ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಇದೆ ಎಂದು ಬೈಕ್ ನಿಲ್ಲಿಸಿದ್ದ ಡೆಲಿವರಿ ಬಾಯ್ ಮೇಲೆ ಹಲ್ಲೆ

ಸಂಚಾರಿ ನಿಯಮ ಪಾಲಿಸಿದ್ದಕ್ಕೇ ಹಲ್ಲೆ ನಡೆಯುತ್ತದೆ ಎಂದರೆ! ಬೆಂಗಳೂರಿನ ಮೋದಿ ಆಸ್ಪತ್ರೆ ಜಂಕ್ಷನ್ ಬಳಿ ಇಂಥದ್ದೊಂದು ಘಟನೆ ನಡೆದಿದೆ. ಟ್ರಾಫಿಕ್ ಸಿಗ್ನಲ್​ನಲ್ಲಿ ರೆಡ್ ಲೈಟ್ ಬಂತೆಂದು ಬೈಕ್ ನಿಲ್ಲಿಸಿದ ಸ್ವಿಗ್ಗಿ ಡೆಲಿವರಿ ಬಾಯ್​ ಮೇಲೆ ಅಪರಿಚಿತರು ಹಲ್ಲೆ ಮಾಡಿದ್ದಾರೆ. ಸದ್ಯ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಇದೆ ಎಂದು ಬೈಕ್ ನಿಲ್ಲಿಸಿದ್ದ ಡೆಲಿವರಿ ಬಾಯ್ ಮೇಲೆ ಹಲ್ಲೆ
ಸಾಂದರ್ಭಿಕ ಚಿತ್ರ

Updated on: Jul 14, 2025 | 10:53 AM

ಬೆಂಗಳೂರು, ಜುಲೈ 14: ಟ್ರಾಫಿಕ್ ಸಿಗ್ನಲ್ ಇದೆ ಎಂದು ಬೈಕ್ ನಿಲ್ಲಿಸಿದ ಡೆಲಿವರಿ ಬಾಯ್ (Delivery Boy) ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ (Bengaluru) ಮೋದಿ ಆಸ್ಪತ್ರೆ ಜಂಕ್ಷನ್ ಬಳಿ ಶನಿವಾರ ರಾತ್ರಿ ಸಂಭವಿಸಿದೆ. ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ ಡೆಲಿವರಿ ಎಕ್ಸಿಕ್ಯೂಟಿವ್ ಸಿಗ್ನಲ್​​ನಲ್ಲಿ ಕೆಂಪು ಲೈಟ್ ಇದೆ ಎಂದು ಬೈಕ್ ನಿಲ್ಲಿಸಿದ್ದರು. ಅದೇ ವೇಳೆ ಹಿಂದಿನಿಂದ ಬಂದ ಅಪರಿಚಿತರು ದಾರಿ ಬಿಡುವಂತೆ ಹೇಳಿದ್ದಲ್ಲೆ ಹಲ್ಲೆ ಮಾಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಗರದಲ್ಲಿ ಗಿಗ್ ಕಾರ್ಮಿಕರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.

ಸಿಗ್ನಲ್​​​ನಲ್ಲಿ ರೆಡ್ ಲೈಟ್ ಆನ್ ಆದಾಗ ಡೆಲಿವರಿ ಬಾಯ್ ಬೈಕನ್ನು ನಿಲ್ಲಿಸಿದ್ದಾರೆ. ಬೈಕ್ ಹಿಂದಿನಿಂದ ಬರುತ್ತಿದ್ದ ಕಾರಿನಲ್ಲಿದ್ದವರು ಹಾರ್ನ್ ಮಾಡಿ ಮುಂದೆ ಹೋಗುವಂತೆ ಸೂಚಿಸಿದ್ದರು. ಆಗ ಡೆಲಿವರಿ ಬಾಯ್, ತಾನು ಸಂಚಾರ ನಿಯಮಗಳನ್ನು ಪಾಲಿಸುತ್ತಿರುವುದಾಗಿ ಹೇಳಿದ್ದಾರೆ. ನಂತರ ವಾಗ್ವಾದ ನಡೆದು, ಕಾರಿನಲ್ಲಿದ್ದವರು ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ್ದಾರೆ.

