ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ ಒಟ್ಟು 1,606 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 31 ಮಂದಿ ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಇಂದು ಒಂದೇ ದಿನ 467 ಜನರಿಗೆ ಸೋಂಕು ದೃಢಪಟ್ಟಿದ್ದು, ಮೂವರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಒಟ್ಟು 23,057 ಮಂದಿಯಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಕೊರೊನಾದಿಂದ ಈವರೆಗೆ ಒಟ್ಟು 36,405 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 8182 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದ್ದು, ಈವರೆಗೆ ಒಟ್ಟು 15,835 ಮಂದಿ ಸಾವನ್ನಪ್ಪಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು?
ರಾಜ್ಯದಲ್ಲಿ ಇಂದು ಒಟ್ಟು 1606 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬೆಳಗಾವಿ 69, ಬೆಂಗಳೂರು ಗ್ರಾಮಾಂತರ 17, ಬೆಂಗಳೂರು ನಗರ 467, ಚಾಮರಾಜನಗರ 54, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 38, ಚಿತ್ರದುರ್ಗ 36, ದಕ್ಷಿಣ ಕನ್ನಡ 357, ದಾವಣಗೆರೆ 11, ಧಾರವಾಡ 8 ಗದಗ 10, ಹಾಸನ 57, ಹಾವೇರಿ 2, ಕೊಡಗು 19, ಕೋಲಾರ 28, ಮಂಡ್ಯ 40, ಮೈಸೂರು 162, ರಾಯಚೂರು, 2, ರಾಮನಗರ 3, ಶಿವಮೊಗ್ಗ 52, ತುಮಕೂರು 59, ಉಡುಪಿ 78, ಉತ್ತರ ಕನ್ನಡ 19, ವಿಜಯಪುರ 9, ಯಾದಗಿರಿ 2.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಳಗಾವಿ 2, ಬೆಂಗಳೂರು ನಗರ 3, ಚಿಕ್ಕಮಗಳೂರು 1, ದಕ್ಷಿಣ ಕನ್ನಡ 4, ಹಾಸನ 1, ಹಾವೇರಿ 3, ಕಲಬುರಗಿ 1, ಕೋಲಾರ 2, ಮಂಡ್ಯ 2, ಮೈಸೂರು 3, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ ತಲಾ 1, ಉತ್ತರ ಕನ್ನಡ 3, ವಿಜಯಪುರ ಇಬ್ಬರು ಸಾವನ್ನಪ್ಪಿದ್ದಾರೆ.
ಇಂದಿನ 26/07/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/UBhcOPK9Tb @CMofKarnataka @mla_sudhakar @drashwathcn @GovindKarjol @LaxmanSavadi @BBMPCOMM @DC_Dharwad @DCKodagu @dcudupi @DCDK9 @mysurucitycorp @mangalurucorp @CEOUdupi pic.twitter.com/61SifkcOhS
— K’taka Health Dept (@DHFWKA) July 26, 2021
(Coronavirus Karnataka numbers 1606 infected 31 died of covid 19)
ಇದನ್ನೂ ಓದಿ: ಬ್ರಿಟನ್ನಲ್ಲಿ ಕೊರೊನಾ ವೈರಾಣುವಿನ ಮತ್ತೊಂದು ರೂಪಾಂತರಿ ಪತ್ತೆ: ಈವರೆಗೆ ಗೊತ್ತಿರುವ ವಿಷಯಗ ಇಷ್ಟು
ಇದನ್ನೂ ಓದಿ: Coronavirus cases in India: ಭಾರತದಲ್ಲಿ 39,361 ಹೊಸ ಕೊವಿಡ್ ಪ್ರಕರಣ ಪತ್ತೆ; ಪಾಸಿಟಿವಿಟಿ ದರ ಶೇ 3.41