Crime Update: ಡ್ರಗ್ ಪೆಡ್ಲರ್ ಬಂಧನ, ಇಸ್ಟೀಟ್ ವ್ಯಸನಿಯ ಕೊಂದ ತಾಯಿ, ಬಸ್ ಚಾಲಕನ ಮೇಲೆ ಹಲ್ಲೆ
ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಿಗೆ ಈತ ಡ್ರಗ್ ಪೂರೈಸುತ್ತಿದ್ದ. ಖಚಿತ ಮಾಹಿತಿ ಆಧರಿಸಿ ಹಲಸೂರು ಪೊಲೀಸರು ದಾಳಿ ನಡೆಸಿದ್ದರು. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರು: ಹಲಸೂರು ಠಾಣೆ ಪೊಲೀಸರು ಮಣಿಪುರ ಮೂಲದ ಡ್ರಗ್ ಪೆಡ್ಲರ್ ದುಲತ್ ಖಾನ್ ಎಂಬಾತನನ್ನು ಬಂಧಿಸಿ, ₹ 1.3 ಲಕ್ಷ ಮೌಲ್ಯದ 62 ಗ್ರಾಂ ಹೆರಾಯಿನ್ ಜಪ್ತಿ ಮಾಡಿದ್ದಾರೆ. ಈತ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರುತ್ತಿದ್ದ ಎಂಬ ಅರೋಪಗಳು ಕೇಳಿಬಂದಿದ್ದವು. ಉತ್ತರ ಭಾರತ ಮೂಲದ ಕೂಲಿಕಾರ್ಮಿಕರಿಗೆ ದುಲತ್ ಖಾನ್ ಡ್ರಗ್ಸ್ ಮಾಡ್ತಿದ್ದ ಎಂಬ ಆರೋಪಗಳು ಕೇಳಿ ಬಂದಿದ್ದವು. ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಿಗೆ ಈತ ಡ್ರಗ್ ಪೂರೈಸುತ್ತಿದ್ದ. ಖಚಿತ ಮಾಹಿತಿ ಆಧರಿಸಿ ಹಲಸೂರು ಪೊಲೀಸರು ದಾಳಿ ನಡೆಸಿದ್ದರು. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಕೆಎಸ್ಆರ್ಟಿಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ ಬೀದರ್: ಔರಾದ್ ತಾಲೂಕಿನ ಮಾಳೆಗಾಂವ್ ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ ಚಾಲಕನಿಗೆ ಅಪರಿಚಿತ ಯುವಕನೊಬ್ಬ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬಸ್ ತಡೆದ ಯುವಕ, ಕಲ್ಲಿನಿಂದ ಚಾಲಕನಿಗೆ ಹೊಡೆದು ಪರಾರಿಯಾದ. ಗಾಯಗೊಂಡ ಬಸ್ ಚಾಲಕ ಬಾಬುರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಕ್ರಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಬಸ್ ಔರಾದ್ನಿಂದ ಮಹಾರಾಷ್ಟ್ರದ ಉದ್ಗಿರ್ಗೆ ಹೋಗುತ್ತಿತ್ತು.
ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ ಮೈಸೂರು: ಮೈಸೂರಿನಿಂದ ಚೆನ್ನೈನ ಜೀವಂತ ಹೃದಯವನ್ನು ಬಿಜಿಎಸ್ ಅಪೋಲೊ ಆಸ್ಪತ್ರೆಯಿಂದ ಶುಕ್ರವಾರ ರವಾನಿಸಲಾಯಿತು. 24 ವರ್ಷದ ದರ್ಶನ್ ಎಂಬಾತ ಅಂಗಾಂಗ ದಾನ ಮಾಡಿದ್ದ. ಕಳೆದ 18ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ದರ್ಶನ್ ಅವರ ಹೃದಯವನ್ನು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನದ ಮೂಲಕ ಚೆನ್ನೈಗೆ ರವಾನಿಸಲಾಯಿತು. ಮೈಸೂರಿನಲ್ಲಿ ಆಂಬುಲೆನ್ಸ್ ಸಂಚಾರಕ್ಕಾಗಿ ಜೀರೋ ಟ್ರಾಫಿಕ್ ರೂಪಿಸಲಾಗಿತ್ತು. 10 ನಿಮಿಷದಲ್ಲಿ ಆಂಬುಲೆನ್ಸ್ ಏರ್ಪೋರ್ಟ್ ತಲುಪಿ, ಅಲ್ಲಿಂದ ವಿಮಾನದ ಮೂಲಕ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಕೇವಲ 1 ಗಂಟೆ ಅವಧಿಯಲ್ಲಿ ತಲುಪಿತು.
