ಕೊರೊನಾ ಮರು ಸೋಂಕಿಗೆ ತುತ್ತಾಗಲು ಏನು ಕಾರಣ?; ಎಲ್ಲರೂ ತಿಳಿದಿರಬೇಕಾದ ಮಾಹಿತಿ ಇಲ್ಲಿದೆ

ಲಸಿಕೆ ಪಡೆದವರು ಮತ್ತೆ ಕೊರೊನಾ ಸೋಂಕಿಗೆ ತುತ್ತಾಗುವ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಅಂಥವರಲ್ಲಿ ಸೋಂಕಿನ ಪರಿಣಾಮ ಕಡಿಮೆಯಿರುತ್ತದೆ. ಆದರೆ ಯಾವೆಲ್ಲಾ ಕಾರಣಗಳಿಗಾಗಿ ಅವರು ಮತ್ತೆ ಸೋಂಕಿಗೆ ತುತ್ತಾಗುತ್ತಾರೆ? ಆ ಮಾಹಿತಿ ಇಲ್ಲಿದೆ.

ಕೊರೊನಾ ಮರು ಸೋಂಕಿಗೆ ತುತ್ತಾಗಲು ಏನು ಕಾರಣ?; ಎಲ್ಲರೂ ತಿಳಿದಿರಬೇಕಾದ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ

ಇಂಗ್ಲೆಂಡ್​ನಲ್ಲಿ ನಡೆದ ಅಧ್ಯಯನದ ವರದಿಯೊಂದರ ಪ್ರಕಾರ, 0.2 ಪ್ರತಿಶತ ಜನರಲ್ಲಿ ಅಥವಾ 500ರಲ್ಲಿ ಒಬ್ಬರಿಗೆ ಕೊರೊನಾ ಬ್ರೇಕ್ ಥ್ರೂ ಇನ್ಫೆಕ್ಷನ್ ಕಾಣಿಸಿಕೊಳ್ಳುತ್ತದೆ. ಅಂದರೆ ಕೊರೊನಾ ಲಸಿಕೆ ಪಡೆದ ನಂತರವೂ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತದೆ ಎಂದರ್ಥ. ಆದರೆ, ಅದೇ ಅಧ್ಯಯನದಲ್ಲಿ ತಿಳಿಸಿರುವ ಪ್ರಕಾರ, ಲಸಿಕೆ ಪಡೆದವರಿಗೆ ಮತ್ತೆ ಸೋಂಕು ಕಾಣಿಸಿಕೊಂಡಾಗ, ಸೋಂಕಿನ ತೀವ್ರತೆ ಕಡಿಮೆಯಿರುತ್ತದೆ ಮತ್ತು ಎಲ್ಲರಲ್ಲಿ ಒಂದೇ ತೆರನಾಗಿ ಇರುವುದಿಲ್ಲ. ಆದರೆ, ನೀವು ಪಡೆದುಕೊಂಡಿರುವ ವ್ಯಾಕ್ಸೀನ್​ಗೆ ಅನುಗುಣವಾಗಿ ಕೊರೊನಾ ಬ್ರೇಕ್ ಥ್ರೂ ಆಗುವ ಸಾಧ್ಯತೆ ಅವಲಂಬಿಸಿರುತ್ತದೆ. ಆ ಅಂಶಗಳನ್ನು ಇಲ್ಲಿ ನೀಡಲಾಗಿದ್ದು, ಈ ಕುರಿತು ಪ್ರತಿಯೊಬ್ಬರೂ ಗಮನವಿಡಬೇಕಾಗುತ್ತದೆ.

