ಬಿಎಂಟಿಸಿಯಿಂದ ‘ದಿವ್ಯ ದರ್ಶನ’: ಒಂದೇ ದಿನದಲ್ಲಿ ಬೆಂಗಳೂರಿನ 8 ದೇಗುಲಗಳಿಗೆ ಪ್ರವಾಸದ ಅವಕಾಶ
Divya Darshana package tour: ಬೆಂಗಳೂರಿನಲ್ಲಿರುವ ಪ್ರಸಿದ್ಧ ದೇವಾಲಯಗಳ ದರ್ಶನಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾರಾಂತ್ಯದ ಟೂರ್ ಪ್ಯಾಕೇಜ್ ಆರಂಭಿಸಿದೆ. ಬಿಎಂಟಿಸಿಯ ನೂತನ ‘ದಿವ್ಯ ದರ್ಶನ’ ಯೋಜನೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಚಾಲನೆ ನೀಡಿದರು. ಈ ಯೋಜನೆಯಡಿ ಯಾವೆಲ್ಲ ದೇಗುಲಗಳಿಗೆ ಕರೆದೊಯ್ಯಲಾಗುತ್ತದೆ? ಟಿಕೆಟ್ ದರ ಎಷ್ಟು? ಯಾವೆಲ್ಲ ಸಮಯದಲ್ಲಿ ಸೇವೆ ಲಭ್ಯ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಮೇ 29: ಕರ್ನಾಟಕ ರಾಜಧಾನಿ ಬೆಂಗಳೂರಿನ ಪ್ರಸಿದ್ದ ದೇವಾಲಯಗಳ ದರ್ಶನಕ್ಕಾಗಿ ಸಾರ್ವಜನಿಕರಿಗೆ ಬಿಎಂಟಿಸಿ (BMTC) ಹೊಸ ವಿಕೇಂಡ್ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ‘ದಿವ್ಯ ದರ್ಶನ’ (Divya Darshana) ಹೆಸರಿನಲ್ಲಿ ಎಸಿ ಬಸ್ ಮೂಲಕ ಒಂದೇ ದಿನ ಬೆಂಗಳೂರಿನ 8 ಪ್ರಸಿದ್ಧ ದೇಗುಲಗಳ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ದೇವಾಲಯಗಳ ವೀಕ್ಷಣೆಯ ‘ಒನ್ ಡೇ ಟೆಂಪಲ್ ಟೂರ್’ ಯೋಜನೆಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಬುಧವಾರ ಚಾಲನೆ ನೀಡಿದ್ದಾರೆ.
ಬಿಎಂಟಿಸಿ ‘ದಿವ್ಯ ದರ್ಶನ’ದಲ್ಲಿ ಯಾವೆಲ್ಲ ದೇಗುಲ?
- ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇಗುಲ
- ಆರ್ ಆರ್ ನಗರದಲ್ಲಿರುವ ರಾಜರಾಜೇಶ್ವರಿ ದೇವಸ್ಥಾನ
- ಆರ್.ಆರ್.ನಗರದಲ್ಲಿರುವ ಶೃಂಗಗಿರಿ ಷಣ್ಮುಖ ದೇವಾಸ್ಥಾನ
- ಆರ್.ಆರ್.ನಗರದಲ್ಲಿರುವ ಕರುಮಾರಿ ಅಮ್ಮ ದೇವಾಲಯ
- ಉತ್ತರಹಳ್ಳಿ ಬಳಿಯ ಓಂಕಾರ ಹೀಲ್ಸ್
- ಇಸ್ಕಾನ್ ದೇವಸ್ಥಾನ (ವಸಂತಪುರ) ವೈಕುಂಠ
- ಕನಕಪುರ ರಸ್ತೆಯಲ್ಲಿ ಆರ್ಟ್ ಆಫ್ ಲೀವಿಂಗ್
- ಬನಶಂಕರಿಯಲ್ಲಿನ ಬನಶಂಕರಿ ದೇವಾಲಯ
ಬಿಎಂಟಿಸಿ ಟ್ವೀಟ್ ಮಾಹಿತಿ
🚍 On May 28, 2025, Hon’ble Minister Sri Ramalinga Reddy inaugurated a new route under the Divya Darshana package tour. The event was attended by senior officials from @BMTC_BENGALURU & @TransportDeptGoK including Dr. N. V. Prasad, Sri Ramachandran R., & Sri Abdul Ahad. pic.twitter.com/4xOY9h9dN2
ಇದನ್ನೂ ಓದಿ— BMTC (@BMTC_BENGALURU) May 28, 2025
ಯಾವಗೆಲ್ಲ ದಿವ್ಯ ದರ್ಶನ ಟೆಂಪಲ್ ಟೂರ್?
ಪ್ರತಿ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಈ ಟೂರ್ ಪ್ಯಾಕೇಜ್ ಲಭ್ಯವಿರಲಿದೆ. ಅಲ್ಲದೆ, ಪೂರ್ತಿ ಸಂಖ್ಯೆಯ ಬುಕಿಂಗ್ ಆದರೆ ವಾರದ ಇತರ ದಿನಗಳಲ್ಲಿಯೂ ಸೇವೆ ಲಭ್ಯವಿರಲಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
ದಿವ್ಯ ದರ್ಶನ ಸಮಯ
ಬೆಳಗ್ಗೆ 8-30ಕ್ಕೆ ಮೆಜೆಸ್ಟಿಕ್ನಿಂದ ಹೊರಟು ಸಂಜೆ 5-30 ರ ವರೆಗೆ ಎಸಿ ಬಸ್ ನಲ್ಲಿ 8 ಕಡೆ ಕರೆದೊಯ್ಯಲಾಗುತ್ತದೆ. ಮತ್ತೆ ಮೆಜೆಸ್ಟಿಕ್ಗೆ ಬಸ್ ವಾಪಸ್ಕರೆದುಕೊಂಡು ಬಂದು ಬಿಡಲಾಗುತ್ತದೆ.
ದಿವ್ಯ ದರ್ಶನ ಟಿಕೆಟ್ ದರ ಎಷ್ಟು?
ದಿವ್ಯ ದರ್ಶನ ಟೆಂಪರ್ ಟೂರ್ ಪ್ಯಾಕೇಜ್ಗೆ ವಯಸ್ಕರಿಗೆ 450 ರೂ., ಮಕ್ಕಳಿಗೆ 350 ರೂ. ದರ ನಿಗದಿ ಮಾಡಲಾಗಿದೆ.
ದಿವ್ಯ ದರ್ಶನ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?
ಕೆಎಸ್ಆರ್ಟಿಸಿ ಅಧಿಕೃತ ವೆಬ್ಸೈಟ್ ksrtc.in ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಬಿಎಂಟಿಸಿಯ ಸಂಪರ್ಕ ಸಂಖ್ಯೆ 080-22483777 ಅಥವಾ 7760991170 ಗೆ ಕರೆ ಮಾಡುವ ಮೂಲಕವೂ ಟಿಕೆಟ್ ಕಾಯ್ದಿರಿಸಬಹುದಾಗಿದೆ.








