ಡಕೋಟಾ ಎಕ್ಸ್​ಪ್ರೆಸ್​: ಈ ವರ್ಷ ಮಾರ್ಗ ಮಧ್ಯೆದಲ್ಲೇ 1478 ಬಾರಿ ಕೆಟ್ಟು ನಿಂತ ಬಿಎಂಟಿಸಿ ಬಸ್​ಗಳು

ಬೆಂಗಳೂರು ಟ್ರಾಫಿಕ್ ಪೊಲೀಸ್​​ ಅಂಕಿಅಂಶಗಳ ಪ್ರಕಾರ ಬಿಎಂಟಿಸಿ ಬಸ್‌ಗಳು ಸೇರಿದಂತೆ 4,500 ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಕೆಟ್ಟು ನಿಂತಿದ್ದವು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಒಟ್ಟು 395 ಬಸ್‌ಗಳು, 327 ಖಾಸಗಿ ಬಸ್‌ಗಳು ಮತ್ತು 713 ಲಘು ಮೋಟಾರು ವಾಹನಗಳು ಮತ್ತು ಕಾರುಗಳು ಕೆಟ್ಟು ನಿಂತಿದ್ದವು.

ಡಕೋಟಾ ಎಕ್ಸ್​ಪ್ರೆಸ್​: ಈ ವರ್ಷ ಮಾರ್ಗ ಮಧ್ಯೆದಲ್ಲೇ 1478 ಬಾರಿ ಕೆಟ್ಟು ನಿಂತ ಬಿಎಂಟಿಸಿ ಬಸ್​ಗಳು
ಬಿಎಂಟಿಸಿ
Follow us
ವಿವೇಕ ಬಿರಾದಾರ
|

Updated on: Nov 13, 2023 | 7:50 AM

ಬೆಂಗಳೂರು ನ.13: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್​ಗಳು ಆಗಾಗ ರಸ್ತೆಗಳಲ್ಲಿ ಕೆಟ್ಟು ನಿಲ್ಲುವುದು ಸರ್ವೆಸಾಮಾನ್ಯವಾಗಿದ್ದು, ಇದರಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ಅಂಕಿಅಂಶಗಳ ಪ್ರಕಾರ ಈ ವರ್ಷ ಬಿಎಂಟಿಸಿಯ ಬಸ್​​​ಗಳು ರಸ್ತೆಗಳಲ್ಲಿ 1,478 ಬಾರಿ ಕೆಟ್ಟು ನಿಂತಿದ್ದವು. ಈ ಮೂಲಕ ನಾಲ್ಕು ನಿಗಮಗಳಿಗೆ ಹೋಲಿಸಿದರೇ ಬಿಎಂಟಿಸಿ ಮೊದಲ ಸ್ಥಾನದಲ್ಲಿದೆ. ಪ್ರತಿ ತಿಂಗಳು 120 ರಿಂದ 170 ಬಾರಿ ಬಿಎಂಟಿಸಿ ಬಸ್ಸುಗಳು ದಾರಿ ಮಧ್ಯೆ ಕೆಟ್ಟು ನಿಲ್ಲುತ್ತವೆ. ಪ್ರತಿ ದಿನ ಕನಿಷ್ಠ ನಾಲ್ಕೈದು ಬಸ್‌ಗಳು ಕೆಟ್ಟು ನಿಲ್ಲುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರಕ್ಕೊಮ್ಮೆಯಾದರೂ ಬಸ್ಸುಗಳು ದಾರಿ ಮಧ್ಯೆ ಕೆಟ್ಟು ಹೋಗುವುದನ್ನು ನೋಡಿದ್ದೇನೆ. ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುವ ಬೇರೆ ಬಸ್ಸಿಗೆ ನಮ್ಮನ್ನು ಹತ್ತುವಂತೆ ನಿರ್ವಾಹಕರು ಹೇಳುತ್ತಾರೆ. ಕೆಲವೊಮ್ಮೆ ಇನ್ನೊಂದು ಬಸ್ ಬರಲು 5ರಿಂದ 10 ನಿಮಿಷ ಕಾಯಬೇಕಾಗುತ್ತದೆ. ನಾನು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ರೀತಿಯಾದ ಸಮಸ್ಯೆಯನ್ನು ಎದುರಿಸಿದ್ದೇನೆ. ಇದರಿಂದ ನಾನು ಕಚೇರಿಗೆ ತಲುಪುವುದು ತಡವಾಗುತ್ತದೆ. ಯಲಹಂಕ ನ್ಯೂ ಟೌನ್‌ನಿಂದ ಕಾವೇರಿ ಭವನಕ್ಕೆ ನಿಯಮಿತವಾಗಿ ಪ್ರಯಾಣಿಸುವ ಸುಪರ್ಣಾ ಶಂಕರ್ ಹೇಳಿದರು.

