ದೀಪಾವಳಿಗೆ ಬೆಂಗಳೂರಿನಲ್ಲಿ ಅಧಿಕ ಪಟಾಕಿ ಸಿಡಿತ: ವಾಯು ಮಾಲಿನ್ಯ ಏರಿಕೆ
ದೀಪಾವಳಿ ಹಬ್ಬದ ಎರಡನೇ ದಿನ ವಾಯುಮಾಲಿನ್ಯ ಡಬಲ್ ಆಗಿದೆ. ಹಸಿರು ಪಟಾಕಿಯ ಬಗ್ಗೆ ಹೆಚ್ಚು ಒತ್ತು ನೀಡಿದರೂ ಸಿಲಿಕಾನ್ ಸಿಟಿಯಲ್ಲಿ ವಾಯುಗುಣಮಟ್ಟ ಸೂಚ್ಯಂಕ ಗಂಭೀರ ಸ್ಥಿತಿಗೆ ಹೋಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು ನ.14: ದೀಪಾವಳಿ (Deepavali) ಹಬ್ಬ ಪ್ರಯುಕ್ತ ರಾಜಧಾನಿ ಜನರು ಭರ್ಜರಿಯಾಗಿ ಪಟಾಕಿ ಸಿಡಿಸಿದ ಪರಿಣಾಮ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗಿದೆ. ದೀಪಾವಳಿ ಹಬ್ಬದ ಎರಡನೇ ದಿನ ವಾಯುಮಾಲಿನ್ಯ ಡಬಲ್ ಆಗಿದೆ. ಹಸಿರು ಪಟಾಕಿಯ ಬಗ್ಗೆ ಹೆಚ್ಚು ಒತ್ತು ನೀಡಿದರೂ ಸಿಲಿಕಾನ್ ಸಿಟಿಯಲ್ಲಿ (Bengaluru) ವಾಯುಗುಣಮಟ್ಟ ಸೂಚ್ಯಂಕ ಗಂಭೀರ ಸ್ಥಿತಿಗೆ ಹೋಗಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ವಾಯು ಮಾಲಿನ್ಯದಿಂದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀಳಲಿದೆ. ಉಸಿರಾಟದ ಸಮಸ್ಯೆ, ಅಸ್ತಮ, ಕೆಮ್ಮು ರೋಗಗಳಿಂದ ಬಳಲುತ್ತಿರುವವರಿಗೆ ಮಾಲಿನ್ಯ ವಿಷವಾಗಬಹುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.
ಸದ್ಯ ಬೆಂಗಳೂರಿನ ವಾಯು ಗುಣಮಟ್ಟ (ಎಕ್ಯೂಐ) 100 ರ ಗಡಿ ದಾಟಿದೆ. ಹಾಗಾದರೆ ನಗರದ ಯಾವ ಯಾವ ಪ್ರದೇಶದಲ್ಲಿ ಎಷ್ಟು ಹೆಚ್ಚಳವಾಗಿದೆ? ಇಲ್ಲಿದೆ ಅಂಕಿ ಅಂಶ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪಟಾಕಿ ಅವಘಡ, ದೀಪಾವಳಿಯ 2ನೇ ದಿನ ಗಾಯಗೊಂಡವರ ಸಂಖ್ಯೆ 43ಕ್ಕೆ ಏರಿಕೆ
- ಹೆಬ್ಬಾಳದಲ್ಲಿ ಸಾಮಾನ್ಯ ದಿನಗಳಲ್ಲಿ 75 ರಷ್ಟು ಮಾಲಿನ್ಯ ಇರುತ್ತಿತ್ತು. ಹಬ್ಬದ ಬಳಿಕ 176 ಅನ್ನು ದಾಟಿದೆ.
- ಜಯನಗರದಲ್ಲಿ 105 ರಿಂದ 282ಕ್ಕೆ ಏರಿಕೆಯಾಗಿದೆ.
- ನಿಮ್ಯಾನ್ಸ್ ಆಸ್ಪತ್ರೆ ಬಳಿ 51 ರಿಂದ 179ಕ್ಕೆ ಜಾಸ್ತಿಯಾಗಿದೆ.
- ಸಿಲ್ಕ್ ಬೋರ್ಡ್ನಲ್ಲಿ 68 ರಿಂದ 175ಕ್ಕೆ ಏರಿಕೆಯಾಗಿದೆ.
- ಮೆಜೆಸ್ಟಿಕ್ನಲ್ಲಿ 67 ರಿಂದ 101ಕ್ಕೆ ಏರಿಕೆಯಾಗಿದೆ.
- ಬಸವೇಶ್ವರ ನಗರದಲ್ಲಿ 39 ರಿಂದ 82ಕ್ಕೆ ಜಾಸ್ತಿಯಾಗಿದೆ.
- ಜಿಗಣಿಯಲ್ಲಿ 80 ರಿಂದ 128ಕ್ಕೆ ಏರಿಕೆಯಾಗಿದೆ.
- ಕಸ್ತೂರಿನಗರದಲ್ಲಿ 57 ರಿಂದ 77ಕ್ಕೆ ಏರಿಕೆಯಾಗಿದೆ.
- ಪೀಣ್ಯದಲ್ಲಿ 80 ರಿಂದ 108ಕ್ಕೆ ತಲುಪಿದೆ.
- ಮೈಲಸಂದ್ರದಲ್ಲಿ 78 ರಿಂದ 187 ಕ್ಕೆ ಏರಿಕೆಯಾಗಿದೆ.
ಈ ಕಾರಣದಿಂದಾ ಗಾಳಿಯ ಗುಣಮಟ್ಟ ಕುಸಿದಿದ್ದು, ಮಕ್ಕಳು ಹಾಗೂ ವಯಸ್ಕರು ಎಚ್ಚರಿಕೆಯಿಂದ ಇರಬೇಕಿದೆ. ಕೆಆರ್ಪುರಂನಲ್ಲೂ ಮಾಲಿನ್ಯ ಹೆಚ್ಚಳವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