ಗದಗ ಲ್ಯಾಂಡ್ ಆರ್ಮಿ ವಿರುದ್ಧ ಮತ್ತೊಂದು ಭ್ರಷ್ಟಾಚಾರ ಆರೋಪ! ಹಣ ಕೊಡದಿದ್ದರೆ ಆತ್ಮಹತ್ಯೆ ಎಚ್ಚರಿಕೆ ನೀಡಿದ ಕಾರ್ಮಿಕರು
ಕಾರ್ಮಿಕರ ಹಣ ಗುಳುಂ ಆದರೂ ಎಕ್ಸಿಕ್ಯುಟಿವ್ ಇಂಜಿನಿಯರ್ ಪಿ ಕೆ ಮಲ್ಲಿಕಾರ್ಜುನಸ್ವಾಮಿ ಗಪ್ ಚುಪ್ ಆಗಿದ್ದಾರಂತೆ. ಲ್ಯಾಂಡ್ ಆರ್ಮಿ ಎಲ್ಲ ಇಂಜಿನಿಯರಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗದಗ: 30 ಪರ್ಸೆಂಟ್ ಕಮಿಷನ್ ಆರೋಪದ ಬಳಿಕ ಗದಗ ಲ್ಯಾಂಡ್ ಆರ್ಮಿ ಕಚೇರಿ ವಿರುದ್ಧ ಮತ್ತೊಂದು ಭ್ರಷ್ಟಾಚಾರದ (Corruption) ಆರೋಪ ಕೇಳಿಬಂದಿದೆ. ಕೆಆರ್ಐಡಿಎಲ್ (KRIDL) ಅಧಿಕಾರಿಗಳು ಕಾರ್ಮಿಕರ 45 ಲಕ್ಷ ರೂಪಾಯಿ ಹಣವನ್ನು ಗುಳುಂ ಮಾಡಿದ್ದಾರೆ ಎಂಬ ಆರೋಪ ಇದೆ. ನಿವೃತ್ತ ಸಹಾಯಕ ಇಂಜಿನಿಯರ್ ಆರ್ ಎಸ್ ಮಾಳದಕರ್ ಎಂಬುವವರು ಗೌಂಡಿ, ಬಾರ್ ಬೈಂಡಿಂಗ್, ಪೇಂಟಿಂಗ್ ಕಾರ್ಮಿಕರ ಹಣವನ್ನು ನುಂಗಿದ್ದಾರಂತೆ. 45 ಲಕ್ಷ ಹಣಕ್ಕಾಗಿ ಕಾರ್ಮಿಕರು ಕೆಆರ್ಐಡಿಎಲ್ ಕಚೇರಿಗೆ ಅಲೆದಾಡಿದರು ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.
ಕಾರ್ಮಿಕರ ಹಣ ಗುಳುಂ ಆದರೂ ಎಕ್ಸಿಕ್ಯುಟಿವ್ ಇಂಜಿನಿಯರ್ ಪಿ ಕೆ ಮಲ್ಲಿಕಾರ್ಜುನಸ್ವಾಮಿ ಗಪ್ ಚುಪ್ ಆಗಿದ್ದಾರಂತೆ. ಲ್ಯಾಂಡ್ ಆರ್ಮಿ ಎಲ್ಲ ಇಂಜಿನಿಯರಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಣ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾರ್ಮಿಕರು ಎಚ್ಚರಿಕೆ ನೀಡಿದ್ದು, ಮುಂದಿನ ಅನಾಹುತಕ್ಕೆ ಅಧಿಕಾರಿಗಳೇ ಹೊಣೆ ಎಂದಿದ್ದಾರೆ. ಸಾಲ ಮಾಡಿ ಉಳಿದ ಕಾರ್ಮಿಕರಿಗೆ ವೇತನ ನೀಡಿದ್ದೇವೆ. ಸಾಲ ಕೊಟ್ಟವರು ನಿತ್ಯವೂ ದುಂಬಾಲು ಬಿದ್ದಿದ್ದಾರೆ. ಲಕ್ಷಾಂತರ ಹಣ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ ಅಂತ ಕಾರ್ಮಿಕರು ಗೋಳಾಡುತ್ತಿದ್ದಾರೆ.