1. ವ್ಯಾಕ್ಸೀನ್ ವಿಧ:
ನೀವು ಪಡೆದುಕೊಂಡಿರುವ ವ್ಯಾಕ್ಸೀನ್​ ಎಷ್ಟರ ಮಟ್ಟಿಗೆ ರೋಗವನ್ನು ಪ್ರತಿಬಂಧಿಸುವ ಸಾಮರ್ಥ್ಯವಿದೆ ಎಂಬುದು ಪ್ರಮುಖವಾಗಿರುತ್ತದೆ. ಅಂದರೆ, ನೀವು ಪಡೆದಿರುವ ವ್ಯಾಕ್ಸೀನ್ ರೋಗದಿಂದ ನಿಮ್ಮನ್ನು ಎಷ್ಟು ಪ್ರಮಾಣದಲ್ಲಿ ರಕ್ಷಿಸುತ್ತದೆ ಎಂಬ ಅಂಶ. ಆದರೆ, ಕೊರೊನಾ ಲಸಿಕೆ ಪಡೆಯದ ವ್ಯಕ್ತಿಗಳಿಗಿಂತ ಲಸಿಕೆ ಪಡೆದವರು ಬಹಳಷ್ಟು ಸುರಕ್ಷಿತರಾಗಿರುತ್ತಾರೆ ಎನ್ನುತ್ತದೆ ಅಧ್ಯಯನ.

2. ವ್ಯಾಕ್ಸೀನ್ ಪಡೆದ ನಂತರದ ಅವಧಿ:
ಒಮ್ಮೆ ವ್ಯಾಕ್ಸಿನೇಷನ್ ಕಂಪ್ಲೀಟ್(ಎರಡು ಡೋಸ್) ಆದ ತಕ್ಷಣ ಎಷ್ಟು ಕಾಲದವರೆಗೆ ಆ ಲಸಿಕೆ ಪರಿಣಾಮಕಾರಿಯಾಗಿರುತ್ತದೆ ಎಂಬುದು ಕೂಡ ಮಹತ್ವದ್ದು. ಈ ಕಾರಣದಿಂದಲೇ ಪ್ರಸ್ತುತ ಬೂಸ್ಟರ್ ವ್ಯಾಕ್ಸಿನೇಷನ್ ಬೇಕಾಗುತ್ತದೆಯೇ ಎಂಬ ಚರ್ಚೆ ಹುಟ್ಟಿಕೊಂಡಿರುವುದು.

3. ವೈರಸ್​ನ ವಿಧಗಳು:
ಪ್ರಸ್ತುತ ಲಭ್ಯವಿರುವ ಲಸಿಕೆಗಳು ಕೊರೊನಾ ಮೂಲ ವೈರಸ್​ಗೆ ಅಭಿವೃದ್ಧಿಯಾಗಿರುವಂಥವುಗಳು. ಆದರೆ, ಕೊರೊನಾದ ವೇರಿಯಂಟ್​ಗಳು ಕಾಣಿಸಿಕೊಳ್ಳುತ್ತಿರುವುದರಿಂದ ಅವುಗಳ ಮೇಲೆ ಲಸಿಕೆ ಎಂತಹ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನಗಳಿಂದಲೇ ತಿಳಿಯಬೇಕಿದೆ. ಕೆಲ ವ್ಯಾಕ್ಸೀನ್​ಗಳು, ಕೊರೊನಾ ರೂಪಾಂತರಿ ವೈರಸ್​ಗೆ ಹೆಚ್ಚು ಪರಿಣಾಮಕಾರಿಯಲ್ಲ ಎಂಬ ಅಂಶ ಈಗಾಗಲೇ ಚರ್ಚೆಯಾಗುತ್ತಿದೆ.

