Crime News: ಪ್ರೇಮ ಪ್ರಕರಣ ಹಿನ್ನೆಲೆ; ಯುವತಿ ಮನೆಯವರಿಂದ ಪ್ರಿಯಕರನ ಅಣ್ಣನ ಕೊಲೆ

Crime News: ಪ್ರೇಮ ಪ್ರಕರಣ ಹಿನ್ನೆಲೆ; ಯುವತಿ ಮನೆಯವರಿಂದ ಪ್ರಿಯಕರನ ಅಣ್ಣನ ಕೊಲೆ
ಪ್ರಾತಿನಿಧಿಕ ಚಿತ್ರ

ಸೋನಾಕ್ಷಿ ತಂದೆ ಮಹದೇವನಾಯ್ಕ, ಸೋನಾಕ್ಷಿ ಸಹೋದರರಾದ ಕಿರಣ್, ಅಭಿಷೇಕ್‌ನಿಂದ ಕೃತ್ಯ ಎಸಗಲಾಗಿದೆ. ಚಿಕ್ಕರಾಜುಗೆ ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿ ಆಗಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

TV9kannada Web Team

| Edited By: ganapathi bhat

Apr 03, 2022 | 2:43 PM

ಚಾಮರಾಜನಗರ: ಪ್ರೇಮ ವಿಚಾರಕ್ಕೆ ಸಂಬಂಧಿಸಿ ಪ್ರಿಯಕರನ ಸಹೋದರನ ಕೊಲೆ ಮಾಡಿದ ದುರ್ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಹೊಸೂರು ಬಡಾವಣೆಯಲ್ಲಿ ನಡೆದಿದೆ. ಚಿಕ್ಕರಾಜು (30) ಎಂಬವರನ್ನು ಹತ್ಯೆ ಮಾಡಲಾಗಿದೆ. ಚಿಕ್ಕರಾಜು ತಮ್ಮ ವಿನೋದ್ ಸೋನಾಕ್ಷಿ ಎಂಬವರನ್ನು ಪ್ರೀತಿಸುತ್ತಿದ್ದ. ಇದೇ ವಿಚಾರಕ್ಕೆ ಗಲಾಟೆಯಾಗಿ ಚಿಕ್ಕರಾಜು ಕೊಲೆ ಮಾಡಲಾಗಿದೆ. ಸೋನಾಕ್ಷಿ ತಂದೆ ಮಹದೇವನಾಯ್ಕ, ಸೋನಾಕ್ಷಿ ಸಹೋದರರಾದ ಕಿರಣ್, ಅಭಿಷೇಕ್‌ನಿಂದ ಕೃತ್ಯ ಎಸಗಲಾಗಿದೆ. ಚಿಕ್ಕರಾಜುಗೆ ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿ ಆಗಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಂಗಳೂರು: ಸಿಬ್ಬಂದಿಗೆ ಹಲ್ಲೆ ಮಾಡಿ ಚಿಕಿತ್ಸೆ ಕೊಡಿಸಿ ಅಕ್ರಮವಾಗಿ ಕೂಡಿಹಾಕಿದ್ದ ಮೂವರ ಬಂಧನ

ಸಿಬ್ಬಂದಿಗೆ ಹಲ್ಲೆ ಮಾಡಿ ಚಿಕಿತ್ಸೆ ಕೊಡಿಸಿ ಅಕ್ರಮವಾಗಿ ಕೂಡಿಹಾಕಿದ್ದ ಮೂವರ ಬಂಧನ ಮಾಡಲಾಗಿದೆ. ಮಂಗಳೂರಿನ ಸಿಸಿಬಿ, ಮಹಿಳಾ ಠಾಣೆ, ಮುಲ್ಕಿ ಠಾಣಾ ಪೊಲೀಸರ ಕಾರ್ಯಾಚರಣೆ‌ಯಲ್ಲಿ ಮೂವರನ್ನು ಬಂಧಿಸಲಾಗಿದೆ. ಮೊಹಮ್ಮದ್ ಆಸೀಫ್ ಅಲಿಯಾಸ್ ಆಸೀಫ್, ಅಲ್ತಾಬ್, ಶಿವಲಿಂಗ ಬಂಧಿಸಲಾಗಿದೆ. ಶಿವಮೊಗ್ಗ ಮೂಲದ ವನಾಜಾ ಎಂಬಾ ಮಹಿಳೆ ಅಕ್ರಮ ಗೃಹಬಂಧನ ಮಾಡಲಾಗಿತ್ತು. ಮಾ.30 ರಂದು ಚೇರ್, ಬೆಲ್ಟ್ ನಿಂದ ಹಲ್ಲೆ ಮಾಡಿದ್ದ ಆರೋಪಿಗಳು. ಸಹ ಕೆಲಸಗಾರನ ಮೇಲೆ ಹಣ ದುರುಪಯೋಗದ ಆರೋಪ ಮಾಡುವಂತೆ ಒತ್ತಾಯ ಮಾಡಿದ್ದರು.

