ಅಷ್ಟು ಬೇಗ ಕೆಂಪಣ್ಣನವರನ್ನು ಅರೆಸ್ಟ್ ಮಾಡಿಸಿದ್ದಾರೆ, ಆ ಲಾಯರ್ ಯಾರು ಅಂತ ಹುಡುಕುತ್ತಿದ್ದೇನೆ ಎಂದ ಡಿಕೆಶಿ
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಪೊಲೀಸರು ಬಂಧಿಸಿದ್ದ ವಿಚಾರವಾಗಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಅವರನ್ನು ಪೊಲೀಸರು (Police) ಬಂಧಿಸಿದ್ದ ವಿಚಾರವಾಗಿ ಸರ್ಕಾರದ ವಿರುದ್ಧ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿರುದ್ಧ 1 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಇದುವರೆಗೆ ನನಗೆ ವಿಚಾರಣೆಗೆ ಬರುವಂತೆ ನೋಟಿಸ್ ಬಂದಿಲ್ಲ. ಆದರೆ ಇಷ್ಟು ಬೇಗ ಕೆಂಪಣ್ಣರನ್ನು ಕರೆದು ವಿಚಾರಣೆ ಮಾಡುತ್ತಾರೆ. ಹೀಗಾಗಿ ಮುನಿರತ್ನ ಪರ ವಾದ ಮಂಡಿಸಿದ ಆ ಲಾಯರ್ ಯಾರು ಅಂತಾ ಹುಡುಕುತ್ತಿದ್ದೇನೆ. ನಾನು ಅವರನ್ನೇ ನನ್ನ ಜೊತೆ ಇಟ್ಟಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದರು.
ಅದೇನಾಯ್ತೋ ಗೊತ್ತಿಲ್ಲ ಸತ್ಯ ಹೇಳಿದರೆ ವಾರಂಟ್ ನೀಡಿ ಬಂಧಿಸಿದ್ದಾರೆ. ಕೆಂಪಣ್ಣ ಇರುವ ಸತ್ಯ ಹೇಳಿದರೇ ಅವರನ್ನು ಅರೆಸ್ಟ್ ಮಾಡಿಸಿದ್ದಾರೆ. ರಾಜ್ಯ ಎಲ್ಲಾ ಕಂಟ್ರ್ಯಾಕ್ಟರ್ಗಳೇ ನೀವು ಹುಷಾರಾಗಿರಬೇಕು. ಕೆಂಪಣ್ಣನ ಹರತುಪಡಿಸಿ ಪ್ರತಿಯೊಬ್ಬ ಗುತ್ತಿಗೆದಾರರು ಪ್ರತಿನಿತ್ಯ ಆಗುತ್ತಿರೋ ಕಿರುಕುಳವನ್ನ ತಡೆಯಬೇಕಾದರೆ ಸರ್ಕಾರವನ್ನು ಕಿತ್ತೊಗೆಯಬೇಕು. ದಯಮಾಡಿ ನಮಗೆ ನೀವು ಭ್ರಷ್ಟಾಚಾರದ ಮಾಹಿತಿ ಒದಗಿಸಿಕೊಡಿ ಎಂದರು.
ಶ್ರೀನಿವಾಸ್ ಪ್ರಸಾದ್ ಕೂಡ ಎಲೆಕ್ಷನ್ಗೆ 10ಕೋಟಿ ಕೊಟ್ಟದ್ದು ಹೇಳಿದರು. ಪ್ರತಾಪ್ ಸಿಂಹ ವಿಸಿ ನೇಮಕಾತಿಗೆ ಹಣ ನೀಡುವ ಬಗ್ಗೆ ಹೇಳಿದರು ಅವರಿಗ್ಯಾಕೆ ಇನ್ನು ನೋಟಿಸ್ ಕೊಟ್ಟಿಲ್ಲ. ಸರ್ಕಾರವ ಇದರಲ್ಲಿ ಭಾಗಿಯಾಗಿದೆಯಾ? ತಕ್ಷಣ ಈ ಬಗ್ಗೆ ತನಿಖೆಯಾಗಬೇಕು. ಲೋಕಾಯುಕ್ತ, ಸಿಬಿಐ, ಇಡಿ, ಐಟಿ ಯಾವುದಾದರಿಂದ ನೋಟಿಸ್ ನೀಡಿ ಕಾನೂನಿನಡಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