Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರು ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಚಿಂತಿಸುವಿರಿ

20 ಮಾರ್ಚ್​​​ 2025: ಗುರುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಯಾರಾದರೂ ನಿಮ್ಮ ಸ್ನೇಹಕ್ಕೆ ಕಡ್ಡಿಗೀರಬಹುದು. ಇಂದು ನಿಮಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ಮಾರ್ಚ್​​​ 20ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಚಿಂತಿಸುವಿರಿ
ಈ ರಾಶಿಯವರು ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಚಿಂತಿಸುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 20, 2025 | 12:10 AM

ಬೆಂಗಳೂರು, ಮಾರ್ಚ್​ 20, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ವಜ್ರ, ಕರಣ : ಗರಜ, ಸೂರ್ಯೋದಯ – 06 – 37 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 14:11 – 15:41, ಯಮಘಂಡ ಕಾಲ 06:38 – 08:08, ಗುಳಿಕ ಕಾಲ 09:39 – 11:10.

ಮೇಷ ರಾಶಿ: ಬೇಸರದಿಂದ ಯಾವ ಬಾಂಧವ್ಯವೂ ಬೇಡವೆನಿಸುದಂತೆ ಆಗಬಹುದು. ಬಹಳದ ದಿನದಿಂದ ನಿರೀಕ್ಷೆಯಲ್ಲಿ ಇರುವ ನಿಮಗೆ ಕೊನೆಗೂ ಉದ್ಯೋಗಕ್ಕಾಗಿ ಅವಕಾಶವು ಪ್ರಾಪ್ತವಾಗಲಿದೆ. ಆಪ್ತರ ಜೊತೆಗಿನ ಮಾತಿನಿಂದ‌ ಮನಸ್ಸು ಹಗುರಾಗುವುದು. ಪ್ರೀತಿಯಲ್ಲಿ ಅಂತರವು ಬಂದಂತೆ ತೋರಿದ್ದು ಮಾತುಕತೆಯಿಂದ ಅದನ್ನು ಸರಿ ಮಾಡಿಕೊಳ್ಳುವಿರಿ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ಮಂಗಲ ಕಾರ್ಯಗಳಿಗೆ ಸಂಪತ್ತನ್ನು ವಿನಿಯೋಗ ಮಾಡುವಿರಿ. ಅಧಿಕ ಲಾಭ ಗಳಿಸಬಹುದಾದ ಉತ್ಪಾದನೆಯಿಂದ ಅಲ್ಪ ಲಾಭ. ಹೊಸತನ ಹುಡುಕಾಟದಲ್ಲಿ ನೀವು ಇರುವಿರಿ. ದ್ವೇಷವನ್ನು ಬೆಳೆಸಿಕೊಳ್ಳುವುದು ಯೋಗ್ಯವೆನಿಸದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ಇಂದಿನ ಕೆಲವು ಸಮಯವನ್ನು ಇನ್ನೊಬ್ಬರಿಗೆ ಮೀಸಲಿಡಬೇಕಾದೀತು. ಸಂಗಾತಿಯ ನೋವಿಗೂ ಸ್ಪಂದಿಸಲು ಕಷ್ಟವಾದೀತು. ಯಾರ ಸ್ವಭಾವವನ್ನೂ ಆಡಿಕೊಳ್ಳುವುದು ಬೇಡ. ಬರಬೇಕಾದ ಹಣವು ಮಧ್ಯದಲ್ಲಿ ನಿಂತಿದ್ದು ನಿಮಗೆ ಆತಂಕವಾಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸುವ ಚಿಂತೆಯಲ್ಲಿ ಇರುವಿರಿ.

