ಬೆಂಗಳೂರಿನಲ್ಲಿ ಡ್ಯಾನ್ಸ್ ಮಾಸ್ಟರ್​ನಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಮೇ 24ರಂದು ಕಾಡುಗೋಡಿಯಲ್ಲಿ ಓರ್ವ ಡ್ಯಾನ್ಸ್ ಮಾಸ್ಟರ್​ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಡ್ಯಾನ್ಸ್ ಕ್ಲಾಸ್ ಬಗ್ಗೆ ಮಾತನಾಡುವುದಾಗಿ ಪುಸಲಾಯಿಸಿ ಕಾರಿಗೆ ಹತ್ತಿಸಿಕೊಂಡು ಕಿರುಕುಳ ನೀಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಳು.

ಬೆಂಗಳೂರಿನಲ್ಲಿ ಡ್ಯಾನ್ಸ್ ಮಾಸ್ಟರ್​ನಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ
ಬಂಧಿತ ಡ್ಯಾನ್ಸ್ ಮಾಸ್ಟರ್​ ಭಾರತಿ ಕಣ್ಣನ್​

Updated on: May 29, 2025 | 8:51 AM

ಬೆಂಗಳೂರು, ಮೇ 29: ಡ್ಯಾನ್ಸ್ ಕ್ಲಾಸ್ ಬಗ್ಗೆ ಮಾತನಾಡುವುದಾಗಿ ಪುಸಲಾಯಿಸಿ ಕಾರ್​ಗೆ ಹತ್ತಿಸಿಕೊಂಡು ಡ್ಯಾನ್ಸ್ ಮಾಸ್ಟರ್​ನಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ (Sexual Harassment) ಆರೋಪ ಕೇಳಿಬಂದಿರುವಂತಹ ಘಟನೆ ಮೇ 24ರ ಬೆಳಗ್ಗೆ ಕಾಡುಗೋಡಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಡ್ಯಾನ್ಸ್ ಮಾಸ್ಟರ್ (Dance Master) ಭಾರತಿ ಕಣ್ಣನ್​​ (28)ನ್ನು ಬಂಧಿಸಿದ್ದು, ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ನಡೆದದ್ದೇನು?

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪ್ರಾಪ್ತೆ ಬಳಿ ಕಾರ್ ನಿಲ್ಲಿಸಿದ್ದ ಆರೋಪಿ, ನಾನು ಡ್ಯಾನ್ಸ್ ಮಾಸ್ಟರ್ ಅಂತ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಡ್ಯಾನ್ಸ್ ಕ್ಲಾಸ್ ಬಗ್ಗೆ ತಿಳಿಸುವುದಾಗಿ ಪುಸಲಾಯಿಸಿ ಕಾರಿಗೆ ಹತ್ತಿಸಿಕೊಂಡಿದ್ದಾನೆ.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು, ಮೈಸೂರು ಸೇರಿ 10 ರೈಲುಗಳಿಗೆ ಹೆಚ್ಚುವರಿ ಬೋಗಿ

ಇದನ್ನೂ ಓದಿ
ಬಿಎಂಟಿಸಿಯಿಂದ ದಿವ್ಯ ದರ್ಶನ: ಒಂದೇ ದಿನ ಬೆಂಗಳೂರಿನ 8 ದೇಗುಲಗಳಿಗೆ ಪ್ರವಾಸ
ಪ್ರಯಾಣಿಕರ ಗಮನಕ್ಕೆ: ಬೆಂಗಳೂರು ಸೇರಿ 10 ರೈಲುಗಳಿಗೆ ಹೆಚ್ಚುವರಿ ಬೋಗಿ
ಕನ್ನಡ ಉಗಮ ಹೇಗಾಯಿತು? ಭಾಷೆ, ಸಾಹಿತ್ಯ, ಲಿಪಿ ಸೃಷ್ಟಿಯ ಸಂಕ್ಷಿಪ್ತ ಹಿನ್ನೋಟ
ಮನೆ ಕೆಲಸ ಮಾಡುತ್ತಿದ್ದಾಕೆ ಜೊತೆ ಸರ್ಕಾರಿ ವೈದ್ಯ ಅಸಭ್ಯ ವರ್ತನೆ

