PSI Recruitment Scam: ಧಾರವಾಡದಲ್ಲೂ ಅಕ್ರಮ ನಡೆದಿರುವ ಅನುಮಾನ! ಕಿಂಗ್ಪಿನ್ ಮಂಜುನಾಥ ಫೋನ್ಗಾಗಿ ಅಣೆಕಟ್ಟಿನಲ್ಲಿ ಹುಡುಕಾಟ
ಕಿಂಗ್ಪಿನ್ ಆಗಿರುವ ಮಂಜುನಾಥ ಮೇಳಕುಂದಿ ಫೋನ್ಗಾಗಿ ಶೋಧಕಾರ್ಯ ಮುಂದುವರಿದಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಮರ್ಜಾ ಅಣೆಕಟ್ಟೆಯಲ್ಲಿ ಸಿಐಡಿ ತಂಡ ಹುಡುಕಾಟ ನಡೆಸಿದೆ.
ಬೆಂಗಳೂರು: ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿ (CID) ತನಿಖೆಯಲ್ಲಿ ತಿಳಿದುಬಂದಿದೆ. ಇನ್ನು ಧಾರವಾಡದ ಪರೀಕ್ಷಾ ಕೇಂದ್ರಗಳಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆಯಿಂದ ಧಾರವಾಡದಲ್ಲಿ ಸಿಐಡಿ ಅಧಿಕಾರಿಗಳು ಬೀಡುಬಿಟ್ಟಿದ್ದಾರಂತೆ. ಹು-ಧಾ ಅವಳಿ ನಗರದ 23 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಧಾರವಾಡದ ಐದು ಕೇಂದ್ರಗಳಲ್ಲಿ ಪಿಎಸ್ಐ ಪರೀಕ್ಷೆ ನಡೆದಿತ್ತು. ಪರೀಕ್ಷೆ ನಡೆದಿದ್ದ ಕೇಂದ್ರಗಳಿಗೆ ಸಿಐಡಿ ತಂಡ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಿಂಗ್ಪಿನ್ ಆಗಿರುವ ಮಂಜುನಾಥ ಮೇಳಕುಂದಿ ಫೋನ್ಗಾಗಿ ಶೋಧಕಾರ್ಯ ಮುಂದುವರಿದಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಮರ್ಜಾ ಅಣೆಕಟ್ಟೆಯಲ್ಲಿ ಸಿಐಡಿ ತಂಡ ಹುಡುಕಾಟ ನಡೆಸಿದೆ. ನಿನ್ನೆ ಇಡೀ ದಿನ ಸಿಬ್ಬಂದಿ ಮೊಬೈಲ್ಗಾಗಿ ಹುಡುಕಾಟ ನಡೆಸಿತ್ತು. ಆದರೆ ಸಿಕ್ಕಿರಲಿಲ್ಲ. ನುರಿತ ಈಜು ತಜ್ಞರನ್ನು ಕರೆದುಕೊಂಡು ಹೋಗಿ ಹುಡುಕಾಟ ನಡೆಸುತ್ತಿದ್ದಾರೆ. ಮಂಜುನಾಥ ಪರೀಕ್ಷಾ ಅಕ್ರಮಕ್ಕೆ ಬಳಸಿದ್ದ ಮೊಬೈಲ್ ಎಸೆದಿದ್ದಾನೆ. 100 ಅಡಿ ಆಳದಲ್ಲಿರುವ ಮೊಬೈಲ್ಗಾಗಿ ಸಿಐಡಿ ಹುಡುಕುತ್ತಿದೆ.
ತನ್ನ ಸಹೋದರನನ್ನು ಪಿಎಸ್ಐ ಮಾಡಬೇಕು ಅಂತ ಮಂಜುನಾಥ ಮೇಳಕುಂದಿ ಆಸೆ ಹೊಂದಿದ್ದ. ಆದರೆ ವಯಸ್ಸಿನ ಸಮಸ್ಯಯಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಅಕ್ರಮದ ಮೂಲಕ ಅನೇಕರಿಗೆ ಪಿಎಸ್ಐ ನೌಕರಿ ಕೊಡಿಸಿದ್ದಾನೆ.
21 ಲಕ್ಷ ರೂಪಾಯಿ ವಂಚನೆ: ಪಿಎಸ್ಐ ಹುದ್ದೆ ಕೊಡಿಸುವುದಾಗಿ ಸುಮಾರು 21 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 2019ರಲ್ಲಿ PSI ಹುದ್ದೆ ಕೊಡಿಸುವುದಾಗಿ ಬಾಗೇಪಲ್ಲಿ ಮೂಲದ ಶಿಕ್ಷಕ ಸತ್ಯನಾರಾಯಣ ಎಂಬುವವರಿಗೆ ವಂಚನೆ ಮಾಡಿದ್ದಾರೆ. ಹುಬ್ಬಳ್ಳಿ ಮೂಲದ ನವೀನ್, ಸುಹಾಸ್, ಪವನ್ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ
IND vs AUS T20: ಸೆಪ್ಟೆಂಬರ್ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಟಿ20 ಸರಣಿ: ಎಲ್ಲಿ?, ಯಾವಾಗ?
Published On - 11:47 am, Tue, 10 May 22