ವೃಷಭ ರಾಶಿ: ಅನಾರೋಗ್ಯಕ್ಕೆ ಅಧಿಕ ಖರ್ಚನ್ನು ಮಾಡುವಿರಿ. ಇಂದು ಹಣಕಾಸಿನ ವಹಿವಾಟನ್ನು ಆಪ್ತರಿಗೆ ಕೊಟ್ಟು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ. ಭೂ ವ್ಯವಹಾರದಲ್ಲಿ ಇಂದು ಪೂರ್ಣ‌ಪ್ರಗತಿ ಇರದು. ನೀವು ಎಲ್ಲರ‌ ನಡುವೆ ಅಂತರವನ್ನು ಕಾಯ್ದುಕೊಂಡು ವ್ಯವಹಾರ ಮಾಡುವಿರಿ. ಆಹಾರ ಉದ್ಯಮದಲ್ಲಿ ಇರುವವರು ಅಧಿಕ ಆದಾಯವನ್ನು ಕಾಣಬಹುದು. ತೋರಿಕೆಗೆ ಮಾಡುವ ಕೆಲಸದಲ್ಲಿ ಯಾವ ಪರಿಣಾಮ ಕಾಣಿಸದು.ಹೊಸ ಮನೆಯ ಪ್ರವೇಶದಲ್ಲಿ‌ ನೀವು ಭಾಗಿಯಾಗುವಿರಿ. ಕೆಲವು ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳುವಿರಿ. ಸಂಬಂಧಗಳನ್ನು ನೀವು ಬೇಕಾದುದಕ್ಕೆ ಬಳಸಿಕೊಳ್ಳುವಿರಿ. ರಾಜಕಾರಣಿಗಳು ಅಸ್ಥಿರ ಮನಸ್ಸಿನಲ್ಲಿ ಇರುವರು. ಅಧಿಕವಾಗಿರುವುದು. ಇಂದಿನ ಸೋಲು ನಿಮಗೆ ಪಾಠವಾಗುವುದು. ಮುನ್ನುಗ್ಗುವ ಅಭ್ಯಾಸವನ್ನು ಬೆಳೆಸಿಕೊಂಡು ನಿಮಗೆ ಇಷ್ಟವಾದ ಆಯ್ಕೆಯನ್ನು ಮಾಡಿಕೊಳ್ಳುವಿರಿ. ಮೇಲಧಿಕಾರಿಗಳ ಭಯದಿಂದ ಕಾರ್ಯದಲ್ಲಿ ಪ್ರಗತಿ. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ.

ಮಿಥುನ ರಾಶಿ: ನೀವಾಡಿದ ಸುಳ್ಳುಗಳು ಇಂದು ಗೊತ್ತಾಗಲಿದೆ. ಯಾರದೋ ಅಧೀನರಾಗಿ ಇರುವುದು ನಿಮಗೆ ಇಷ್ಟವಾಗದು. ವ್ಯವಹಾರವು ಹಳಿ ತಪ್ಪಬಹುದು. ಅನಾರೋಗ್ಯದಿಂದ ನೀವು ಬಹಳಷ್ಟು ಸುಧಾರಿಸುವಿರಿ.‌ ಯಾವ ಕೆಲಸವನ್ನೂ ನೀವು ಪೂರ್ಣ ಮಾಡದೇ ಇರಲು ಮನಸ್ಸು ಬಾರದು. ನಿಮ್ಮ ದೌರ್ಬಲ್ಯದ ಜೊತೆ ಆಟವಾಡಬಹುದು. ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ನಕಾರಾತ್ಮಕ ಆಲೋಚನೆಗಳು ಬೆನ್ನು ಹತ್ತಬಹುದು. ಹಣಕಾಸಿನ ವ್ಯವಹಾರದಲ್ಲಿ ಇಂದು ಎಲ್ಲರಿಂದ ಗೌಪ್ಯತೆಯನ್ನು ಕಾಪಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ಆರೋಗ್ಯದ ರಕ್ಷಣೆಗೆ ಬೇಕಾದ ಉಪಚಾರವನ್ನು ವೈದ್ಯರ ಸಲಹೆಯಂತೆ ಮಾಡಿದರೆ ಉತ್ತಮ. ತಂದೆಯ ಶ್ರಮವನ್ನು ಕಂಡು ಮಕ್ಕಳಿಗೆ ನೋವಾಗಬಹುದು. ನಿಮ್ಮವರ ಪ್ರೀತಿಯಿಂದ ನೀವು ಮನಸೋಲುವಿರಿ. ಯಾರನ್ನೂ ಅತಿಯಾಗಿ ಕಾಯಿಸದೇ ಅವರಿಗೆ ಬೇಕಾದುದನ್ನು ಹೇಳಿ, ಕೊಟ್ಟು ಕಳುಹಿಸಿ.