4. ದೇಹದ ರೋಗ ಪ್ರತಿರೋಧ ಶಕ್ತಿ:
ಪ್ರತಿಯೊಬ್ಬರಲ್ಲೂ ರೋಗದ ತೀವ್ರತೆಯು ಅವರವರ ರೋಗ ಪ್ರತಿರೋಧ ಶಕ್ತಿಯ ಮೇಲೂ ಅವಲಂಬಿತವಾಗಿದೆ. ಹಾಗೆಯೇ ವೈಯಕ್ತಿಕವಾಗಿ ಹೊಂದಿರುವ ಇತರ ರೋಗಗಳು ಮತ್ತವುಗಳ ಪ್ರಭಾವ ಕೊರೊನಾ ಸೋಂಕಿಗೆ ತುತ್ತಾದಗ ರೋಗ ತೀವ್ರತೆಗೆ ಕಾರಣವಾಗುತ್ತವೆ. ವಯಯಸ್ಸಾದಂತೆ ರೋಗ ಪ್ರತಿರೋಧ ಶಕ್ತಿಯು ಕಡಿಮೆಯಾಗುತ್ತದೆ ಎನ್ನುತ್ತವೆ ಅಧ್ಯಯನಗಳು. ಸತತವಾಗಿ ಮೆಡಿಕೇಷನ್​ಗೆ ಒಳಗಾಗಿರುವವರು ಕೂಡ ಕಡಿಮೆ ಪ್ರತಿರೋಧ ಶಕ್ತಿ ಹೊಂದಿರುತ್ತಾರೆ. ಆದ್ದರಿಂದ ಅಂಥವರು ತುಸು ಹೆಚ್ಚಾಗಿ ಎಚ್ಚರಿಕೆ ವಹಿಸಬೇಕು.

ಮತ್ತೆ ಸೋಂಕಿಗೆ ತುತ್ತಾಗುವ ಇಷ್ಟೆಲ್ಲಾ ಸಾಧ್ಯತೆಗಳಿದ್ದಾಗಲೂ ಭೀತಿ ಪಡುವ ಅವಶ್ಯಕತೆ ಇಲ್ಲ; ಕಾರಣ ಇಲ್ಲಿದೆ:
ಕೊರೊನಾ ರೂಪಾಂತರಿ ವೈರಸ್ ವಿರುದ್ಧ ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂಬುದರ ಕುರಿತು ಅಧ್ಯಯನಗಳು ನಡೆಯುತ್ತಲೇ ಇವೆ. ಆದರೆ ಅವು ರೋಗದ ವಿರುದ್ಧ ಹೋರಾಡಲು ಪ್ರಸ್ತುತ ಲಭ್ಯವಿರುವ ಅತ್ಯಂತ ಪ್ರಭಾವಶಾಲಿ ಅಸ್ತ್ರಗಳಾಗಿವೆ. ಅವು ರೋಗದ ತೀವ್ರತೆಯನ್ನು ಕಡಿಮೆಗೊಳಿಸಿ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹಾಗೂ ಸಾವಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುತ್ತವೆ. ಪ್ರಸ್ತುತ ವ್ಯಾಕ್ಸೀನ್​ಗಳ ಪ್ರಭಾವ ಎಷ್ಟು ಸಮಯಕ್ಕೆ ಕಡಿಮೆಯಾಗಬಹುದು, ಹಾಗಾದಲ್ಲಿ, ಮತ್ತೆ ಲಸಿಕೆ ನೀಡಬೇಕಾಗುತ್ತದೆಯೇ ಎಂಬುದರ ಕುರಿತು ಅಧ್ಯಯನಗಳು ನಡೆಯುತ್ತಿವೆ. ಆದ್ದರಿಂದ ಮತ್ತೆ ಸೋಂಕಿಗೆ ತುತ್ತಾಗಬಹುದಾದ ಈ ಮೇಲಿನ ವಿಚಾರಗಳನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತದೆ ಅಧ್ಯಯನ.

ಇದನ್ನೂ ಓದಿ:

200 ಕೆಜಿ ಚಾಕೊಲೇಟ್ ಬಳಸಿ ತಯಾರಿಸಿದ ಗಣೇಶನ ವಿಗ್ರಹವಿದು; ಈ ಮೂರ್ತಿಯ ವಿಸರ್ಜನೆ ಹೇಗೆ ಮಾಡುತ್ತಾರಂತೆ ಗೊತ್ತಾ?

ಕಾರವಾರದ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೆಬರ ಪತ್ತೆ

(Why Corona break through infection occurs here is the reasons)

Read Full Article

Click on your DTH Provider to Add TV9 Kannada