‘ಕುಮಾರಸ್ವಾಮಿ ಬಗ್ಗೆ ಬಿಜೆಪಿಗೆ ಸಾಫ್ಟ್ ಕಾರ್ನರ್!’

|

Updated on: Jul 31, 2020 | 4:19 PM

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಗ್ಗೆ ಬಿಜೆಪಿ ನಾಯಕರು ಮೃದು ಧೋರಣೆ ಪ್ರದರ್ಶಿಸುತ್ತಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸುತ್ತಿದೆ. ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರು ಕುಮಾರಸ್ವಾಮಿ, ನಮ್ಮ ಪಕ್ಷವನ್ನು ಟೀಕಿಸುವುದನ್ನು ಇತ್ತೀಚಿಗೆ ಕಡಿಮೆ ಮಾಡಿದ್ದಾರೆ, ಅವರಿಗೆ ಬಿಜೆಪಿ ಪಕ್ಷದ ಬಗ್ಗೆ ಒಲವಿರುವಂತಿದೆ, ಅವರನ್ನು ಮತ್ತು ಅವರ ಸಂಗಡಿಗರನ್ನು ನಮ್ಮ ಪಕ್ಷಕ್ಕೆ ಆಹ್ವಾನಿಸುತ್ತೇನೆ ಎಂದು ಹೇಳಿದ ಬೆನ್ನಲ್ಲೇ ಪ್ರವಾಸೋದ್ಯಮ ಸಚಿವ ಸಿ ಟಿ ರವಿ, ಕುಮಾರಸ್ವಾಮಿ ನಮ್ಮ ವೈರಿಯೇನಲ್ಲ ಎಂದು ಹೇಳುವ ಮೂಲಕ […]

‘ಕುಮಾರಸ್ವಾಮಿ ಬಗ್ಗೆ ಬಿಜೆಪಿಗೆ ಸಾಫ್ಟ್ ಕಾರ್ನರ್!’
Follow us on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಗ್ಗೆ ಬಿಜೆಪಿ ನಾಯಕರು ಮೃದು ಧೋರಣೆ ಪ್ರದರ್ಶಿಸುತ್ತಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸುತ್ತಿದೆ.

ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರು ಕುಮಾರಸ್ವಾಮಿ, ನಮ್ಮ ಪಕ್ಷವನ್ನು ಟೀಕಿಸುವುದನ್ನು ಇತ್ತೀಚಿಗೆ ಕಡಿಮೆ ಮಾಡಿದ್ದಾರೆ, ಅವರಿಗೆ ಬಿಜೆಪಿ ಪಕ್ಷದ ಬಗ್ಗೆ ಒಲವಿರುವಂತಿದೆ, ಅವರನ್ನು ಮತ್ತು ಅವರ ಸಂಗಡಿಗರನ್ನು ನಮ್ಮ ಪಕ್ಷಕ್ಕೆ ಆಹ್ವಾನಿಸುತ್ತೇನೆ ಎಂದು ಹೇಳಿದ ಬೆನ್ನಲ್ಲೇ ಪ್ರವಾಸೋದ್ಯಮ ಸಚಿವ ಸಿ ಟಿ ರವಿ, ಕುಮಾರಸ್ವಾಮಿ ನಮ್ಮ ವೈರಿಯೇನಲ್ಲ ಎಂದು ಹೇಳುವ ಮೂಲಕ ಸೋಜಿಗ ಮೂಡಿಸಿದ್ದಾರೆ.

ಯೋಗೇಶ್ವರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿ, “ಯಾವ ಅರ್ಥದಲ್ಲಿ ಯೋಗೇಶ್ವರ್ ಹಾಗೆ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಪಕ್ಷದೆಡೆಗಿನ ನಿಷ್ಠೆಯನ್ನು ಪ್ರಶ್ನಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ. ಹೊಂದಾಣಿಕೆ ರಾಜಕೀಯ ಬಿಜೆಪಿಗೆ ಬೇಕಿಲ್ಲ ಹಾಗೂ ಚೂರಿ ಹಾಕುವುದಾದರೆ ನಾವು ಹಿಂದಿನಿಂದ ಹಾಕಲ್ಲ, ಎದುರುಗಡೆಯಿಂದ ಆಕ್ರಮಣ ಮಾಡುವ ಪ್ರವೃತ್ತಿ ನಮ್ಮದು,” ಎಂದರು.

ಕುಮಾರಸ್ವಾಮಿ ವಿಷಯವಾಗಿ ಮಾತನಾಡಿದ ರವಿ, “ಅವರು ಅಪಕ್ವ ರಾಜಕಾರಣಿಯೇನಲ್ಲ, ರಾಜಕಾರಣದಲ್ಲಿ ಸಾಕಷ್ಟು ಪಳಗಿದವರು. ಅವರ ಮಾತುಗಳಿಗೆ ತಕ್ಷಣವೇ ಪ್ರತಿಕ್ರಿಯಿಸುವುದು ತಪ್ಪಾಗುತ್ತದೆ. ರಾಜಕೀಯದಲ್ಲಿ ಕಾಲೆಳೆತ, ಟೀಕೆ, ವ್ಯಂಗ್ಯ ಮುಂತಾದವೆಲ್ಲಾ ಸಾಮಾನ್ಯ. ಹಾಗೆಯೇ, ಕುಮಾರಸ್ವಾಮಿ ಅವರೊಂದಿಗೆ ರಾಜಕೀಯ ವೈರತ್ವವಿದೆಯೇ ಹೊರತು ಅವರು ನಮ್ಮ ಶತ್ರುವೇನಲ್ಲ,” ಎಂದರು.

ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಸ್ವಾಗತಿಸಿದ ಸಚಿವರು, ದೇಶದ ಅಭಿವೃದ್ಧಿಗೆ ಹೊಸ ನೀತಿಯು ಅನುಕೂಲಕರವಾಗಿ ಪರಿಣಮಿಸಲಿದೆ ಎಂದರು.

ಆದರೆ, ವಿಷಯ ಅದಲ್ಲ. ಕುಮಾರಸ್ವಾಮಿ ಬಗ್ಗೆ ಬಜೆಪಿ ನಾಯಕರು ತೋರುತ್ತಿರುವ ಪ್ರೀತಿ ಮತ್ತು ತಳೆದಿರುವ ಮೃದು ಧೋರಣೆಗೆ ಸಂಬಂಧಪಟ್ಟಿದ್ದು. ಕುಮಾರಸ್ವಾಮಿ ಸಹ, ಬಿಜೆಪಿ ವಿರುದ್ಧ ಒಂದು ಮಾತನ್ನೂ ಆಡದೆ ಕೇವಲ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯನವರನ್ನು ಟೀಕಿಸುತ್ತಿರುವುದು ಜನರಲ್ಲಿ ನಿಜಕ್ಕೂ ಕೌತುಕ ಮೂಡಿಸಿದೆ.

Published On - 1:35 pm, Fri, 31 July 20