ಕರ್ಕಾಟಕ ರಾಶಿ: ಸಂಗಾತಿಗೆ ನಿಮ್ಮಿಂದ ಖುಷಿಯಾಗುವಂತೆ ನೋಡಿಕೊಳ್ಳುವಿರಿ. ಇಂದು ನೀವು ಇತರರ ಭಾವನೆಗೆ ಸ್ಪಂದಿಸುವಿರಿ. ಹಸ್ತಕ್ಷೇಪವನ್ನು ಮಾಡಲು ಹಿಂದೇಟು ಹಾಕುವುದು ಉತ್ತಮ. ಸಂಬಂಧಿಕರು ನಿಮ್ಮನ್ನು ಕ್ಷುಲ್ಲಕ ವಿಚಾರಕ್ಕೆ ಟೀಕಿಸಬಹುದು. ಇಂದು ನಿಮ್ಮ ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡಿಸುವಿರಿ. ನೀವು ಇಷ್ಟಪಡುವವರ ಭೇಟಿಯಾಗಲಿದೆ. ನಿಮ್ಮ ಗೌಪ್ಯತೆಯನ್ನು ಯಾರ ಜೊತೆಯೂ ಹೇಳಿಕೊಳ್ಳುವುದು ಬೇಡ. ನಿಯಮ ಪಾಲನೆಯಲ್ಲಿ ತಪ್ಪಬಹುದು. ನಿಮ್ಮ ಆಕ್ಷೇಪಗಳು ಹಲವು ಸುಳ್ಳಿನಿಂದ ಇರಲಿದೆ. ಇಂದು ನಿಮ್ಮ ಮನೆಗೆ ಅತಿಥಿ ಆಗಮಿಸುವ ಸಾಧ್ಯತೆ ಇದೆ. ನೀವು ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ಕೆಲವು ಮಾಹಿತಿಯನ್ನು ಪಡೆದುಕೊಳ್ಳುವಿರಿ.‌ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹುಟ್ಟಿಕೊಂಡೀತು. ಕೋಪದಲ್ಲಿ ಬೇಡ ಮಾತುಗಳನ್ನು ಆಪ್ತರಿಗೆ ಹೇಳುವಿರಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ಜಾಡ್ಯವನ್ನು ಬಿಡಬೇಕಾದೀತು. ನಿಮ್ಮ ವೃತ್ತಿಯು ನಿಮಗೆ ಸಂತೋಷವನ್ನು ಕೊಡದೇ ಇರುವುದು. ಕೆಲಸವನ್ನು ನೀವು ಸರಳವಾಗಿ ಮಾಡಿಕೊಳ್ಳುವುದು ಉತ್ತಮ.

