ಗಣೇಶ ಚತುರ್ಥಿ ಬಳಿಕ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಆಗುವ ಸಾಧ್ಯತೆ
Bengaluru: ಕಡ್ಡಾಯವಾಗಿ ಜನರನ್ನು ಟೆಸ್ಟ್ ಮಾಡಿದರೆ ಸೋಂಕು ಹೆಚ್ಚಳ ಆಗಬಹುದು. ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ. ಹಬ್ಬದ ನಂತರ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುವ ಭಯ ಇದೆ.
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಆಗಲಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಗಣೇಶ ಹಬ್ಬದ ಬಳಿಕ ನಿತ್ಯ 800 ರಿಂದ 1000 ಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ. ಸದ್ಯ ಬೆಂಗಳೂರಿನಲ್ಲಿ ನಿತ್ಯ 300 ರಿಂದ 350 ಪ್ರಕರಣಗಳು ವರದಿ ಆಗುತ್ತಿವೆ. ಆದರೆ, ಗಣೇಶ ಹಬ್ಬದ ಒಂದು ವಾರದ ಬಳಿಕ ಕೊವಿಡ್19 ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬಗ್ಗೆ, ಬಿಬಿಎಂಪಿಯಿಂದ ಸೋಂಕಿತರ ಅಂದಾಜು ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಕಡ್ಡಾಯವಾಗಿ ಜನರನ್ನು ಟೆಸ್ಟ್ ಮಾಡಿದರೆ ಸೋಂಕು ಹೆಚ್ಚಳ ಆಗಬಹುದು. ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ. ಹಬ್ಬದ ನಂತರ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುವ ಭಯ ಇದೆ. ಗಣೇಶ ಹಬ್ಬದಂದು ಸಾರ್ವಜನಿಕ ಸ್ಥಳದಲ್ಲಿ ಮಕ್ಕಳ ಓಡಾಟ ಕಂಡುಬಂದಿದೆ. ಹೀಗಾಗಿ ಹಬ್ಬದ ನಂತರ ಮಕ್ಕಳಿಗೆ ಕೊರೊನಾ ಹರಡುವಿಕೆ ಉಂಟಾಗುವ ಸಾಧ್ಯತೆ ಇರುವ ಬಗ್ಗೆ ಅಂದಾಜಿಸಲಾಗಿದೆ.
ಕೊರೊನಾದಿಂದ ಮೃತಪಟ್ಟವರ ಮಾಹಿತಿಯನ್ನು ಸರ್ಕಾರ ಮುಚ್ಚಿಡುತ್ತಿದೆ ಕೊವಿಡ್‌ನಿಂದ ಮೃತಪಟ್ಟವರ ಮಾಹಿತಿಯನ್ನು ಸರ್ಕಾರ ಮುಚ್ಚಿಟ್ಟಿದೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. ಜನನ, ಮರಣ ನೋಂದಣಿ ಕಚೇರಿಯಿಂದ ಮಾಹಿತಿ ಸಂಗ್ರಹ ಮಾಡಿದರೆ, ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಸಿದರೆ ಹೆಚ್ಚು ಸಾವು ಉಂಟಾಗಿದೆ. ಸರ್ಕಾರದ ಲೆಕ್ಕ ಪ್ರಕಾರ ಕೊರೊನಾಗೆ 37 ಸಾವಿರ ಜನ ಬಲಿ ಆಗಿದೆ. ಆದರೆ ನಿಜವಾಗಿ ಕೊರೊನಾಗೆ 1 ಲಕ್ಷದ 62 ಸಾವಿರ ಜನ ಬಲಿ ಆಗಿದ್ದಾರೆ. ಈ ಲೆಕ್ಕವನ್ನು ರಾಜ್ಯಸರ್ಕಾರ ಮುಚ್ಚಿಡುತ್ತಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಲಾಗುವುದು. ಸರ್ಕಾರ ತನ್ನ ವೈಫಲ್ಯ ಮುಚ್ಚಿಡಲು ಈ ರೀತಿ ಸುಳ್ಳು ಹೇಳುತ್ತಿದೆ. ಪರಿಹಾರ ನೀಡಬೇಕಾಗ್ತೆಂದು ಸರ್ಕಾರ ತಪ್ಪು ಮಾಹಿತಿ ನೀಡ್ತಿದೆ. 2018 ರಲ್ಲಿ ಒಟ್ಟು 4,83,511 ಜನರು ಸಾವನ್ನಪ್ಪಿದ್ದರು. 2019 ರಲ್ಲಿ 5,08,584 ಜನ ಮತ್ತು 2020 ರಲ್ಲಿ 5,51,808 ಜನ ಮೃತಪಟ್ಟಿದ್ದಾರೆ. 2021 ರಲ್ಲಿ ರಾಜ್ಯದಲ್ಲಿ ಒಟ್ಟು 4,26,790 ಜನರು ಮೃತಪಟ್ಟಿದ್ದಾರೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಸಿದರೆ 7 ತಿಂಗಳಲ್ಲಿ 1 ಲಕ್ಷ 62 ಸಾವಿರ ಜನ ಹೆಚ್ಚುವರಿ ಜನ ಸತ್ತಿದ್ದಾರೆ. ಹೇಗೆ ಇಷ್ಟು ಜನ ಸತ್ತಿದ್ದಾರೆ? ಸರ್ಕಾರಿ ಲೆಕ್ಕ ಪ್ರಕಾರ ಕೊರೋನಾದಿಂದ ಮೃತಪಟ್ಟಿರುವವರು 37 ಸಾವಿರ ಮಂದಿ ಮಾತ್ರ. ಕೊರೋನಾದಿಂದ 37 ಸಾವಿರ ಸತ್ತಿರುವುದು ಎಂದು ಸರ್ಕಾರ ಹೇಳುತ್ತಿದೆ. ಆದರೆ ಕೊರೋನಾದಿಂದ 1 ಲಕ್ಷದ 62 ಸಾವಿರ ಜನ ಸತ್ತಿದ್ದಾರೆ. ಈ ಲೆಕ್ಕವನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಜತೆಜತೆಗೆ ಶ್ವಾಸಕೋಶಕ್ಕೆ ಬೇರೆ ಸೋಂಕು ತಗುಲಿದರೆ ಏನಾಗುತ್ತದೆ? ಹೊಸ ಅಧ್ಯಯನ ಹೇಳಿದ್ದೇನು?
ಇದನ್ನೂ ಓದಿ: ಕೊರೊನಾ ಮರು ಸೋಂಕಿಗೆ ತುತ್ತಾಗಲು ಏನು ಕಾರಣ?; ಎಲ್ಲರೂ ತಿಳಿದಿರಬೇಕಾದ ಮಾಹಿತಿ ಇಲ್ಲಿದೆ