ಬೆಂಗಳೂರು ನ.13: ಪಟಾಕಿ (Firecrackers) ಸಿಡಿದು ರವಿವಾರ ಒಂದೇ ದಿನ ಮಕ್ಕಳು ಸೇರಿದಂತೆ 26 ಜನರು ಗಾಯಗೊಂಡಿದ್ದಾರೆ. ಬೆಂಗಳೂರಿನ (Bengaluru) ನಾರಾಯಣ ನೇತ್ರಾಲಯದಲ್ಲಿ 22 ಜನರು, ಮಿಂಟೋ ಆಸ್ಪತ್ರೆಯಲ್ಲಿ ನಾಲ್ವರು ಚಿಕ್ಸಿತ್ಸೆ ಪಡೆಯುತ್ತಿದ್ದಾರೆ. 22 ಜನರಲ್ಲಿ 10 ಜನರಿಗೆ ಗಂಭೀರ ಗಾಯಗಳಾಗಿದ್ದು, 12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಾರಾಯಣ ನೇತ್ರಾಲಯ ಮುಖ್ಯಸ್ಥ ರೋಹಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಇನ್ನು ಮಿಂಟೋ ಆಸ್ಪತ್ರೆಗೆ ದಾಖಲಾದ ನಾಲ್ವರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಿಂಟೋ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ರಾತ್ರಿ 8 ಗಂಟೆಯ ತನಕ ಯಾವುದೇ ಪ್ರಕರಣ ದಾಖಲಾಗಿಲ್ಲ. ರಾತ್ರಿ 8 ಗಂಟೆಯ ನಂತರ ನಾಲ್ಕು ಕೇಸ್ ಬಂದವು. ಕಣ್ಣಿನ ಗಾಯಗೊಂಡು ರವಿವಾರದಿಂದ 7 ಜನ ಆಸ್ಪತ್ರೆಗೆ ಬಂದಿದ್ದು, ಇದರಲ್ಲಿ ನಾಲ್ವರು ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಈ ನಾಲ್ಕು ಪ್ರಕರಣದಲ್ಲಿ ಎರಡು ಗಂಭೀರವಾಗಿವೆ ಮಿಂಟೋ ಆಸ್ಪತ್ರೆಯ ನಿರ್ದೇಶಕ ಡಾ.ನಾಗರಾಜು ಹೇಳಿದ್ದಾರೆ
ಮೊದಲನೇ ಪ್ರಕರಣ: ರಾಮಮೂರ್ತಿ ನಗರದ 3.5 ವರ್ಷದ ಮಗು ಸುರು ಸುರು ಬತ್ತಿ ಹಚ್ಚುವಾಗ ಕಣ್ಣಿಗೆ ಮೈನರ್ ಇಂಜುರಿ ಆಗಿದೆ.
ಎರಡನೇ ಪ್ರಕರಣ: ಶ್ರೀರಾಂಪುರದ 18 ವರ್ಷದ ಯುವಕ ರಾತ್ರಿ ನಡೆದುಕೊಂಡು ಹೋಗುವಾಗ ಪಟಾಕಿ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಐಬಾಲ್ಗೆ ಗಂಭೀರ ಗಾಯವಾಗಿದ್ದು, ಒಳಗಡೆ ರಕ್ತ ಹೆಪ್ಪು ಗಟ್ಟಿದೆ. ಆಪರೇಷಮ್ಗೆ ತಯಾರಿ ನಡೆಯುತ್ತಿದ್ದು, ಒಂದೇ ಆಪರೇಷನ್ನಿಂದ ಸರಿ ಹೋಗ್ತಾನೆಂದು ಹೇಳಲು ಆಗುವುದಿಲ್ಲ.
ಮೂರನೇ ಪ್ರಕರಣ: ಬನ್ನೇರುಘಟ್ಟ 37 ವರ್ಷದ ವ್ಯಕ್ತಿ ನಡೆದುಕೊಂಡು ಹೋಗುವಾಗ ಲಕ್ಷ್ಮೀ ಪಟಾಕಿ ಸಿಡಿದು ಗಾಯಗೊಂಡಿದ್ದಾನೆ. ಎರಡು ಕಣ್ಣಿಗೆ ಮೈನರ್ ಇಂಜುರಿಯಾಗಿದೆ. ಚಿಕಿತ್ಸೆ ಪಡೆದುಕೊಂಡು, ಮನೆಗೆ ಹೋಗಿದ್ದಾರೆ.