ಅಸೀಫ್ ಮಾಲಿಕತ್ವದ ಮೈಮೂನ ಫೌಂಡೇಶನ್ ನಲ್ಲಿ ವನಾಜಾ ಕೆಲಸ‌ ಮಾಡಿಕೊಂಡಿದ್ದರು. ಆರೋಪ ಮಾಡದೇ ಇದ್ದದ್ದಕ್ಕೆ ಅಮಾನವೀಯ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಹಡಿಯಿಂದ ಬಿದ್ದಿದ್ದಾಗಿ ಹೇಳಿಕೆ ಕೊಡಿಸಿದ್ದರು ಎಂದು ತಿಳಿದುಬಂದಿದೆ. ಜೀವ ಬೆದರಿಕೆ ಹಾಕಿ ಸುಳ್ಳು ಹೇಳಿಕೆ ನೀಡಿಸಿದ್ದ ಆರೋಪವೂ ಕೇಳಿಬಂದಿದೆ. ಬಳಿಕ ಅಲ್ಲಿಂದ ಮಂಗಳೂರಿನ ಕಚೇರಿಯಲ್ಲಿ ಆಕೆಯನ್ನು ಕೂಡಿ ಹಾಕಲಾಗಿದೆ. ಹುಷಾರಾಗುವವರೆಗೆ ಹೊರ ಕಾಣಿಸಿಕೊಳ್ಳದಂತೆ ಕೂಡಿಹಾಕಿದ್ದರು.

ಬೆಂಗಳೂರು: ಫ್ಯಾಕ್ಟರಿಯಲ್ಲಿ ಯಂತ್ರಕ್ಕೆ ಸಿಲುಕಿ ಯುವತಿ ಸಾವು

ಫ್ಯಾಕ್ಟರಿಯಲ್ಲಿ ಯಂತ್ರಕ್ಕೆ ಸಿಲುಕಿ ಯುವತಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನ ನಾಯಂಡಹಳ್ಳಿ ಬಳಿಯಿರುವ ಫ್ಯಾಕ್ಟರಿಯಲ್ಲಿ ನಡೆದಿದೆ. Z.S. ಪ್ಲ್ಯಾಸ್ಟಿಕ್ ಫ್ಯಾಕ್ಟರಿಯಲ್ಲಿ ಶಾಜೀಯಾ (28) ಸಾವನ್ನಪ್ಪಿದ್ದಾರೆ. ಫ್ಯಾಕ್ಟರಿ ಮಾಲೀಕನ ಬೇಜವಾಬ್ದಾರಿಯಿಂದ ದುರ್ಘಟನೆ ಸಂಭವಿಸಿದೆ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಫ್ಯಾಕ್ಟರಿ ಮಾಲೀಕ ಜೀಶಾಮ್ ವಿರುದ್ಧ FIR ದಾಖಲು ಮಾಡಲಾಗಿದೆ. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು: ರಾಜಧಾನಿಯಲ್ಲಿ ಹೆಚ್ಚಾಯ್ತು ರೋಡ್ ರಾಬರ್ಸ್ ಹಾವಳಿ

