ಬೆಂಗಳೂರು: ಕರ್ನಾಟಕದ ಕಳೆದ 24 ಗಂಟೆಗಳಲ್ಲಿ ವರದಿಯಾಗಿರುವ ಕೊರೊನಾ ಸೋಂಕಿತರ (Coronavirus Infections in Karnataka) ಸಂಖ್ಯೆ ಹಲವು ತಿಂಗಳುಗಳ ನಂತರ 50 ಸಾವಿರ ದಾಟಿದೆ. ರಾಜ್ಯದಲ್ಲಿ ಒಟ್ಟು 50,210 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು 19 ಜನರು ಮೃತಪಟ್ಟಿದ್ದಾರೆ. 22,842 ಜನರು ಸೋಂಕುಗಳಿಂದ ಚೇತರಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 3,57,796 ಸಕ್ರಿಯ ಪ್ರಕರಣಗಳಿದ್ದು (Positive Case), ಕೊವಿಡ್ನಿಂದ (Covid 19) ಈವರೆಗೆ ಒಟ್ಟು 38,582 ಜನರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇ 22.77 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 35,17,682 ಜನರಲ್ಲಿ ಸೋಂಕು ದೃಢಪಟ್ಟಿದ್ದು, 31,21,274 ಜನರು ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಸಾಯುವವರ ಪ್ರಮಾಣ ಶೇ 0.03 ಇದೆ.
ಬೆಂಗಳೂರು ನಗರದಲ್ಲಿ ಒಂದೇ ದಿನ 26,299 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಎಂಟು ಜನರು ಸಾವನ್ನಪ್ಪಿದ್ದಾರೆ. 12,787 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 2,31,833 ಸಕ್ರಿಯ ಪ್ರಕರಣಗಳಿವೆ. ಈವರೆಗೆ 15,85,657 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 13,37,325 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಸೋಂಕಿನಿಂದ ಮೃತಪಟ್ಟಿವವರು ಒಟ್ಟು ಸಂಖ್ಯೆ 16,498.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 26,299, ಬಾಗಲಕೋಟೆ 331, ಬಳ್ಳಾರಿ 904, ಬೆಳಗಾವಿ 885, ಬೆಂಗಳೂರು ಗ್ರಾಮಾಂತರ 925, ಬೀದರ್ 368, ಚಾಮರಾಜನಗರ 664, ಚಿಕ್ಕಬಳ್ಳಾಪುರ 554, ಚಿಕ್ಕಮಗಳೂರು 144, ಚಿತ್ರದುರ್ಗ 246, ದಕ್ಷಿಣ ಕನ್ನಡ 770, ದಾವಣಗೆರೆ 495, ಧಾರವಾಡ 955, ಗದಗ 274, ಹಾಸನ 1922, ಹಾವೇರಿ 165, ಕಲಬುರ್ಗಿ 853, ಕೊಡಗು 1139, ಕೋಲಾರ 824, ಕೊಪ್ಪಳ 510, ಮಂಡ್ಯ 1455, ಮೈಸೂರು 4539, ರಾಯಚೂರು 410, ರಾಮನಗರ 199, ಶಿವಮೊಗ್ಗ 611, ತುಮಕೂರು 1963, ಉಡುಪಿ 947, ಉತ್ತರ ಕನ್ನಡ 641, ವಿಜಯಪುರ 249, ಯಾದಗಿರಿ 151.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ 8, ಶಿವಮೊಗ್ಗ, ತುಮಕೂರು ತಲಾ ಇಬ್ಬರು, ಬಳ್ಳಾರಿ, ಚಾಮರಾಜನಗರ, ದಕ್ಷಿಣ ಕನ್ನಡ, ಧಾರವಾಡ, ಮೈಸೂರು, ರಾಯಚೂರು ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Covid 19: ದೇಶದಲ್ಲಿ ತುಸು ಇಳಿಕೆ ಕಂಡ ಕೊರೊನಾ ಪ್ರಕರಣಗಳು, ಒಮಿಕ್ರಾನ್ ಕೇಸ್ಗಳಲ್ಲಿ ಏರಿಕೆ; ಪೂರ್ಣ ಮಾಹಿತಿ ಇಲ್ಲಿದೆ