ಗೋಲಿಬಾರ್​ನಲ್ಲಿ ಸತ್ತವರ ಕುಟುಂಬಗಳಿಗೆ ಪಾಶಾ ಧನಸಹಾಯ

ಕಾಂಗೈ ಶಾಸಕ ಜಮೀರ್ ಅಹ್ಮದ್ ನಂತರ, ಬೆಂಗಳೂರಿನ ಮತ್ತೊಬ್ಬ ಮುಸ್ಲಿಮ್ ನಾಯಕ ಹಾಗೂ ಪಾದರಾಯನಪುರ ವಾರ್ಡ್​ನ ಜೆಡಿ(ಎಸ್) ಕಾರ್ಪೊರೇಟರ್ ಇಮ್ರಾನ್ ಪಾಶಾ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿ ಗಲಭೆ ಪ್ರಕರಣಗಳ ಗೋಲಿಬಾರ್​ನಲ್ಲಿ ಮೃತರಾದವರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ. ಫೇಸ್​ಬುಕ್​ನಲ್ಲಿ ಒಂದು ಪೋಸ್ಟ್ ಹಾಕಿರುವ ಪಾಶಾ ಹಣ ನೀಡುವ ಬಗ್ಗೆ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಜಮೀರ್ ಅಹ್ಮದ್, ಗಲಭೆ ಸಮಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿಗಳ ಕುಟುಂಬಗಳಿಗೆ ​ 5 ಲಕ್ಷ ರೂಪಾಯಿಗಳ […]

ಗೋಲಿಬಾರ್​ನಲ್ಲಿ ಸತ್ತವರ ಕುಟುಂಬಗಳಿಗೆ ಪಾಶಾ ಧನಸಹಾಯ

Updated on: Aug 22, 2020 | 5:02 PM

ಕಾಂಗೈ ಶಾಸಕ ಜಮೀರ್ ಅಹ್ಮದ್ ನಂತರ, ಬೆಂಗಳೂರಿನ ಮತ್ತೊಬ್ಬ ಮುಸ್ಲಿಮ್ ನಾಯಕ ಹಾಗೂ ಪಾದರಾಯನಪುರ ವಾರ್ಡ್​ನ ಜೆಡಿ(ಎಸ್) ಕಾರ್ಪೊರೇಟರ್ ಇಮ್ರಾನ್ ಪಾಶಾ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿ ಗಲಭೆ ಪ್ರಕರಣಗಳ ಗೋಲಿಬಾರ್​ನಲ್ಲಿ ಮೃತರಾದವರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ.

ಫೇಸ್​ಬುಕ್​ನಲ್ಲಿ ಒಂದು ಪೋಸ್ಟ್ ಹಾಕಿರುವ ಪಾಶಾ ಹಣ ನೀಡುವ ಬಗ್ಗೆ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಜಮೀರ್ ಅಹ್ಮದ್, ಗಲಭೆ ಸಮಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿಗಳ ಕುಟುಂಬಗಳಿಗೆ ​ 5 ಲಕ್ಷ ರೂಪಾಯಿಗಳ ನೆರವು ನೀಡಿದ್ದರು.