Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಒಳ್ಳೆಯ ಕಾರ್ಯಕ್ಕೂ ಅಪಯಶಸ್ಸು, ಮನಸ್ಸು ಖಿನ್ನತೆಗೆ ಜಾರಬಹುದು

20 ಮಾರ್ಚ್​​​ 2025: ಗುರುವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಅನಗತ್ಯ ಖರ್ಚಿಗೆ ಬೇಸರಿಸುವಿರಿ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ. ಹಾಗಾದರೆ ಮಾರ್ಚ್ 20ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಒಳ್ಳೆಯ ಕಾರ್ಯಕ್ಕೂ ಅಪಯಶಸ್ಸು, ಮನಸ್ಸು ಖಿನ್ನತೆಗೆ ಜಾರಬಹುದು
ಒಳ್ಳೆಯ ಕಾರ್ಯಕ್ಕೂ ಅಪಯಶಸ್ಸು, ಮನಸ್ಸು ಖಿನ್ನತೆಗೆ ಜಾರಬಹುದು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 20, 2025 | 12:12 AM

ಬೆಂಗಳೂರು, ಮಾರ್ಚ್​ 20, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ವಜ್ರ, ಕರಣ : ಗರಜ, ಸೂರ್ಯೋದಯ – 06 – 37 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 14:11 – 15:41, ಯಮಘಂಡ ಕಾಲ 06:38 – 08:08, ಗುಳಿಕ ಕಾಲ 09:39 – 11:10.

ತುಲಾ ರಾಶಿ: ಒಳ್ಳೆಯ ಕಾರ್ಯಕ್ಕೂ ಅಪಯಶಸ್ಸು. ಮನಸ್ಸು ಖಿನ್ನತೆಯ ಕಡೆ ಜಾರುವುದು. ಇಂದು ನೀವು ಮಾಡಿದ ಉದ್ಯಮದ ತಂತ್ರಗಳು ಫಲಿಸಬಹುದು. ವಿದ್ಯಾರ್ಥಿಗಳು ಪ್ರಗತಿಯಿಂದ‌ ಖುಷಿಪಡುವರು. ಪ್ರೀತಿಯನ್ನು ಅವಶ್ಯಕತೆಯ ಪೂರೈಕೆಗಷ್ಟೇ ಬಳಸಿಕೊಳ್ಳುವಿರಿ. ಇಂದು ಸಮೂಹವನ್ನು ಕಟ್ಟಿಕೊಂಡು ಕೆಲಸವನ್ನು ಮಾಡುವಿರಿ. ಹಿರಿಯರಲ್ಲಿ ಮನಶ್ಶಾಂತಿಗೆ ಭಂಗ ಅಧಿಕ. ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಮಕ್ಕಳಿಂದ ಒಪ್ಪಿಗೆಯನ್ನು ಪಡೆಯುವಿರಿ. ಸಹೋದರಿಯರ ಜೊತೆ ವಾಗ್ವಾದವನ್ನು ಮಾಡುವಿರಿ. ದೃಷ್ಟಿಯನ್ನು ಸಂಕುಚಿತ ಮಾಡುವುದು ಬೇಡ. ಹಣದ ವ್ಯವಹಾರದಲ್ಲಿ ಮುಜುಗರ ಬೇಡ. ಅನ್ಯರ ಕಾರಣದಿಂದ ವಿದೇಶದ ವ್ಯಾಮೋಹವು ಹೆಚ್ಚಾದೀತು. ಅಗತ್ಯವಿಲ್ಲದ ಓಡಾಟದಿಂದ ಸಮಯ ಹಾಗೂ ಹಣ ನಷ್ಟ. ಇಂದು ಕೌಶಲ್ಯದ ಕಾರ್ಯಕ್ಕೆ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ಸ್ವಪ್ನದ ಚಿಂತೆಯಲ್ಲಿಯೇ ಇರಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ದಾಂಪತ್ಯದ ಗುಟ್ಟನ್ನು ಹೊರಗೆ ಹಾಕುವುದು ಬೇಡ.

ವೃಶ್ಚಿಕ ರಾಶಿ: ಪ್ರಯತ್ನಿಸಿದ ಕಾರ್ಯದಲ್ಲಿ ಅಭಿವೃದ್ದಿಯ ಸೂಚನೆ ಸಿಗುವುದು. ಇಂದು ನಿಮ್ಮ ಮುಂದಾಳುತ್ವದಲ್ಲಿ ಹೊಸ ಕೆಲಸಗಳು ನಡೆಯಬಹುದು. ಪೂರ್ಣ ಅದೃಷ್ಟವನ್ನೇ ನಂಬಿ ಕಾರ್ಯದಲ್ಲಿ ತೊಡಗುವುದು ಬೇಡ. ಪೂರ್ಣ‌ ಮನಸ್ಸಿನಿಂದ ನಿಮ್ಮ‌ ಎಲ್ಲ ಶಕ್ತಿಯನ್ನು ಹಾಕಿ ಕೆಲಸ ಮಾಡಿದರೂ ಅಂದುಕೊಂಡಷ್ಟು ಜಯವು ಸಿಗದು. ಸಾಲವನ್ನು ಹಿಂದಿರುಗಿಸಲು ಸಮಯಮಿತಿಯ ವಿಸ್ತರಣೆ ಮಾಡಿಕೊಳ್ಳುವಿರಿ. ಹಲವಾರು ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಓಡಾಡಬಹುದು. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು. ಬಹಳ ದಿನಗಳ ಕಳೆದ ಮೇಲೆ ತಂದೆಯ ಜೊತೆ ಮಾತನಾಡಿ ನೆಮ್ಮದಿಯು ಪಡೆಯುವಿರಿ. ನಿಮಗೆ ಇಷ್ಟವಾದವರ ಬಗ್ಗೆ ನಿಮಗೆ ಅನುಕಂಪ ಬರಬಹುದು. ಹೇಳಿದ ಮಾತ್ರಕ್ಕೆ ಯಾರ ಮಾತನ್ನೂ ಒಪ್ಪಿಕೊಳ್ಳಲಾರಿರಿ. ಒಡಹುಟ್ಟಿದವರ ಜೊತೆಗಿನ ನಿಮ್ಮ ವ್ಯವಹಾರಕ್ಕೆ ಮತ್ತೊಬ್ಬರು ಪ್ರವೇಶಿಸಬಹುದು. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು.

ಧನು ರಾಶಿ: ಶತ್ರುಗಳ ಕಾಟದಿಂದ ಉದ್ಯೋಗದಲ್ಲಿ ನಿಯತವಾದ ಕಾರ್ಯಕ್ಕೆ ಅಡ್ಡಿ. ಸರಿಯಾದ ಸಮಯಕ್ಕೆ ಫಲಿತಾಂಶ ಕೊಡಲಾಗದೇ ನಿಂದನೆಗೆ ಒಳಗಾಗಬೇಕಾದೀತು‌. ಇಂದು ಉದ್ಯೋಗದಲ್ಲಿ ಹೊಸ ಅವಕಾಶಗಳ ಕಡೆ ಗಮನ ಹರಿಸುವಿರಿ. ಆರ್ಥಿಕತೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಗತಿ ಇರುವುದು. ಇಷ್ಟದವರು ನಿಮ್ಮನ್ನು ಶುಭಕಾರ್ಯಗಳಿಗೆ ಆಹ್ವಾನಿಸಬಹುದು. ಅಗ್ನಿಯ ಭಯದಿಂದ ಸಾಹಸ ಕಾರ್ಯಗಳಗೆ ಹಿಂದೇಟು. ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜೊತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ಉದ್ಯೋಗದ ಕಾರಣ ನಿಮ್ಮ ವಾಸವನ್ನು ಬದಲಾಯಿಸಬೇಕಾಗಬಹುದು. ನಿಮ್ಮ ಮಾತನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು. ಆಭರಣ ಮುಂತಾದ ಬಹು ಮೌಲ್ಯದ ವಸ್ತುವನ್ನು ಖರೀದಿಸುವಿರಿ. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ನಿಮ್ಮ ಜೊತೆ ಇರುವವರು ನಿಮ್ಮನ್ನು ಅರ್ಥಮಾಡಿಕೊಂಡ ರೀತಿ ಬೇರೆ ರೀತಿಯಲ್ಲಿ ಇರುವುದು. ವೈಯಕ್ತಿಕ ಕಾರ್ಯದಲ್ಲಿ ಗಮನವು ಕಡಿಮೆ ಇರುವುದು.

ಮಕರ ರಾಶಿ: ನಿಲ್ಲಿಸಿದ ಬರವಣಿಗೆಯನ್ನು ಮತ್ತೆ ಆರಂಭಿಸುವಿರಿ. ನಿಮ್ಮ ಸಂಬಂಧದಲ್ಲಿಯೇ ವಿವಾಹ ನಿಶ್ಚಯವಾಗಬಹುದು. ಇಂದಿನ ವ್ಯವಹಾರದಲ್ಲಿ ಊಹೆಯು ಸತ್ಯವಾದೀತು. ವಿದ್ಯಾರ್ಥಿಗಳು ಪರಿಶ್ರಮದಿಂದ ಪಡೆಯಬೇಕಾದುದನ್ನು ಪಡೆಯುವರು. ಔದ್ಯೋಗಿಕ ಕ್ಷೇತ್ರದಲ್ಲಿ ಇನ್ನಷ್ಟು ಒಪ್ಪಂದವನ್ನು ಮಾಡಿಕೊಂಡು ಲಾಭ ಪಡೆಯುವ ಯೋಜನೆ ರೂಪಿಸುವಿರಿ. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಅನವಶ್ಯಕ ಸಂಪರ್ಕವನ್ನು ಕಡಿದುಕೊಳ್ಳಲು ಇಚ್ಛಿಸುವಿರಿ. ಕಾನೂನಿನ ಪಾಠವನ್ನು ಹಿರಿಯರು ಮಾಡುವರು. ಉದ್ಯೋಗಕ್ಕಾಗಿ ಬಂದ ಬಂಧುವಿಗೆ ಮಾರ್ಗದರ್ಶನ ಮಾಡುವಿರಿ. ಸಹೋದರನ ಸಹಕಾರವು ಅನುಕೂಲವೇ ಆಗುವುದು. ಹೂಡಕೆಯ ಕ್ಷೇತ್ರವನ್ನು ಬದಲಿಸುವಿರಿ. ನೂತನ ವಾಹನದ‌ ಖರೀದಿಯನ್ನು ಮಾಡುವ ಇಚ್ಛೆಯು ಇಂದು ಪೂರ್ಣವಾಗುವುದು. ನಿಮ್ಮ ಬಗ್ಗೆ ಸಲ್ಲದ ದೂರಗಳು ಕೇಳಿ ಬರಬಹುದು.