ನಾಲ್ಕನೇ ಪ್ರಕರಣ: ಆಂಧ್ರಪ್ರದೇಶದ ಧರ್ಮಾವರಂನ 10 ವರ್ಷದ ಮಗುವಿನ ಎರಡು ಕಣ್ಣಿಗೆ ಇಂಜುರಿಯಾಗಿದೆ.
ಕಣ್ಣಿನ ಒಳಭಾಗದಲ್ಲಿ ರಕ್ತ ಹೆಪ್ಪು ಗಟ್ಟಿದೆ. ಎಡಗಣ್ಣಿಗೆ ಗಂಭೀರ ಗಾಯವಾಗಿದೆ.
ಇದನ್ನೂ ಓದಿ: Deepavali: ಆಕಸ್ಮಿಕವಾಗಿ ಪಟಾಕಿ ಕಿಡಿ ಕಣ್ಣಿಗೆ ಬಿದ್ದರೆ ಏನು ಮಾಡಬೇಕು, ಏನು ಮಾಡಬಾರದು?
ಹಬ್ಬದ ಸಮಯದಲ್ಲಿ 24X7 ಚಿಕಿತ್ಸೆ ನೀಡಲು ಬೆಂಗಳೂರಿನ ಮಿಂಟೊ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳು ಸಜ್ಜಾಗಿವೆ. ಆಸ್ಪತ್ರೆಗೆ ಬರುವ ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯರು 24X7 ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: Deepavali: ಆಕಸ್ಮಿಕವಾಗಿ ಪಟಾಕಿ ಕಿಡಿ ಕಣ್ಣಿಗೆ ಬಿದ್ದರೆ ಏನು ಮಾಡಬೇಕು, ಏನು ಮಾಡಬಾರದು?
ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆಗೆ ಬರುವ ಮಕ್ಕಳಿಗಾಗಿ ಆಸ್ಪತ್ರೆ 15 ಬೆಡ್ಗಳಿರುವ ಪ್ರತ್ಯೇಕ ವಾರ್ಡ್ ಆರಂಭಿಸಿದೆ. ಯುವಕರಿಗೆ 10 ಬೆಡ್, ಮಹಿಳೆಯರಿಗೆ 10 ಬೆಡ್ ಸೇರಿದಂತೆ ಒಟ್ಟು 35 ಬೆಡ್ಗಳನ್ನ ಮೀಸಲಿವೆ. ಪಟಾಕಿ ದುರಂತ ಎದುರಿಸಲು ಮಿಂಟೋ ಆಸ್ಪತ್ರೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ತುರ್ತು ಚಿಕಿತ್ಸೆಗೆ ಬೇಕಾದ ಸಿದ್ಧತೆಗಳನ್ನೂ ಮಾಡಿಕೊಂಡಿದ್ದು, ಔಷಧಿಗಳನ್ನು, ಐ ಡ್ರಾಪ್ಸ್ ಎಲ್ಲವನ್ನು ವಾರ್ಡ್ಗಳಲ್ಲಿ ಶೇಖರಿಸಿದೆ. ತುರ್ತು ಸಹಾಯವಾಣಿ – 9481740137, 08026707176 ಶುರು ಮಾಡಿದೆ.
ಕಣ್ಣು ಮಾತ್ರವಲ್ಲದೆ ಪಟಾಕಿಯಿಂದ ಸುಟ್ಟು ಗಾಯವಾದರೇ ತುರ್ತು ಚಿಕಿತ್ಸೆ ನೀಡಲು ವಿಕ್ಟೋರಯಾ ಆಸ್ಪತ್ರೆಯಲ್ಲಿ ಒಂದು ಪ್ರತ್ಯೇಕ ವಾರ್ಡ್ ತೆರದಿದೆ. ಪೋಷಕರು ಮತ್ತು ಮಕ್ಕಳು ಎಚ್ಚರಿಕೆಯಿಂದ ಪಟಾಕಿ ಸಿಡಿಸಿ ಅಂತ ವೈದ್ಯರು ಮನವಿ ಮಾಡಿದ್ದಾರೆ. ಅನಾಹುತಕ್ಕೆ ಅವಕಾಶ ಕೊಡದಂತೆ ಎಚ್ಚರಿಕೆ ನೀಡಿದ್ದಾರೆ. ಕಣ್ಣಿನ ಸಮಸ್ಯೆ ಇರುವವರು ಪಟಾಕಿಯಿಂದ ದೂರ ಇರಿ, ಸುರಕ್ಷಿತವಾಗಿರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:52 am, Mon, 13 November 23