Dr Rajkumar Birth Anniversary: ಡಾ.ರಾಜ್ ಸಂಭಾವನೆ 5 ರಿಂದ 10 ಸಾವಿರಕ್ಕೇರಲು ಎಷ್ಟು ಸಿನಿಮಾ ಮಾಡಬೇಕಾಯಿತು?

Dr Rajkumar Remuneration: ಆಗಿನ ಕಾಲದಲ್ಲಿ ಡಾ.ರಾಜ್ ತಮ್ಮ ಸಂಬಳ ಹೆಚ್ಚಾಗಲು ಎಷ್ಟು ದೀರ್ಘ ಕಾಲ ಕಾಯುತ್ತಿದ್ದರು ಎನ್ನುವುದು ಎಲ್ಲರಿಗೂ ಅಚ್ಚರಿ ತರುವಂಥದ್ದು. ಈ ಬಗ್ಗೆ ಟಿವಿ9 ಜತೆ ಮಾತನಾಡುತ್ತಾ, ಹಿರಿಯ ನಟ ಬೆಂಗಳೂರು ನಾಗೇಶ್ ಮಾಹಿತಿ ಹಂಚಿಕೊಂಡಿದ್ದರು.

Dr Rajkumar Birth Anniversary: ಡಾ.ರಾಜ್ ಸಂಭಾವನೆ 5 ರಿಂದ 10 ಸಾವಿರಕ್ಕೇರಲು ಎಷ್ಟು ಸಿನಿಮಾ ಮಾಡಬೇಕಾಯಿತು?
‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಡಾ.ರಾಜ್​ಕುಮಾರ್ (Credits: Raghavendra Rajkumar/ Twitter)
Follow us
TV9 Web
| Updated By: shivaprasad.hs

Updated on: Apr 24, 2022 | 7:00 AM

ಇಂದು (ಏ.24) ಡಾ.ರಾಜ್​ಕುಮಾರ್ (Dr Rajkumar) ಅವರ 94ನೇ ಜನ್ಮದಿನ. ಹಲವು ಸಮಾಜಮುಖಿ ಕಾರ್ಯಗಳ ಮುಖಾಂತರ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ. ಇಂದಿನ ತಲೆಮಾರಿನ ನಟರಿಗೆ ಡಾ.ರಾಜ್ ಯಾವತ್ತಿಗೂ ಮಾದರಿ. ರಾಜ್​ ಅವರಿಗಿದ್ದ ವೃತ್ತಿ ಜೀವನದ ಬಗೆಗಿನ ಬದ್ಧತೆ, ಸಿನಿಮಾಗಳ ಮೇಲಿದ್ದ ಪ್ರೀತಿಗೆ ಸರಿಸಾಟಿಯಿಲ್ಲ. ಡಾ.ರಾಜ್ ಚಿತ್ರರಂಗದಲ್ಲಿ ಏಕಾಏಕಿ ಸ್ಟಾರ್ ಪಟ್ಟ ಅಲಂಕರಿಸಿದವರು ಎನ್ನುವದಕ್ಕಿಂತ, ಒಂದೊಂದೇ ಮೆಟ್ಟಿಲನ್ನು ಏರುತ್ತಾ, ಅಭಿಮಾನಿಗಳ ಹೃದಯದಲ್ಲಿ ವಿರಾಜಮಾನರಾದರು ಎನ್ನಬಹುದು. ಸ್ಟಾರ್ ಆಗಿದ್ದ ಅವರ ಸಂಭಾವನೆ ಎಷ್ಟಿತ್ತು? ಪ್ರತಿ ಚಿತ್ರ ಗೆದ್ದಾಗಲೂ ಸಂಭಾವನೆ ಏರಿಸಿಕೊಳ್ಳುತ್ತಿದ್ದರೇ? ಮೊದಲಾದ ಕುತೂಹಲಕರ ಪ್ರಶ್ನೆಗಳು ಈಗಿನ ಕಾಲದವರಿಗೆ ಬರುವುದು ಸಹಜ. ಕಾರಣ, ಈಗ ನಾಯಕ ನಟರು ಒಂದು ಚಿತ್ರ ಗೆದ್ದರೆ ಮುಂದಿನ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಡುತ್ತಾರೆ. ಈಗಿನ ಮಾರುಕಟ್ಟೆಯ ವ್ಯಾಪ್ತಿ ಬೇರೆ ಇದೆ ಎನ್ನುವುದನ್ನು ಒಪ್ಪಿಕೊಳ್ಳಬಹುದಾದರೂ, ಆಗ ಡಾ.ರಾಜ್ ತಮ್ಮ ಸಂಬಳ ಹೆಚ್ಚಾಗಲು ಎಷ್ಟು ದೀರ್ಘ ಕಾಲ ಕಾಯುತ್ತಿದ್ದರು ಎನ್ನುವುದು ಎಲ್ಲರಿಗೂ ಅಚ್ಚರಿ ತರುವಂಥದ್ದು. ಈ ಬಗ್ಗೆ ಟಿವಿ9 ಜತೆ ಮಾತನಾಡುತ್ತಾ, ಹಿರಿಯ ನಟ ಬೆಂಗಳೂರು ನಾಗೇಶ್ ಮಾಹಿತಿ ಹಂಚಿಕೊಂಡಿದ್ದರು.