ಬೈಕ್-ಕಾರ್ ಅಪಘಾತ: ಗುತ್ತಿಗೆದಾರ ಸಾವು ಗದಗ: ಹರ್ಲಾಪುರ ಕ್ರಾಸ್ ಬಳಿ ಕಾರು, ಬೈಕ್ ಮುಖಾಮುಖಿ ಡಿಕ್ಕಿಯಾಗಿ ಗುತ್ತಿಗೆದಾರ ಯಲ್ಲಪ್ಪಗೌಡ ವೆಂಕನಗೌಡ ಸ್ಥಳದ್ಲಿಯೇ ಮೃತಪಟ್ಟರು. ಅಪಘಾತದಲ್ಲಿ ಲೋಕೇಶ್ ಗುಡಗೇರಿ ಎನ್ನುವವರಿಗೆ ಗಂಭೀರ ಗಾಯವಾಗಿದೆ.
ಕ್ಯಾಂಟರ್ ಹರಿದು ಯುವತಿ ಸಾವು ಬೆಂಗಳೂರು: ಕ್ಯಾಂಟರ್ ಹರಿದು ಮಹಶ್ರೀ (19) ಎಂಬ ಯುವತಿ ಸ್ಥಳದಲ್ಲೇ ಸಾವನಪ್ಪಿದ ಘಟನೆ ಶುಕ್ರವಾರ ನಡೆದಿದೆ. ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಭದ್ರಪ್ಪ ಲೇಔಟ್ ಫ್ಲೈಓವರ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಕ್ಯಾಂಟರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆದಿರುವ ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಹಿಂಟ್ ಅಂಡ್ ಪ್ರಕರಣ ದಾಖಲಿಸಿದ್ದಾರೆ. ಮೃತ ಯುವತಿ ಮಹಶ್ರೀ ಮಲ್ಲೇಶ್ವರಂ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ, ಟೆಕ್ಸ್ಟೈಲ್ಸ್ ಅಂಗಡಿಯಲ್ಲಿಯೂ ಕೆಲಸ ಮಾಡುತ್ತಿದ್ದರು. ಇಂದು ಬರ್ತ್ಡೇ ಇದ್ದ ಕಾರಣ ಕೆಲಸಕ್ಕೆ ಹೋಗುವುದು ಬೇಡ ಎಂದು ಪೋಷಕರು ಹೇಳಿದ್ದರೂ ಮಹಶ್ರೀ ಹಟ ಮಾಡಿ ಕೆಲಸಕ್ಕೆ ಹೊರಟಿದ್ದರು. ಗೆಳೆಯನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಅಪಘಾತ ಸಂಭವಿಸಿದೆ.
