ಏಕಾಏಕಿ ಕಡಲತೀರದ ನಿವಾಸಿಗಳು ದೇವರ ಮೊರೆ ಹೋಗಿದ್ದೇಕೆ? ಇಲ್ಲಿದೆ ಅಸಲಿ ಕಾರಣ
ಉಡುಪಿ ತೀರದ ನಿವಾಸಿಗಳು ಸಮುದ್ರದಿಂದ ಉಂಟಾಗುವ ಅಪಾಯ ತಪ್ಪಿಸಲು ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದ್ದಾರೆ. ಆ ಮೂಲಕ ಕಡಲ ಕೊರೆತ ಮತ್ತು ಸುನಾಮಿಯ ಭೀತಿಯಿಂದ ಪಾರಾಗಲು ಪಾರಾಯಣ ಮಾಡಲಾಗಿದೆ. 2005ರಲ್ಲೂ ಇದೇ ರೀತಿಯ ಪಾರಾಯಣ ಮಾಡಲಾಗಿತ್ತು. ಲಕ್ಷಾಂತರ ಜನರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
![ಏಕಾಏಕಿ ಕಡಲತೀರದ ನಿವಾಸಿಗಳು ದೇವರ ಮೊರೆ ಹೋಗಿದ್ದೇಕೆ? ಇಲ್ಲಿದೆ ಅಸಲಿ ಕಾರಣ](https://images.tv9kannada.com/wp-content/uploads/2025/01/vishnu-sahasranama.jpg?w=1280)
ಉಡುಪಿ, ಜನವರಿ 29: ಸಮುದ್ರ ತೀರದಲ್ಲಿ ಈಗ ದೇವರ ಮೊರೆ ಹೋಗಿದ್ದಾರೆ ಕಡಲತೀರ ವಾಸಿಗಳು. ಕಡಲತೀರದಲ್ಲಿ ಯಾವುದೇ ಆಪತ್ತು ಎದುರಾಗದಿರುವಂತೆ ಸಾಮೂಹಿಕ ವಿಷ್ಣುಸಹಸ್ರನಾಮ (Vishnu Sahasranama) ಪಾರಾಯಣ ನಡೆಯಿತು. ಹಾಗಾದರೆ ಏಕಾಏಕಿ ಕಡಲತೀರದ ನಿವಾಸಿಗಳು ದೇವರ ಮೊರೆ ಹೋಗಿದ್ದೇಕೆ? ಸಮುದ್ರ ಅಲೆಗಳ ಆಪತ್ತು ಕರಾವಳಿಗೆ ಎದುರಾಗಲಿದ್ಯಾ? ಅಪತ್ತು ನಿವಾರಣೆ ಮಾಡುವುದಕ್ಕೆ ಮಂತ್ರದಿಂದ ಮ್ಯಾಜಿಕ್ ಸಾಧ್ಯನಾ?
ಹೌದು, ಮೀನುಗಾರರು ಆಳಸಮುದ್ರ ಮೀನುಗಾರಿಕೆ ತೆರಳಿದಾಗ ಎದುರಾಗುವ ಆಪತ್ತು ಒಂದೆರಡಲ್ಲ. ಕಡಲು ಏಕಾಏಕಿ ಪ್ರಕ್ಷುಬ್ಧವಾದರೆ ಆಪತ್ತು ಕಟ್ಟಿಟ್ಟ ಬುತ್ತಿ. ಹೀಗೆ ತಮ್ಮ ಮನೆಯವರು ಮೀನುಗಾರಿಕೆ ತೆರಳಿದಾಗ ಸುರಕ್ಷಿತವಾಗಿ ವಾಪಾಸ್ಸಾಗಲಿ ಅಂತ ಹಿಂದಿನ ಕಾಲಘಟ್ಟದಲ್ಲಿ ಮನೆಯಲ್ಲೇ ಮಹಿಳೆಯರು ದೇವರ ಭಜನೆ ಮಾಡುತ್ತಿದ್ದರು. ಕಾಲಾನಂತರ ಸಮುದ್ರ ತೀರದಲ್ಲಿ ಸಾಲು ಸಾಲು ಭಜನಾಮಂದಿರ ತೆರೆಯಿತು. ಈ ಮೂಲಕ ಸಮುದರಾಜ ಪ್ರಶಾಂತವಾಗಿರುವಂತೆ ಭಜನೆ ಮೂಲಕ ದೇವರ ಮೊರೆ ಹೋಗ್ತಿದ್ರು ಮೀನುಗಾರರು. ಅಂತ ಶಕ್ತಿ ದೇವರ ಮಂತ್ರ ಪಠಣದಲ್ಲಿತ್ತು. ಈಗ ಕೂಡ ಸಮುದ್ರದಿಂದ ಬರುವ ವಿಪತ್ತು ತಡೆಯಲು ವಿಷ್ಣು ಸಹಸ್ರನಾಮದ ಮೊರೆಹೋಗಿದ್ದಾರೆ ಆಸ್ತಿಕ ಭಕ್ತರು.
