ನಂಜನಗೂಡು THO ಆತ್ಮಹತ್ಯೆ ಕೇಸ್: ಜಿ.ಪಂ CEO ವಿರುದ್ಧ FIR ದಾಖಲು
ಮೈಸೂರು: ಜಿಲ್ಲೆಯ ನಂಜನಗೂಡು THO ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ CEO ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ FIR ದಾಖಲಾಗಿದೆ. ಜಿಲ್ಲೆಯ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು IPC ಸೆಕ್ಷನ್ 306ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ದೂರು ದಾಖಲಿಸಲಾಗಿದೆ. ಡಾ.ನಾಗೇಂದ್ರ ತಂದೆ ರಾಮಕೃಷ್ಣ ದೂರು ನೀಡಿದ್ದಾರೆ. ತಮ್ಮ ಪುತ್ರನ ಮೇಲೆ ಒತ್ತಡವಿದ್ದ ಬಗ್ಗೆ ಆರೋಪಿಸಿದ್ದ ರಾಮಕೃಷ್ಣರ ದೂರಿನ ಮೇರೆಗೆ CEO ವಿರುದ್ಧ FIR ದಾಖಲಾಗಿದೆ. ಇನ್ನು ಜಿಲ್ಲಾ ಪಂಚಾಯಿತಿ CEO ಪ್ರಶಾಂತ್ […]

ಮೈಸೂರು: ಜಿಲ್ಲೆಯ ನಂಜನಗೂಡು THO ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ CEO ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ FIR ದಾಖಲಾಗಿದೆ.

ಜಿಲ್ಲೆಯ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು IPC ಸೆಕ್ಷನ್ 306ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ದೂರು ದಾಖಲಿಸಲಾಗಿದೆ. ಡಾ.ನಾಗೇಂದ್ರ ತಂದೆ ರಾಮಕೃಷ್ಣ ದೂರು ನೀಡಿದ್ದಾರೆ. ತಮ್ಮ ಪುತ್ರನ ಮೇಲೆ ಒತ್ತಡವಿದ್ದ ಬಗ್ಗೆ ಆರೋಪಿಸಿದ್ದ ರಾಮಕೃಷ್ಣರ ದೂರಿನ ಮೇರೆಗೆ CEO ವಿರುದ್ಧ FIR ದಾಖಲಾಗಿದೆ.
ಇನ್ನು ಜಿಲ್ಲಾ ಪಂಚಾಯಿತಿ CEO ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ FIR ದಾಖಲಾದ ಬೆನ್ನಲ್ಲೇ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. CEO ಪ್ರಶಾಂತ್‌ಗೆ ಸ್ಥಳ ನಿಗದಿ ಮಾಡದೆ ವರ್ಗಾವಣೆ ಮಾಡಲಾಗಿದ್ದು ಮೈಸೂರು ಜಿಲ್ಲಾಧಿಕಾರಿಗೆ ಜಿಲ್ಲಾ ಪಂಚಾಯಿತಿಯ ಹೆಚ್ಚುವರಿ ಉಸ್ತುವಾರಿ ನೀಡಲಾಗಿದೆ.
ಆದರೆ, ಜಿ.ಪಂ. CEO ವರ್ಗಾವಣೆಯಾದ್ರೂ ಮೈಸೂರು ವೈದ್ಯರು ಪ್ರತಿಭಟನೆ ಮುಂದುವರೆಸಿದ್ದಾರೆ. CEO ಪ್ರಶಾಂತ್ರನ್ನು ಅಮಾನತು ಮಾಡುವವರೆಗೂ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ. ಹಾಗಾಗಿ, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಬಳಿ ಧರಣಿ ಮುಂದುವರೆಸಿದ್ದಾರೆ.



