ಬೆಂಗಳೂರು: ಪಾರ್ಕ್ನಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಪೋಟೋ ಮತ್ತು ವಿಡಿಯೋ ತೆಗೆಯುತ್ತಿದ್ದ ಆರೋಪಿ ಒಬ್ಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸನ್ನ ಬಂಧಿತ ಆರೋಪಿ ಆಗಿದ್ದಾನೆ. ಆರೋಪಿ ಜಯನಗರದ ಅಕ್ಕಮಹಾದೇವಿ ಪಾರ್ಕ್ನಲ್ಲಿ ವಾಕಿಂಗ್ ಮಾಡುವ ಮಹಿಳೆಯರ ವಿಡಿಯೋ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಹಿಂದೆ ಕೂಡ ಹೀಗೆ ಮಹಿಳೆಯರ ಪೊಟೋ ವಿಡಿಯೋ ತೆಗೆದಾಗ ಮಹಿಳೆಯರು ವಾರ್ನ್ ಮಾಡಿದ್ದರು. ಆದರೂ ಮತ್ತೆ ತನ್ನ ಚಾಳಿ ಮುಂದುವರೆಸಿ ವಿಡಿಯೋ ತೆಗೆಯುತ್ತಿದ್ದ ಪ್ರಸನ್ನನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಮತ್ತೆ ಮತ್ತೆ ವಿಡಿಯೋ, ಫೋಟೊ ತೆಗೆಯುತ್ತಿದ್ದ ವ್ಯಕ್ತಿಯನ್ನು ಹಿಡಿದು ಮೊಬೈಲ್ ತೆಗೆದುಕೊಂಡು ಮಹಿಳೆಯರು ಪರಿಶೀಲನೆ ನಡೆಸಿದ್ದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಮೊಬೈಲ್ನಲ್ಲಿ ಅಲ್ಲಿದ್ದ ಇಬ್ಬರು ಮಹಿಳೆಯರ ವಿಡಿಯೋ, ಮತ್ತು ಹಲವರ ವಿಡಿಯೋ ಮತ್ತು ಪೊಟೋ ಪತ್ತೆ ಆಗಿದೆ. ತಕ್ಷಣವೇ ಆರೋಪಿಯನ್ನು ಜಯನಗರ ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದ್ದಾರೆ. ಆರೋಪಿಯನ್ನ ಬಂಧಿಸಿರುವ ಜಯನಗರ ಪೊಲೀಸರು, ಐಪಿಸಿ ಸೆಕ್ಷನ್ 354 C ಮತ್ತು 354 D ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಚಿಕ್ಕೋಡಿ: ನಿಪ್ಪಾಣಿಯಲ್ಲಿ ಒರ್ವ ಯುವಕನ ಮರ್ಡರ್
ನಿಪ್ಪಾಣಿಯಲ್ಲಿ ಒರ್ವ ಯುವಕನ ಕೊಲೆ ಮಾಡಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ಅಭಿಷೇಕ ದತ್ತವಾಡೆ (22) ಎಂಬ ಯುವಕನನ್ನು ಕೊಲೆ ಮಾಡಲಾಗಿದೆ. ಅಭಿಷೇಕ ವಾಸಿಸುತ್ತಿದ್ದ ಮನೆಯಲ್ಲೇ ಕೃತ್ಯ ನಡೆದಿದೆ. ಆಂತರಿಕ ವೈಷಮ್ಯದಿಂದ ಅಭಿಷೇಕ ಮೇಲೆ ಹಲ್ಲೆ ಮಾಡಲಾಗಿದೆ. ಮೂಲತಃ ಕೊಲ್ಲಾಪುರ ನಿವಾಸಿಯಾಗಿದ್ದ ಅಭಿಷೇಕ್, ನಿಪ್ಪಾಣಿಯ ನಿರಾಳೆ ಗಲ್ಲಿಯಲ್ಲಿ ತಾಯಿಯೊಡನೆ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ. ಖಾಸಗಿ ಚಿತ್ರಮಂದಿರದಲ್ಲಿ ಕೆಲಸ ಮಾಡುತಿದ್ದ ಅಭಿಷೇಕ್ ಎಂಬಾತನನ್ನು ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆ ಸಂಬಂಧ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಅಂತರಿಕ ವೈಷಮ್ಯ, ಹಣದ ವ್ಯವಹಾರದ ಸಂದೇಹ ಉಂಟಾಗಿದೆ. ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರು ಆರೋಪಿಗಳು ಪರಾರಿ ಆಗಿದ್ದು ಪರಾರಿಯಾದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ನಿಪ್ಪಾಣಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹುಬ್ಬಳ್ಳಿ: ಎಸ್ಎಸ್ಎಲ್ಸಿ ಪರೀಕ್ಷಾ ಹಾಲ್ನಲ್ಲಿ ಜೇನು ಹುಳಗಳ ದಾಳಿ
ಎಸ್ಎಸ್ಎಲ್ಸಿ ಪರೀಕ್ಷಾ ಹಾಲ್ನಲ್ಲಿ ಜೇನು ಹುಳಗಳು ದಾಳಿ ಮಾಡಿದ ಘಟನೆ ನಡೆದಿದೆ. ಹುಬ್ಬಳ್ಳಿಯ ಕೇಶ್ವಪುರದ ಸೇಂಟ್ ಮೈಕಲ್ ಸ್ಕೂಲ್ನ ಪರೀಕ್ಷಾ ಕೇಂದ್ರದಲ್ಲಿ ಗಣಿತ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದ್ದಾರೆ. ಕಿಡಿಗೇಡಿಗಳಿಂದ ಜೇನು ಹುಟ್ಟಿಗೆ ಕಲ್ಲು ಎಸೆತ ಹಿನ್ನೆಲೆ, ಪರೀಕ್ಷಾ ಕೇಂದ್ರದಲ್ಲಿದ್ದ ಮಕ್ಕಳು ಸೇರಿದಂತೆ ಪೊಲೀಸ್ ಸಿಬ್ಬಂದಿಗೂ ಜೇನುಗುಳಗಳು ದಾಳಿ ಮಾಡಿವೆ. ವಿದ್ಯಾರ್ಥಿ ಇಮಾಮ್, ಪೋಷಕರಾದ ರಾಜೇಶ್ವರಿ ಕೆ, ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದು, ಧಿಡೀರ್ ದಾಳಿಯಿಂದ ಹಾಲ್ ನಲ್ಲಿದ್ದ ವಿದ್ಯಾರ್ಥಿಗಳೆಲ್ಲ ಚಿಲ್ಲಾಪಿಲ್ಲಿ ಆಗಿದ್ದಾರೆ. ಸದ್ಯ ಗಂಭೀರ ದಾಳಿಗೊಳಗಾದವರನ್ನು ಕಿಮ್ಸ್ ಗೆ ದಾಖಲು ಮಾಡಲಾಗಿದೆ.
ಉಡುಪಿ: ಮುಸ್ಲಿಂ ಗ್ರಾಹಕರು ಬೇಡವೆಂದು ಬಟ್ಟೆ ಮಳಿಗೆಯ ಪೋಸ್ಟ್ ವೈರಲ್; ದೂರು ದಾಖಲು
ಮುಸ್ಲಿಂ ಗ್ರಾಹಕರು ಬೇಡವೆಂದು ಬಟ್ಟೆ ಮಳಿಗೆಯ ಪೋಸ್ಟ್ ವೈರಲ್ ಆದ ಘಟನೆ ಉಡುಪಿಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪೋಸ್ಟ್ಗಳು ವೈರಲ್ ಆಗಿದೆ. ಅಂಗಡಿ ಹೆಸರು ಬಳಸಿ ಕಿಡಿಗೇಡಿಗಳಿಂದ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಈ ಬಗ್ಗೆ ದೂರು ನೀಡಲಾಗಿದೆ. ಉಡುಪಿಯ ಪ್ರಸಿದ್ಧ ಜಯಲಕ್ಷ್ಮೀ ಬಟ್ಟೆ ಮಳಿಗೆ ಹೆಸರು ಬಳಕೆ ಮಾಡಲಾಗಿದೆ. ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಠಾಣೆಗೆ ದೂರು ನೀಡಲಾಗಿದೆ. ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ಮಾಲೀಕರಿಂದ ದೂರು ನೀಡಲಾಗಿದೆ. ಉಡುಪಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಇದನ್ನೂ ಓದಿ: Crime News: ಪ್ರೇಮ ಪ್ರಕರಣ ಹಿನ್ನೆಲೆ; ಯುವತಿ ಮನೆಯವರಿಂದ ಪ್ರಿಯಕರನ ಅಣ್ಣನ ಕೊಲೆ
ಇದನ್ನೂ ಓದಿ: Crime News: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ; ಬಳಿಕ ಮನೆ ಬಳಿ ಶವ ಎಸೆದು ಪರಾರಿ