ಫೇಸ್​​ಬುಕ್​​ ಗೆಳೆಯನ ವಂಚನೆ ಜಾಲಕ್ಕೆ ಸಿಲುಕಿ 1.7 ಕೋಟಿ ರೂಪಾಯಿ ಕಳೆದುಕೊಂಡ ವಿಚ್ಛೇದಿತ ಮಹಿಳೆ

ಬೆಂಗಳೂರಿನ ಯಶವಂತಪುರದಲ್ಲಿ ವಿಚ್ಛೇದಿತ ಮಹಿಳೆಯೊಬ್ಬರಿಗೆ ಯುಕೆ ಉದ್ಯೋಗಿ ಸೋಗಿನಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿ, ಗಿಫ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸೈಬರ್ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ದೆಹಲಿಯಲ್ಲಿ ಕಸ್ಟಮ್ಸ್​​ನಲ್ಲಿ ಗಿಫ್ಟ್ ಗಳಿದ್ದು, ಅವುಗಳನ್ನು ರಿಲೀಸ್ ಮಾಡಲು ಹಣಪಾವತಿ ಮಾಡಬೇಕು. ಆದರೆ ತನ್ನ ಬಳಿ ಇಂಡಿಯನ್‌ ಕರೆನ್ಸಿ ಇಲ್ಲ. ಹೀಗಾಗಿ ಭಾರತಕ್ಕೆ ಬಂದ ಮೇಲೆ ಹಣ ನೀಡುತ್ತೇನೆ ಎಂದು ಮಹಿಳೆಗೆ ಆರೋಪಿ ತಿಳಿಸಿದ್ದ ಎನ್ನಲಾಗಿದೆ.

ಫೇಸ್​​ಬುಕ್​​ ಗೆಳೆಯನ ವಂಚನೆ ಜಾಲಕ್ಕೆ ಸಿಲುಕಿ 1.7 ಕೋಟಿ ರೂಪಾಯಿ ಕಳೆದುಕೊಂಡ ವಿಚ್ಛೇದಿತ ಮಹಿಳೆ
ಸಾಂದರ್ಭಿಕ ಚಿತ್ರ
Image Credit source: Getty Images
Edited By:

Updated on: Jul 28, 2026 | 5:12 PM

ಮುಖ್ಯಾಂಶಗಳು

  • ವಿಚ್ಛೇದಿತ ಯುವತಿಗೆ ಪೇಸ್​​ಬುಕ್​​ ಗೆಳೆಯನಿಂದ ವಂಚನೆ
  • ದುಬಾರಿ ಉಡುಗೊರೆಗಳ ಆಸೆ ತೋರಿಸಿ ಮಕ್ಮಲ್​​ ಟೋಪಿ
  • 1.7 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ

ಬೆಂಗಳೂರು, ಜುಲೈ 28: ಸೈಬರ್​​ ವಂಚನೆ (Cyber Fraud) ದಿನಕ್ಕೊಂದು ರೂಪ ಪಡೆಯುತ್ತಿರುವ ನಡುವೆ ವಿಚ್ಚೇದಿತ ಮಹಿಳೆಯರನ್ನ ಟಾರ್ಗೆಟ್ ಮಾಡಿ ದೋಖಾ ಎಸಗುತ್ತಿರುವ ಘಟನೆ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ಫೇಸ್‌ಬುಕ್ ಸ್ನೇಹಿತನ ಬಲೆಗೆ‌ಬಿದ್ದು ಯಶವಂತಪುರದ ಮಹಿಳೆಯೋರ್ವರು 1.7 ಕೋಟಿ ರೂಪಾಯಿ ಕಳೆದುಕೊಂಡಿದ್ದು, ಮೋಸ ಹೋಗಿರೋದು ಅರಿವಾಗುತ್ತಿದ್ದಂತೆ ಈ ಸಂಬಂಧ ಉತ್ತರ ವಿಭಾಗ ಸೈಬರ್ ಠಾಣೆಗೆ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾರೆ.