ದೊಡ್ಡ ಮೊತ್ತ ಗೋಲ್ಮಾಲ್ ಆದರೂ ಲ್ಯಾಂಡ್ ಆರ್ಮಿ ಕಚೇರಿ ಯಾವೊಬ್ಬ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಎಕ್ಸಿಕ್ಯೂಟಿ ಇಂಜಿನಿಯರ್ ಸೇರಿ ಎಲ್ಲರೂ ಕಚೇರಿಯಿಂದ ನಾಪತ್ತೆಯಾಗಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ಆರೋಪವೇನು?: ಬಾಲೆಹೊಸೂರು ಮಠದ ಯಾತ್ರಿ ನಿವಾಸಕ್ಕೆ ರಾಜ್ಯ ಸರ್ಕಾರ 75 ಲಕ್ಷ ರೂ. ಮಂಜೂರು ಮಾಡಿತ್ತು. ಅನುದಾನ ಬಿಡುಗಡೆಗೆ 25 ಲಕ್ಷ ಕಮಿಷನ್ ಕೇಳುತ್ತಾರೆ. ರಾಜ್ಯ ಸರ್ಕಾರದ ವ್ಯವಸ್ಥೆ 30 ಪರ್ಸೆಂಟೇಜ್ಗೆ ಬಂದು ನಿಂತಿದೆ. ಇದು ಕೇವಲ ನಮ್ಮ ಮಠದ ವಿಚಾರ ಮಾತ್ರವಲ್ಲ. ಇಡೀ ರಾಜ್ಯದ ಸ್ಥಿತಿ ಹೀಗೆಯೇ ಇದೆ. ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ರಾಜ್ಯ ಉದ್ಧಾರವಾಗಲ್ಲ ಅಂತ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದರು.
ಅಧಿಕಾರ ಇಲ್ಲದಿದ್ದಾಗ ಭ್ರಷ್ಟಾಚಾರದ ವಿರುದ್ಧ ಮಾತಾಡ್ತಾರೆ. ಆದರೆ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದಲ್ಲಿ ತೊಗುತ್ತಾರೆ. ನಮ್ಮ ಮಠದ ಕಾಮಗಾರಿಯನ್ನು ಲ್ಯಾಂಡ್ ಆರ್ಮಿಗೆ ನೀಡಿತ್ತು. ಕಾಮಗಾರಿ ಆರಂಭಿಸಲು 25 ಲಕ್ಷ ಕಮಿಷನ್ ಕೇಳಿದ್ದಾರೆ. ಕಮಿಷನ್ ನೀಡದಿದ್ದರೆ ಕೆಲಸ ಆರಂಭಿಸಲ್ಲ ಎಂದಿದ್ದರು. ನಾನು 100 ಬಾರಿ ಭೇಟಿಯಾದರೂ ಅನುದಾನ ರಿಲೀಸ್ ಆಗಿಲ್ಲ. ನಮ್ಮನ್ನು ಸಾಲಗಾರರ ರೀತಿಯಲ್ಲಿ ಸುತ್ತಾಡಿಸುತ್ತಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಆದರ್ಶ ವ್ಯಕ್ತಿ ಅಂತಾರೆ. ಆದರೆ ಅವರು ಏಕೆ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತಿಲ್ಲ ಅಂತ ಟಿವಿ9ಗೆ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದರು.
ವರದಿ: ಸಂಜೀವ ಪಾಂಡ್ರೆ
ಇದನ್ನೂ ಓದಿ
Dr Rajkumar Birth Anniversary: ಡಾ.ರಾಜ್ ಸಂಭಾವನೆ 5 ರಿಂದ 10 ಸಾವಿರಕ್ಕೇರಲು ಎಷ್ಟು ಸಿನಿಮಾ ಮಾಡಬೇಕಾಯಿತು?
ಮರಿಯುಪೋಲ್ ಉಕ್ಕಿನ ಸ್ಥಾವರದಲ್ಲಿ ಆಶ್ರಯ ಪಡೆದಿರುವ ನೂರಾರು ಜನರಿಂದ ಹೊರಬರಲು ಹತಾಶ ಪ್ರಯತ್ನ
Published On - 9:02 am, Sun, 24 April 22