ಬೆಂಗಳೂರು ಖಾಸಗಿ ಬಸ್ ನಿಲ್ದಾಣಗಳಲ್ಲಿ ಸ್ಕ್ವಾಡ್​ಗಳ ನೇಮಕ; ಕಾರಣ ಇಲ್ಲಿದೆ

ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್, ಕಲಾಸಿಪಾಳ್ಯ, ದೇವನಹಳ್ಳಿ, ಸಿಲ್ಕ್ ಬೋರ್ಡ್, ಹೊಸೂರ್ ರೋಡ್, ಹೊಸಕೋಟೆ, ಗೊರಗುಂಟೆ ಪಾಳ್ಯ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಬೆಂಗಳೂರು ಖಾಸಗಿ ಬಸ್ ನಿಲ್ದಾಣಗಳಲ್ಲಿ ಸ್ಕ್ವಾಡ್​ಗಳ ನೇಮಕ; ಕಾರಣ ಇಲ್ಲಿದೆ
ಖಾಸಗಿ ಬಸ್​ಗಳು (ಸಾಂದರ್ಭಿಕ ಚಿತ್ರ)

ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯದಶಮಿ ಹಿನ್ನೆಲೆ ಸಾಕಷ್ಟು ಜನರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಆದರೆ ಖಾಸಗಿ ಬಸ್ಗಳ ಮಾಲೀಕರು ಇದನ್ನೆ ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ. ಖಾಸಗಿ ಬಸ್​ಗಳ ಮಾಲೀಕರು ಜನರಿಂದ ದುಪ್ಪಟ್ಟು ಹಣ ಕೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಾರಿಗೆ ಇಲಾಖೆ, ಖಾಸಗಿ ಬಸ್​ಗಳ ಮೇಲೆ ನಿಗಾವಹಿಸಿದೆ. ಪ್ರತಿ ಖಾಸಗಿ ಬಸ್​ಗಳ ನಿಲ್ದಾಣದಲ್ಲೂ ಸಾರಿಗೆ ಇಲಾಖೆಯಿಂದ ಸ್ಕ್ವಾಡ್​ಗಳನ್ನು ನೇಮಕ ಮಾಡಲಾಗಿದೆ.

ನಗರದ ಪ್ರಮುಖ ಖಾಸಗಿ ಬಸ್ ನಿಲ್ದಾಣಗಳಲ್ಲಿ 10 ಜನ ಸ್ಕ್ವಾಡ್​ಗಳನ್ನ ನೇಮಕ ಮಾಡಲಾಗಿದೆ. ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್, ಕಲಾಸಿಪಾಳ್ಯ, ದೇವನಹಳ್ಳಿ, ಸಿಲ್ಕ್ ಬೋರ್ಡ್, ಹೊಸೂರ್ ರೋಡ್, ಹೊಸಕೋಟೆ, ಗೊರಗುಂಟೆ ಪಾಳ್ಯ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಹಬ್ಬಕ್ಕೆಂದು ಜನರು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಆದರೆ ಖಾಸಗಿ ಬಸ್​ಗಳ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ಕೇಳುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಇದರಿಂದ ಸಾರಿಗೆ ಇಲಾಖೆ ಖಾಸಗಿ ಬಸ್ ನಿಲ್ದಾಣಗಳಲ್ಲಿ ಸ್ವ್ಕಾಡ್​ಗಳನ್ನ ನೇಮಿಸಿದ್ದಾರೆ. ಬಸ್​ನಲ್ಲಿರುವ ಸೀಟ್ ಲಿಮಿಟ್​ನಷ್ಟೇ ಪ್ರಯಾಣಿಕರು ಸಂಚರಿಸಬೇಕು. ಲೇಗೆಜ್ ಸ್ಟಾಂಡ್​ಗಳಲ್ಲಿ ಜನರನ್ನ ಕೂರಿಸಿದರೆ ಸಾರಿಗೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.

ಇದನ್ನೂ ಓದಿ

ಡಿಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂದ ಸಲೀಂಗೆ ಗೇಟ್​ ಪಾಸ್: ಕೆಪಿಸಿಸಿ ಮಾಧ್ಯಮ ಸಂಯೋಜಕ ಸ್ಥಾನದಿಂದ ಔಟ್

ಮೈಸೂರು: ಅರಮನೆ ಅಂಗಳದಲ್ಲಿ ಅಂತಿಮ ಹಂತದ ರಿಹರ್ಸಲ್​; ಜಂಬೂಸವಾರಿಯ ತಾಲೀಮಿನ ಸುಂದರ ದೃಶ್ಯಗಳನ್ನು ನೋಡಿ

Read Full Article

Click on your DTH Provider to Add TV9 Kannada