ಬೆಂಗಳೂರು ಕರಗಕ್ಕೆ ಕಾಮಗಾರಿಗಳ ಅಡ್ಡಿ: ರಥೋತ್ಸವ ಎಲ್ಲಾ ರಸ್ತೆಯಲ್ಲಿ ಹೋಗೋದು ಡೌಟ್

ವಿಶ್ವ ವಿಖ್ಯಾತ ಬೆಂಗಳೂರು ಕರಗಕ್ಕೆ ಮುಹೂರ್ತಿ ಫಿಕ್ಸ್ ಆಗಿದ್ದು, ಏಪ್ರಿಲ್ 4ರಿಂದ 14ರವರೆಗೆ ನಡೆಯಲಿದೆ. ಇನ್ನು ಚೈತ್ರ ಪೌರ್ಣಮಿಯಂದು (ಏಪ್ರಿಲ್ 12) ಮುಖ್ಯ ಕರಗೋತ್ಸವ ನಡೆಯುತ್ತದೆ. ಆದರೆ ಈ ಬಾರಿಯ ಕರಗಕ್ಕೆ ರಸ್ತೆ, ಒಳಚರಂಡಿ ಕಾಮಗಾರಿಗಳು ಅಡ್ಡಿಯಾಗಿವೆ. ದೇವಸ್ಥಾನದ ಸುತ್ತಾಮುತ್ತಾ ಚರಂಡಿ, ರಸ್ತೆಗಳನ್ನು ಅಗೆಯಲಾಗಿದೆ. ಹೀಗಾಗಿ ಕರಗ ರಥೋತ್ಸವ ನಿಗಧಿಯ ರಸ್ತೆಗಳಲ್ಲಿ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಬಾರಿ ಕೆಲ ರಸ್ತೆಗಳಲ್ಲಿ ಕರಗ ರಥೋತ್ಸವ ಅನುಮಾನವಾಗಿದ್ದು, ಕಗರ ಪ್ರಾರಂಭಕ್ಕೂ ಮೊದಲೇ ಕಾಮಗಾರಿ ಮುಗಿಸುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿದೆ.

ಬೆಂಗಳೂರು ಕರಗಕ್ಕೆ ಕಾಮಗಾರಿಗಳ ಅಡ್ಡಿ: ರಥೋತ್ಸವ ಎಲ್ಲಾ ರಸ್ತೆಯಲ್ಲಿ ಹೋಗೋದು ಡೌಟ್
ಬೆಂಗಳೂರು ಕರಗಕ್ಕೆ ಕಾಮಗಾರಿಗಳ ಅಡ್ಡಿ: ರಥೋತ್ಸವ ಎಲ್ಲಾ ರಸ್ತೆಯಲ್ಲಿ ಹೋಗೋದು ಡೌಟ್
Edited By:

Updated on: Jan 30, 2025 | 5:45 PM

ಬೆಂಗಳೂರು, ಜನವರಿ 30: ಏಪ್ರಿಲ್​ 12ರ ಚೈತ್ರ ಪೌರ್ಣಮಿಯಂದು ವಿಶ್ವ ವಿಖ್ಯಾತ ಬೆಂಗಳೂರು ಕರಗಕ್ಕೆ (Bengaluru Karaga) ದಿನಾಂಕ ನಿಗದಿ ಮಾಡಲಾಗಿದೆ. ಆದರೆ ದ್ರೌಪದಿದೇವಿ ಕರಗ ಬರುವ ರೋಡ್ ತುಂಬಾ ಗುಂಡಿಗಳನ್ನು ತೆಗೆದಿದ್ದಾರೆ. ಕೂಡಲೇ ಕಾಮಗಾರಿ ವೇಗವಾಗಿ ನಡೆಸಬೇಕು ಎಂದು ಧರ್ಮರಾಯಸ್ವಾಮಿ ದೇವಾಲಯ ವ್ಯವಸ್ಥಾಪನ ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ.