ಇದನ್ನೂ ಓದಿ: ಉಡುಪಿಯ ಪ್ರತಿಷ್ಠಿತ ವಸತಿ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ
ಈಗಿನ ಕಾಲಘಟ್ಟದಲ್ಲಿ ಎಷ್ಟೇ ಹವಾಮಾನ ವೈಪರೀತ್ಯ ಮುನ್ಸೂಚನೆ ತಿಳಿಯುವ ತಂತ್ರಜ್ಞಾನ ಮುಂದುವರೆದರೂ ಕಡಲ್ಕೊರೆತದಿಂದ ಮೀನುಗಾರರು ಮನೆಗಳನ್ನ ಕಳೆದುಕೊಳ್ಳುವ ಸ್ಥಿತಿ ಇದೆ. ಹೀಗಾಗಿ ಮುಂಬರುವ ಸಮುದ್ರದಲೆಗಳಿಂದ ಅಪಾಯವನ್ನ ತಪ್ಪಿಸಲು ವಿಷ್ಣುಸಹಸ್ರನಾಮ ಪಠಣದಿಂದ ಅಲೆಗಳನ್ನು ಹಿಂದಿಕ್ಕುವ ಪ್ರಯತ್ನ ನಡೆದಿದೆ. ಸುನಾಮಿ ಕಡಲ್ಕೊರೆತ ತಡೆಯಲು ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಮಾಡಲಾಗಿದೆ.
ಈ ಹಿಂದೆ 2005ರಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ನಡೆದಿತ್ತು. ಆ ಬಳಿಕ ಕಡಲು ಕೊರೆತ ಕಡಿಮೆಯಾಗಿದೆ ಎನ್ನುತ್ತಿದ್ದಾರೆ ಸಹಸ್ರನಾಮ ಪಠಣ ಸಮಿತಿ ಸದಸ್ಯ ರಾಘವೇಂದ್ರ. ಬೈಂದೂರು ತಾಲೂಕಿನ ಮರವಂತೆಯಲ್ಲಿ ಸಾಮೂಹಿಕ ಪಠಣದಿಂದ ಕಡಲು ಕೊರೆತ ಕಡಿಮೆಯಾಗಿದೆಯಂತೆ. ಈಗ ಮತ್ತೆ ಪ್ರಕೃತಿಯಲ್ಲಿ ಏರುಪೇರು ಕಾಣಿಸುತ್ತಿದೆ ಹೀಗಾಗಿ ವಿಷ್ಣುವಿನ ಮೊರೆಹೋಗುವುದು ಅನಿವಾರ್ಯ ಇದೆ ವಿಷ್ಣು ಭಕ್ತ ನಂಬಿಕೆ. ಅಷ್ಟೇ ಅಲ್ಲದೆ ಸನಾತನ ಧರ್ಮ ಉಳಿಯಬೇಕು,ಭಾರತ ವಿಶ್ವಗುರವಾಗಿ ಮೆರೆಯಬೇಕು, ಪ್ರಕೃತಿ ವಿಕೋಪಗಳು ಉಂಟಾಗಾಬಾರದು, ಸಮುದ್ರ ದಿಂದ ಯಾವುದೇ ಅಪತ್ತು ಎದುರಾಗಬಾರದು, ಕಡಲ್ಕೊರೆತ ಸಂಭವಿಸಬಾರದು ಅನ್ನೊ ಸಂಕಲ್ಪದೊಂದಿಗೆ ಪಠಣ ಕೈಗೊಳಲಾಯಿತು. ಸಮುದ್ರರಾಜನಿಗೆ ಹಾಲೆರೆಯುವ ಮೂಲಕ ಸಂಕಲ್ಪ ಕೈಗೊಂಡು ಸತತವಾಗಿ ಎರಡು ಗಂಟೆಗಳ ಕಾಲ ಮಂತ್ರ ಪಠಣ ನಡೆಯಿತು.
