ಮದುವೆಯಾಗಿ ಎರಡೂವರೆ ವರ್ಷವಾದರೂ ಶ್ರೀಕಾಂತ್-ಬಿಂದುಶ್ರೀ ನಡುವೆ ದಾಂಪತ್ಯ ಶುರುವಾಗಿಲ್ಲ
ತನ್ನ ಜೊತೆ ಮಲಗಬೇಕಾದರೆ ದಿನಕ್ಕೆ ₹5,000 ಕೊಡಬೇಕು, ತನ್ನಪ್ಪನಿಗೆ ಮನೆ ಕೊಳ್ಳಲು ₹ 60 ಲಕ್ಷ ಕೊಡು ಅಂತೆಲ್ಲ ಬಿಂದುಶ್ರೀ ಹೇಳುತ್ತಾರಂತೆ. ಅಪ್ಪ ಅಮ್ಮನನ್ನು ಬಿಟ್ಟು ಬೇರೆ ಮನೆ ಮಾಡು ಬಂದು ನಿನ್ನ ಜೊತೆ ಇರ್ತೀನಿ ಅಂದಿದ್ದಕ್ಕೆ ಶ್ರೀಕಾಂತ್ ಮಲ್ಲೇಶ್ವಂನಲ್ಲಿ ಒಂದು ಮನೆ ಮಾಡಿದರಂತೆ. ಆದರೆ ಅಲ್ಲೂ ಆಕೆಯದ್ದು ಅದೇ ವರಾತ, ಅವರ ತಾಯಿ ಯಾವಾಗಲೂ ದುಡ್ಡು ದುಡ್ಡು ಅನ್ನುತ್ತಾರೆ ಎಂದು ಶ್ರೀಕಾಂತ್ ಹೇಳುತ್ತಾರೆ.
ಬೆಂಗಳೂರು, 19 ಮಾರ್ಚ್: ಇದೊಂದು ವಿಚಿತ್ರ ಕೇಸ್ ಮಾರಾಯ್ರೇ. ಉತ್ತಮ ಉದ್ಯೋಗದಲ್ಲಿರುವ ಶ್ರೀಕಾಂತ್ ಮತ್ತು ಬಿಂದುಶ್ರೀ ಸುಮಾರು ಎರಡೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಆದರೆ ಶ್ರೀಕಾಂತ್ ಈ ವಿಡಿಯೋದಲ್ಲಿ ಹೇಳುವ ಪ್ರಕಾರ ಇದುವರೆಗೂ ಇಬ್ಬರ ನಡುವೆ ದೈಹಿಕ ಸಂಪರ್ಕವೇರ್ಪಟ್ಟಿಲ್ಲ. ಶ್ರೀಕಾಂತ್ ಮುಟ್ಟಲು ಹೋದರೆ ಮಕ್ಕಳಾಗುತ್ತವೆ, ತನಗೆ ಭಯವಾಗುತ್ತದೆ, ಮುಂದೆ 60 ವರ್ಷವಾದ ಮೇಲೆ ಮಕ್ಕಳನ್ನು ಮಾಡಿಕೊಳ್ಳೋಣ ಅಂತ ಬಿಂದುಶ್ರೀ ಹೇಳುತ್ತಾರಂತೆ! ಸುತ್ತಮುತ್ತ ವಾಸ ಮಾಡುವ ಜನರೆಲ್ಲ ಒಂದಾಗುವ ಹಾಗೆ ಕಿರುಚಾತ್ತರಂತೆ. ಹೆಂಡತಿಯ ಮನೆಯವರು ಸಹ ಸರಿ ಇಲ್ಲ ಹಣಕ್ಕಾಗಿ ಹಪಹಪಿಸುತ್ತಿರುತ್ತಾರೆ ಎಂದು ಶ್ರೀಕಾಂತ್ ಹೇಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮರ್ಮಾಂಗಕ್ಕೆ ಒದ್ದು ಕೊಲ್ಲಲು ಪ್ರಯತ್ನಿಸಿದ್ದಾಳೆ: ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿದ ಟೆಕ್ಕಿ