ಅಪ್ರಾಪ್ತೆ ಕಾರಿನ ಒಳಗಡೆ ಕುಳಿತ್ತಿದ್ದು, ಕಾರ್ ಲಾಕ್ ಮಾಡಿ ಸ್ವಲ್ಪ ದೂರ ಹೋಗಿದ್ದಾನೆ. ಈ ವೇಳೆ ಕಾರ್​ನಲ್ಲೇ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ನಂತರ ಹತ್ತಿಸಿಕೊಂಡ ಸ್ಥಳಕ್ಕೆ ವಾಪಸ್ ಕರೆತಂದು ಬಿಟ್ಟಿದ್ದಾನೆ. ಈ ಘಟನೆ ಬಗ್ಗೆ ಅಪ್ರಾಪ್ತೆ ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರ ದೂರು ಆಧರಿಸಿ ಭಾರತಿ ಕಣ್ಣನ್​ನ್ನು ಪೊಲೀಸರು ಬಂಧಿಸಿದ್ದಾರೆ.

ಮಾರತ್ ಹಳ್ಳಿ ಬಳಿ ಯುವತಿಯ ಜೊತೆ ಪುಂಡನ ಅಸಭ್ಯ ವರ್ತನೆ

ಇನ್ನು ಇತ್ತೀಚೆಗೆ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉತ್ತರ ಭಾರತ ಮೂಲದ ಯುವತಿ ಇಕೋ ವರ್ಲ್ಡ್ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಹಿಂಭಾಗಕ್ಕೆ ಹೊಡೆದು ಪುಂಡನೋರ್ವ ವಿಕೃತಿ ಮೆರೆದಿದ್ದ. ರಾತ್ರಿ 11.30 ರ ವೇಳೆಗೆ ಕೆಲಸ ಮುಗಿಸಿಕೊಂಡು ಯುವತಿ ಇಕೋ ವರ್ಲ್ಡ್ ಗೇಟ್ ಮುಂಭಾಗ ಹೋಗುತ್ತಿದ್ದರು.

ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಸ್ಪೀಡ್ ಆಗಿ ಬೈಕ್​ನಲ್ಲಿ ಬಂದ ಪುಂಡ ಯುವತಿಯ ಹಿಂಭಾಗಕ್ಕೆ ಜೋರಾಗಿ ಹೊಡೆದಿದ್ದ. ಆ ಬಳಿಕ ಮತ್ತೆ ಮುಂದೆ ಹೋಗಿ ಪುನ: ಯುವತಿ ಬಳಿ ಬಂದು ಮತ್ತೊಮ್ಮೆ ಹಿಂಭಾಗಕ್ಕೆ ಹೊಡೆದು ವಿಕೃತಿ ಮೆರೆದಿದ್ದ.

ಇದನ್ನೂ ಓದಿ: ಮನೆ ಕೆಲಸ ಮಾಡುತ್ತಿದ್ದಾಕೆ ಜೊತೆ ಸರ್ಕಾರಿ ವೈದ್ಯ ಅಸಭ್ಯ ವರ್ತನೆ: ಅಮಾನತು ಮಾಡುವಂತೆ ಧರಣಿ

ಇನ್ನು ಸಂತ್ರಸ್ಥ ಯುವತಿ ಮಾರತ್ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆ ಕಾರ್ಯ ನಡೆಸಿದ್ದು, ಸುಳಿವು ಸಹ ಸಿಕ್ಕಿಲ್ಲ. ಆರೋಪಿ ವೇಗವಾಗಿ ಬೈಕ್​ನಲ್ಲಿ ಹೋಗಿದ್ದು ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಚಾಲೆಂಜ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:49 am, Thu, 29 May 25