ಗಂಧದ ಗುಡಿ’, ‘ಮಯೂರ’ ಮೊದಲಾದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಬೆಂಗಳೂರು ನಾಗೇಶ್​ ಕೆಲಸ ಮಾಡಿದ್ದರು. ‘ಗುರು ಶಿಷ್ಯರು’, ‘ಬಂಗಾರದ ಮನುಷ್ಯ’, ‘ಶರಪಂಜರ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದರು. ಡಾ.ರಾಜ್​ರನ್ನು ಹತ್ತಿರದಿಂದ ಬಲ್ಲ ಅವರು, ತಮ್ಮ ಮಾತಿನಲ್ಲಿ ಆಗಿನ ಕಾಲವನ್ನು, ಡಾ.ರಾಜ್ ಕುರಿತ ಕುತೂಹಲಕರ ವಿಚಾರಗಳನ್ನು ಮೆಲುಕು ಹಾಕಿದ್ದರು.

ಡಾ.ರಾಜ್ ಸಂಭಾವನೆಯ ಬಗ್ಗೆ ಮಾತನಾಡಿದ್ದ ನಾಗೇಶ್, ಆಗ ರಾಜ್ ಅವರು ಒಂದು ಚಿತ್ರಕ್ಕೆ 5,000 ರೂ ಪಡೆಯುತ್ತಿದ್ದರು. 10,000ಕ್ಕೆ ಸಂಭಾವನೆ ಏರಿಕೆಯಾಗಲು ಅವರು 10 ಚಿತ್ರಗಳನ್ನು ಮಾಡಬೇಕಾಯಿತು. ಈಗ ಒಬ್ಬ ಹೀರೋ ಒಂದು ಚಿತ್ರದ ನಂತರ ಕೋಟಿ ರೂ ಪಡೆಯುತ್ತಾರೆ. ಆಗ ಹಾಗಿರಲಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದರು.

ಆಗ ಡಾ.ರಾಜ್ 5,000 ಪಡೆಯುತ್ತಿದ್ದುದು ಸಂಪೂರ್ಣ ಚಿತ್ರಕ್ಕೆ. ಈಗಿನ ಕಲಾವಿದರು ಪ್ರತಿ ದಿನ ಇಷ್ಟು ಮೊತ್ತ ಪಡೆಯುತ್ತಾರೆ. ಆಗ ಸುಮಾರು 9 ತಿಂಗಳು ಚಿತ್ರದ ಕೆಲಸಗಳು ನಡೆದರೆ ಅಷ್ಟಕ್ಕೂ ಸೇರಿಸಿ ಡಾ.ರಾಜ್ 5,000 ಪಡೆಯುತ್ತಿದ್ದರು. ಆದರೆ ಡಾ.ರಾಜ್ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿರುತ್ತಿದ್ದರು. ಕಾರಣ, ಅವರಿಗೆ ಅಷ್ಟು ಬೇಡಿಕೆ ಇತ್ತು ಎಂದು ಬೆಂಗಳೂರು ನಾಗೇಶ್ ವಿವರಿಸಿದ್ದರು.

ಇದನ್ನೂ ಓದಿ: Ashwini Puneeth Rajkumar: ಡಾ.ರಾಜ್​ ಜನ್ಮದಿನ ಹಿನ್ನೆಲೆ; ಬಡಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ ಅಶ್ವಿನಿ ಪುನೀತ್

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