ಮದ್ಯವ್ಯಸನದ ಜೊತೆಗೆ ಇಸ್ಪೀಟ್ ಶೋಕಿ: ಮನೆಮಾರಲು ಯತ್ನಿಸಿದ ಮಗನ ಕೊಲೆ ರಾಯಚೂರು: ಮದ್ಯವ್ಯಸನದ ಜೊತೆ ಇಸ್ಪೀಟ್ ಶೋಕಿಯೂ ಇದ್ದ ಮಗ ಮನೆಯನ್ನೇ ಮಾರಲು ಮುಂದಾದಾಗ ತಾಯಿಯೇ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ರಾಯಚೂರಿನಲ್ಲಿ ಶುಕ್ರವಾರ ನಡೆದಿದೆ. ಮನೆ ಮಾರಾಟಕ್ಕೆ ತಾಯಿ, ಅಕ್ಕ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಜಗಳವು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ಅಮರೀಶ್ (43) ಎಂದು ಗುರುತಿಸಲಾಗಿದೆ. ಈತನ ತಾಯಿ ಲಕ್ಷ್ಮೀ, ಅಕ್ಕ ನಿರ್ಮಲಾ ಹಾಗೂ ಸೋದರ ಅಳಿಯ ಸಂತೋಷ್ ಕೊಲೆ ಆರೋಪಿಗಳು. ಮೃತ ಅಮರೇಶ್ನ ಪತ್ನಿ ಸೌಭಾಗ್ಯ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
ಅಮರೇಶ್ ಕೆಲಸಕ್ಕೆ ಹೋಗದೆ ಪ್ರತಿದಿನ ಗಲಾಟೆ ಮಾಡುತ್ತಿದ್ದ. ಗಂಡ ದುಡಿಯುವುದಿಲ್ಲ ಎಂದು ಪತ್ನಿ ತವರು ಸೇರಿದ್ದರು. ಇಸ್ಪೀಟ್ ಹಾಗೂ ಮದ್ಯದ ಚಟಕ್ಕೆ ಹೆಚ್ಚು ಸಾಲವನ್ನೂ ಮಾಡಿಕೊಂಡಿದ್ದ. ಸಾಲ ತೀರಿಸಲು ಮನೆ ಮಾರಾಟಕ್ಕೆ ಯತ್ನಿಸಿದ್ದ. ಇದೇ ವಿಚಾರವಾಗಿ ನಿನ್ನೆ ತಡರಾತ್ರಿ ಮನೆಯಲ್ಲಿ ಜಗಳವಾಗಿತ್ತು. ಕೊಡಲಿಯಿಂದ ತಲೆಗೆ ಹೊಡೆದು, ಕತ್ತಿಗೆ ಹಗ್ಗದಿಂದ ಬಿಗಿದು ಕೊಲೆ ಮಾಡಲಾಗಿತ್ತು. ನಂತರ ಮೃತದೇಹ ಮನೆಯಿಂದ ಹೊರಗೆ ಎಸೆದಿದ್ದರು ಎಂದು ದೂರಲಾಗಿದೆ.
ವಿದೇಶದಿಂದ ಸಾಗಿಸುತ್ತಿದ್ದ ಚಿನ್ನ ವಶ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ₹ 67 ಲಕ್ಷ (67,59,930) ಮೌಲ್ಯದ 1.3 ಕೆಜಿ (ಒಂದು ಕೆಜಿ 300 ಗ್ರಾಂ) ಚಿನ್ನವನ್ನು ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪೇಸ್ಟ್ ಮತ್ತು ಬಿಸ್ಕೀಟ್ ರೂಪದಲ್ಲಿ ಚಿನ್ನವನ್ನು ಬ್ಯಾಗ್ಗಳಲ್ಲಿ ಇಟ್ಟು, ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದರು. ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಪ್ಯಾಕ್ಸ್ ಮೂಲಕ ಚಿನ್ನ ಸಾಗಿಸಲು ಯತ್ನಿಸಲಾಗುತ್ತಿದೆ. ಮತ್ತೊಂದು ಪ್ರಕರಣದಲ್ಲಿ ದುಬೈನಿಂದ ಮುಂಬೈಗೆ ಬಂದು ಮುಂಬೈನಿಂದ ಬೆಂಗಳೂರಿಗೆ ಪ್ರಯಾಣಿಕ ಚಿನ್ನ ತಂದಿದ್ದ. ಈ ಬಗ್ಗೆ ಮೊದಲೇ ಸಂಗ್ರಹಿಸಿದ್ದ ಅಧಿಕಾರಿಗಳು, ಪ್ರಯಾಣಿಕನ ಸಮೇತ ಚಿನ್ನವನ್ನು ವಶಪಡಿಸಿಕೊಂಡರು.
ಇದನ್ನೂ ಓದಿ: ಮತಾಂತರವಾಗಲು ಕಿರುಕುಳ; ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಇದನ್ನೂ ಓದಿ: ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ ಕಾಲಿಗೆ ಫೈರಿಂಗ್