ಕಾಸರಗೋಡಿನ ಕಣ್ಣೂರಿನಿಂದ ಉಡುಪಿಯ ಶಿರೂರಿನವರೆಗೆ ವಿಷ್ಣು ಸಹಸ್ರನಾಮ ಪಠಣ ನಡೆದಿದೆ. ಏಕಕಾಲದಲ್ಲಿ 108 ಸ್ಥಳಗಳಲ್ಲಿ ಮಂತ್ರ ಪಠಣ ಮಲ್ಪೆ ಬೀಚ್, ಪಡುಕೆರೆ ಬೀಚ್ ಸೇರಿದಂತೆ ಉಡುಪಿ 50 ಕಡೆ ನೂರಾರು ಮಂದಿ ಸೇರಿ 4 ರಿಂದ 6 ಗಂಟೆಯವರೆಗೆ ವಿಷ್ಣು ಸಹಸ್ರನಾಮ ಮಂತ್ರ ಪಠಿಸಿದ್ರು. ಎಲ್ಲಾ ಗುಂಪುಗಳು ಆರು ಬಾರಿ ವಿಷ್ಣು ಸಹಸ್ರನಾಮ ಪಠಿಸಿದ್ರು. ಮಹಿಳೆಯರು, ಪುರುಷರು ಸೇರಿದಂತೆ 20 ಸಾವಿರ ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ವೇದ ಕೃಷಿಕ ಕೆಎಸ್ ನಿತ್ಯಾನಂದ ಮಾರ್ಗದರ್ಶನದಲ್ಲಿ ಮೂರನೇ ಬಾರಿಗೆ ಅಭಿಯಾನ ಕರಾವಳಿ ತೀರದಲ್ಲಿ ನಡೆದಿದೆ.
ಇದನ್ನೂ ಓದಿ: ಹೊಸ ವರ್ಷದಂದೇ ಉಡುಪಿ ಗ್ರಾಮ ಪಂಚಾಯತ್ಗೆ ಬೀಗ: ಸಿಬ್ಬಂದಿಗಳ ಸಾಮೂಹಿಕ ರಾಜೀನಾಮೆ
ಒಟ್ಟಾರೆ ಕಡಲತೀರದಲ್ಲಿ ಎದುರಾಗಲಿರುವ ಅಪಾಯವನ್ನ ತಪ್ಪಿಸಲು ವಿಷ್ಣು ಸಹಸ್ರನಾಮ ಪಠಣ ಸಮಿತಿ ಮುಂದಾಗಿದೆ. 72ಸಾವಿರ ಅಕ್ಷರ ಇರುವ ಸಹಸ್ರನಾಮ ಪಠಣ ಕಡಲತೀರದ ಉದ್ದಗಲಕ್ಕೂ ಮೊಳಗಿದೆ. ಈ ರೀತಿಯಲ್ಲಿ ದೇವರ ನಾಮ ದಿಂದಲೇ ಸರ್ವ ಸಮಸ್ಯೆ ಬಗ್ಗೆ ಹರಿಸಬಹುದು ಅನ್ನೊದು ಭಕ್ತ ಜನರ ನಂಬಿಕೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.