ಬಸ್ಸು ಕೆಟ್ಟುಹೋದಾಗ ಇಡೀ ರಸ್ತೆ ಬ್ಲಾಕ್ ಆಗುತ್ತದೆ. ಬಸ್​ ಕೆಟ್ಟು ನಿಲ್ಲುವುದರಿಂದ ಮೂರು ಪಥದ ರಸ್ತೆಯಲ್ಲಿ ಶೇ 30 ಮತ್ತು ದ್ವಿಪಥ ರಸ್ತೆಯಲ್ಲಿ ಶೇ 50 ರಷ್ಟು ಸಂಚಾರ ದಟ್ಟಣೆಯನ್ನು ಹೆಚ್ಚಿಸುತ್ತದೆ ಎಂದು ಬೆಂಗಳೂರು ಟ್ರಾಫಿಕ್​ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್. ಅನುಚೇತ್ ತಿಳಿಸಿದರು. ಹೆಚ್ಚಿನ ಬಸ್ ಗಳು ನ್ಯೂಮ್ಯಾಟಿಕ್ ಬ್ರೇಕ್‌ಗಳನ್ನು ಹೊಂದಿವೆ. ಈ ಬ್ರೇಕ್‌ಗಳು ಜಾಮ್ ಆದಾಗ ನಾವು ಅವುಗಳನ್ನು ತಳ್ಳಲು ಸಹ ಸಾಧ್ಯವಾಗುವುದಿಲ್ಲ ಎಂದರು.

ಇದನ್ನೂ ಓದಿ: ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಿಂದ ಬಿಎಂಟಿಸಿ ಕಲೆಕ್ಷನ್​​ಗೆ ಹೊಡೆತ

ಬಿಎಂಟಿಸಿ ಅಧಿಕಾರಿಗಳು ಹೇಳುವ ಪ್ರಕಾರ ರಸ್ತೆಗಳಲ್ಲಿ ಬಸ್ ನಿಂತರೆ, ಎಷ್ಟೇ ಪ್ರಯತ್ನಿಸಿದರು, ಒಂದು ಗಂಟೆ ಕಳೆದರೂ ಬಸ್​ ಸಂಚರಿಸಲು ವಿಫಲವಾದರೆ ಮಾತ್ರ ಸ್ಥಗಿತ ಎಂದು ಪರಿಗಣಿಸಲಾಗುತ್ತದೆ. ಇತರ ವಾಹನಗಳಂತೆ, ನಮ್ಮ ಬಸ್ಸುಗಳು ಸಹ ಕೆಲವೊಮ್ಮೆ ರಸ್ತೆಯಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸುತ್ತವೆ. ಅವುಗಳನ್ನು ಸಾಮಾನ್ಯವಾಗಿ ಒಂದು ಗಂಟೆಯೊಳಗೆ ಪರಿಹರಿಸಲಾಗುತ್ತದೆ. ಆದರೆ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಯಾಗಿ ಬಸ್​ಗಳು ಕೆಟ್ಟು ನಿಂತಿದ್ದು, ಶೇ 0.5 ಕ್ಕಿಂತ ಕಡಿಮೆ ಎಂದು ಬಿಎಂಟಿಸಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರು ಹೇಳಿದರು.

ಬೆಂಗಳೂರು ಟ್ರಾಫಿಕ್ ಪೊಲೀಸ್​​ ಅಂಕಿಅಂಶಗಳ ಪ್ರಕಾರ ಬಿಎಂಟಿಸಿ ಬಸ್‌ಗಳು ಸೇರಿದಂತೆ 4,500 ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಕೆಟ್ಟು ನಿಂತಿದ್ದವು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಒಟ್ಟು 395 ಬಸ್‌ಗಳು, 327 ಖಾಸಗಿ ಬಸ್‌ಗಳು ಮತ್ತು 713 ಲಘು ಮೋಟಾರು ವಾಹನಗಳು (LMV) ಮತ್ತು ಕಾರುಗಳು ಕೆಟ್ಟು ನಿಂತಿದ್ದವು. ನಗರದಲ್ಲಿ ಪ್ರತಿದಿನ ಸುಮಾರು 15-20 ವಾಹನಗಳು ಕೆಟ್ಟು ಹೋಗುತ್ತವೆ. ವಿಶೇಷವಾಗಿ ಹೆಬ್ಬಾಳ ಮತ್ತು ಟಿನ್ ಫ್ಯಾಕ್ಟರಿ ರಸ್ತೆಯಲ್ಲಿ ಹೆಚ್ಚಾಗಿ ವಾಹನಗಳು ಕೆಟ್ಟು ನಿಲ್ಲುತ್ತವೆ. ಈ ರಸ್ತೆಯಲ್ಲಿ ಗ್ರೇಡಿಯಂಟ್ ಸಮಸ್ಯೆ ಇದೆಯೇ ಅಥವಾ ಇನ್ನಾವುದೇ ಸಮಸ್ಯೆ ಇದೆಯೇ ಎಂಬುದು ಸ್ಪಷ್ಟವಾಗಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್