ರಾಜಧಾನಿಯಲ್ಲಿ ರೋಡ್ ರಾಬರ್ಸ್ ಹಾವಳಿ ಹೆಚ್ಚಾಗಿದೆ. ಒಬ್ಬಂಟಿಯಾಗಿ ಬೈಕ್​ಗಳಲ್ಲಿ ಮಧ್ಯರಾತ್ರಿ ಓಡಾಡುವರು ಎಚ್ಚರ ವಹಿಸಬೇಕಾಗಿದೆ. ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ರಾಬರಿ ಮಾಡುವವರು ಹೆಚ್ಚಿದ್ದಾರೆ. ಮಾರ್ಚ್ 25ನೇ ತಾರೀಖು ಮುಂಜಾನೆ 3 ಗಂಟೆ ಸಮಯದಲ್ಲಿ ನಡೆದಿರುವ ಇಂತಹದೇ ಘಟನೆ ಬೆಳಕಿಗೆ ಬಂದಿದೆ. ರಾಬರ್ಸ್ ಡೆಡ್ಲಿ ಅಟ್ಯಾಕ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಅಡ್ಡಗಟ್ಟಿದ ರಾಬರ್ಸ್​ಗೆ ಪ್ರತಿರೋಧ ಮಾಡಿದ ಯುವಕನಿಗೆ ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ದಮ್ಮಯ್ಯ ಅಂತ ಬೇಡಿಕೊಂಡು ಓಡಿದ್ರೂ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಲಾಗಿದೆ. ಮೊಬೈಲ್, ಹಣ ಕಿತ್ತುಕೊಂಡು ಹಲ್ಲೆ ಮಾಡಿ ಗ್ಯಾಂಗ್ ಎಸ್ಕೇಪ್ ಆಗಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಯಚೂರು: ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ

ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆದ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಯರಡೋಣ ಗ್ರಾಮದಲ್ಲಿ ನಡೆದಿದೆ. ಯುಗಾದಿ ಹಿನ್ನೆಲೆ ಬಣ್ಣದಾಟವಾಡುತ್ತಿದ್ದ ಒಂದು ಸಮುದಾಯದ ಜನರು ಡಿಜೆ ಹಾಡುಗಳ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಿದ್ದರು. ಆಗ ಮಸೀದಿ ಬಳಿ ಬರ್ತಿದ್ದಂತೆಯೇ ಮಾತಿನ ಚಕಮಕಿ ಜೋರಾಗಿದೆ. ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಸ್ಥಳಕ್ಕೆ ಲಿಂಗಸುಗೂರು ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರು: ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ ಹೋರಿ ಸಾವು

ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ ಹೋರಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ನಿಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿಂಗೇಗೌಡ ಎಂಬವರಿಗೆ ಸೇರಿದ ವಿಲನ್ ಎತ್ತು ಅನಾರೋಗ್ಯದಿಂದ ಬಳಲುತ್ತಿತ್ತು. ಪಶುವೈದ್ಯರು ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷ ತೋರಿದ್ದಾರೆಂದು ಆರೋಪ ಕೇಳಿಬಂದಿದೆ. ಮಲ್ಲೇನಹಳ್ಳಿಯ ವೈದ್ಯರು, ಸಿಬ್ಬಂದಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕ ಕಡೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಲನ್ ವಿಜಯಿಯಾಗಿತ್ತು. ವಿಲನ್ ಪರಾಕ್ರಮವನ್ನು ಎತ್ತಿನಗಾಡಿ ಓಡಿಸಿ ಖುದ್ದು ಸಿ.ಟಿ ರವಿ ಕೊಂಡಾಡಿದ್ದರು.

ಬೆಳಗಾವಿ: ಕೊಂಡ ಹಾಯುವಾಗ ಬಿದ್ದು 20ಕ್ಕೂ ಹೆಚ್ಚು ಮಂದಿಗೆ ಗಾಯ

ಇಲ್ಲಿನ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ದುರ್ಗವ್ವ ಜಾತ್ರೆಯಲ್ಲಿ ಕೊಂಡ ಹಾಯುವಾಗ ಬಿದ್ದು 20 ಕ್ಕೂ ಹೆಚ್ಚು ಭಕ್ತರಿಗೆ ಗಾಯವಾದ ಘಟನೆ ನಡೆದಿದೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Crime News: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ; ಬಳಿಕ ಮನೆ ಬಳಿ ಶವ ಎಸೆದು ಪರಾರಿ

ಇದನ್ನೂ ಓದಿ: Crime News: ತಮಿಳುನಾಡಿನ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಕಣಿವೆಗೆ ಉರುಳಿದ ಟ್ರಕ್; 7 ಜನ ಸಾವು, 14 ಮಂದಿಗೆ ಗಾಯ

Follow us on

Related Stories

Most Read Stories

Click on your DTH Provider to Add TV9 Kannada