶುರುವಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮಂಜುನಾಥ್ ಹೇಳಿದ್ದಾರೆ.

ರಾಜ್ಯದಲ್ಲಿ ಇನ್ನು 3-4ವಾರದಲ್ಲಿ ಕೊರೊನಾ 4ನೇ ಅಲೆ ಶುರುವಾಗುವ ಸಾಧ್ಯತೆ ಇದೆ. ಈ ಬಾರಿಯ ಅಲೆಗೆ ಬಿಎ 2 ರೂಪಾಂತರಿ ವೈರಸ್ ಕಾರಣವಾಗಬಹುದು. ಕೊರೊನಾ 3ನೇ ಅಲೆಯಲ್ಲಿ ಸೋಂಕಿತರು ಯಾವೆಲ್ಲ ಲಕ್ಷಣ ಹೊಂದುತ್ತಿದ್ದರೂ, ಅದೇ ಲಕ್ಷಣಗಳು ನಾಲ್ಕನೇ ಅಲೆಯಲ್ಲಿಯೂ ಗೋಚರಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿಯೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿರುತ್ತದೆ. ಆದರೆ ಸೋಂಕು ವ್ಯಾಪಕವಾಗಿರುತ್ತದೆ ಎಂದೂ ಡಾ. ಮಂಜುನಾಥ್ ಹೇಳಿದ್ದಾರೆ.

ಈಗಾಗಲೇ ಎಲ್ಲ ನಿರ್ಬಂಧಗಳನ್ನೂ ತೆಗೆದು, ಚಟುವಟಿಕೆಗಳು ಎಂದಿನಂತೆ ಪ್ರಾರಂಭವಾಗಿವೆ. ಹೀಗಾಗಿ ಇನ್ನೆರಡು ವಾರಗಳಲ್ಲಿ ದೈನಂದಿನ ಕೊರೊನಾ ಕೇಸ್ಗಳಲ್ಲಿ ಏರಿಕೆ ಕಂಡುಬರಲಿದೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಶ್ವಾಸಕೋಶ, ಹೃದಯ ಸಮಸ್ಯೆ, ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ಅತ್ಯಂತ ಜಾಗರೂಕರಾಗಿ ಇರಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಹೇಳಿದ್ದಾರೆ. ಜ್ವರ, ಕೆಮ್ಮು-ಶೀತವನ್ನು ನಿರ್ಲಕ್ಷಿಸಬೇಡಿ. ಕೂಡಲೇ ಕೊವಿಡ್ 19 ಟೆಸ್ಟ್ಗೆ ಒಳಗಾಗಿ. ಲಸಿಕೆ ತೆಗೆದುಕೊಂಡಿದ್ದೇವೆ. ಏನಾಗುವುದಿಲ್ಲ ಎಂಬ ನಿರ್ಲಕ್ಷವಂತೂ ಬೇಡವೇ ಬೇಡ ಎಂದಿದ್ದಾರೆ.

ಇದನ್ನೂ ಓದಿ: ಗದಗ ಲ್ಯಾಂಡ್ ಆರ್ಮಿ ವಿರುದ್ಧ ಮತ್ತೊಂದು ಭ್ರಷ್ಟಾಚಾರ ಆರೋಪ! ಹಣ ಕೊಡದಿದ್ದರೆ ಆತ್ಮಹತ್ಯೆ ಎಚ್ಚರಿಕೆ ನೀಡಿದ ಕಾರ್ಮಿಕರು

Gulkand Milk benefits: ಹಾಲಿನಲ್ಲಿ ಗುಲ್ಕಂದ್ ಬೆರೆಸಿ ಕುಡಿಯುವುದರಿಂದಾಗುವ ಆರೋಗ್ಯ ಪ್ರಯೋಗಳೇನು ಗೊತ್ತಾ..! ಇಲ್ಲಿದೆ ಮಾಹಿತಿ