AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1.5 ಲಕ್ಷ ರೂ. ಬಿಲ್​ ಕಟ್ಟಬೇಕೆಂದು ಸೋಂಕಿತ ಅಪ್ಪನ ಶವವನ್ನೇ ಅನಾಥವಾಗಿ ಬಿಟ್ಟುಹೋದ..

ಬೆಂಗಳೂರು: ಸೋಂಕಿನಿಂದ ಮೃತಪಟ್ಟಿದ್ದ 63 ವರ್ಷದ ವೃದ್ಧನ ಶವವನ್ನು ಪಡೆದರೆ ಆಸ್ಪತ್ರೆಯ ಬಿಲ್​ ಪಾವತಿಸ ಬೇಕಾಗಬಹುದು ಎಂಬ ಯೋಚನೆಯಿಂದ ಮೃತನ ಮಗ ಎಸ್ಕೇಪ್​ ಆಗಿರೋ ಜಿಗುಪ್ಸೆ ತರುವಂಥ ಘಟನೆ ನಗರದ KIMS ಆಸ್ಪತ್ರೆಯಲ್ಲಿ ನಡೆದಿದೆ. ಚಾಮರಾಜಪೇಟೆಯ ನಿವಾಸಿಯಾಗಿದ್ದ 63 ವರ್ಷದ ಸೋಂಕಿತ ವೃದ್ಧ ತೀವ್ರ ಉಸಿರಾಟದ ಸಮಸ್ಯೆಯಿಂದ KIMS ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ, ತಂದೆ ಮೃತಪಟ್ಟು 22 ದಿನ ಕಳೆದರೂ ಆತನ ಮಗ ತಂದೆಯ ಅಂತ್ಯಸಂಸ್ಕಾರ ನೆರವೇರಿಸಲು ಮುಂದೆ ಬಂದಿಲ್ಲ. ಹಾಗಾಗಿ, ವೃದ್ಧನ ಮೃತದೇಹ KIMS ಆಸ್ಪತ್ರೆಯಲ್ಲಿಯೇ […]

1.5 ಲಕ್ಷ ರೂ. ಬಿಲ್​ ಕಟ್ಟಬೇಕೆಂದು ಸೋಂಕಿತ ಅಪ್ಪನ ಶವವನ್ನೇ ಅನಾಥವಾಗಿ ಬಿಟ್ಟುಹೋದ..
ಪ್ರಾತಿನಿಧಿಕ ಚಿತ್ರ
KUSHAL V
|

Updated on:Aug 22, 2020 | 3:26 PM

Share

ಬೆಂಗಳೂರು: ಸೋಂಕಿನಿಂದ ಮೃತಪಟ್ಟಿದ್ದ 63 ವರ್ಷದ ವೃದ್ಧನ ಶವವನ್ನು ಪಡೆದರೆ ಆಸ್ಪತ್ರೆಯ ಬಿಲ್​ ಪಾವತಿಸ ಬೇಕಾಗಬಹುದು ಎಂಬ ಯೋಚನೆಯಿಂದ ಮೃತನ ಮಗ ಎಸ್ಕೇಪ್​ ಆಗಿರೋ ಜಿಗುಪ್ಸೆ ತರುವಂಥ ಘಟನೆ ನಗರದ KIMS ಆಸ್ಪತ್ರೆಯಲ್ಲಿ ನಡೆದಿದೆ.

ಚಾಮರಾಜಪೇಟೆಯ ನಿವಾಸಿಯಾಗಿದ್ದ 63 ವರ್ಷದ ಸೋಂಕಿತ ವೃದ್ಧ ತೀವ್ರ ಉಸಿರಾಟದ ಸಮಸ್ಯೆಯಿಂದ KIMS ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ, ತಂದೆ ಮೃತಪಟ್ಟು 22 ದಿನ ಕಳೆದರೂ ಆತನ ಮಗ ತಂದೆಯ ಅಂತ್ಯಸಂಸ್ಕಾರ ನೆರವೇರಿಸಲು ಮುಂದೆ ಬಂದಿಲ್ಲ. ಹಾಗಾಗಿ, ವೃದ್ಧನ ಮೃತದೇಹ KIMS ಆಸ್ಪತ್ರೆಯಲ್ಲಿಯೇ ಉಳಿದಿತ್ತು.

ಮೃತದೇಹದ ಹಸ್ತಾಂತರಕ್ಕೆ ಪುತ್ರನಿಗೆ ಆಸ್ಪತ್ರೆಯ ವೈದ್ಯರು ಕರೆ ಮಾಡಿದಾಗ ಬರುತ್ತೇನೆ ಎಂದವನು ಈವರೆಗೂ ಬಂದಿಲ್ಲ. ಜೊತೆಗೆ, ತಂದೆಯ ಚಿಕಿತ್ಸೆಗೆ ತಗಲಿದ 1.5 ಲಕ್ಷ ರೂಪಾಯಿ ಬಿಲ್ ಸಹ ಪಾವತಿಸಿಲ್ಲವಂತೆ. ಈ ಸಂಬಂಧ ಮಗನಿಗೆ ಪದೇಪದೆ ಆಸ್ಪತ್ರೆ ವೈದ್ಯರು ಕರೆ ಮಾಡಿದ ಹಿನ್ನೆಲೆಯಲ್ಲಿ ಆತ ವೈದ್ಯರ ಫೋನ್‌ ನಂಬರ್ ಬ್ಲಾಕ್‌ ಮಾಡಿಬಿಟ್ಟಿದಾನಂತೆ.

ಈ ಆಸಾಮಿ ಇನ್ನು ಸಿಗಲ್ಲ ಎಂದು ಅರಿತ ಆಸ್ಪತ್ರೆ ಸಿಬ್ಬಂದಿ 22 ದಿನಗಳ ಬಳಿಕ ತಾವೇ ಮೃತ ವೃದ್ಧನ ಅಂತ್ಯಕ್ರಿಯೆಯನ್ನು ಅನಾಥ ಶವದ ಹಾಗೆ ಜಮೀರ್ ಟೀಂನೊಂದಿಗೆ ನೆರವೇರಿಸಿದರು.

Published On - 3:24 pm, Sat, 22 August 20

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು