Horoscope Today 20 March: ಬೆಂಬಲವಿಲ್ಲದೇ ಸೋಲು, ಈ ಸೋಲೇ ನಿಮಗೆ ಪಾಠವಾಗುವುದು
ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ಷಷ್ಠೀ ತಿಥಿ, ಗುರುವಾರ ಸಂಗಾತಿಯಿಂದ ಬೇಸರ, ನಿಮ್ಮದಲ್ಲದ್ದನ್ನು ಪಡೆಯುವ ಹಂಬಲ, ವಿವಾಹಕ್ಕೆ ಮಾನಸಿಕವಾಗಿ ಸಜ್ಜು. ಪ್ರೀತಿಯಲ್ಲಿ ಅಂತರವು ಬಂದಂತೆ ತೋರಿದ್ದು ಮಾತುಕತೆಯಿಂದ ಅದನ್ನು ಸರಿ ಮಾಡಿಕೊಳ್ಳುವಿರಿ. ಇವೆಲ್ಲ ಇಂದಿನ ವಿಶೇಷ.

ಬೆಂಗಳೂರು, ಮಾರ್ಚ್ 20, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ವಜ್ರ, ಕರಣ : ಗರಜ, ಸೂರ್ಯೋದಯ – 06 – 37 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 14:11 – 15:41, ಯಮಘಂಡ ಕಾಲ 06:38 – 08:08, ಗುಳಿಕ ಕಾಲ 09:39 – 11:10.
ಮೇಷ ರಾಶಿ: ಬೇಸರದಿಂದ ಯಾವ ಬಾಂಧವ್ಯವೂ ಬೇಡವೆನಿಸುದಂತೆ ಆಗಬಹುದು. ಬಹಳದ ದಿನದಿಂದ ನಿರೀಕ್ಷೆಯಲ್ಲಿ ಇರುವ ನಿಮಗೆ ಕೊನೆಗೂ ಉದ್ಯೋಗಕ್ಕಾಗಿ ಅವಕಾಶವು ಪ್ರಾಪ್ತವಾಗಲಿದೆ. ಆಪ್ತರ ಜೊತೆಗಿನ ಮಾತಿನಿಂದ ಮನಸ್ಸು ಹಗುರಾಗುವುದು. ಪ್ರೀತಿಯಲ್ಲಿ ಅಂತರವು ಬಂದಂತೆ ತೋರಿದ್ದು ಮಾತುಕತೆಯಿಂದ ಅದನ್ನು ಸರಿ ಮಾಡಿಕೊಳ್ಳುವಿರಿ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ಮಂಗಲ ಕಾರ್ಯಗಳಿಗೆ ಸಂಪತ್ತನ್ನು ವಿನಿಯೋಗ ಮಾಡುವಿರಿ. ಅಧಿಕ ಲಾಭ ಗಳಿಸಬಹುದಾದ ಉತ್ಪಾದನೆಯಿಂದ ಅಲ್ಪ ಲಾಭ. ಹೊಸತನ ಹುಡುಕಾಟದಲ್ಲಿ ನೀವು ಇರುವಿರಿ. ದ್ವೇಷವನ್ನು ಬೆಳೆಸಿಕೊಳ್ಳುವುದು ಯೋಗ್ಯವೆನಿಸದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ಇಂದಿನ ಕೆಲವು ಸಮಯವನ್ನು ಇನ್ನೊಬ್ಬರಿಗೆ ಮೀಸಲಿಡಬೇಕಾದೀತು. ಸಂಗಾತಿಯ ನೋವಿಗೂ ಸ್ಪಂದಿಸಲು ಕಷ್ಟವಾದೀತು. ಯಾರ ಸ್ವಭಾವವನ್ನೂ ಆಡಿಕೊಳ್ಳುವುದು ಬೇಡ. ಬರಬೇಕಾದ ಹಣವು ಮಧ್ಯದಲ್ಲಿ ನಿಂತಿದ್ದು ನಿಮಗೆ ಆತಂಕವಾಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸುವ ಚಿಂತೆಯಲ್ಲಿ ಇರುವಿರಿ.
ವೃಷಭ ರಾಶಿ: ಅನಾರೋಗ್ಯಕ್ಕೆ ಅಧಿಕ ಖರ್ಚನ್ನು ಮಾಡುವಿರಿ. ಇಂದು ಹಣಕಾಸಿನ ವಹಿವಾಟನ್ನು ಆಪ್ತರಿಗೆ ಕೊಟ್ಟು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ. ಭೂ ವ್ಯವಹಾರದಲ್ಲಿ ಇಂದು ಪೂರ್ಣಪ್ರಗತಿ ಇರದು. ನೀವು ಎಲ್ಲರ ನಡುವೆ ಅಂತರವನ್ನು ಕಾಯ್ದುಕೊಂಡು ವ್ಯವಹಾರ ಮಾಡುವಿರಿ. ಆಹಾರ ಉದ್ಯಮದಲ್ಲಿ ಇರುವವರು ಅಧಿಕ ಆದಾಯವನ್ನು ಕಾಣಬಹುದು. ತೋರಿಕೆಗೆ ಮಾಡುವ ಕೆಲಸದಲ್ಲಿ ಯಾವ ಪರಿಣಾಮ ಕಾಣಿಸದು.ಹೊಸ ಮನೆಯ ಪ್ರವೇಶದಲ್ಲಿ ನೀವು ಭಾಗಿಯಾಗುವಿರಿ. ಕೆಲವು ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳುವಿರಿ. ಸಂಬಂಧಗಳನ್ನು ನೀವು ಬೇಕಾದುದಕ್ಕೆ ಬಳಸಿಕೊಳ್ಳುವಿರಿ. ರಾಜಕಾರಣಿಗಳು ಅಸ್ಥಿರ ಮನಸ್ಸಿನಲ್ಲಿ ಇರುವರು. ಅಧಿಕವಾಗಿರುವುದು. ಇಂದಿನ ಸೋಲು ನಿಮಗೆ ಪಾಠವಾಗುವುದು. ಮುನ್ನುಗ್ಗುವ ಅಭ್ಯಾಸವನ್ನು ಬೆಳೆಸಿಕೊಂಡು ನಿಮಗೆ ಇಷ್ಟವಾದ ಆಯ್ಕೆಯನ್ನು ಮಾಡಿಕೊಳ್ಳುವಿರಿ. ಮೇಲಧಿಕಾರಿಗಳ ಭಯದಿಂದ ಕಾರ್ಯದಲ್ಲಿ ಪ್ರಗತಿ. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ.
ಮಿಥುನ ರಾಶಿ: ನೀವಾಡಿದ ಸುಳ್ಳುಗಳು ಇಂದು ಗೊತ್ತಾಗಲಿದೆ. ಯಾರದೋ ಅಧೀನರಾಗಿ ಇರುವುದು ನಿಮಗೆ ಇಷ್ಟವಾಗದು. ವ್ಯವಹಾರವು ಹಳಿ ತಪ್ಪಬಹುದು. ಅನಾರೋಗ್ಯದಿಂದ ನೀವು ಬಹಳಷ್ಟು ಸುಧಾರಿಸುವಿರಿ. ಯಾವ ಕೆಲಸವನ್ನೂ ನೀವು ಪೂರ್ಣ ಮಾಡದೇ ಇರಲು ಮನಸ್ಸು ಬಾರದು. ನಿಮ್ಮ ದೌರ್ಬಲ್ಯದ ಜೊತೆ ಆಟವಾಡಬಹುದು. ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ನಕಾರಾತ್ಮಕ ಆಲೋಚನೆಗಳು ಬೆನ್ನು ಹತ್ತಬಹುದು. ಹಣಕಾಸಿನ ವ್ಯವಹಾರದಲ್ಲಿ ಇಂದು ಎಲ್ಲರಿಂದ ಗೌಪ್ಯತೆಯನ್ನು ಕಾಪಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ಆರೋಗ್ಯದ ರಕ್ಷಣೆಗೆ ಬೇಕಾದ ಉಪಚಾರವನ್ನು ವೈದ್ಯರ ಸಲಹೆಯಂತೆ ಮಾಡಿದರೆ ಉತ್ತಮ. ತಂದೆಯ ಶ್ರಮವನ್ನು ಕಂಡು ಮಕ್ಕಳಿಗೆ ನೋವಾಗಬಹುದು. ನಿಮ್ಮವರ ಪ್ರೀತಿಯಿಂದ ನೀವು ಮನಸೋಲುವಿರಿ. ಯಾರನ್ನೂ ಅತಿಯಾಗಿ ಕಾಯಿಸದೇ ಅವರಿಗೆ ಬೇಕಾದುದನ್ನು ಹೇಳಿ, ಕೊಟ್ಟು ಕಳುಹಿಸಿ.
ಕರ್ಕಾಟಕ ರಾಶಿ: ಸಂಗಾತಿಗೆ ನಿಮ್ಮಿಂದ ಖುಷಿಯಾಗುವಂತೆ ನೋಡಿಕೊಳ್ಳುವಿರಿ. ಇಂದು ನೀವು ಇತರರ ಭಾವನೆಗೆ ಸ್ಪಂದಿಸುವಿರಿ. ಹಸ್ತಕ್ಷೇಪವನ್ನು ಮಾಡಲು ಹಿಂದೇಟು ಹಾಕುವುದು ಉತ್ತಮ. ಸಂಬಂಧಿಕರು ನಿಮ್ಮನ್ನು ಕ್ಷುಲ್ಲಕ ವಿಚಾರಕ್ಕೆ ಟೀಕಿಸಬಹುದು. ಇಂದು ನಿಮ್ಮ ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡಿಸುವಿರಿ. ನೀವು ಇಷ್ಟಪಡುವವರ ಭೇಟಿಯಾಗಲಿದೆ. ನಿಮ್ಮ ಗೌಪ್ಯತೆಯನ್ನು ಯಾರ ಜೊತೆಯೂ ಹೇಳಿಕೊಳ್ಳುವುದು ಬೇಡ. ನಿಯಮ ಪಾಲನೆಯಲ್ಲಿ ತಪ್ಪಬಹುದು. ನಿಮ್ಮ ಆಕ್ಷೇಪಗಳು ಹಲವು ಸುಳ್ಳಿನಿಂದ ಇರಲಿದೆ. ಇಂದು ನಿಮ್ಮ ಮನೆಗೆ ಅತಿಥಿ ಆಗಮಿಸುವ ಸಾಧ್ಯತೆ ಇದೆ. ನೀವು ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ಕೆಲವು ಮಾಹಿತಿಯನ್ನು ಪಡೆದುಕೊಳ್ಳುವಿರಿ. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹುಟ್ಟಿಕೊಂಡೀತು. ಕೋಪದಲ್ಲಿ ಬೇಡ ಮಾತುಗಳನ್ನು ಆಪ್ತರಿಗೆ ಹೇಳುವಿರಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ಜಾಡ್ಯವನ್ನು ಬಿಡಬೇಕಾದೀತು. ನಿಮ್ಮ ವೃತ್ತಿಯು ನಿಮಗೆ ಸಂತೋಷವನ್ನು ಕೊಡದೇ ಇರುವುದು. ಕೆಲಸವನ್ನು ನೀವು ಸರಳವಾಗಿ ಮಾಡಿಕೊಳ್ಳುವುದು ಉತ್ತಮ.
ಸಿಂಹ ರಾಶಿ: ಉದ್ಯಮದಲ್ಲಿ ಅಧಿಕ ಒತ್ತಡ ಹಾಗೂ ನಿರ್ವಹಣೆಯ ಸಂಕಷ್ಟದ ಕಾರಣ ಮಾರಾಟ ಮಾಡುವ ಯೋಚನೆ ಮಾಡುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕದಿಂದ ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳುವಿರಿ. ಆರ್ಥಿಕ ಪ್ರಗತಿಯು ಮಧ್ಯಮವಾಗಲಿದೆ. ನ್ಯಾಯಾಲಯದಲ್ಲಿ ನಿರೀಕ್ಷಿತ ಗೆಲವು ಕಷ್ಟವಾದೀತು. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಆಸಕ್ತಿಯು ಹೆಚ್ಚಾಗಿ ಅಭ್ಯಾಸವು ನಿಲ್ಲುವುದು. ಇಂದು ನೀವು ಕೆಲಸವನ್ನು ಹೆಚ್ಚು ಪ್ರಯತ್ನದಿಂದ ಪೂರ್ಣ ಮಾಡುವಿರಿ. ಯಾರಾದರೂ ನಿಮ್ಮ ಸ್ನೇಹಕ್ಕೆ ಕಡ್ಡಿಗೀರಬಹುದು. ಇಂದು ನಿಮಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ನೀವು ಇತರರಿಂದ ಗೌರವಕ್ಕೆ ಪಾತ್ರರಾಗುವಿರಿ. ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಣ ಮಾಡಲು ವಿಧಾನಗಳನ್ನು ಬಳಸುವಿರಿ. ಅವಮಾರ್ಯಾದೆಗೆ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಇರದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಕಾರ್ಯದ ಹಂಚಿಕೆಯಿಂದ ಕೆಲಸವು ಸುಲಭವಾಗಬಹುದು. ವಿವಾಹಕ್ಕೆ ಯೋಗ ಬಂದರೂ ಅದನ್ನು ಮುಂದೂಡುವ ನಿರ್ಧಾರ ಮಾಡುವಿರಿ.
ಕನ್ಯಾ ರಾಶಿ: ವಿದ್ಯಾಭ್ಯಾಸಕ್ಕೆ ವಿಘ್ನಗಳು ಬರಬಹುದು. ಅದನ್ನು ಎದುರಿಸುವ ಮನೋಬಲದ ಅವಶ್ಯಕತೆಯಿದೆ. ದುರ್ಬಲರಾದಷ್ಟು ಗುರಿಯೂ ದೂರವಾಗುತ್ತದೆ. ಇಂದಿನ ಶುಭವಾರ್ತೆಯು ನಿಮ್ಮ ಹಲವು ದಿನದ ಮನಸ್ಸಿನ ದುಗುಡಕ್ಕೆ ಶಾಂತಿಯನ್ನು ಕೊಡಬಹುದು. ವೃತ್ತಿಯ ಸ್ಥಳದಲ್ಲಿ ಕಲಹವಾಗಬಹುದು. ಅವಶ್ಯಕ ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ. ಇಂದು ನೀವು ನಿಮ್ಮ ಸುತ್ತಲಿನ ವಾತಾವರಣವನ್ನು ಆಹ್ಲಾದವೆನಿಸುವುದು. ಭೂಮಿಯ ಖರೀದಿಗೆ ಹುಡುಕಾಟ ಆರಂಭ. ಆರ್ಥಿಕತೆಯಲ್ಲಿ ಸಬಲರಾಗಿರುವುದು ಸಂತೋಷವನ್ನು ಇಮ್ಮಡಿ ಮಾಡೀತು. ಇಂದು ನೀವು ಸಂಗಾತಿಗೆ ಉಡುಗೊರೆಯನ್ನು ಕೊಟ್ಟು ಸಿಟ್ಟನ್ನು ಕಡಿಮೆ ಮಾಡಿಸುವಿರಿ. ರಕ್ಷಣೆಯ ವಿಚಾರದಲ್ಲಿ ನೀವು ಸೋಲಬಹುದು. ಭವಿಷ್ಯಕ್ಕಾಗಿ ಅಲ್ಪ ಹಣವನ್ನು ಕೂಡಿಡುವಿರಿ. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಿ ಸಂಧಾನಕ್ಕೆ ಬರಬಹುದು. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ. ರಕ್ಷಣೆಯ ಜವಾಬ್ದಾರಿಯವರಿಗೆ ಆರೋಗ್ಯದ ಕೆಡಬಹುದು.
ತುಲಾ ರಾಶಿ: ಒಳ್ಳೆಯ ಕಾರ್ಯಕ್ಕೂ ಅಪಯಶಸ್ಸು. ಮನಸ್ಸು ಖಿನ್ನತೆಯ ಕಡೆ ಜಾರುವುದು. ಇಂದು ನೀವು ಮಾಡಿದ ಉದ್ಯಮದ ತಂತ್ರಗಳು ಫಲಿಸಬಹುದು. ವಿದ್ಯಾರ್ಥಿಗಳು ಪ್ರಗತಿಯಿಂದ ಖುಷಿಪಡುವರು. ಪ್ರೀತಿಯನ್ನು ಅವಶ್ಯಕತೆಯ ಪೂರೈಕೆಗಷ್ಟೇ ಬಳಸಿಕೊಳ್ಳುವಿರಿ. ಇಂದು ಸಮೂಹವನ್ನು ಕಟ್ಟಿಕೊಂಡು ಕೆಲಸವನ್ನು ಮಾಡುವಿರಿ. ಹಿರಿಯರಲ್ಲಿ ಮನಶ್ಶಾಂತಿಗೆ ಭಂಗ ಅಧಿಕ. ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಮಕ್ಕಳಿಂದ ಒಪ್ಪಿಗೆಯನ್ನು ಪಡೆಯುವಿರಿ. ಸಹೋದರಿಯರ ಜೊತೆ ವಾಗ್ವಾದವನ್ನು ಮಾಡುವಿರಿ. ದೃಷ್ಟಿಯನ್ನು ಸಂಕುಚಿತ ಮಾಡುವುದು ಬೇಡ. ಹಣದ ವ್ಯವಹಾರದಲ್ಲಿ ಮುಜುಗರ ಬೇಡ. ಅನ್ಯರ ಕಾರಣದಿಂದ ವಿದೇಶದ ವ್ಯಾಮೋಹವು ಹೆಚ್ಚಾದೀತು. ಅಗತ್ಯವಿಲ್ಲದ ಓಡಾಟದಿಂದ ಸಮಯ ಹಾಗೂ ಹಣ ನಷ್ಟ. ಇಂದು ಕೌಶಲ್ಯದ ಕಾರ್ಯಕ್ಕೆ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ಸ್ವಪ್ನದ ಚಿಂತೆಯಲ್ಲಿಯೇ ಇರಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ದಾಂಪತ್ಯದ ಗುಟ್ಟನ್ನು ಹೊರಗೆ ಹಾಕುವುದು ಬೇಡ.
ವೃಶ್ಚಿಕ ರಾಶಿ: ಪ್ರಯತ್ನಿಸಿದ ಕಾರ್ಯದಲ್ಲಿ ಅಭಿವೃದ್ದಿಯ ಸೂಚನೆ ಸಿಗುವುದು. ಇಂದು ನಿಮ್ಮ ಮುಂದಾಳುತ್ವದಲ್ಲಿ ಹೊಸ ಕೆಲಸಗಳು ನಡೆಯಬಹುದು. ಪೂರ್ಣ ಅದೃಷ್ಟವನ್ನೇ ನಂಬಿ ಕಾರ್ಯದಲ್ಲಿ ತೊಡಗುವುದು ಬೇಡ. ಪೂರ್ಣ ಮನಸ್ಸಿನಿಂದ ನಿಮ್ಮ ಎಲ್ಲ ಶಕ್ತಿಯನ್ನು ಹಾಕಿ ಕೆಲಸ ಮಾಡಿದರೂ ಅಂದುಕೊಂಡಷ್ಟು ಜಯವು ಸಿಗದು. ಸಾಲವನ್ನು ಹಿಂದಿರುಗಿಸಲು ಸಮಯಮಿತಿಯ ವಿಸ್ತರಣೆ ಮಾಡಿಕೊಳ್ಳುವಿರಿ. ಹಲವಾರು ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಓಡಾಡಬಹುದು. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು. ಬಹಳ ದಿನಗಳ ಕಳೆದ ಮೇಲೆ ತಂದೆಯ ಜೊತೆ ಮಾತನಾಡಿ ನೆಮ್ಮದಿಯು ಪಡೆಯುವಿರಿ. ನಿಮಗೆ ಇಷ್ಟವಾದವರ ಬಗ್ಗೆ ನಿಮಗೆ ಅನುಕಂಪ ಬರಬಹುದು. ಹೇಳಿದ ಮಾತ್ರಕ್ಕೆ ಯಾರ ಮಾತನ್ನೂ ಒಪ್ಪಿಕೊಳ್ಳಲಾರಿರಿ. ಒಡಹುಟ್ಟಿದವರ ಜೊತೆಗಿನ ನಿಮ್ಮ ವ್ಯವಹಾರಕ್ಕೆ ಮತ್ತೊಬ್ಬರು ಪ್ರವೇಶಿಸಬಹುದು. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು.
ಧನು ರಾಶಿ: ಶತ್ರುಗಳ ಕಾಟದಿಂದ ಉದ್ಯೋಗದಲ್ಲಿ ನಿಯತವಾದ ಕಾರ್ಯಕ್ಕೆ ಅಡ್ಡಿ. ಸರಿಯಾದ ಸಮಯಕ್ಕೆ ಫಲಿತಾಂಶ ಕೊಡಲಾಗದೇ ನಿಂದನೆಗೆ ಒಳಗಾಗಬೇಕಾದೀತು. ಇಂದು ಉದ್ಯೋಗದಲ್ಲಿ ಹೊಸ ಅವಕಾಶಗಳ ಕಡೆ ಗಮನ ಹರಿಸುವಿರಿ. ಆರ್ಥಿಕತೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಗತಿ ಇರುವುದು. ಇಷ್ಟದವರು ನಿಮ್ಮನ್ನು ಶುಭಕಾರ್ಯಗಳಿಗೆ ಆಹ್ವಾನಿಸಬಹುದು. ಅಗ್ನಿಯ ಭಯದಿಂದ ಸಾಹಸ ಕಾರ್ಯಗಳಗೆ ಹಿಂದೇಟು. ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜೊತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ಉದ್ಯೋಗದ ಕಾರಣ ನಿಮ್ಮ ವಾಸವನ್ನು ಬದಲಾಯಿಸಬೇಕಾಗಬಹುದು. ನಿಮ್ಮ ಮಾತನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು. ಆಭರಣ ಮುಂತಾದ ಬಹು ಮೌಲ್ಯದ ವಸ್ತುವನ್ನು ಖರೀದಿಸುವಿರಿ. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ನಿಮ್ಮ ಜೊತೆ ಇರುವವರು ನಿಮ್ಮನ್ನು ಅರ್ಥಮಾಡಿಕೊಂಡ ರೀತಿ ಬೇರೆ ರೀತಿಯಲ್ಲಿ ಇರುವುದು. ವೈಯಕ್ತಿಕ ಕಾರ್ಯದಲ್ಲಿ ಗಮನವು ಕಡಿಮೆ ಇರುವುದು.
ಮಕರ ರಾಶಿ: ನಿಲ್ಲಿಸಿದ ಬರವಣಿಗೆಯನ್ನು ಮತ್ತೆ ಆರಂಭಿಸುವಿರಿ. ನಿಮ್ಮ ಸಂಬಂಧದಲ್ಲಿಯೇ ವಿವಾಹ ನಿಶ್ಚಯವಾಗಬಹುದು. ಇಂದಿನ ವ್ಯವಹಾರದಲ್ಲಿ ಊಹೆಯು ಸತ್ಯವಾದೀತು. ವಿದ್ಯಾರ್ಥಿಗಳು ಪರಿಶ್ರಮದಿಂದ ಪಡೆಯಬೇಕಾದುದನ್ನು ಪಡೆಯುವರು. ಔದ್ಯೋಗಿಕ ಕ್ಷೇತ್ರದಲ್ಲಿ ಇನ್ನಷ್ಟು ಒಪ್ಪಂದವನ್ನು ಮಾಡಿಕೊಂಡು ಲಾಭ ಪಡೆಯುವ ಯೋಜನೆ ರೂಪಿಸುವಿರಿ. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಅನವಶ್ಯಕ ಸಂಪರ್ಕವನ್ನು ಕಡಿದುಕೊಳ್ಳಲು ಇಚ್ಛಿಸುವಿರಿ. ಕಾನೂನಿನ ಪಾಠವನ್ನು ಹಿರಿಯರು ಮಾಡುವರು. ಉದ್ಯೋಗಕ್ಕಾಗಿ ಬಂದ ಬಂಧುವಿಗೆ ಮಾರ್ಗದರ್ಶನ ಮಾಡುವಿರಿ. ಸಹೋದರನ ಸಹಕಾರವು ಅನುಕೂಲವೇ ಆಗುವುದು. ಹೂಡಕೆಯ ಕ್ಷೇತ್ರವನ್ನು ಬದಲಿಸುವಿರಿ. ನೂತನ ವಾಹನದ ಖರೀದಿಯನ್ನು ಮಾಡುವ ಇಚ್ಛೆಯು ಇಂದು ಪೂರ್ಣವಾಗುವುದು. ನಿಮ್ಮ ಬಗ್ಗೆ ಸಲ್ಲದ ದೂರಗಳು ಕೇಳಿ ಬರಬಹುದು.
ಕುಂಭ ರಾಶಿ: ಎಲ್ಲ ಕಡೆಗಳಿಂದ ಕಿರಿಕಿರಿ. ಮನೋವ್ಯಥೆಯಿಂದ ಹೊರಬರಲು ದುರಭ್ಯಾಸಕ್ಕೆ ಮನಸ್ಸು ಮಾಡುವಿರಿ. ಸಾಮಾಜಿಕ ಕಾರ್ಯದಿಂದ ಖ್ಯಾತಿಯು ಹೆಚ್ಚಾಗಬಹುದು. ವ್ಯಾಪಾರದಲ್ಲಿ ಬಿಡುವಿಲ್ಲ ಒತ್ತಡವು ಇರುವುದು. ನಿರುದ್ಯೋಗಿಗಳಿಗೆ ಕೆಲಸವು ಸಿಗಬಹುದು. ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಅವಿವಾಹಿತರಿಂದ ವಿವಾಹಕ್ಕೆ ನಿರಂತರ ಪ್ರಯತ್ನ. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ದೇಹವನ್ನು ದಂಡಿಸಲು ನಿಮಗೆ ಆಗದು. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ. ಆಪ್ತ ಬಂಧುವನ್ನು ಅಕಾಲದಲ್ಲಿ ಕಳೆದುಕೊಳ್ಳುವಿರಿ. ಸಮಯೋಚಿತ ಕಾರ್ಯದಿಂದ ಪ್ರಶಂಸೆಯು ಇರಲಿದೆ. ಎಲ್ಲರೆದುರು ಮುಖಭಂಗವನ್ನು ಎದುರಿಸಿಬೇಕಾದೀತು. ವೈವಾಹಿಕ ಜೀವನದ ಕನಸು ಕಾಣುವಿರಿ.
ಮೀನ ರಾಶಿ: ಇಂದು ಮಂಗಲ ಕಾರ್ಯಗಳಲ್ಲಿ ಅನಿರೀಕ್ಷಿತವಾಗಿ ಪಾಲ್ಗೊಳ್ಳುವಿಕೆ ಹಾಗೂ ಸಂತೋಷ. ನಿಮ್ಮ ಉದ್ಯೋಗವು ಸಾಮರಸ್ಯದಿಂದ ಸಾಗುವುದು. ಯಾವುದಾದರೂ ಶುಭದ ನಿರೀಕ್ಷೆಯಲ್ಲಿ ಇರಬಹುದು. ಹಣಕಾಸಿನ ಪ್ರಯತ್ನಗಳು ಸಫಲವಾಗಬಹುದು. ಆಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ. ಮಿತ್ರನಿಗೆ ನಿಮ್ಮಿಂದ ಅಲ್ಪ ಧನಸಹಾಯ. ಸಾಮಾಜಿಕ ಬದ್ಧತೆಗಳಿಗೆ ಸ್ಪಂದನೆ. ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಬಹಳ ಹುಡುಕಾಟದ ಅನಂತರದ ಉತ್ತಮ ವಿವಾಹ ಸಂಬಂಧವು ಬರುವುದು. ಪಾಲುದಾರಿಕೆಯಲ್ಲಿ ಅಧಿಕಾರದ ಬಗ್ಗೆ ಅಸಮಾಧಾನ ಹೆಚ್ಚಾಗುವುದು. ಅನಗತ್ಯ ಖರ್ಚಿಗೆ ಬೇಸರಿಸುವಿರಿ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜೊತೆ ಆಪ್ತವಾದ ಮಾತುಕತೆ ಇರಲಿದೆ. ನಿಮಗೆ ಸಾಕಷ್ಟು ಸಮಯವು ಇಂದು ಇರಲಿದ್ದು ಏನು ಮಾಡಬೇಕೆಂದು ತಿಳಿಯದೇ ಕಾಲವನ್ನು ಕಳೆಯುವಿರಿ.
-ಲೋಹಿತ ಹೆಬ್ಬಾರ್-8762924271 (what’s app only)