ಬೆಂಗಳೂರು, (ನವೆಂಬರ್ 01): ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಎಲ್ಲೆಡೆ ಪಟಾಕಿ ಸದ್ದು ಜೋರಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ನಿನ್ನೆ(ಅಕ್ಟೋಬರ್ 31) ರಾತ್ರಿ ಇಡೀ ಪಟಾಕಿಯದ್ದೇ ಹೊಗೆ ಹಾಗೂ ಶಬ್ಧದ್ದೇ ಸದ್ದು. ಹೀಗಾಗಿ ಒಂದೇ ದಿನದಲ್ಲಿ ಸಿಲಿಕಾನ್ ಸಿಟಿಯ ಗಾಳಿಯ ಗುಣಮಟ್ಟದಲ್ಲಿ ಕುಸಿತಕಂಡಿದೆ. ನಿಯಮಗಳನ್ನು ಗಾಳಿಗೆ ಪಟಾಕಿ ಸಿಡಿಸಿದ ಪರಿಣಾಮ ಗಾಳಿಯ ಗುಣಮಟ್ಟ ಸೂಚ್ಯಂಕ 100ರ ಗಡಿದಾಟಿದೆ. ಕಳೆದ ಒಂದು ತಿಂಗಳಿಂದ ಕಡಿಮೆ ಮಾಲಿನ್ಯ ಇತ್ತು. ಆದ್ರೆ, ದೀಪಾವಳಿ ಹಬ್ಬ ಹಿನ್ನೆಲೆ ಪಟಾಕಿಯ ಸದ್ದಿಗೆ ನಗರದಲ್ಲಿ ಮಾಲಿನ್ಯ ಹೆಚ್ಚಾಗಿದೆ.
ದೀಪಾವಳಿ ಹಬ್ಬಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ಪಟಾಕಿ ಮಾರುವುದಕ್ಕೆ ಮಾತ್ರ ಅನುಮತಿ ನೀಡಿತ್ತು. ಇನ್ನು ಸರ್ಕಾರವೂ ಸಹ ಹಸಿರು ಪಟಾಕಿ ಮಾಡಬೇಕು. ಅಲ್ಲದೇ ಇದೇ ಸಮಯದಲ್ಲಿ ಪಟಾಕಿ ಸಿಡಿಸಬೇಕೆಂದು ಸಮಯ ನಿಗದಿ ಮಾಡಿತ್ತು. ಆದ್ರೆ, ಜನ ಕೇಳಬೇಕಲ್ಲ. ವರ್ಷಕ್ಕೆ ಒಂದೇ ದಿನ ಬರುವ ದೊಡ್ಡ ಹಬ್ಬ ದೀಪಾವಳಿ. ಅಂಗಡಿ ಮುಂಗಟ್ಟು ಪೂಜೆ ಮಾಡಿ ಭರ್ಜರಿ ಪಟಾಕಿ ಸಿಡಿಸಿ ಎಂಜಾಯ್ ಮಾಡಿದ್ದಾರೆ. ಹೀಗಾಗಿ ಮಾಲಿನ್ಯ ಹೆಚ್ಚಳವಾಗಿದೆ.
ಇದನ್ನೂ ಓದಿ: ಕೊಪ್ಪಳ: ಎಗ್ ರೈಸ್, ಆಮ್ಲೆಟ್ ತಿನ್ನುವ ಮುನ್ನ ಎಚ್ಚರ
ಸದ್ಯ ಬೆಂಗಳೂರಿನ ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಇದೆ ಎಂದು ನೋಡುವುದಾದರೆ, ಬಿಟಿಎಂ ಲೇಔಟ್ – ಕಳೆದ ವಾರ 48 AQ ಇತ್ತು. ಈಗ 143 Aqಗೆ ಏರಿಕೆಯಾಗಿದೆ.
ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Fri, 1 November 24