ಸಿಂಹ ರಾಶಿ: ಉದ್ಯಮದಲ್ಲಿ ಅಧಿಕ ಒತ್ತಡ ಹಾಗೂ ನಿರ್ವಹಣೆಯ ಸಂಕಷ್ಟದ ಕಾರಣ ಮಾರಾಟ ಮಾಡುವ ಯೋಚನೆ ಮಾಡುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕದಿಂದ ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳುವಿರಿ. ಆರ್ಥಿಕ ಪ್ರಗತಿಯು ಮಧ್ಯಮವಾಗಲಿದೆ.‌ ನ್ಯಾಯಾಲಯದಲ್ಲಿ ನಿರೀಕ್ಷಿತ ಗೆಲವು ಕಷ್ಟವಾದೀತು. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಆಸಕ್ತಿಯು ಹೆಚ್ಚಾಗಿ ಅಭ್ಯಾಸವು ನಿಲ್ಲುವುದು. ಇಂದು ನೀವು ಕೆಲಸವನ್ನು ಹೆಚ್ಚು ಪ್ರಯತ್ನದಿಂದ ಪೂರ್ಣ ಮಾಡುವಿರಿ. ಯಾರಾದರೂ ನಿಮ್ಮ ಸ್ನೇಹಕ್ಕೆ ಕಡ್ಡಿಗೀರಬಹುದು. ಇಂದು ನಿಮಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ನೀವು ಇತರರಿಂದ ಗೌರವಕ್ಕೆ ಪಾತ್ರರಾಗುವಿರಿ. ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಣ ಮಾಡಲು ವಿಧಾನಗಳನ್ನು ಬಳಸುವಿರಿ‌. ಅವಮಾರ್ಯಾದೆಗೆ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಇರದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಕಾರ್ಯದ ಹಂಚಿಕೆಯಿಂದ ಕೆಲಸವು ಸುಲಭವಾಗಬಹುದು. ವಿವಾಹಕ್ಕೆ ಯೋಗ ಬಂದರೂ ಅದನ್ನು ಮುಂದೂಡುವ ನಿರ್ಧಾರ ಮಾಡುವಿರಿ.

ಕನ್ಯಾ ರಾಶಿ: ವಿದ್ಯಾಭ್ಯಾಸಕ್ಕೆ ವಿಘ್ನಗಳು ಬರಬಹುದು. ಅದನ್ನು ಎದುರಿಸುವ ಮನೋಬಲದ ಅವಶ್ಯಕತೆಯಿದೆ. ದುರ್ಬಲರಾದಷ್ಟು ಗುರಿಯೂ ದೂರವಾಗುತ್ತದೆ. ಇಂದಿನ ಶುಭವಾರ್ತೆಯು ನಿಮ್ಮ ಹಲವು ದಿನದ ಮನಸ್ಸಿನ ದುಗುಡಕ್ಕೆ ಶಾಂತಿಯನ್ನು ಕೊಡಬಹುದು. ವೃತ್ತಿಯ ಸ್ಥಳದಲ್ಲಿ ಕಲಹವಾಗಬಹುದು. ಅವಶ್ಯಕ ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ. ಇಂದು ನೀವು ನಿಮ್ಮ ಸುತ್ತಲಿನ ವಾತಾವರಣವನ್ನು ಆಹ್ಲಾದವೆನಿಸುವುದು. ಭೂಮಿಯ ಖರೀದಿಗೆ ಹುಡುಕಾಟ ಆರಂಭ. ಆರ್ಥಿಕತೆಯಲ್ಲಿ ಸಬಲರಾಗಿರುವುದು ಸಂತೋಷವನ್ನು ಇಮ್ಮಡಿ ಮಾಡೀತು. ಇಂದು ನೀವು ಸಂಗಾತಿಗೆ ಉಡುಗೊರೆಯನ್ನು ಕೊಟ್ಟು ಸಿಟ್ಟನ್ನು ಕಡಿಮೆ‌ ಮಾಡಿಸುವಿರಿ. ರಕ್ಷಣೆಯ ವಿಚಾರದಲ್ಲಿ ನೀವು ಸೋಲಬಹುದು. ಭವಿಷ್ಯಕ್ಕಾಗಿ ಅಲ್ಪ ಹಣವನ್ನು ಕೂಡಿಡುವಿರಿ. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಿ ಸಂಧಾನಕ್ಕೆ ಬರಬಹುದು. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ. ರಕ್ಷಣೆಯ ಜವಾಬ್ದಾರಿಯವರಿಗೆ ಆರೋಗ್ಯದ ಕೆಡಬಹುದು.

ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