ಕುಂಭ ರಾಶಿ: ಎಲ್ಲ ಕಡೆಗಳಿಂದ ಕಿರಿಕಿರಿ. ಮನೋವ್ಯಥೆಯಿಂದ ಹೊರಬರಲು ದುರಭ್ಯಾಸಕ್ಕೆ ಮನಸ್ಸು ಮಾಡುವಿರಿ. ಸಾಮಾಜಿಕ ಕಾರ್ಯದಿಂದ ಖ್ಯಾತಿಯು ಹೆಚ್ಚಾಗಬಹುದು. ವ್ಯಾಪಾರದಲ್ಲಿ ಬಿಡುವಿಲ್ಲ ಒತ್ತಡವು ಇರುವುದು. ನಿರುದ್ಯೋಗಿಗಳಿಗೆ ಕೆಲಸವು ಸಿಗಬಹುದು. ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಅವಿವಾಹಿತರಿಂದ ವಿವಾಹಕ್ಕೆ ನಿರಂತರ ಪ್ರಯತ್ನ. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ದೇಹವನ್ನು ದಂಡಿಸಲು ನಿಮಗೆ ಆಗದು. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ. ಆಪ್ತ ಬಂಧುವನ್ನು ಅಕಾಲದಲ್ಲಿ ಕಳೆದುಕೊಳ್ಳುವಿರಿ. ಸಮಯೋಚಿತ ಕಾರ್ಯದಿಂದ‌ ಪ್ರಶಂಸೆಯು ಇರಲಿದೆ. ಎಲ್ಲರೆದುರು ಮುಖಭಂಗವನ್ನು ಎದುರಿಸಿಬೇಕಾದೀತು. ವೈವಾಹಿಕ ಜೀವನದ ಕನಸು ಕಾಣುವಿರಿ.

ಮೀನ ರಾಶಿ: ಇಂದು ಮಂಗಲ ಕಾರ್ಯಗಳಲ್ಲಿ ಅನಿರೀಕ್ಷಿತವಾಗಿ ಪಾಲ್ಗೊಳ್ಳುವಿಕೆ ಹಾಗೂ ಸಂತೋಷ. ನಿಮ್ಮ ಉದ್ಯೋಗವು ಸಾಮರಸ್ಯದಿಂದ ಸಾಗುವುದು. ಯಾವುದಾದರೂ ಶುಭದ ನಿರೀಕ್ಷೆಯಲ್ಲಿ ಇರಬಹುದು. ಹಣಕಾಸಿನ ಪ್ರಯತ್ನಗಳು ಸಫಲವಾಗಬಹುದು. ಆಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ.‌ ಮಿತ್ರನಿಗೆ ನಿಮ್ಮಿಂದ ಅಲ್ಪ ಧನಸಹಾಯ. ಸಾಮಾಜಿಕ ಬದ್ಧತೆಗಳಿಗೆ ಸ್ಪಂದನೆ. ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಬಹಳ ಹುಡುಕಾಟದ ಅನಂತರದ ಉತ್ತಮ‌ ವಿವಾಹ ಸಂಬಂಧವು ಬರುವುದು. ಪಾಲುದಾರಿಕೆಯಲ್ಲಿ ಅಧಿಕಾರದ ಬಗ್ಗೆ ಅಸಮಾಧಾನ ಹೆಚ್ಚಾಗುವುದು. ಅನಗತ್ಯ ಖರ್ಚಿಗೆ ಬೇಸರಿಸುವಿರಿ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜೊತೆ ಆಪ್ತವಾದ ಮಾತುಕತೆ ಇರಲಿದೆ. ನಿಮಗೆ ಸಾಕಷ್ಟು ಸಮಯವು ಇಂದು ಇರಲಿದ್ದು ಏನು ಮಾಡಬೇಕೆಂದು ತಿಳಿಯದೇ ಕಾಲವನ್ನು ಕಳೆಯುವಿರಿ.

ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ
ರಾಯರೆಡ್ಡಿ ಇಂಗ್ಲಿಷಲ್ಲಿ ಮಾತು; ಯತ್ನಾಳ್ ಸಹ ಇಂಗ್ಲಿಷ್ ಭಾಷೆಯಲ್ಲೇ ಉತ್ತರ!
ರಾಯರೆಡ್ಡಿ ಇಂಗ್ಲಿಷಲ್ಲಿ ಮಾತು; ಯತ್ನಾಳ್ ಸಹ ಇಂಗ್ಲಿಷ್ ಭಾಷೆಯಲ್ಲೇ ಉತ್ತರ!