ಅಪರಿಚಿತರು ಪದೇ ಪದೇ ಹಲ್ಲೆ ಮಾಡಿ, ಒದ್ದು ಸ್ಥಳದಿಂದ ಕಾಲ್ಕಿತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದಾಗಿ ಡೆಲಿವರಿ ಬಾಯ್ ಗಾಯಗೊಂಡು ರಸ್ತೆಬದಿಯಲ್ಲಿ ರಕ್ತಸ್ರಾವವಾಗಿ ಬಿದ್ದಿದ್ದಾರೆ.

ಇದನ್ನೂ ಓದಿ
ಡ್ರಗ್ಸ್ ಸಾಗಾಟ ಆರೋಪ: ಕಲಬುರಗಿ ಕಾಂಗ್ರೆಸ್ ಮುಖಂಡ ಮಹಾರಾಷ್ಟ್ರದಲ್ಲಿ ಬಂಧನ
ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ 1006 ಆಟೋಗಳ ವಿರುದ್ದ ಕೇಸ್, 233 ಸೀಜ್
ಉಗ್ರ ನಾಸಿರ್​ನನ್ನು ಎಸ್ಕೆಫ್ ಮಾಡಿಸಲು ಫಾತಿಮಾ ತಡರಾತ್ರಿ ಪ್ಲಾನ್​
ಭಟ್ಕಳ​ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಕೇಸ್​: ಆರೋಪಿಯ ಅಡಗುತಾಣ ಪತ್ತೆ

ನಂತರ ಡೆಲಿವರಿ ಬಾಯ್ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿ, ಹಲ್ಲೆಕೋರರು ಮದ್ಯದ ಅಮಲಿನಲ್ಲಿದ್ದಂತೆ ಕಾಣಿಸಿತ್ತು ಎಂದು ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ದೂರು ಸ್ವೀಕರಿಸಿರುವುದಾಗಿ ದೃಢಪಡಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕೆಎಸ್​ಆರ್​ಟಿಸಿ ಬಸ್ – ಬೈಕ್ ಡಿಕ್ಕಿ: ಡೆಲಿವರಿ ಬಾಯ್ ಸಾವು

ಶುಕ್ರವಾರ ಮುಂಜಾನೆ ಬೆಂಗಳೂರಿನ ಮಧ್ಯಭಾಗದಲ್ಲಿರುವ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 25 ವರ್ಷದ ಡೆಲಿವರಿ ಬಾಯ್ ವ್ಯಕ್ತಿ ಮೃತಪಟ್ಟಿದ್ದರು. ಮೃತ ವ್ಯಕ್ತಿಯನ್ನು ಅಜರ್ ಪಾಷಾ ಎಂದು ಗುರುತಿಸಲಾಗಿದ್ದು, ಅವರು ನೀಲಸಂದ್ರ ನಿವಾಸಿಯಾಗಿದ್ದರು.

ಇದನ್ನೂ ಓದಿ: ಯುವ ಗಾಯಕನ ಕೊಲೆ, ಕೇವಲ 5000 ಹಣಕ್ಕೆ ಉತ್ತರ ಕರ್ನಾಟಕ ಜನಪದ ಹಾಡುಗಾರ ದುರಂತ ಅಂತ್ಯ

ಅಜರ್ ಪಾಷಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದರು.ಉಪ್ಪಾರಪೇಟೆ ಸಂಚಾರ ಪೊಲೀಸರ ಪ್ರಕಾರ, ಪಾಷಾ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ತಿರುಪತಿ-ಬೆಂಗಳೂರು ಕೆಎಸ್‌ಆರ್‌ಟಿಸಿ ಬಸ್ ಅವರ ಬೈಕ್​ಗೆ ಡಿಕ್ಕಿ ಹೊಡೆದು ಗಂಭೀರವಾವಾಗಿ ಗಾಯಗೊಂಡಿದ್ದರು. ನಂತರ ಮೃತಪಟ್ಟಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:53 am, Mon, 14 July 25