Covid 19 Karnataka Update: ಒಂದೇ ದಿನ 48 ಸಾವಿರ ಮಂದಿಗೆ ಕೊರೊನಾ ಸೋಂಕು, ಕೊವಿಡ್​ನಿಂದ 22 ಜನರು ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 21, 2022 | 8:40 PM

Covid 19: ಕರ್ನಾಟಕದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3,23,143ಕ್ಕೆ ಏರಿಕೆಯಾಗಿದೆ. ರಾಜ್ಯದ ಪಾಸಿಟಿವಿಟಿ ಪ್ರಮಾಣ ತುಸು ಕಡಿಮೆಯಾಗಿದ್ದು, ಶೇ 19.23ಕ್ಕೆ ಬಂದಿದೆ.

Covid 19 Karnataka Update: ಒಂದೇ ದಿನ 48 ಸಾವಿರ ಮಂದಿಗೆ ಕೊರೊನಾ ಸೋಂಕು, ಕೊವಿಡ್​ನಿಂದ 22 ಜನರು ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಸೋಂಕು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಶುಕ್ರವಾರ (ಜ.21) ಒಟ್ಟು 48,049 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 22 ಜನರು ಸಾವನ್ನಪ್ಪಿದ್ದಾರೆ. 18,115 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3,23,143ಕ್ಕೆ ಏರಿಕೆಯಾಗಿದೆ. ರಾಜ್ಯದ ಪಾಸಿಟಿವಿಟಿ ಪ್ರಮಾಣ ತುಸು ಕಡಿಮೆಯಾಗಿದ್ದು, ಶೇ 19.23ಕ್ಕೆ ಬಂದಿದೆ. ಸೋಂಕಿನಿಂದ ಸಾವನ್ನಪ್ಪುವವರ ಪ್ರಮಾಣ ಶೇ 0.04 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 34,25,002 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 30,63,292 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 38,537 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರದಲ್ಲಿ ಶುಕ್ರವಾರ 29,068 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. 7,116 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಈವರೆಗೆ 15,42,092 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 13,02,027 ಜನರು ಸಾವಪ್ಪಿದ್ದಾರೆ. ನಗರದಲ್ಲಿ ಪ್ರಸ್ತುತ 2,23,580 ಸಕ್ರಿಯ ಪ್ರಕರಣಗಳಿವೆ. ಈವರೆಗೆ ನಗರದಲ್ಲಿ ಒಟ್ಟು 16,484 ಜನರು ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 29,068, ಬಾಗಲಕೋಟೆ 85, ಬಳ್ಳಾರಿ 767, ಬೆಳಗಾವಿ 518, ಬೆಂಗಳೂರು ಗ್ರಾಮಾಂತರ 1036, ಬೀದರ್ 351, ಚಾಮರಾಜನಗರ 576, ಚಿಕ್ಕಬಳ್ಳಾಪುರ 772, ಚಿಕ್ಕಮಗಳೂರು 319, ಚಿತ್ರದುರ್ಗ 438, ದಕ್ಷಿಣ ಕನ್ನಡ 897, ದಾವಣಗೆರೆ 249, ಧಾರವಾಡ 373, ಗದಗ 336, ಹಾಸನ 1889, ಹಾವೇರಿ 143, ಕಲಬುರಗಿ 1164, ಕೊಡಗು 317, ಕೋಲಾರ 645, ಕೊಪ್ಪಳ 324, ಮಂಡ್ಯ 1506, ಮೈಸೂರು 915, ರಾಯಚೂರು 367, ರಾಮನಗರ 330, ಶಿವಮೊಗ್ಗ 500, ತುಮಕೂರು 2021, ಉಡುಪಿ 1018, ಉತ್ತರ ಕನ್ನಡ 682, ವಿಜಯಪುರ 327, ಯಾದಗಿರಿ 116.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ 6, ಉಡುಪಿ 4, ಮೈಸೂರು 3, ಹಾವೇರಿ 2, ರಾಮನಗರ, ಶಿವಮೊಗ್ಗ ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ 1.

ಇದನ್ನೂ ಓದಿ: ಜನರ ಜೀವ, ಜೀವನ ಗಮನದಲ್ಲಿಟ್ಟುಕೊಂಡು ಹೊಸ ಕೊವಿಡ್ ಮಾರ್ಗಸೂಚಿಯ ತೀರ್ಮಾನ: ಆರ್ ಅಶೋಕ್
ಇದನ್ನೂ ಓದಿ: ಜ್ವರ ಮತ್ತು ಸ್ನಾಯು ದೌರ್ಬಲ್ಯ ಕೊವಿಡ್ ಮೂರನೇ ಅಲೆಯಲ್ಲಿ ಕಂಡು ಬರುವ ಸಾಮಾನ್ಯ ರೋಗ ಲಕ್ಷಣಗಳು: ಕೇಂದ್ರ

Published On - 8:38 pm, Fri, 21 January 22