ಯುವತಿ ಮೊಬೈಲ್ ಕಸಿದು ಕಳ್ಳ ಎಸ್ಕೇಪ್: ಆ್ಯಪ್ ಮುಖಾಂತರ ಆರೋಪಿ ಲೊಕೇಷನ್ ಪತ್ತೆ ಹಚ್ಚಿದ ಡೆಲಿವರಿ ಬಾಯ್
ಯುವತಿ ಮೊಬೈಲ್ ಕದ್ದು ಎಸ್ಕೇಪ್ ಆಗಿದ್ದ ಕಳ್ಳರನ್ನು ಆ್ಯಪ್ ಮುಖಾಂತರ ಡೆಲಿವರಿ ಬಾಯ್ ಪತ್ತೆ ಹಚ್ಚಿರುವಂತಹ ಘಟನೆ ಅ. 18 ರಂದು ಜಯನಗರ 2 ಬ್ಲಾಕ್ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು: ಯುವತಿ ಮೊಬೈಲ್ (mobile) ಕದ್ದು ಎಸ್ಕೇಪ್ ಆಗಿದ್ದ ಕಳ್ಳರನ್ನು ಆ್ಯಪ್ ಮುಖಾಂತರ ಡೆಲಿವರಿ ಬಾಯ್ (Delivery boy) ಪತ್ತೆ ಹಚ್ಚಿರುವಂತಹ ಘಟನೆ ಅ. 18 ರಂದು ಬೆಂಗಳೂರಿನ ಜಯನಗರ 2 ಬ್ಲಾಕ್ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಿದ್ದಾಪುರ ಠಾಣೆಯಲ್ಲಿ ಈ ಕುರಿತಾಗಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಟೋಣಿ ಎಂಬುವವನನ್ನು ಬಂಧಿಸಿದ್ದಾರೆ. FIND MY device ಆ್ಯಪ್ ಮೂಲಕ ಡೆಲಿವರಿ ಬಾಯ್ ಸೂರ್ಯ ಕಳ್ಳರ ಪತ್ತೆ ಹಚ್ಚಿದ್ದಾನೆ. ಯುವತಿ ಸಹಾಯಕ್ಕೆ ಬಂದ ಡೆಲಿವರಿ ಬಾಯ್ ಸೂರ್ಯ, ಯುವತಿಗೆ ತನ್ನ ಸ್ನೇಹಿತನ ಮೊಬೈಲ್ ನೀಡಿ ನಂಬರ್ ಎಂಟ್ರಿ ಮಾಡುವಂತೆ ಹೇಳಿದ್ದಾನೆ. ಮೊಬೈಲ್ ಕದ್ದು ಎಸ್ಕೇಪ್ ಆಗಿದ್ದ ಆರೋಪಿಗಳ ಲೊಕೇಷನ್ 2 km ದೂರದಲ್ಲಿ ಪತ್ತೆಯಾಗಿದೆ. ಆರೋಪಿಗಳಿರುವ ಲೊಕೇಷನ್ ಸ್ನೇಹಿತನ ಜೊತೆ ಸೂರ್ಯ ತೆರಳಿದ್ದಾನೆ. ಸ್ಥಳಕ್ಕೆ ತೆರಳಿ ಆರೋಪಿಗಳಿಗೆ ಮೊಬೈಲ್ ವಾಪಸ್ಸು ನೀಡುವಂತೆ ಡೆಲಿವರಿ ಬಾಯ್ ಸೂರ್ಯ ಕೇಳಿದ್ದಾನೆ.
ಈ ವೇಳೆ ಮೊಬೈಲ್ ರಾಬರಿ ಗ್ಯಾಂಗ್ ಸೂರ್ಯನನ್ನು ಹೆದರಿಸಿ ಅವಾಜ್ ಹಾಕಿದ್ದಾರೆ. ತನ್ನ ಪ್ರಾಣ ಲೆಕ್ಕಿಸದೆ ಮೊಬೈಲ್ ಕಸಿಯಲು ಯತ್ನಿಸಿದ್ದಾನೆ. ಈ ವೇಳೆ ಸೂರ್ಯನ ಮೇಲೆ ಹಲ್ಲೆ ಮಾಡಿ ಚಾಕು ಹಾಕಿ ಕಳ್ಳರ ಗ್ಯಾಂಗ್ ಎಸ್ಕೇಪ್ ಆಗಿದೆ. ಹಲ್ಲೆ ಬಳಿಕ ಡೆಲಿವರಿ ಬಾಯ್ ಸೂರ್ಯಗೆ ಮೊಬೈಲ್ ಕಳೆದಕೊಂಡು ಯುವತಿ ಚಿಕಿತ್ಸೆ ಕೊಡಿಸಿದ್ದಾಳೆ. ಬಳಿಕ ಕಲಾಸಿಪಾಳ್ಯ ಠಾಣೆಗೆ ಹಲ್ಲೆ ನಡೆಸಿದ ಬಗ್ಗೆ ಸೂರ್ಯ ದೂರು ನೀಡಿದ್ದಾನೆ. ಸದ್ಯ ಬಂಧಿತ ಆರೋಪಿ ವಿರುದ್ದ ಹಲವು ಠಾಣೆಗಳಲ್ಲಿ ಮೊಬೈಲ್ ಕಳ್ಳತನ ಪ್ರಕರಣ ದಾಖಲಾಗಿವೆ.
ಗುತ್ತಿಗೆದಾರನ ಮನೆಯಲ್ಲಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ
ಬೆಳಗಾವಿ: ಗುತ್ತಿಗೆದಾರನ ಮನೆಯಲ್ಲಿ 30 ಲಕ್ಷ ರೂ. ನಗದು, 130 ಗ್ರಾಂ.ಚಿನ್ನ ಮತ್ತು 10 ಕೆಜಿ ಬೆಳ್ಳಿ ಕಳ್ಳತನವಾಗಿರುವಂತಹ ಘಟನೆ ಜಿಲ್ಲೆಯ ಗೋಕಾಕ್‌ನ ಲಕ್ಷ್ಮೀ ನಗರದಲ್ಲಿ ನಡೆದಿದೆ. ಪ್ರಥಮ ದರ್ಜೆ ಗುತ್ತಿಗೆದಾರ ಪ್ರಕಾಶ್ ತೊಳಿನವರ ಮನೆಯಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ. ಯಾರು ಇಲ್ಲದ ವೇಳೆ ಮನೆಯ ಬೀಗ ಒಡೆದು ಕಳ್ಳತನ ಮಾಡಲಾಗಿದೆ. ಬದಾಮಿ ಬನಶಂಕರಿ ದರ್ಶನ ಪಡೆಯಲು ಕುಟುಂಬ ಸಮೇತ ಪ್ರಕಾಶ್ ಹೋಗಿದ್ದರು. ರಾತ್ರಿ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:34 pm, Sat, 12 November 22