ಗಿಫ್ಟ್​​ಗಳ ಫೋಟೋ ಹಂಚಿಕೊಂಡಿದ್ದ ಆರೋಪಿ

ಗಂಡನಿಂದ ದೂರುವಾಗಿದ್ದ ಯಶವಂತಪುರದ ಮಹಿಳೆಗೆ ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೋರ್ವ ತಾನು ಯುಕೆ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಪರಸ್ಪರ ಮೊಬೈಲ್​​ ನಂಬರ್​​ ಬದಲಾಯಿಸಿಕೊಂಡಿದ್ದರು. ಇದು ವಾಟ್ಸ್ಯಾಪ್​​ ಚಾಟ್​​ ಹಂತಕ್ಕೂ ಹೋಗಿತ್ತು. ಈ ನಡುವೆ ಯುಕೆಯಿಂದ ಚಿನ್ನ, ಡೈಮಂಡ್​​ ಸೀರೆ ಮತ್ತು ಗಿಫ್ಟ್​​ಗಳನ್ನು ಮಹಿಳೆಗೆ ಕಳುಹಿಸೋದಾಗಿ ಆರೋಪಿ ಆಸೆ ಹುಟ್ಟಿಸಿದ್ದ. ಉಡುಗೊರೆಗಳ ಫೋಟೋಗಳನ್ನು ಕೂಡ ಆಕೆಯ ಜೊತೆ ಹಂಚಿಕೊಂಡಿದ್ದ. ತನ್ನ ಮಾತಿನ ಬಗ್ಗೆ ಆಕೆಗೆ ನಂಬಿಕೆ ಬರುವಂತೆ ಮಾಡಲು ನಕಲಿ ಕೊರಿಯರ್​​ ರಸೀದಿಗಳನ್ನೂ ಕಳುಹಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಆನ್​​ಲೈನ್​​ ವಂಚನೆ; ಮೊಬೈಲ್, ಸಿಮ್​​ ಬದಲಿಸಿಯೂ 48.5 ಲಕ್ಷ ಕಳೆದುಕೊಂಡ ಖಾಸಗಿ ಸಂಸ್ಥೆಯ ಉದ್ಯೋಗಿ

ದೆಹಲಿಯಲ್ಲಿ ಕಸ್ಟಮ್ಸ್​​ನಲ್ಲಿ ಗಿಫ್ಟ್ ಗಳಿದ್ದು, ಅವುಗಳನ್ನು ರಿಲೀಸ್ ಮಾಡಲು ಹಣಪಾವತಿ ಮಾಡಬೇಕು. ಆದರೆ ತನ್ನ ಬಳಿ ಇಂಡಿಯನ್‌ ಕರೆನ್ಸಿ ಇಲ್ಲ. ಹೀಗಾಗಿ ಭಾರತಕ್ಕೆ ಬಂದ ಮೇಲೆ ಹಣ ನೀಡುತ್ತೇನೆ ಎಂದು ಮಹಿಳೆಗೆ ಆರೋಪಿ ತಿಳಿಸಿದ್ದ. ಆ ಬಳಿಕ ಕಸ್ಟಮ್ಸ್ ಅಧಿಕಾರಿ ಹೆಸರಿನಲ್ಲಿ ಮಹಿಳೆಗೆ ದೂರವಾಣಿ ಕರೆ ಬಂದಿದ್ದು, ಆ ಸಂದರ್ಭ 40 ಲಕ್ಷ ರೂಪಾಯಿ ಹಣವನ್ನು RTGS ಮೂಲಕ ಮಹಿಳೆ ಪಾವತಿಸಿದ್ದಳು. ಬ್ಯಾಂಕ್ ವರ್ಗಾವಣೆ ಮಾತ್ರವಲ್ಲದೆ, ಖುದ್ದಾಗಿ ಬಂದು ವಂಚಕರು ನಗದು ಸಂಗ್ರಹಿಸಿದ್ದರು. ಪದೇ ಪದ ಈ ರೀತಿಯಲ್ಲಿ ಸೈಬರ್ ವಂಚಕರು ಹಣ ಸಂಗ್ರಹ ಮಾಡಲು ಆರಂಭಿಸಿದಾಗ ಅನುಮಾನಗೊಂಡು ಮಹಿಳೆ ಯುಕೆ ವ್ಯಕ್ತಿಗೆ ಕರೆ ಮಾಡಿದ್ದಾಳೆ. ಆ ವೇಳೆ ಆತನ ನಂಬರ್​​ ಸ್ವಿಚ್ ಆಫ್ ಬಂದಿದೆ. ತಾನು ಮೋಸ ಹೋಗಿದ್ದು ಅರಿವಾಗುತ್ತಿದ್ದಂತೆ ಈ ಸಂಬಂಧ ಮಹಿಳೆ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:43 am, Tue, 28 July 26

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us