ದೀಪಾವಳಿಗೆ ಕೇಂದ್ರ ಸರ್ಕಾರದ ಉಡುಗೊರೆ; ಬೆಂಗಳೂರಿನಲ್ಲಿ 34 ರೂ.ಗೆ ಅಕ್ಕಿ ಮಾರಾಟ ಆರಂಭ

ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮಧ್ಯಮ, ಬಡ ವರ್ಗದ ಜನರಿಗೆ ದೀಪಾವಳಿಯ ಹಿನ್ನೆಲೆಯಲ್ಲಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಭಾರತ್ ಉತ್ಪನ್ನಗಳ ಮಾರಾಟವನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಈ ಮೂಲಕ ಜನರ ಕೈಗೆಟುಕುವ ದರದಲ್ಲಿ ಅಕ್ಕಿ, ಬೇಳೆಕಾಳುಗಳನ್ನು ಮಾರಾಟ ಮಾಡಲಾಗುತ್ತಿದೆ.

ದೀಪಾವಳಿಗೆ ಕೇಂದ್ರ ಸರ್ಕಾರದ ಉಡುಗೊರೆ; ಬೆಂಗಳೂರಿನಲ್ಲಿ 34 ರೂ.ಗೆ ಅಕ್ಕಿ ಮಾರಾಟ ಆರಂಭ
ಅಕ್ಕಿ
Follow us
ಸುಷ್ಮಾ ಚಕ್ರೆ
|

Updated on:Nov 01, 2024 | 2:28 PM

ಬೆಂಗಳೂರು: ಬಡ ಮತ್ತು ಮಧ್ಯಮ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಂಆರ್‌ಪಿ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಡಿಮೆ ಬೆಲೆಯಲ್ಲಿ ಭಾರತ್ ಉತ್ಪನ್ನಗಳಾದ ಅಕ್ಕಿ, ಬೇಳೆ ಕಾಳುಗಳ ಪೂರೈಕೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಇದೀಗ ಬೆಂಗಳೂರಿನಲ್ಲಿ ಈ ಉತ್ಪನ್ನಗಳ ಮಾರಾಟ ಮತ್ತೆ ಶುರುವಾಗಿದೆ. ಈ ಮೂಲಕ ದೀಪಾವಳಿಗೆ ಬೆಂಗಳೂರಿಗರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ.

ಭಾರತ್ ಉತ್ಪನ್ನಗಳ ಹಂತ 2ರಲ್ಲಿ ಬೆಂಗಳೂರಿನಲ್ಲಿ ಈ ಉತ್ಪನ್ನಗಳು ಕಡಿಮೆ ದರದಲ್ಲಿ ಸಿಗುವಂತೆ ಮಾಡಲಾಗಿದೆ. ಕೇಂದ್ರ ಗ್ರಾಹಕ ವ್ಯವಹಾರ ಮತ್ತು ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದಿಂದ ಈ ಯೋಜನೆಯಡಿ ಬೆಂಗಳೂರಿನಲ್ಲಿ 34 ರೂ.ಗೆ ಅಕ್ಕಿ, 30 ರೂ.ಗೆ ಗೋಧಿ ಹಿಟ್ಟು, 70 ರೂ.ಗೆ ಕಡಲೆಬೇಳೆ, 107 ರೂ.ಗೆ ಹೆಸರುಬೇಳೆ ಲಭ್ಯವಾಗಲಿದೆ. ಮಾರುಕಟ್ಟೆಯಲ್ಲಿ ಅಕ್ಕಿ 55-60 ರೂ, ಗೋಧಿ 45-50 ರೂ, ಕಡಲೆಬೇಳೆ 90-100 ರೂ, ಹೆಸರುಬೇಳೆ 120-130 ರೂ.ಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಗಿಫ್ಟ್; ಚಾಮರಾಜನಗರದ ನಾಗಮಲೆಗೆ ಉಚಿತ ಪ್ರವೇಶಕ್ಕೆ ಅನುಮತಿ

ದಿನೇ ದಿನೇ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನಸಾಮಾನ್ಯರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದೆ. ದೀಪಾವಳಿ ಹಬ್ಬದ ಅಂಗವಾಗಿ ಎರಡನೇ ಹಂತದ ಭಾರತ್ ಬ್ರಾಂಡ್ ಯೋಜನೆಯನ್ನು ಇಂದಿನಿಂದ (ಅಕ್ಟೋಬರ್ 23)ರಿಂದ ಪ್ರಾರಂಭಿಸಿದೆ. ಈಗ ಬೆಂಗಳೂರಿನಲ್ಲಿ ಈ ಯೋಜನೆಯ ಉತ್ಪನ್ನಗಳು ಲಭ್ಯ ಇವೆ.

ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಭಾರತ್ ಅಕ್ಕಿ, ಬೇಳೆ ಕಾಳುಗಳನ್ನು ವಾಹನಗಳ ಮೂಲಕ ವಿತರಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿರುವ ಪ್ರಲ್ಹಾದ್ ಜೋಶಿ ಅವರು ಆಹಾರ ಧಾನ್ಯ ಪೂರೈಕೆ ವಾಹನಕ್ಕೆ ನವದೆಹಲಿಯ ಕೃಷಿ ಭವನದಲ್ಲಿ ಚಾಲನೆ ನೀಡಿದ್ದರು.

ಚುನಾವಣೆಗೂ ಮೊದಲು ಕರ್ನಾಟಕದ ಹಲವೆಡೆ ಭಾರತ್ ಉತ್ಪನ್ನಗಳ ಮಾರಾಟವಾಗುತ್ತಿತ್ತು. ಆದರೆ, ಚುನಾವಣೆಯ ಬಳಿಕ ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆ ವೇಳೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈ ಯೋಜನೆ ಕೇಂದ್ರ ಸರ್ಕಾರದ ಕಣ್ಣೊರೆಸುವ ತಂತ್ರ, ಈ ಯೋಜನೆ ಮತ್ತೆ ಪುನರಾರಂಭ ಆಗುವುದಿಲ್ಲ ಎಂದು ಟೀಕಾಪ್ರಹಾರ ನಡೆಸಿದ್ದರು. ಇದೀಗ ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆ ಬೆಂಗಳೂರಿನಲ್ಲಿ ಮತ್ತೆ ಆರಂಭವಾಗಿದೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:06 pm, Fri, 1 November 24