ನಿಧಾನಗತಿ ಮತ್ತು ಕಳಪೆ ಕಾಮಗಾರಿ ಆರೋಪ

ಈ ಕುರಿತಾಗಿ ಇಂದು ಸುದ್ದಿಗೋಷ್ಠಿಯಲ್ಲಿ ಧರ್ಮರಾಯ ಸ್ವಾಮಿ ದೇವಾಲಯದ ಅಧ್ಯಕ್ಷ ಕೆ. ಸತೀಶ್​ ಮಾತನಾಡಿದ್ದು, ಈ ಬಾರಿ ವಿಶ್ವ ವಿಖ್ಯಾತ ಬೆಂಗಳೂರು ಕರಗ ರಥೋತ್ಸವ ಮಾಡಲು ಆಗಲ್ಲ, ಅಷ್ಟರ ಮಟ್ಟಿಗೆ ರಸ್ತೆ ಹಾಳು ಮಾಡಿದ್ದಾರೆ. ಧರ್ಮರಾಯಸ್ವಾಮಿ‌ ದೇವಾಲಯದ ಸುತ್ತಮುತ್ತ ರಸ್ತೆ ಕಾಮಗಾರಿ ನಡೆಯುತ್ತಿದೆ. ಜನವರಿ ತಿಂಗಳಾಂತ್ಯಕ್ಕೆ ಕಾಮಗಾರಿ‌ ಮುಗಿಸುತ್ತೇವೆ ಎಂದಿದ್ದರು. ಆದರೆ ಮುಗಿಸಿಲ್ಲ. ನಿಧಾನಗತಿಯ ಮತ್ತು ಕಳಪೆ ಕಾಮಗಾರಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Bengaluru Karaga: ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿ

ಇನ್ನು ವಿಶ್ವವಿಖ್ಯಾತ ಕರಗದ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕರಗದ ರಥೋತ್ಸವ ನಿಗದಿತ ಎಲ್ಲಾ ರಸ್ತೆ ಹೋಗುವುದು ಡೌಟಾಗಿದೆ. ವೈಟ್ ಟಾಪಿಂಗ್ ಕಾಮಗಾರಿ ಮಾಡುತ್ತೇವೆ ಅಂತಿದ್ದಾರೆ‌. ಒಳಚರಂಡಿ ಪೈಪ್​ಗಳನ್ನು ಅಳವಡಿಸಲು ದೊಡ್ಡ ದೊಡ್ಡ ಗುಂಡಿಗಳ ಅಗೆದಿದ್ದಾರೆ. ತೇರು ಶಾರದಾ ಸರ್ಕಲ್ ಬಳಿ ಬಂದರಷ್ಟೇ ಕರಗ ದೇವಾಲಯದ ಹೊರಗೆ ಬರುವುದು. ಇನ್ನೊಂದು ತಿಂಗಳಲ್ಲಿ ಎಲ್ಲಾ ಕಾಮಗಾರಿ‌ ಮುಗಿಸಿಕೊಡಲು ಒತ್ತಾಯಿಸಿದ್ದು, ಸಿಎಂ, ಡಿಸಿಎಂ, ಬಿಬಿಎಂಪಿಗೆ ದೂರು ನೀಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru Karaga: ಬೆಂಗಳೂರು ಕರಗ ಮೆರವಣಿಗೆಯಲ್ಲಿ ಸಾಗುತ್ತಾ ತಪ್ಪದೆ ದರ್ಗಾಗೆ ಹೋಗುವುದೇಕೆ ಗೊತ್ತಾ!? ಮಿಸ್ ಮಾಡದೆ ವಿಡಿಯೋ ನೋಡಿ

ಕಳೆದ ಎರಡು ತಿಂಗಳಿನಿಂದ ಒಳಚರಂಡಿ ಪೈಪ್​ಗಳನ್ನು ಅಳವಡಿಸಲು ಗುಂಡಿಗಳನ್ನು ತೆಗೆದಿದ್ದಾರೆ ಆದರೆ ಇನ್ನೂ ಪೈಪ್​​ಗಳನ್ನು ಹಾಕಿಲ್ಲ. ಜೆಸಿಬಿಯಿಂದ ತೆಗೆದಿರುವ ದೊಡ್ಡ ದೊಡ್ಡ ಗುಂಡಿಗಳು ಹಾಗೆ ಇವೆ. ದಾಸಪ್ಪ ಆಸ್ಪತ್ರೆಯಿಂದ ಪೈ ವಿಹಾರ್ ಹೋಟೆಲ್​​ವರೆಗೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಫೆಬ್ರವರಿ- 7 ರಥಸಪ್ತಮಿ ಹಿನ್ನೆಲೆಯಲ್ಲಿ ಧರ್ಮರಾಯ ದೇವಾಲಯದಲ್ಲಿ ದ್ರೌಪದಿದೇವಿ ರಥೋತ್ಸವ ಇದೆ, ಆದರೆ ಈ ಬಾರಿ ರಥೋತ್ಸವ ನಡೆಯುವುದೇ ಡೌಟಾಗಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:44 pm, Thu, 30 January 25